Monday, 19th February 2018  

Vijayavani

ಮೈಸೂರಲ್ಲಿ ಮೋದಿ ಮೇನಿಯಾ - ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ -ಮಹಾಪುರುಷರ, ವಸ್ತುಗಳ ಸ್ಮರಿಸಿದ ನಮೋ.        ಬಡವರ ಅವಶ್ಯಕತೆ ಪೂರೈಕೆಗೆ ರೈಲ್ವೆ ಅವಶ್ಯಕ - ಜೋಡಿ ಮಾರ್ಗ ಉದ್ಘಾಟಿಸಿ ನಮೋ ಮಾತು - ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ.        ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ - ಸಿಎಂ ವಿರುದ್ಧ ಪ್ರತಾಪಸಿಂಹ ವಾಕ್ಪ್ರಹಾರ - ಮೋದಿಗೆ ಸ್ಮರಣಿಕೆ ನೀಡಿದ ಮುಖಂಡರು.        ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆ ಕೇಸ್​ - ಆರೋಪಿಗಳಿಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್​​ - ಶಿವಾಜಿನಗರದ ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್.        ಸರ್ವಸಂಘ ಪರಿತ್ಯಾಗಿಗೆ ಮಹಾಮಜ್ಜನ - ಶ್ರವಣಬೆಳಗೊಳದಲ್ಲಿ ಭಕ್ತ ಸಾಗರ - ಆಸ್ಪತ್ರೆ, ಬೆಟ್ಟದ ಮೆಟ್ಟಿಲು ಲೋಕಾರ್ಪಣೆ.       
Breaking News

ರಿಲೀಸ್ ಹೊಸ್ತಿಲಲ್ಲಿ ಹೆಸರಿಡಲಿ ಸಂಭ್ರಮ

Friday, 27.01.2017, 2:42 AM       No Comments

ಬ್ಬ ಗಂಡು ಮತ್ತು ಇಬ್ಬರು ಹೆಣ್ಣುಗಳು ನಡುವೆ ಇರುವ ಅವಿನಾಭಾವ ಸಂಬಂಧಕ್ಕೆ ಏನೆಂದು ಕರೆಯಬಹುದು? ಪ್ರೇಮಿಗಳಾಗಿದ್ದರೆ ತ್ರಿಕೋನ ಪ್ರೇಮ ಎನ್ನಬಹುದು. ಆದರೆ ಆ ಸಂಬಂಧ ಮಾಮೂಲಿ ಪ್ರೀತಿಯನ್ನೂ ಮೀರಿದ್ದಾಗಿದ್ದರೆ? ಆಗ ಮೂಡುವ ಪ್ರಶ್ನೆಯೇ ‘ಏನೆಂದು ಹೆಸರಿಡಲಿ’! ಇದೇ ಶೀರ್ಷಿಕೆಯಲ್ಲಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ ರವಿ ಬಸಪ್ಪನದೊಡ್ಡಿ. ಭಾವನೆಗಳೇ ಪ್ರಧಾನವಾಗಿರುವ ಈ ಚಿತ್ರಕ್ಕೆ ಹಣ ಹೂಡಿದ್ದಾರೆ ಶ್ರೀನಿವಾಸ ಕುಲಕರ್ಣಿ. ಮೂಲತಃ ಫಾರ್ಮಸಿಟಿಕಲ್ ಉದ್ಯಮಿ ಆಗಿರುವ ಅವರಿಗೆ ಸಿನಿಮಾ ನಿರ್ಮಾಣದ ಮೇಲೆ ವಿಶೇಷ ಆಸಕ್ತಿ. ಹಾಗಾಗಿ ಕುಟುಂಬಸಮೇತರಾಗಿ ನೋಡುವಂತಹ ಚಿತ್ರ ಮಾಡಬೇಕು ಎಂಬ ಆಸೆಯಿಂದ ‘ಏನೆಂದು ಹೆಸರಿಡಲಿ’ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ.

