Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News

ರಾಜ್ಯ ಅಥ್ಲೆಟಿಕ್ಸ್ ಮೊದಲ ದಿನ ಆರು ಕೂಟ ದಾಖಲೆ

Tuesday, 05.09.2017, 3:00 AM       No Comments

ಮೂಡುಬಿದಿರೆ: ರಾಜ್ಯ ಜೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ಸ್ ಸೋಮವಾರ ಆರಂಭವಾಗಿದ್ದು, ಮೊದಲ ದಿನವೇ ಆರು ಹೊಸ ಕೂಟದಾಖಲೆಗಳು ದಾಖಲಾಗಿವೆ. ಈ ಪೈಕಿ ನಾಲ್ಕು ಕೂಟದಾಖಲೆಗಳನ್ನು ಆಳ್ವಾಸ್ ಸ್ಪೋಟ್ಸ್ ಕ್ಲಬ್ ಮಾಡಿದೆ.

20 ವಯೋಮಿತಿ ಪುರುಷರ ವಿಭಾಗದ ಜಾವೆಲಿನ್ ಥ್ರೋನಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್​ನ ಅರುಣ್ ಬೇಬಿ 75.55 ಮೀ. ಭರ್ಜಿ ದೂರ ಎಸೆದು ಹೊಸ ದಾಖಲೆ ನಿರ್ವಿುಸಿದರು. 2007ರಲ್ಲಿ ಪುರಂದರ ಸಾಧಿಸಿದ್ದ 73.31 ಮೀ.ನ ದಾಖಲೆ ಹಿಮ್ಮೆಟ್ಟಿಸಿದರು. 20 ವಯೋಮಿತಿ ಪುರುಷರ ವಿಭಾಗದ 10 ಕಿ.ಮೀ ನಡಿಗೆಯಲ್ಲಿ ಸಾಯ್ ಬೆಂಗಳೂರಿನ ರಕ್ಷಿತ್ ಬಿ. 46.34.09 ನಿಮಿಷಗಳಲ್ಲಿ ಗುರಿ ತಲುಪಿ 2012ರಲ್ಲಿ ವಿನೋದ್ ಹೂಗಾರ್ ನಿರ್ವಿುಸಿದ್ದ 47.12.0 ನಿಮಿಷಗಳ ದಾಖಲೆ ಮುರಿದರು.

ಬಾಲಕರ 18 ವಯೋಮಿತಿ ಡಿಸ್ಕಸ್ ಥ್ರೋನಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್​ನ ಆಶಿಕ್ ಬಲೋಸಿಯಾ 50.13 ಮೀ. ದೂರಕ್ಕೆ ಎಸೆದು ಹೊಸ ದಾಖಲೆ ನಿರ್ವಿುಸಿದರು. ಈ ಮೂಲಕ ಅವರು ಗೌತಮ್ (48.20 ಮೀ.) ಹೆಸರಲ್ಲಿದ್ದ ದಾಖಲೆ(2013) ಅಳಿಸಿದರು.

20 ವಯೋಮಿತಿ ಬಾಲಕಿಯರ 100 ಮೀ. ಓಟದಲ್ಲಿ ಉಜಿರೆ ಎಸ್​ಡಿಎಂ ಸ್ಪೋರ್ಟ್ಸ್ ಕ್ಲಬ್​ನ ಸ್ನೇಹಾ ಎಸ್​ಎಸ್ 11.07 ಸೆಕೆಂಡ್​ಗಳಲ್ಲಿ ಕ್ರಮಿಸಿ 2011ರಲ್ಲಿ ರೆಬೆಕಾ ಜೋಸ್ ಹೆಸರಲ್ಲಿದ್ದ 11.8 ಸೆಕೆಂಡ್​ಗಳ ಹಳೇ ದಾಖಲೆ ಮುರಿದರು.

16 ವಯೋಮಿತಿ ಬಾಲಕರ ಹ್ಯಾಮರ್ ಥ್ರೋನಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್​ನ ರಾಹುಲ್ 54.37 ಮೀ. ದೂರಕ್ಕೆ ಎಸೆದು 2013ರಲ್ಲಿ ಕೇಶವನ್ ದಾಖಲಿಸಿದ್ದ 53.88 ಮೀ. ದಾಖಲೆ ಹಿಮ್ಮೆಟ್ಟಿಸಿದರು. 16 ವಯೋಮಿತಿಯ ಹೈಜಂಪ್​ನಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್​ನ ಅಜಯ್ ಸಾಗರ್ 1.98 ಮೀ ಎತ್ತರ ಜಿಗಿದು 2009ರಲ್ಲಿ ಹಂದನ್ ರಚಿಸಿದ್ದ 1.86 ಮೀ. ದಾಖಲೆ ಅಳಿಸಿದರು.

Leave a Reply

Your email address will not be published. Required fields are marked *

Back To Top