Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ರಿಟೇಲ್ ರಿಯಲ್ ಎಸ್ಟೇಟ್​ನಿಂದ ಅಧಿಕ ಲಾಭ

Saturday, 09.09.2017, 3:01 AM       No Comments

| ವರುಣ ಹೆಗಡೆ ಬೆಂಗಳೂರು

ದೇಶದಲ್ಲಿ ವಾಣಿಜ್ಯ ರಿಯಲ್ ಎಸ್ಟೇಟ್ ಉದ್ಯಮವು ಉತ್ತಮ ಪ್ರಗತಿಯಲ್ಲಿದೆ. ಅದರಲ್ಲೂ ಬೆಂಗಳೂರು ಏಷ್ಯಾ ಫೆಸಿಫಿಕ್ ವಲಯದಲ್ಲಿ ಮುಂದಿದೆ. ಇದನ್ನು ಹಲವಾರು ವರದಿಗಳು ಪುಷ್ಠೀಕರಿಸಿವೆ. ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನೇತರ ವಲಯ ಹಾಗೂ ಡಿಜಿಲ್ ಉದ್ಯಮದಲ್ಲಿ ಉತ್ತಮ ವಹಿವಾಟು ನಡೆಯುತ್ತಿದೆ. ಇದರಿಂದ ವಾಣಿಜ್ಯ ರಿಯಲ್ ಎಸ್ಟೇಟ್​ಗೆ ಬೇಡಿಕೆ ಹೆಚ್ಚಾಗುತ್ತಿದೆ. ಇನ್ನೊಂದೆಡೆ ರಿಟೇಲ್ ರಿಯಲ್ ಎಸ್ಟೇಟ್ ಚೇತರಿಕೆ ಕಂಡಿದ್ದು, ಲಾಭದತ್ತ ವಾಲಿದೆ. ಇದರಿಂದಾಗಿ ಹೂಡಿಕೆದಾರರು ರಿಟೇಲ್ ರಿಯಲ್ ಎಸ್ಟೇಟ್​ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಕಳೆದ ವರ್ಷಕ್ಕಿಂತ ರಿಟೇಲ್ ರಿಯಲ್ ಎಸ್ಟೇಟ್ ಶೇ.20 ಬೆಳವಣಿಗೆ ಕಂಡಿದೆ. ಇದರಿಂದ ಬಂಡವಾಳ ಹೂಡಿಕೆದಾರರು ಈ ವಿಭಾಗದಲ್ಲಿ ಹೆಚ್ಚು ಹಣ ಹೂಡಿಕೆ ಮಾಡುತ್ತಿದ್ದಾರೆ. ಇದು ರಿಟೇಲ್ ಉದ್ಯಮದ ಪ್ರತಿಕೂಲ ಪರಿಣಾಮದಿಂದ ನಿಶ್ಚಿತ ಆದಾಯ ನೀಡುವ ಭರವಸೆ ಮೂಡಿಸಿದೆ. ನಗರ ಬೆಳೆದಂತೆ ಆದಾಯದ ಪ್ರಮಾಣದಲ್ಲಿಯೂ ಹೆಚ್ಚಳವಾಗಲಿದೆ. ವಸತಿ ಗುತ್ತಿಗಳಂತೆ ರಿಟೇಲ್ ಭೋಗ್ಯವನ್ನು ಕನಿಷ್ಠ 5ವರ್ಷಗಳಿಗೆ ಸಹಿ ಮಾಡಿಸಿಕೊಳ್ಳಲಾಗುತ್ತದೆ. ಇದು ಬಾಡಿಗೆದಾರ ಹಾಗೂ ಮಾಲೀಕರಿಗೆ ಸಹಾಯಕವಾಗಿದೆ.

ಬಾಡಿಗೆದಾರರು ಹೆಚ್ಚಿನ ಅವಧಿಗೆ ಭೋಗ್ಯಕ್ಕೆ ವಸತಿ ಪಡೆದಲ್ಲಿ ಮಾಲೀಕರಿಗೆ ಹೆಚ್ಚಿನ ಲಾಭ ನೀಡುವ ಜನತೆಗೆ ಹಲವು ಭದ್ರತೆಗಳು ದೊರೆಯುತ್ತವೆ.

