Wednesday, 20th June 2018  

Vijayavani

ಐಟಿ ದೂರಿನಲ್ಲಿದೆ ಸ್ಫೋಟಕ ಮಾಹಿತಿ - ಎಐಸಿಸಿಗೆ ಕೋಟಿ ಕೋಟಿ ಕೊಟ್ಟಿದ್ರಾ ಡಿಕೆಶಿ - ಹವಾಲಾ ವ್ಯವಹಾರದಲ್ಲಿ ಡಿಕೆಶಿ ಹೆಸರು        ಉಪ್ಪು-ಹುಳಿ, ಖಾರ ಇಲ್ಲದ ಊಟ - ನಾನ್​ ವೆಜ್​​ನಿಂದ ದೂರ ದೂರ - ಪ್ರಕೃತಿ ಚಿಕಿತ್ಸಾಲಯದಲ್ಲಿ ಸಿದ್ದು ಫುಲ್ ಸಸ್ಯಹಾರಿ        ಕಾಶ್ಮೀರದಲ್ಲಿ ಯೋಧನ ಕಿಡ್ನಾಪ್​​​, ಹತ್ಯೆ ಪ್ರಕರಣ - ಮೃತನ ಮನೆಗೆ ರಕ್ಷಣಾ ಸಚಿವ ಭೇಟಿ - ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಿರ್ಮಲಾ ಸೀತಾರಾಮನ್​​        ರೈತ ಎಂದರೆ, ರಕ್ತ, ಬೆವರು ಸುರಿಸುವ ಅನ್ನದಾತ - ದೇಶದ ಅಭಿವೃದ್ಧಿಗೆ ದೇಶದ ರೈತರ ಕೊಡುಗೆ ಆಪಾರ - ರೈತರ ಜತೆ ಪ್ರಧಾನಿ ಮೋದಿ ಸಂವಾದ        ಬಿಸಿಲು ಬರೋವರೆಗೂ ಬಯಲಲ್ಲೇ ಪಾಠ - ಕುಸಿಯುತ್ತಿರೋ ಶಾಲೆಯಲ್ಲೇ ವಿದ್ಯಾರ್ಥಿಗಳ ನರಳಾಟ - ದಾವಣಗೆರೆಯ ಸರ್ಕಾರಿ ಶಾಲೆಗೆ ಬೇಕಿದೆ ಕಾಯಕಲ್ಪ        ಕಣಿವೆ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಹಿನ್ನೆಲೆ - ಮೈತ್ರಿ ಮುರಿದ ಬೆನ್ನಲ್ಲೇ ರಾಜ್ಯಪಾಲರ ಆಡಳಿತ ಜಾರಿ- ಮಧ್ಯಾಹ್ನ 2:30ಕ್ಕೆ ಅಧಿಕಾರಿಗಳ ಸಭೆ ಕರೆದ ಗವರ್ನರ್       
Breaking News

ರಾಜ್ಯದ ಮಹಾ ಪ್ರಮಾದ!

