Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ರಿಯಾಲ್ಟಿ ಆಕರ್ಷಕ ಕ್ಷೇತ್ರ ಕನಕಪುರ ರಸ್ತೆ

Saturday, 02.09.2017, 3:02 AM       No Comments

ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಕನಕಪುರ ರಸ್ತೆ ಇತ್ತೀಚೆಗೆ ಅಭಿವೃದ್ಧಿಯಲ್ಲಿ ವೇಗ ಪಡೆದುಕೊಳ್ಳುತ್ತಿದೆ. ಮೆಟ್ರೋ ರೈಲು ಸಂಪರ್ಕ ಹಿನ್ನೆಲೆಯಲ್ಲಿ ಹಲವು ಹೊಸ, ಹೊಸ ರಿಯಲ್ ಎಸ್ಟೇಟ್ ಪ್ರಾಜೆಕ್ಟ್​ಗಳು ತಲೆ ಎತ್ತುತ್ತಿವೆ. ಈ ಪ್ರಾಜೆಕ್ಟ್​ಗಳಿಗೆ ಜನರಿಂದ ಉತ್ತಮ ಬೇಡಿಕೆ ವ್ಯಕ್ತವಾಗಿದೆ.

ಕನಕಪುರ ರಸ್ತೆಯ ಯೋಜನೆಗಳತ್ತ ಗ್ರಾಹಕರು ಆಕರ್ಷಿತರಾಗಲು ಕಾರಣ ಹೀಗಿವೆ…ಕನಕಪುರ ರಸ್ತೆಗೆ ಮೆಟ್ರೋ ರೈಲು ಸಂಪರ್ಕ ದೊರೆಯುವ ಹಿನ್ನೆಲೆಯಲ್ಲಿ ಇಲ್ಲಿಂದ ಬೆಂಗಳೂರಿನ ಎಲ್ಲ ಪ್ರಮುಖ ಭಾಗಗಳಿಗೆ ವೇಗವಾಗಿ ಸಂಚರಿಸಬಹುದು. ಇಲ್ಲಿಂದ ಈಗಾಗಲೇ ನೈಸ್ ರಸ್ತೆಗೆ ಸಂಪರ್ಕ ಇದೆ. ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿ ಹಾಗೂ ಹೊಸೂರು ರಸ್ತೆ ತಲುಪಬಹುದು. ಮತ್ತೊಂದು ಕಡೆಯಿಂದ ಮೈಸೂರು, ಮಾಗಡಿ ಹಾಗೂ ತುಮಕೂರು ರಸ್ತೆಗಳನ್ನು ವೇಗವಾಗಿ ಸಂರ್ಪಸಬಹದು. ಜತೆಗೆ ಸಿಲ್ಕ್​ಬೋರ್ಡ್, ನಗರದ ಹೊರವರ್ತಲ ರಸ್ತೆಗಳನ್ನು ಕೂಡ ಸುಲಭವಾಗಿ ತಲುಪಬಹುದಾಗಿದೆ.

ಕಡಿಮೆ ದರಕ್ಕೆ ಫ್ಲಾಟ್​ಗಳು

ಕನಕಪುರ ರಸ್ತೆಯ ಬಹುತೇಕ ವಸತಿ ಯೋಜನೆಗಳಲ್ಲಿ ಕಡಿಮೆ ಮೊತ್ತಕ್ಕೆ ಪ್ಲಾಟ್​ಗಳು ದೊರೆಯುತ್ತಿವೆ. ಇದರಿಂದ ಗ್ರಾಹಕರು ಈ ಕಡೆ ಗಮನ ಹರಿಸಿದ್ದಾರೆ. ಬಹುತೇಕ ಮಂದಿ ಕನಕಪುರ ರಸ್ತೆಯಲ್ಲಿ ಕಡಿಮೆ ಮೊತ್ತಕ್ಕೆ ಮನೆ ಖರೀದಿಸುವ ನಿರ್ಧಾರ ಮಾಡಿದ್ದಾರೆ. ಹೀಗಾಗಿ, ಕನಕಪುರ ರಸ್ತೆಯ ವಸತಿ ಯೋಜನೆಗಳು ಆಕರ್ಷಕವಾಗಿವೆ. ಇದರಿಂದ ಇಲ್ಲಿ ಉತ್ತಮ ರೀತಿಯ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಬೆಳವಣಿಗೆ ನಡೆಯುತ್ತಿದ್ದು, ಇದು ಈ ಜಾಗದ ಅಭಿವೃದ್ಧಿಗೆ ಕಾರಣವಾಗಿದೆ.

