Friday, 22nd June 2018  

Vijayavani

ಮೈತ್ರಿ ಸರ್ಕಾರದಲ್ಲಿ ಮತ್ತೆ ತಾರತಮ್ಯತೆ - ರೇವಣ್ಣ ಕಾರ್​​​ಗೆ ಗೇಟ್​​ ಓಪನ್​​, ದೇಶಪಾಂಡೆಗೆ ನಟರಾಜ ಸರ್ವಿಸ್​​        ಅಂದು ಹೇಳಿದ್ದೊಂದು.. ಇಂದು ಮಾಡಿದ್ದೊಂದು - ಸಂಡೂರಿನಲ್ಲಿ ಕೊಟ್ಟು ಮಾತು ಮರೆತ ಸಿಎಂ - ಮತ್ತೆ ಗಣಿಗಾರಿಕೆಗೆ ಅವಕಾಶ        ಡಿಕೆಶಿ ಡೈರಿಯಲ್ಲಿ ಕೆಜಿ ಕೋಡ್​ ವಿಚಾರ - ದೆಹಲಿಯಿಂದ ಆಗಮಿಸಿದ ಇಡಿ ತಂಡ - ಡಿಕೆಶಿ ಸೇರಿ ಐವರು ವಿರುದ್ಧ ಇಡಿ FIR ಸಾಧ್ಯತೆ        ಶಕ್ತಿ ಭವನದಲ್ಲಿ ಬಜೆಟ್​​​ ಪೂರ್ವಭಾಗಿ ಸಭೆ - ಸಣ್ಣ ನೀರಾವರಿ ಇಲಾಖೆ ಜತೆ ಸಿಎಂ ಚರ್ಚೆ - ಅನುದಾನ ಭರವಸೆ ನೀಡಿದ ಎಚ್​ಡಿಕೆ        ಬಿಜಿಎಸ್​ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ - ನಡೆದಾಡುವ ದೇವರ ಕಾಣಲು ಗಣ್ಯರ ದಂಡು - ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​​ವೈ        ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಯ್ತು ಕಂದಮ್ಮ - ಶಸ್ತ್ರಚಿಕಿತ್ಸೆಗೆ ಬಂದು ಮಗು ಬಿಟ್ಟೋದ ಹೆತ್ತಮ್ಮ - ರೋಧಿಸುತ್ತಿದೆ 3 ತಿಂಗಳ ಕೂಸು       
Breaking News

ರಿಟೇಲ್ ವ್ಯವಸ್ಥೆ ಬದಲಿಸಿದ ಶೊಟಾಂಗ್

Wednesday, 23.08.2017, 3:00 AM       No Comments

| ಐ.ಎನ್. ಬಾಲಸುಬ್ರಹ್ಮಣ್ಯ

ಭಾರತದಲ್ಲಿ ಸಾಂಪ್ರದಾಯಿಕ ರಿಟೇಲ್ ಸರಬರಾಜು ವ್ಯವಸ್ಥೆ ತೀರಾ ಅಸಮರ್ಥವಾಗಿದೆ. ಸರಬರಾಜುದಾರರು ಹಾಗೂ ಉತ್ಪಾದಕರಿಗೆ ಸಣ್ಣ-ಪುಟ್ಟ ರಿಟೇಲರ್​ಗಳನ್ನು ತಲುಪುವುದು ಕಷ್ಟದ ಕೆಲಸ. ಹಾಗಾಗಿ ತಮ್ಮನ್ನು ತಲುಪುವ ಸರಬರಾಜುದಾರರಿಂದ ಅನಗತ್ಯ ವಸ್ತುಗಳನ್ನು ಪಡೆದು ಧೀರ್ಘಕಾಲದವರೆಗೆ ಅದನ್ನು ವ್ಯರ್ಥವಾಗಿ ತಮ್ಮ ಬಳಿ ದಾಸ್ತಾನು ಮಾಡುವ ಅನಿವಾರ್ಯತೆ ರಿಟೇಲರ್​ಗಳಿಗೆ ಎದುರಾಗುತ್ತದೆ. ಅನೇಕ ಬಾರಿ ಸರಬರಾಜುದಾರರು ತಮಗೆ ಹೆಚ್ಚಿನ ಲಾಭ ಒದಗಿಸುವ ಬ್ರಾಂಡ್/ಉತ್ಪನ್ನಗಳನ್ನು ಬಲವಂತವಾಗಿ ರಿಟೇಲರ್​ಗಳಿಗೆ ಸರಬರಾಜು ಮಾಡಬಹುದು. ಇದರಿಂದಾಗಿ ರಿಟೇಲರ್​ಗಳ ಬಳಿ ಹೆಚ್ಚಿನ ಆಯ್ಕೆಯಿಲ್ಲದೇ ಗ್ರಾಹಕರನ್ನು ಕಳೆದುಕೊಳ್ಳುವ ಅಪಾಯ ಎದುರಾಗಬಹುದು. ಹೀಗೆ ಈ ಕ್ಷೇತ್ರದಲ್ಲಿರುವ ಅನೇಕ ಸಮಸ್ಯೆಗಳನ್ನು ಗಮನಿಸಿದ ಗೆಳೆಯರಿಬ್ಬರು ಮೊಬೈಲ್ ಫೋನ್ ಹಾಗೂ ಅದಕ್ಕೆ ಅಗತ್ಯವಿರುವ ಉಪಕರಣಗಳು/ಬಿಡಿಭಾಗಗಳ ಸರಬರಾಜು ವಿಧಾನದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಶೊಟಾಂಗ್ ಎಂಬ ಮೊಬೈಲ್ ಅಪ್ಲಿಕೇಷನ್ ಆಧರಿತ ನವೋದ್ಯಮ ಆರಂಭಿಸಿದರು.

