Friday, 22nd September 2017  

Vijayavani

1. ಸಮಾವೇಶಕ್ಕೆ ಲಕ್ಷ ಮಂದಿ ಸೇರಿಸೋ ಟಾರ್ಗೆಟ್​- ಬರದಿದ್ರೆ ಅಕ್ಕಿ ಕಟ್​​, ಬ್ಯಾಂಕ್​ ಸಬ್ಸಿಡಿಗೆ ಬ್ರೇಕ್​- ಫಲಾನುಭವಿಗಳಿಗೆ ಕೈ ಕಾರ್ಯಕರ್ತರ ಬೆದರಿಕೆ 2. ಕೊಟ್ಟ ಮಾತು ಮರೆತ ಸಿಎಂ ಸಿದ್ದರಾಮಯ್ಯ- 8 ತಿಂಗಳಾದ್ರೂ ಕುಟುಂಬಸ್ಥರಿಗೆ ಸಿಗದ ಪರಿಹಾರ- ಇದೇನಾ ನುಡಿದಂತೆ ನಡೆಯುವ ಸರ್ಕಾರ..? 3. ಎಸ್​​.ಎಂ.ಕೃಷ್ಣ ಅಳಿಯನ ಮನೆ ಕಚೇರಿ ತಲಾಷ್​​- ಎರಡನೇ ದಿನವೂ ಮುಂದುವರಿದ ಪರಿಶೀಲನೆ- ಹುಡುಕಿದಷ್ಟು ಪತ್ತೆಯಾಗ್ತಿದೆ ದಾಖಲೆ ಪತ್ರ 4. ಗದಗದಲ್ಲಿ ಹನಿ ನೀರಿಗಾಗಿ ಹೋರಾಟ- 6 ಸಾವಿರ ಜನಕ್ಕೆ ಟ್ಯಾಂಕರ್​ ನೀರೇ ಆಧಾರ- ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ ಸರ್ಕಾರ 5. ಮೈಸೂರು ದಸರಾಗೆ ಜನವೋ ಜನ- ಅತ್ತೆ, ಸೊಸೆ ಜೊತೆ ಜೊತೆ ಮಾಡಿದ್ರು ನಳಪಾಕ- ಕೆಲವೇ ಕ್ಷಣಗಳಲ್ಲಿ ಯುವ ದಸರಾಗೆ ಚಾಲನೆ
Breaking News :

ರಿಯಾ-ಶಿವಂ ಹನಿಮೂನ್ ಕಿಸ್ ವೈರಲ್

Wednesday, 13.09.2017, 3:02 AM       No Comments

 

ನ್ನಡದ ‘ಯುಗಪುರುಷ’ ಚಿತ್ರದಲ್ಲಿ ನಟಿಸಿದ್ದ ನಟಿ ಮೂನ್ ಮೂನ್ ಸೇನ್ ಪುತ್ರಿ ರಿಯಾ ಸೇನ್ ಹನಿಮೂನ್ ಸಂದರ್ಭದಲ್ಲಿ ಭಾರಿ ಸುದ್ದಿಯಾಗಿದ್ದಾರೆ. ಅಷ್ಟೇ ಅಲ್ಲ, ಆ ಸಂದರ್ಭದಲ್ಲಿನ ದಂಪತಿಯ ಸರಸದ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಹಾಗಂತ ಹನಿಮೂನ್​ನಲ್ಲಿದ್ದ ಈ ದಂಪತಿಯ ಚಿತ್ರವನ್ನು ಯಾರೋ ಕ್ಲಿಕ್ಕಿಸಿ ಅದನ್ನು ಪೋಸ್ಟ್ ಮಾಡಿಲ್ಲ. ಬದಲಿಗೆ ಸ್ವತಃ ರಿಯಾ ಸೇನ್ ಆ ಫೋಟೋ ಹಂಚಿಕೊಂಡಿದ್ದಾರೆ.

ಹೌದು.. ರಿಯಾ ಸೇನ್ ತನ್ನ ಬಾಯ್ಫ್ರೆಂಡ್ ಶಿವಂ ತಿವಾರಿ ಜತೆ ಕಳೆದ ಆಗಸ್ಟ್​ನಲ್ಲಷ್ಟೇ ಮದುವೆ ಆಗಿದ್ದಾರೆ. ಆ ನಂತರ ಮಧುಚಂದ್ರಕ್ಕಾಗಿ ಜೆಕ್ ಗಣರಾಜ್ಯದ ಪ್ರಾಗ್​ಗೆ ತೆರಳಿರುವ ಅವರು ಅಲ್ಲಿ ತಮ್ಮ ಬದುಕಿನ ಅತ್ಯಮೂಲ್ಯ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೇ ವೇಳೆ ಅಲ್ಲಿನ ಕೆಫೆಯೊಂದರಲ್ಲಿ ಗಾಢವಾಗಿ ತುಟಿಗೆ ತುಟಿ ಹಚ್ಚಿ ಚುಂಬಿಸಿದ ಈ ಜೋಡಿ ಅದರ ಫೋಟೋ ತೆಗೆಸಿಕೊಂಡಿದೆ. ಮಾತ್ರವಲ್ಲ ಅದನ್ನು ರಿಯಾ ತನ್ನ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಪಡ್ಡೆಗಳು ಮನಸೋತಿರುವುದಲ್ಲದೆ ಸ್ಪರ್ಧೆಗೆ ಬಿದ್ದಂತೆ ಹಂಚಿಕೊಳ್ಳುತ್ತಿರುವ ಮೂಲಕ ಅದು ವೈರಲ್ ಆಗಲೂ ಕಾರಣವಾಗಿದ್ದಾರೆ. 2013ರಲ್ಲಿ ಬಿಡುಗಡೆ ಆಗಿರುವ ಹಿಂದಿ ಚಿತ್ರ ‘ರಬ್ಬ ಮೇ ಕ್ಯಾ ಕರೂ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ರಿಯಾ ಆ ಬಳಿಕ ಯಾವುದೇ ಹಿಂದಿ ಚಿತ್ರದಲ್ಲಿ ತೆರೆ ಮೇಲೆ ಬಂದಿಲ್ಲ. ಈ ಮಧ್ಯೆ ಬಂಗಾಲಿ ಸಿನಿಮಾಗಳಲ್ಲಿ ಬಿಜಿಯಾಗಿರುವ ಅವರು, ಕಳೆದ ತಿಂಗಳು ಮದುವೆ ವೇಳೆ ಸ್ವಲ್ಪ ಸುದ್ದಿಯಾಗಿದ್ದರು. ಇದೀಗ ಬಾಲಿವುಡ್​ನಲ್ಲಿ ಅವರ ಸದ್ದಿಲ್ಲದಿದ್ದರೂ ಹನಿಮೂನ್​ಗಾಗಿ ದೂರದ ದೇಶದಲ್ಲಿರುವ ಅವರು ಚುಂಬನದಿಂದಲೇ ಭಾರಿ ಸುದ್ದಿಯಾಗಿರುವುದಂತೂ ನಿಜ. –ಏಜೆನ್ಸೀಸ್

Leave a Reply

Your email address will not be published. Required fields are marked *

Back To Top