ಚಿಲ್ಲರೆ ವ್ಯಾಪಾರಿಗಳಿಗೆ ವಹಿವಾಟು ಬಾಡಿಗೆಗಳು ಇವೆ. ಇದರಿಂದ ಭೂ ಮಾಲೀಕರಿಗೆ ವ್ಯವಹಾರದಿಂದ ಬಂದ ಒಟ್ಟು ಆದಾಯದಲ್ಲಿ ಶೇಖಡವಾರು ನೀಡಲಾಗುತ್ತದೆ. ಈ ಕ್ರಮದಿಂದ ಚಿಲ್ಲರೆ ಹೂಡಿಕೆದಾರರಿಗೆ ಉತ್ತಮ ಪ್ರೋತ್ಸಾಹ ದೊರಕಿದಂತಾಗುತ್ತದೆ.

ಮಾರುಕಟ್ಟೆಗೆ ವೇಗ

ರಿಟೇಲ್ ರಿಯಲ್ ಎಸ್ಟೇಟ್ ಹೂಡಿಕೆ ಮಾರುಕಟ್ಟೆ ವೇಗವನ್ನು ಹೆಚ್ಚಿಸಲಿದೆ. ಚಿಲ್ಲರೆ ಎಫ್​ಡಿಐ ನೀತಿಯಿಂದ ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಚಿಲ್ಲರೆ ವ್ಯಾಪಾರಿಗಳಿಂದ ಬೇಡಿಕೆಯೂ ಹೆಚ್ಚುವ ಸಾಧ್ಯತೆಯಿದೆ. ಸಾರ್ವಜನಿಕ ಸಾರಿಗೆ, ರಸ್ತೆಗಳಂತಹ ಮೂಲಸೌಕರ್ಯದ ಅಭಿವೃದ್ಧಿ ಸಹ ರಿಟೇಲ್ ರಿಯಲ್ ಎಸ್ಟೇಟ್ ಮಾರುಕಟ್ಟೆ ಮೇಲೆ ಪ್ರಭಾವ ಬೀರಲಿದೆ.

ರಿಟೇಲ್ ರಿಯಲ್ ಎಸ್ಟೇಟ್ ಹೆಚ್ಚು ಸಂಕೀರ್ಣ

ವಾಣಿಜ್ಯ ಅಥವಾ ವಸತಿ ರಿಯಲ್ ಎಸ್ಟೇಟ್​ಗೆ ಹೋಲಿಸಿದರೆ ರಿಟೇಲ್ ರಿಯಲ್ ಎಸ್ಟೇಟ್ ಹೆಚ್ಚು ಸಂಕೀರ್ಣವಾಗಿದೆ. ಮನೆ ಹಾಗೂ ಕಚೇರಿಗೆ ಸ್ಥಳಾವಕಾಶ ಖರೀದಿಯ ಹಾಗಲ್ಲ. ಚಿಲ್ಲರೆ ವ್ಯಾಪಾರದ ಹೂಡಿಕೆದಾರರು ಅನೇಕ ಅಂಶಗಳನ್ನು ಇಲ್ಲಿ ಗಮನಿಸಬೇಕಾಗುತ್ತದೆ. ಒಂದುವೇಳೆ ಆರ್ಥಿಕತೆ ಕುಸಿದರೆ ಚಿಲ್ಲರೆ ವ್ಯಾಪಾರವು ನೆಲಕಚ್ಚುವ ಸಾಧ್ಯತೆಯಿರುತ್ತದೆ. ಅಷ್ಟೇ ಅಲ್ಲ, ವ್ಯವಹಾರಗಳು ವಿಫಲವಾಗುತ್ತದೆ. ಬಾಡಿಗೆದಾರರ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬೇಕಾಗತ್ತದೆ.

ಏನಿದು ರಿಟೇಲ್ ರಿಯಲ್ ಎಸ್ಟೇಟ್

ಗ್ರಾಹಕ ಸರಕು ಮತ್ತು ಸೇವೆಗಳನ್ನು ಮಾರಾಟ ಮಾಡುವ ಕೇಂದ್ರಗಳ ಮೇಲೆ ಹೂಡಿಕೆ ಮಾಡುವುದು. ಚಿಲ್ಲರೆ ಅಂಗಡಿಗಳು, ಸೂಪರ್ ಮಾರ್ಕೆಟ್, ಕೆಫೆ, ಔಷಧಾಲಯ, ಫ್ಯಾಷನ್ ಮಳಿಗೆಗಳನ್ನು ಬಾಡಿಗೆ ನೀಡುವುದಾಗಿದೆ.

Leave a Reply

Your email address will not be published. Required fields are marked *

Back To Top