Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಕ್ಕೆ ರಹದಾರಿ

Thursday, 14.09.2017, 3:03 AM       No Comments

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ಚಾಲಿತ ವಾಹನಗಳನ್ನು ಜನಪ್ರಿಯಗೊಳಿಸಲು ‘ಕರ್ನಾಟಕ ಎಲೆಕ್ಟ್ರಿಕ್ ವೆಹಿಕಲ್ ಆಂಡ್ ಎನರ್ಜಿ ಸ್ಟೋರೇಜ್ ಪಾಲಿಸಿ’ಗೆ ಸಂಪುಟ ಒಪ್ಪಿಗೆ ಮುದ್ರೆಯೊತ್ತಿದೆ. ಜತೆಗೆ ಈ ನೀತಿ ಮೂಲಕ ಎಲೆಕ್ಟ್ರಿಕ್ ವಾಹನ ತಯಾರಿಕೆ, ಪೂರಕ ಉದ್ಯಮ ಬೆಳೆಸಲು ರಹದಾರಿಯೊಂದನ್ನು ರಾಜ್ಯ ಸರ್ಕಾರ ತೆರೆದಿಟ್ಟಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ನೀತಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಇದು ದೇಶದಲ್ಲಿಯೇ ಮೊದಲ ನೀತಿಯಾಗಿದ್ದು, ಈ ಮೂಲಕ 31 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ 55 ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಹಾಕಿಕೊಳ್ಳಲಾಗಿದೆ. ಈ ವಾಹನಗಳಲ್ಲಿ ಬಳಕೆಯಾಗುವ ಎಲೆಕೊ್ಟ್ರೕನ್ ವೋಲ್ಟ್ (ಇವಿ) ಉತ್ಪಾದನೆಗೆ ಪೂರಕವಾಗಿ ವಿಶೇಷ ವಲಯ ಸ್ಥಾಪನೆ, ಸ್ಟಾರ್ಟ್​ಅಪ್​ಗೆ

ಪ್ರೋತ್ಸಾಹ ನೀಡುವ ಮುಖೇನ ಹೊಸ ತಂತ್ರಜ್ಞಾನ ಪರಿಚಯಿಸುವ ಕಲ್ಪನೆ ಹೊಂದಲಾಗಿದೆ ಎಂದು ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು. ಪೆಟ್ರೋಲ್ ಬಂಕ್ ಮಾದರಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಇವಿ ಚಾರ್ಜ್ ಮಾಡುವ ಕೇಂದ್ರಗಳನ್ನು ವಿಮಾನ, ರೈಲು, ಬಸ್, ಮೆಟ್ರೋ ನಿಲ್ದಾಣ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲು ಪ್ರೋತ್ಸಾಹ ನೀಡಲಾಗುತ್ತದೆ. ವಸತಿ ಸಮುಚ್ಛಯ, ಐಟಿ ಪಾರ್ಕ್, ಮಾಲ್ ಸೇರಿ ಬಹುಮಹಡಿ ಕಟ್ಟಡಗಳಲ್ಲಿ ಚಾರ್ಜಿಂಗ್ ಝೋನ್​ಗೆ ಅವಕಾಶ ನೀಡುವುದನ್ನು ಕಡ್ಡಾಯಗೊಳಿಸಲಾಗುತ್ತದೆ. ಬಿಬಿಎಂಪಿ, ಬಿಎಂಟಿಸಿ, ಬೆಸ್ಕಾಂ, ಕೆಆರ್​ಇಡಿಎಲ್, ಕೆಐಎಡಿಬಿ ಮತ್ತಿತರ ಸಂಸ್ಥೆಗಳು ಬೆಂಗಳೂರು ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಾರ್ಜಿಂಗ್ ಸೌಲಭ್ಯ ಸ್ಥಾಪಿಸುವ ಹೊಣೆಗಾರಿಕೆಯನ್ನು ಈ ನೀತಿಯಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಏತ ನೀರಾವರಿಗೆ ರೂ.290 ಕೋಟಿ