Sunday, 14.01.2018, 3:03 AM       No Comments

ಖಾನಾಪುರ/ಹುಬ್ಬಳ್ಳಿ: ಮಹದಾಯಿ ವಿವಾದ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಲೇ ಇದ್ದರೂ ಎಚ್ಚೆತ್ತುಕೊಳ್ಳದ ಸರ್ಕಾರ ಈಗ ಮತ್ತೊಂದು ಮಹಾ ಪ್ರಮಾದಕ್ಕೆ ನಾಂದಿ ಹಾಡಿದೆ. ವಿವಾದಿತ ಸ್ಥಳಕ್ಕೆ ಭೇಟಿ ನೀಡುವುದಾಗಿ ಗೋವಾ ಸರ್ಕಾರ ಈ ಮೊದಲೇ ಘೋಷಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದರ ಸಂಪೂರ್ಣ ಲಾಭ ಪಡೆದ ಅಲ್ಲಿನ ಜಲಸಂಪನ್ಮೂಲ ಸಚಿವರೇ ಸ್ವತಃ ಬಂದು ಸಾಕ್ಷ್ಯ ಸಂಗ್ರಹಿಸಿರುವು ವಿವಾದಕ್ಕೆ ಕಾರಣವಾಗಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಬಳಿ ನಡೆಯುತ್ತಿರುವ ಕಳಸಾ ತಿರುವು ಕಾಮಗಾರಿ ಸ್ಥಳಕ್ಕೆ ಗೋವಾ ರಾಜ್ಯದ ನೀರಾವರಿ ಸಚಿವ ವಿನೋದ ಪಾಲೇಕರ ನೇತೃತ್ವದ ತಂಡ ಅಲ್ಲಿನ ಪೊಲೀಸ್ ಭದ್ರತೆಯೊಂದಿಗೆ ಶನಿವಾರ ಮಧ್ಯಾಹ್ನ 2.30ಕ್ಕೆ ಭೇಟಿ ನೀಡಿ, ಕೇವಲ ಎಂಟೇ ನಿಮಿಷಕ್ಕೆ ಬೇಕಾದ ಮಾಹಿತಿ ಸಂಗ್ರಹಿಸಿ ತೆರಳಿದೆ. ತಂಡದಲ್ಲಿ ಮುಖ್ಯ ಇಂಜಿನಿಯರ್ ಸಂದೀಪ ನಾಡಕರ್ಣಿ ಮತ್ತು ಇತರ ಅಧಿಕಾರಿಗಳಿದ್ದು, ಕಾಮಗಾರಿಯ ಛಾಯಾಚಿತ್ರಗಳನ್ನು ಸೆರೆಹಿಡಿಯಲಾಗಿದೆ.

ನ್ಯಾಯಮಂಡಳಿ ಮುಂದೆ: ಕರ್ನಾಟಕ ಸರ್ಕಾರ ನಡೆಸಿರುವ ಕಾಮಗಾರಿಯನ್ನು ತಡೆಯಬೇಕೆಂದು ಗೋವಾ ಸಿಎಂ ಪರಿಕ್ಕರ್ ಮುಖ್ಯ ಕಾರ್ಯದರ್ಶಿಗೆ ಈಗಾಗಲೇ ಆದೇಶ ನೀಡಿದ್ದಾರೆನ್ನಲಾಗಿದೆ. ಫೆ. 6ರಿಂದ ಮಹದಾಯಿ ನ್ಯಾಯಮಂಡಳಿ ಎದುರು ಉಭಯ ರಾಜ್ಯಗಳ ವಕೀಲರ ವಾದವಿವಾದಗಳು ಆರಂಭಗೊಳ್ಳಲಿದ್ದು, ಇಲ್ಲಿ ಸಂಗ್ರಹಿಸಿದ ದಾಖಲೆಗಳನ್ನು ನ್ಯಾಯಮಂಡಳಿಯ ಮುಂದೆ ಪ್ರಸ್ತುತಪಡಿಸಿ ನ್ಯಾಯಾಧಿಕರಣ ಮುಂದೆ ಕರ್ನಾಟಕ ಆದೇಶ ಉಲ್ಲಂಘನೆ ಮಾಡುತ್ತಿದೆ ಎಂದು ನಿರೂಪಿಸಲು ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸ್ಥಳೀಯರಿಂದ ತೀವ್ರ ಆಕ್ರೋಶ

ಗೋವಾ ಜಲಸಂಪನ್ಮೂಲಮಂತ್ರಿ ವಿನೋದ ಪಾಲೇಕರ ಮಾತನಾಡಿ, ‘ಮಹದಾಯಿ ನಮ್ಮ ತಾಯಿ, ಅದನ್ನು ರಕ್ಷಿಸಲು ನಾವು ಬದ್ಧ. ಈ ಸ್ಥಳದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಲು ನಾವು ಬಿಡುವುದಿಲ್ಲ. ಒಂದು ಹನಿ ನೀರನ್ನೂ ಮಲಪ್ರಭೆಗೆ ತಿರುಗಿಸಲು ಆಸ್ಪದ ನೀಡುವುದಿಲ್ಲ’ ಎಂದು ಕರ್ನಾಟಕದ ನೆಲದಲ್ಲಿಯೇ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಇಷ್ಟಿದ್ದರೂ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರಿದ್ದು, ನದಿ ನೆಲದ ಜನರ ಆಕ್ರೋಶಕ್ಕೆ ಕಾರಣವಾಗಲಿದೆ. ಮಹದಾಯಿ ಪ್ರದೇಶಕ್ಕೆ ಭೇಟಿ ನೀಡುತ್ತೇನೆಂದು ಮೊದಲೇ ಘೋಷಿಸಿದ್ದರೂ ಕರ್ನಾಟಕ ಸರ್ಕಾರದ ಪ್ರತಿಕ್ರಿಯೆ ಶೂನ್ಯವಾಗಿತ್ತು. ಈ ಎಲ್ಲ ಅಂಶಗಳು ಮಹದಾಯಿ ಹೋರಾಟಗಾರರ ಹಾಗೂ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಮತ್ತೊಂದು ಸುತ್ತಿನ ವಿವಾದಕ್ಕೆ ಕಾರಣವಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಗೋವಾದ ನೀರಾವರಿ ಸಚಿವ ವಿನೋದ ಪಾಲೇಕರ ತಂಡ ಕಣಕುಂಬಿಗೆ ಭೇಟಿ ನೀಡಿ ಕಳಸಾ ನಾಲಾ ವೀಕ್ಷಿಸಿದೆ. ಇದು ಸಾರ್ವಜನಿಕ ಸ್ಥಳ ಆಗಿರುವುದರಿಂದ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ.