ಶೊಟಾಂಗ್ 2015ರಲ್ಲಿ ಅನಿಷ್ ಬಸು ರಾಯ್ ಹಾಗೂ ಅಂತರ್​ಪ್ರೀತ್ ಸಿಂಗ್ ಬೆಂಗಳೂರಿನಲ್ಲಿ ಆರಂಭಿಸಿದ ಬಿ-ಟು-ಬಿ(ಬಿಸಿನೆಸ್-ಟು-ಬಿಸಿನೆಸ್) ಮಾರುಕಟ್ಟೆ ಪ್ರದೇಶ ಮಾದರಿಯ ನವೋದ್ಯಮ. ನೋಕಿಯಾ, ಕೋಕ ಕೋಲಾದಂತಹ ಪ್ರತಿಷ್ಟಿತ ಕಂಪನಿಗಳಲ್ಲಿ ಮಾರಾಟ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದ ಇವರು 2013ರಲ್ಲಿ ಚಾನಲಿಸ್ಟ್ ಎಂಬ ಸರಬರಾಜು ಸರಪಳಿ ಸಲಹಾ ವೇದಿಕೆ ಆರಂಭಿಸಿದರು. 2015ರ ನವೆಂಬರ್​ನಲ್ಲಿ ಅದು ಈಗಿನ ರೂಪಕ್ಕೆ ಬದಲಾಯಿತು. ಶೊಟಾಂಗ್​ಉತ್ಪಾದಕರು, ಸರಬರಾಜುದಾರರು(ಸಗಟು ವ್ಯಾಪಾರಿಗಳು) ಹಾಗೂ ರಿಟೇಲರ್​ಗಳನ್ನು ಒಂದೇ ವೇದಿಕೆಗೆ ತಂದು, ತಂತ್ರಜ್ಞಾನದ ನೆರವಿನಿಂದ ಅವರ ನಡುವಿನ ವ್ಯವಹಾರವನ್ನು ಸುಗಮಗೊಳಿಸಿದೆ. ಈ ಮೂವರೂ ವೇದಿಕೆಯಲ್ಲಿ ನೇರ ಸಂಪರ್ಕ ಸಾಧಿಸಬಹುದು. ಸಗಟು ವ್ಯಾಪಾರಿಗಳು ಹಾಗೂ ಉತ್ಪಾದಕರಿಗೆ ಹೆಚ್ಚೆಚ್ಚು ರಿಟೇಲರ್​ಗಳನ್ನು ತಲುಪುವ ಅವಕಾಶ ದೊರೆಯುತ್ತದೆ. ಹಣಕಾಸಿನ ವಹಿವಾಟು, ವೇದಿಕೆ ಮೂಲಕವೇ ನಡೆಯುವುದರಿಂದ ರಿಟೇಲರ್​ಗಳಿಂದ ಹಣ ಸಂಗ್ರಹಿಸಲು ಪ್ರತ್ಯೇಕ ಪ್ರತಿನಿಧಿಯನ್ನು ನೇಮಿಸುವ ಅಗತ್ಯವಿರುವುದಿಲ್ಲ. ಹೀಗೆ ಅನೇಕ ಖರ್ಚುಗಳು ಕಡಿಮೆಯಾಗುವುದರಿಂದ ಹಣ ಉಳಿತಾಯವಾಗಿ ಉತ್ಪನ್ನಗಳ ಮೇಲಿನ ಹೆಚ್ಚುವರಿ ಲಾಭಾಂಶದಲ್ಲಿ ಅಲ್ಪ ಪ್ರಮಾಣವನ್ನು ರಿಟೇಲರ್​ಗಳಿಗೆ ವರ್ಗಾಯಿಸಿ ಅವರು ಆನ್​ಲೈನ್ ವೇದಿಕೆಗಳೊಂದಿಗೆ ಪೈಪೋಟಿ ನಡೆಸಲು ನೆರವಾಗಬಹುದು. ರಿಟೇಲರ್​ಗಳಿಗೂ ಅಪಾರವಾದ ಆಯ್ಕೆ ದೊರೆಯುವುದರಿಂದ ಹೆಚ್ಚಿನ ಬೇಡಿಕೆ ಇರುವ ಉತ್ಪನ್ನಗಳನ್ನು ಖರೀದಿಸಿ ದಾಸ್ತಾನು ಮಾಡಿಕೊಳ್ಳಬಹುದು. ಇದರೊಂದಿಗೆ ರಿಟೇಲರ್​ಗಳಿಗೆ, ಉದ್ಯಮಗಳಿಗೆ ಸಾಲ ಒದಗಿಸುವ ಕ್ಯಾಪಿಟಲ್ ಫೋ›ಟ್​ನಂತಹ ವೇದಿಕೆಗಳಿಂದ ಸಾಲದ ಸೌಲಭ್ಯವನ್ನೂ ಶೊಟಾಂಗ್ ನೀಡುತ್ತದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬಯಿ, ಪುಣೆ, ದೆಹಲಿ ಹಾಗೂ ಅಹಮದಾಬಾದ್ ನಗರಗಳಲ್ಲಿ ತನ್ನ ಸೇವೆ ಒದಗಿಸುತ್ತಿರುವ ಶೊಟಾಂಗ್, ಇದಕ್ಕಾಗಿ 300ಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ. ಈ ಏಳು ನಗರಗಳಲ್ಲಿ 15,000ಕ್ಕೂ ಅಧಿಕ ರಿಟೇಲರ್​ಗಳು, ಸುಮಾರು 180 ಸರಬರಾಜುದಾರರು/ಸಗಟು ವ್ಯಾಪಾರಿಗಳು ಹಾಗೂ ಕೆಲ ಉತ್ಪಾದಕರನ್ನು ವೇದಿಕೆಯಲ್ಲಿ ಹೊಂದಿರುವ ಶೊಟಾಂಗ್, ಇಲ್ಲಿ ಓರ್ವ ರಿಟೇಲರ್ ನಡೆಸುವ ವಹಿವಾಟಿನ ಸರಾಸರಿ ಮೊತ್ತ 18,000ದಷ್ಟಿದೆ. ಬೆಂಗಳೂರಿನಲ್ಲಿ ಶೇ.90ರಷ್ಟು ರಿಟೇಲರ್​ಗಳನ್ನು ತಲುಪಿರುವುದಾಗಿ ಶೊಟಾಂಗ್ ಹೇಳಿಕೊಂಡಿದೆ. ವೇದಿಕೆಯಲ್ಲಿ ನಡೆಯುವ ಪ್ರತಿ ವಹಿವಾಟಿಗೆ ಸರಬರಾಜುದಾರರಿಂದ ಕಮಿಷನ್ ಪಡೆಯುತ್ತದೆ.