 • 155 ಕಿ.ಮೀ. ಉದ್ದದ ನಾಲ್ಕು ಪ್ರಮುಖ ರಸ್ತೆಗಳನ್ನು 2095 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ.
 • ಬಿಸಿಯೂಟ ಯೋಜನೆಯಡಿ ಕೋಲಾರ, ಚಾಮರಾಜನಗರ, ಕೊಪ್ಪಳ ಹಾಗೂ ಬೆಳಗಾವಿ ಜಿಲ್ಲೆಗಳ ವಿಕೇಂದ್ರೀಕೃತ ಅಡುಗೆ ಕೇಂದ್ರಗಳಲ್ಲಿ ಸಾರವರ್ಧಿತ ಅಕ್ಕಿ ಬಳಕೆಗೆ 25 ಕೋಟಿ ರೂ.
 • ಬೆಂಗಳೂರು ನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಹೊಸ ವೈದ್ಯ ಕಾಲೇಜಿನ ಬಾಲಕಿಯರ ವಸತಿ ನಿಮಾರ್ಣಕ್ಕೆ 1.54 ಕೋಟಿ ರೂ.
 • ಕೊಪ್ಪಳ ಮತ್ತು ಯಲಬುರ್ಗಾ ತಾಲೂಕುಗಳ ಕುಡಿವ ನೀರಿನ ಏತ ನೀರಾವರಿ ಯೋಜನೆಗೆ 290 ಕೋಟಿ ರೂ.
 • ಕರ್ನಾಟಕ ನೀರಾವರಿ ನಿಗಮಕ್ಕೆ ಅವಧಿ ಸಾಲ 765 ಕೋಟಿ ರೂ. ಸಂಗ್ರಹಿಸಲು ಸರ್ಕಾರದಿಂದ ಖಾತರಿ ಕರೆ ಜಮೀನು.
 • ಧಾರವಾಡ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಶತಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಕಟ್ಟಡ ನವೀಕರಣ ಮತ್ತು ದುರಸ್ತಿ ಕಾಮಗಾರಿಗಳಿಗೆ 25 ಕೋಟಿ ರೂ. ಮಂಜೂರು.
 • ಬಳ್ಳಾರಿ ಜಿಲ್ಲೆ ತೋರಣಗಲ್​ನಲ್ಲಿರುವ ಜಿಂದಾಲ್ ಸ್ಟೀಲ್ ವರ್ಕ್ಸ್ ಕಾರ್ಖಾನೆ ನೀರು ಸಂಗ್ರಹಾಗಾರಕ್ಕೆ ಹೊಸಪೇಟೆಯ ಗೋನಾಳು ಗ್ರಾಮದಲ್ಲಿ 27.03 ಎಕರೆ ಭೂಮಿ.
 • ಪದವಿ ಪೂರ್ವ ಶಿಕ್ಷಣ ಇಲಾಖೆಯ ಕಂಪ್ಯೂಟರ್, ಪ್ರಿಂಟರ್ ಖರೀದಿಸಲು 8.72 ಕೋಟಿ ರೂ. ಪರಿಷ್ಕೃತ ಪ್ರಸ್ತಾವನೆಗೆ ಅನುಮೋದನೆ.
 • ನಾಲ್ಕನೇ ರಾಜ್ಯ ಹಣಕಾಸು ಆಯೋಗದ ಅವಧಿಯನ್ನು ಡಿ. 31ರವರೆಗೆ ವಿಸ್ತರಿಸಲು ಒಪ್ಪಿಗೆ.
 • ಕಾರವಾರ ಹಾಗೂ ಅಂಕೋಲ ಮಧ್ಯೆ ನೀರು ಸರಬರಾಜು ಮಾಡಲು ಗಂಗಾವಳಿ ನದಿಗೆ ಅಡ್ಡಲಾಗಿ 158.62 ಕೋಟಿ ರೂ. ಅಂದಾಜು ವೆಚ್ಚದಲ್ಲಿ ವೆಂಟೆಡ್ ಬ್ಯಾರೇಜ್ ನಿರ್ವಣ.
 • ಸ್ಮಾರ್ಟ್ ಸಿಟಿ ಅಭಿಯಾನದಡಿ ಸೃಜಿಸಲಾಗಿರುವ ವಿಶೇಷ ಉದ್ದೇಶಿತ ವಾಹಕಗೆ ಅಧಿಕಾರ ನೀಡಿ ಅನುಷ್ಠಾನ ಹಾಗೂ ಪರಿಶೀಲನೆಗೆ ನಗರಾಭಿವೃದ್ಧಿ ಸಚಿವರ ನೇತೃತ್ವದಲ್ಲಿ ಸಮಿತಿ ರಚನೆ.