| ಡಾ.ಬಿ.ಆರ್.ರವಿಕಾಂತೇಗೌಡ ಎಸ್​ಪಿ, ಬೆಳಗಾವಿ

 

ಕರ್ನಾಟಕವು ಕಳಸಾ ನಾಲೆಗೆ ಅಣೆಕಟ್ಟು ನಿರ್ವಿುಸಿದರೆ, ಗೋವಾಕ್ಕೆ ಮಹದಾಯಿಯಿಂದ ಒಂದು ಹನಿ ನೀರು ಬರುವುದಿಲ್ಲ. ಕರ್ನಾಟಕವು ಈ ಭಾಗದ ನೀರನ್ನು ಮಲಪ್ರಭೆಗೆ ಹರಿಸಲು ಯೋಚಿಸಿದೆ. ಅದರ ವಿರುದ್ಧ ನ್ಯಾಯಾಲಯದಲ್ಲಿ ದೂರು ಸಲ್ಲಿಸಲಾಗುವುದು

| ಆತ್ಮಾರಾಮ ನಾಡಕರ್ಣಿ ಗೋವಾ ಸಾಲಿಸಿಟರ್ ಜನರಲ್

 

ಮಹದಾಯಿ ವಿಚಾರದಲ್ಲಿ ಮುಜುಗರಕ್ಕೆ ಒಳಗಾಗಿರುವ ಗೋವಾ ಸರ್ಕಾರ ಜನರ ದಿಕ್ಕನ್ನು ಬೇರೆಡೆ ಸೆಳೆಯಲು ಪರಿಶೀಲನೆ ನಾಟಕ ಮಾಡುತ್ತಿದೆ. ಇದಕ್ಕೆ ನಮ್ಮ ಅನುಮತಿ ಪಡೆದಿಲ್ಲ. ನಾವು ಕಾಮಗಾರಿ ನಡೆಸುತ್ತಿಲ್ಲ.

| ಎಂ.ಬಿ. ಪಾಟೀಲ ಜಲಸಂಪನ್ಮೂಲ ಸಚಿವ

 

ಗೋವಾ ಎಲ್ಲ ದಾಖಲೆ ಸಂಗ್ರಹಿಸಿ ನ್ಯಾಯಮಂಡಳಿಯ ಮುಂದಿಡಲಿದೆ. ಕರ್ನಾಟಕ ಸರ್ಕಾರ ತಾನೇ ವಿವಾದ ಹೆಚ್ಚಿಸಿಕೊಂಡು ಕಲ್ಲುಚಪ್ಪಡಿ ಹಾಕಿಕೊಂಡಿದೆ.

| ವಿಜಯ ಕುಲಕರ್ಣಿ ಮಹದಾಯಿ ರೈತ ಮುಖಂಡ

 

5 ಲಕ್ಷ ರೂ. ಪರಿಹಾರ

ನವಲಗುಂದ: ಮಹದಾಯಿ ಹೋರಾಟದಲ್ಲಿ ಮಡಿದ 8 ರೈತರಿಗೆ ತಲಾ 5 ಲಕ್ಷ ರೂ. ಪರಿಹಾರವನ್ನು ಸಿಎಂ ಸಿದ್ದರಾಮಯ್ಯ ಘೊಷಿಸಿದ್ದಾರೆ ಎಂದು ರೈತ ಸೇನಾ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top