ಸುಮಾರು 20 ವರ್ಷಗಳ ಹಿಂದೆ ಕನಕಪುರ ರಸ್ತೆಯಲ್ಲಿ ಅತಿ ಕಡಿಮೆ ವ್ಯಾವಹಾರಿಕ ಚಟುವಟಿಕೆಗಳು ನಡೆಯುತ್ತಿದ್ದವು. ಆಗ ನಗರದ ಇತರೆ ಸ್ಥಳಗಳಿಂದ ಸಂಪರ್ಕ ಇರಲಿಲ್ಲ. ಅಲ್ಲದೆ, ಇಲ್ಲಿ ಯಾವುದೇ ಹೆಸರಾಂತ ಕೈಗಾರಿಕೆಗಳು ಇರಲಿಲ್ಲ. ಐಟಿ ಕಂಪೆನಿಗಳು ಕೂಡ ಕನಕಪುರ ರಸ್ತೆಯಿಂದ ದೂರ ಉಳಿದಿದ್ದವು. ಕನಕಪುರ ರಸ್ತೆ ಕೇವಲ ಫಾಮ್ರ್ ಹೌಸ್​ಗಳು ಹಾಗೂ ವಾರಾಂತ್ಯದ ಕಾಟೇಜ್​ಗಳಿಗೆ ಹೆಸರುವಾಸಿಯಾಗಿತ್ತು. ಕ್ರಮೇಣ ಈ ರಸ್ತೆಯಲ್ಲಿ ಆರ್ಟ್ ಆಫ್ ಲಿವಿಂಗ್ ಆರಂಭವಾಯಿತು. ಹೀಗೆ ಕ್ರಮೇಣ ಈ ಪ್ರದೇಶ ಅಭಿವೃದ್ಧಿಯಾಗುತ್ತಾ ಬಂತು.

ಕನಕಪುರ ರಸ್ತೆ ಹಸಿರಿನಿಂದ ಕೂಡಿದ ಉತ್ತಮ ಪರಿಸರ ಹೊಂದಿದ್ದ ಹಿನ್ನೆಲೆಯಲ್ಲಿ ಜನರು ಮನೆಗಳನ್ನು ಕಟ್ಟಿಕೊಂಡು ವಾರಾಂತ್ಯದಲಿ ್ಲಲ್ಲಿಗೆ ಬಂದು ಕಾಲ ಕಳೆಯುತ್ತಿದ್ದರು. ಇದರಿಂದ ಕನಕಪುರ ರಸ್ತೆ ಎಂದರೆ ಆರಾಮವಾಗಿ ಉತ್ತಮ ಪರಿಸರದ ಮಧ್ಯೆ ಕುಳಿತುಕೊಂಡು ಸಮಯ ಕಳೆಯುವ ಸ್ಥಳವಾಗಿತ್ತು. ಆದರೆ ಈಗ ಬೆಂಗಳೂರಿನ ಇತರೆ ಪ್ರದೇಶಗಳು ಹೆಚ್ಚು ಒತ್ತಡ ಹೊಂದಿವೆ. ಅಲ್ಲದೆ, ಮನೆಗಳ ಬೆಲೆ ಅಧಿಕವಾಗಿರುವುದರಿಂದ ಗ್ರಾಹಕರು ಉತ್ತಮ ರಸ್ತೆ ಹಾಗೂ ಮೆಟ್ರೋ ರೈಲು ಸಂಪರ್ಕ ಇರುವ ಕನಕಪುರ ರಸ್ತೆ ಕಡೆಗೆ ಒಲವು ಹೊಂದಿದ್ದಾರೆ.