 

25 ನಗರಗಳಲ್ಲಿ ವರ್ತಲ ರಸ್ತೆ

ಬೆಳೆಯುತ್ತಿರುವ ಎರಡು ಮತ್ತು ಮೂರನೇ ಹಂತದ 25 ನಗರಗಳಲ್ಲಿ ವರ್ತಲ ರಸ್ತೆ ನಿರ್ವಿುಸಲು ಉದ್ದೇಶಿಸಿದ್ದು, ಈ ಸಂಬಂಧ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಮುಂದಿನ ಐದು ವರ್ಷಗಳಲ್ಲಿ ರಾಜ್ಯದ 25 ಪ್ರಮುಖ ನಗರಗಳ ಸಮಗ್ರ ಸಮೀಕ್ಷೆ ಹಾಗೂ ಅಗತ್ಯ ಕುರಿತು ಮೇಲ್ವಿಚಾರಣೆ ಮಾಡಿ, ಕ್ರೋಡೀಕೃತ ವರದಿ ಸಲ್ಲಿಸಲಿದೆ. ಜಿಲ್ಲಾ ಕೇಂದ್ರಗಳಾಗಿರುವ 25 ಪ್ರಮುಖ ನಗರಗಳ ಸಮೀಕ್ಷೆ ಹಾಗೂ ಮಾಹಿತಿ ಕ್ರೋಡೀಕರಣಕ್ಕೆ 56 ಕೋಟಿ ರೂ., ನಗರ ಯೋಜನಾ ಕಾರ್ಯಕ್ರಮಗಳ ತಯಾರಿಕಾ ವೆಚ್ಚ 169 ಕೋಟಿ ರೂ. ಹಾಗೂ ಯೋಜನಾ ಮೇಲ್ವಿಚಾರಣಾ ಮತ್ತು ಆಡಳಿತಾತ್ಮಕ ವೆಚ್ಚ 50 ಕೋಟಿ ರೂ. ನೀಡಲಾಗುತ್ತಿದೆ.

ರಾಜಧಾನಿ ರಸ್ತೆಗಳಿಗೆ ರೂ.2095 ಕೋಟಿ

ರಾಜಧಾನಿಯ ಸಂಚಾರ ದಟ್ಟಣೆ ಕಡಿಮೆ ಮಾಡುವ ಹಿತದೃಷ್ಟಿಯಿಂದ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಮೂಲಕ ಬೆಂಗಳೂರು ಸುತ್ತಮುತ್ತಲಿನ ನಾಲ್ಕು ರಸ್ತೆಯನ್ನು ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. 155 ಕಿ.ಮೀ. ಉದ್ದದ 4 ಪ್ರಮುಖ ರಸ್ತೆಗಳನ್ನು 2095 ಕೋಟಿ ರೂ. ಅಂದಾಜು ವೆಚ್ಚ ದಲ್ಲಿ ಅಭಿವೃದ್ಧಿಪಡಿಸಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ರಾ.ಹೆದ್ದಾರಿಗಳಿಂದ ಬೆಂಗಳೂರು ಹೊರ ವಲಯದ ವರ್ತಲ ರಸ್ತೆಗಳಿಗೆ ಸಂಪರ್ಕ ಸೇತುವಾಗಿರುವ ರಸ್ತೆಗಳು ಇವಾಗಿವೆ. ಇದರಿಂದ ಬೆಂಗಳೂರು ಹೊರ ವಲಯದಲ್ಲಿನ ವಾಹನ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಗಲಿದೆ.