ಅನೇಕ ಹೂಡಿಕೆ ಕಂಪನಿಗಳಿಂದ ಈವರೆಗೆ 5.3 ಮಿಲಿಯನ್ ಅಮೆರಿಕನ್ ಡಾಲರ್ ಬಂಡವಾಳ ಪಡೆದಿರುವ ಶೊಟಾಂಗ್, ಮುಂದಿನ ದಿನಗಳಲ್ಲಿ ದೇಶದ 85 ಪ್ರಮುಖ ನಗರಗಳಿಗೆ ಸೇವೆ ವಿಸ್ತರಿಸುವ ಗುರಿ ಹೊಂದಿದೆ. ಟೆಲಿಕಾಂ, ಗೃಹೋಪಯೋಗಿ ಉಪಕರಣಗಳು, ಉಡುಪುಗಳು, ಹೆಚ್ಚು ಮಾರಾಟವಾಗುವ ಗ್ರಾಹಕ ಬಳಕೆ ವಸ್ತುಗಳು(ಎಫ್​ಎಂಸಿಜಿ) ಹಾಗೂ ಔಷಧಗಳನ್ನೂ ತನ್ನ ವೇದಿಕೆಗೆ ತರುವ ಉದ್ದೇಶ ಕಂಪನಿಗಿದೆ. ಕಳೆದ ಆರ್ಥಿಕ ವರ್ಷದಲ್ಲಿ 440 ಕೋಟಿ ರೂಪಾಯಿ ಒಟ್ಟಾರೆ ವ್ಯಾಪಾರ ಮೌಲ್ಯದ(ಜಿಎಂವಿ) ಸಾಧನೆ ಮಾಡಿರುವುದಾಗಿ ಸಂಸ್ಥೆ ಹೇಳಿದೆ.

ಲೇಖಕರು: ಸ್ಟಾರ್ಟಪ್​ಗಳ ವಿಷಯದಲ್ಲಿ ಸಂವಹನ ಸಲಹೆಗಾರರು

Leave a Reply

Your email address will not be published. Required fields are marked *

Back To Top