ಎಲ್ಲ ಕಡೆ ಉತ್ತಮ ಸಂಪರ್ಕ | ನೀರಿಗೆ ತೊಂದರೆ ಇಲ್ಲ

ಕನಕಪುರ ರಸ್ತೆ ಹಸಿರಿನಿಂದ ಕೂಡಿರುವುದರಿಂದ ಇಲ್ಲಿ ನೀರಿಗೆ ಸಮಸ್ಯೆ ಇಲ್ಲ. ಉತ್ತಮ ಅಂತರ್ಜಲ ಇದೆ. ಇದು ಕೂಡ ರಿಯಲ್ ಎಸ್ಟೇಟ್ ಬೆಳವಣಿಗೆಗೆ ಕಾರಣವಾಗಿವೆ. ಇಲ್ಲಿ ಕೈಗಾರಿಕೆಗಳು ನಿರ್ವಣವಾಗದ ಹಿನ್ನೆಲೆಯಲ್ಲಿ ಪರಿಸರ ಮಲಿನವಾಗದೆ ಉತ್ತಮವಾಗಿದೆ. ಈ ರಸ್ತೆಯಲ್ಲಿ ಇನ್ನು 2 ವರ್ಷದ ನಂತರ ದರ ಹೆಚ್ಚಲಿದೆ. ಶೇ.15ರಿಂದ 20 ಮಾತ್ರ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ರಿಯಲ್ ಎಸ್ಟೇಟ್ ಕ್ಷೇತ್ರದ ತಜ್ಞರು.

ಮೂಲಸೌಕರ್ಯಗಳ ಅಗತ್ಯವಿದೆ

ಕನಕಪುರ ರಸ್ತೆ ಪ್ರಸ್ತುತ ಬೆಂಗಳೂರಿನ ಆಕರ್ಷಕ ಕ್ಷೇತ್ರವಾಗಿರುವುದರಿಂದ ಕೆಲವೊಂದು ಮೂಲಸೌಕರ್ಯಗಳ ಕೊರತೆಯಾಗಬಹುದು ಎಂದು ವೈಷ್ಣವಿ ಗ್ರೂಪ್​ನ ನಿರ್ದೇಶಕ ಗೋವಿಂದರಾಜು ತಿಳಿಸಿದ್ದಾರೆ. ಹಿಂದೆ ವೈಟ್ ಫೀಲ್ಡ್ ಇದೇ ರೀತಿಯಲ್ಲಿ ಆಕರ್ಷಕ ಕೇಂದ್ರವಾಗಿ ಬೆಳೆಯುತ್ತಿದ್ದ ವೇಳೆ ವಸತಿ ಯೋಜನೆಗಳು ಅಧಿಕಗೊಂಡವು. ಆಗ ದಿಢೀರ್ ಎಂದು ಕೆಲವೊಂದು ಮೂಲಸೌಕರ್ಯಗಳ ಸಮಸ್ಯೆ ಎದುರಾಯಿತು. ನಿಧಾನವಾಗಿ ಅವುಗಳಿಗೆ ಪರಿಹಾರ ಒದಗಿಸಲಾಯಿತು. ಹೀಗಾಗಿ, ಕನಕಪುರ ರಸ್ತೆಯಲ್ಲೂ ಈ ರೀತಿಯ ಸಮಸ್ಯೆಗಳ ಜತೆಗೆೆ ಸಂಪರ್ಕ ಸಮಸ್ಯೆಗಳು ಎದುರಾಗಬಹುದು. ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸಿ ಶೀಘ್ರದಲ್ಲೇ ನೀರು, ಚರಂಡಿ, ವಿದ್ಯುತ್ ಸೇರಿ ವಿವಿಧ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು. ಇದರಿಂದ ಮುಂದೆ ಎದುರಾಗುವ ತೊಂದರೆ ನಿವಾರಿಸಬಹುದು ಎಂಬುದು ಗೋವಿಂದರಾಜು ಅವರ ಅಭಿಪ್ರಾಯ.

ಸಾಂಪ್ರದಾಯಿಕ ಶೈಲಿ ಊಟ

ಈ ಪ್ರದೇಶದಲ್ಲಿ ಸಾಂಪ್ರದಾಯಿಕ ಶೈಲಿ ಊಟ ನೀಡುವ ಹೋಟೆಲ್​ಗಳಿವೆ. ಅಲ್ಲದೆ, ಪ್ರಮುಖ ಮನರಂಜನಾ ಕೇಂದ್ರಗಳು, ಆಸ್ಪತ್ರೆ, ಶಾಲೆ ಹಾಗೂ ಕಾಲೇಜುಗಳು ಇರುವುದರಿಂದ ಕನಕಪುರ ರಸ್ತೆಯತ್ತ ಗ್ರಾಹಕರ ಆಕರ್ಷಣೆ ಹೆಚ್ಚುತ್ತಿದೆ.

Leave a Reply

Your email address will not be published. Required fields are marked *

Back To Top