ರಸ್ತೆಗಳ ವಿವರ

ಹೊಸಕೋಟೆ-ಬೂದಿಗೆರೆ-ಮೈಲನಹಳ್ಳಿ- ದೇವನ ಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆ ಒಳಗೊಂಡ 22 ಕಿ.ಮೀ. ದ್ವಿ-ಪಥ ರಸ್ತೆಗೆ 420 ಕೋಟಿ ರೂ. ಥಿ ನೆಲಮಂಗಲ-ಚಿಕ್ಕಮಧುರೆ-ಬ್ಯಾತ-ರಾಜಾನುಕುಂಟೆ ರಸ್ತೆ – ತಿಮ್ಮಸಂದ್ರ-ದೇವನಹಳ್ಳಿ ಬಳಿಯ ಎಂ.ವಿ. ಸೋಲಾರ್ ರಸ್ತೆ ಒಳಗೊಂಡಂತೆ 43.5 ಕಿ.ಮೀ. ರಸ್ತೆಗೆ 505 ಕೋಟಿ ರೂ. ಥಿ ಆನೇಕಲ್-ಅತ್ತಿಬೆಲೆ-ಸರ್ಜಾಪುರ-ವರ್ತರು-ಹೊಸಕೋಟೆ ರಸ್ತೆ ಒಳಗೊಂಡಂತೆ 45 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ 545 ಕೋಟಿ ರೂ.

ಹಾರೋಹಳ್ಳಿ-ಹುರುಗನದೊಡ್ಡಿ- ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ರಸ್ತೆ- ಜಿಗಣಿ-ಆನೇಕಲ್ ರಸ್ತೆ ಒಳಗೊಂಡಂತೆ 47.5 ಕಿ.ಮೀ. ರಸ್ತೆ ಅಭಿವೃದ್ಧಿಗೆ 625 ಕೋಟಿ ರೂ.

 


ಆರ್ಥಿಕವಾಗಿ ಹಿಂದುಳಿದವರಿಗೆ ಒಂದು ಲಕ್ಷ ಮನೆ

ಬೆಂಗಳೂರು: ಬಡವರಿಗಾಗಿ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿದ ಬೆನ್ನಲ್ಲೇ ಆರ್ಥಿಕವಾಗಿ ಹಿಂದುಳಿದವರಿಗಾಗಿ ಒಂದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಿ ಹಂಚಲು ಸರ್ಕಾರ ಸಿದ್ಧ್ದೆ ನಡೆಸಿದೆ. ಈ ಸಂಬಂಧ ಮುಂದಿನ ಸಂಪುಟದಲ್ಲಿ ಕಡತ ಮಂಡಿಸಲು ವಸತಿ ಇಲಾಖೆ ಮುಂದಾಗಿದೆ.

ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮುಖ್ಯಮಂತ್ರಿ ವಸತಿ ಯೋಜನೆಯಡಿ 5000 ಕೋಟಿ ರೂ. ವೆಚ್ಚದಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಮೂರು ವರ್ಷಗಳ ಅವಧಿಯಲ್ಲಿ ಮನೆ ನಿರ್ಮಾಣ ಮಾಡಿ ಹಂಚಿಕೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಈವರೆಗೂ ಒತ್ತುವರಿ ತೆರವು ಮಾಡಿ ವಶಪಡಿಸಿಕೊಂಡಿರುವ ಭೂಮಿಯಲ್ಲಿ ಈ ಯೋಜನೆಗಾಗಿ 1200 ಎಕರೆ ನೀಡಲಾಗುತ್ತಿದೆ. ಕಂದಾಯ ಇಲಾಖೆಯಿಂದ ವಸತಿ ಇಲಾಖೆಗೆ ಭೂಮಿ ಹಸ್ತಾಂತರ ಮಾಡುವುದಕ್ಕೂ ಕಡತ ಮುಂದಿನ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ.