ಸಿನಿಮಾ ಮಾಡುವುದು ಸುಲಭ. ಆದರೆ ಗಾಂಧಿನಗರದ ವ್ಯಾಕರಣ ತಿಳಿಯದಿದ್ದರೆ ಸಿನಿಮಾ ರಿಲೀಸ್ ಮಾಡುವುದು ತುಂಬ ಕಷ್ಟ. ಆದರೆ ‘..ಹೆಸರಿಡಲಿ’ ಬಳಗಕ್ಕೆ ಆ ಕಷ್ಟ ಎದುರಾಗಿಲ್ಲ. ಯಾಕೆಂದರೆ ವಿತರಕ ಜಾಕ್ ಮಂಜು ಅವರು ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದಾರಂತೆ. ಸಿನಿಮಾ ನೋಡಿ ಇಂಪ್ರೆಸ್ ಆಗಿರುವ ಅವರು ಖುಷಿಯಿಂದಲೇ ವಿತರಣೆಗೆ ಮುಂದಾಗಿರುವುದು ಇಡೀ ಚಿತ್ರತಂಡಕ್ಕೆ ಸಂತಸ ಮೂಡಿಸಿದೆ. ಎಮೋಷನ್ಸ್​ಗೆ ಹೆಚ್ಚು ಪ್ರಾಮುಖ್ಯತೆ ಇರುವುದರಿಂದ ಪ್ರೇಕ್ಷಕರಿಗೆ ಹೇಳಬೇಕಾದ ವಿಷಯವನ್ನು ಸಂಗೀತದ ಮೂಲಕವೇ ತಿಳಿಸಿದರೆ ಒಳಿತು ಎಂಬ ಕಾರಣಕ್ಕಾಗಿ ಇಲ್ಲಿ ಹಾಡುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆಯಂತೆ. ಹಾಗಾಗಿ ಆ ವಿಚಾರದಲ್ಲಿ ರಾಜಿ ಆಗದೆ ಖ್ಯಾತ ಗೀತರಚನಾಕಾರರಾದ ಜಯಂತ ಕಾಯ್ಕಿಣಿ, ಕವಿರಾಜ್, ನಾಗೇಂದ್ರ ಪ್ರಸಾದ್ ಮತ್ತು ದೊಡ್ಡ ರಂಗೇಗೌಡ ಅವರಿಂದ ಸಾಹಿತ್ಯ ಬರೆಸಲಾಗಿದೆ. ಮಾಂಟಾಜ್ ಹಾಡುಗಳ ಮೂಲಕವೇ ಬಹುಪಾಲು ಕಥೆ ಬಿತ್ತರವಾಗುವುದು ಈ ಚಿತ್ರದ ವಿಶೇಷವಂತೆ. ಈಗಾಗಲೇ ಆಡಿಯೋ ಬಿಡುಗಡೆ ಆಗಿದ್ದು, ಅದಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿದರೆ ಚಿತ್ರ ಕೂಡ ಖಂಡಿತ ಹಿಟ್ ಆಗಲಿದೆ ಎಂಬ ನಂಬಿಕೆ ನಿರ್ದೇಶಕರದ್ದು. ಹಾಡುಗಳಿಗೆ ಸುರೇಂದ್ರನಾಥ್ ಸಂಗೀತ ನೀಡಿದ್ದಾರೆ. ‘ಸಿನಿಮಾ ನಿರ್ವಣದ ಮೇಲೆ ಪ್ರೀತಿ ಇರುವ ನಿರ್ವಪಕರು ಸಿಕ್ಕರೆ ಎಂಥ ಪ್ರಾಡಕ್ಟ್ ತಯಾರಾಗುತ್ತದೆ ಎಂಬುದಕ್ಕೆ ನಮ್ಮ ಚಿತ್ರವೇ ಸಾಕ್ಷಿ’ ಎಂದು ನಿರ್ವಪಕರ ಗುಣಗಾನ ಮಾಡುತ್ತಾರೆ ಸುರೇಂದ್ರನಾಥ್

‘..ಹೆಸರಿಡಲಿ’ಗೆ ಅರ್ಜುನ್ ಮತ್ತು ರೋಜಾ ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ. ಅರ್ಜುನ್​ಗೆ ಈ ಚಿತ್ರದಲ್ಲಿ ಎರಡು ಶೇಡ್ ಇರುವ ಪಾತ್ರವಂತೆ. ಅಂದಹಾಗೆ, ಇದು ಸಂಕೇತ್ ಕಾಶಿ ಅಭಿನಯಿಸಿರುವ ಕೊನೇ ಚಿತ್ರ. ಫೆಬ್ರವರಿ ಮೊದಲ ಅಥವಾ ಎರಡನೇ ವಾರದಲ್ಲಿ ‘..ಹೆಸರಿಡಲಿ’ ತೆರೆಗೆ ಬರುವ ಸಾಧ್ಯತೆಗಳಿವೆ.

Leave a Reply

Your email address will not be published. Required fields are marked *

Back To Top