ಬಂಡವಾಳ ಕ್ರೋಡೀಕರಣ ಹೇಗೆ?: ಒಂದು ಮನೆಗೆ 5 ಲಕ್ಷ ರೂ.ಗಳಂತೆ ನಿರ್ಮಾಣ ವೆಚ್ಚ ನಿಗದಿ ಯಾಗಿದ್ದು, ಅದರಲ್ಲಿ ಫಲಾನುಭವಿ 1 ಲಕ್ಷ ರೂ. ಕಟ್ಟಬೇಕು. ಉಳಿದ 4 ಲಕ್ಷ ರೂ.ಗಳಲ್ಲಿ ರಾಜ್ಯ ಸರ್ಕಾರ 2.5 ಲಕ್ಷ ರೂ. ಹಾಗೂ ಕೇಂದ್ರ ಸರ್ಕಾರ 1.5 ಲಕ್ಷ ರೂ. ನೀಡಲಿವೆ. ಮೂರು ವರ್ಷಕ್ಕೆ ಬಂಡವಾಳ ಬೇಕಾಗಲಿದ್ದು, ಈ ವರ್ಷಕ್ಕೆ ಬೇಕಾಗುವ ಮೊತ್ತ ಬಿಡುಗಡೆಗೂ ಸರ್ಕಾರ ಸಿದ್ಧವಾಗಿದೆ.

ಸಾಲ ಸೌಲಭ್ಯ: ಫಲಾನುಭವಿ ಹಣ ಹೊಂದಿಸಲು ಕಷ್ಟವಾದರೆ ಸರ್ಕಾರ ಸಾಲ ಸೌಲಭ್ಯಕ್ಕೂ ವ್ಯವಸ್ಥೆ ಮಾಡಲಿದೆ. ತಿಂಗಳ ಕಂತು 2-3 ಸಾವಿರ ರೂ. ನಿಗದಿ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಫಲಾನುಭವಿಗಳ ಆಯ್ಕೆ: ಭೂಮಿ ಹಸ್ತಾಂತರ ಹಾಗೂ ಯೋಜನೆಗೆ ಅನುಮೋದನೆ ಸಿಕ್ಕ ಕೂಡಲೇ ಅರ್ಜಿ ಆಹ್ವಾನಿಸಲಾಗುತ್ತದೆ. ಅರ್ಜಿ ಸಲ್ಲಿಕೆ ನಂತರ ಕಂಠೀರವ ಕ್ರೀಡಾಂಗಣದಲ್ಲಿ ಲಾಟರಿ ಮೂಲಕ ಫಲಾ ನುಭವಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲು ಯೋಜನೆ ರೂಪಿಸುವಂತೆಯೂ ವಸತಿ ಸಚಿವ ಎಂ.ಕೃಷ್ಣಪ್ಪ, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮನೆಗಳ ಸ್ವರೂಪ: ಒಂದು ಬೆಡ್ ರೂಂ, ಹಾಲ್, ಅಡುಗೆ ಮನೆ, ಬಚ್ಚಲು ಹಾಗೂ ಶೌಚಗೃಹ ಇರುವಂತೆ ಮನೆ ನಿರ್ಮಾಣ ಮಾಡಲಾಗುತ್ತದೆ. ಪ್ರತಿ ಮನೆ 800ರಿಂದ 900 ಚದರ ಅಡಿ ಇರುತ್ತದೆ. 1000 ದಿಂದ 1100 ಚದರ ಅಡಿಯಲ್ಲಿ ಎರಡು ಬೆಡ್ ರೂಂ ಮನೆಗಳಾಗಿ ನಿರ್ಮಾಣ ಮಾಡುವ ಉದ್ದೇಶವೂ ಇದೆ.

ಇತರೆ ನಗರಕ್ಕೂ ವಿಸ್ತರಣೆ

ಬೆಂಗಳೂರಿನಲ್ಲಿ ಮನೆಗಳ ನಿರ್ಮಾಣ ಆರಂಭವಾದ ನಂತರ ಇತರೆ ನಗರಗಳಿಗೂ ಯೋಜನೆ ವಿಸ್ತರಣೆಗೆ ಸರ್ಕಾರ ನಿರ್ಧರಿಸಿದೆ. ಇತರೆ ನಗರಗಳಲ್ಲಿ 50 ಸಾವಿರದಿಂದ 1 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವ ಉದ್ದೇಶವಿದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

Back To Top