Tuesday, 27th June 2017  

Vijayavani

1. ಅಮೆರಿಕದಲ್ಲಿ ಟ್ರಂಪ್​ ಮೋದಿ ಭೇಟಿ- ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ಗಟ್ಟಿ- ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಶ್ವೇತ ಭವನ 2. ಸಹಜವಾಗಿ ಬರ್ತಿದ್ದೋರು ಕರೆದಿದ್ದಕ್ಕೆ ಬಂದ್ರು- ಕೃಷ್ಣಮಠದಲ್ಲಿ ಎಲ್ಲ ವರ್ಗದವರೂ ಊಟ ಮಾಡ್ತಾರೆ- ಸೌಹಾರ್ಧ ಭೋಜನಕ್ಕೆ ಪೇಜಾವರ ಶ್ರೀ ಸ್ಪಷ್ಟನೆ 3. ವಿಧಾನಸಭೆ ಚುನಾವಣೆ ಮೇಲೆ ವೇಣುಗೋಪಾಲ್ ಕಣ್ಣು- ಇಂದು ರಾಜ್ಯಕ್ಕೆ ಕೈ ಉಸ್ತುವಾರಿ ಆಗಮನ- ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ 4. ಉದ್ಧಾರ ಮಾಡ್ತೀವಿ ಅಂತಾ ಗುಂಡಿ ತೆಗೆದ್ರು- ಮೇಲುಕೋಟೆ ದೇವಸ್ಥಾನದ ಅಂದ ಹಾಳುಗೆಡುವಿದ್ರು- ಪುರಾತತ್ವ ಇಲಾಖೆ ವಿರುದ್ಧ ಪೊಲೀಸ್​ಠಾಣೆಯಲ್ಲಿ ದೂರು 5. ಆಕಾಶದಲ್ಲಿ ಹಾರುವಾಗಲೇ ತಾಂತ್ರಿಕ ದೋಷ- ವಿಮಾನದಲ್ಲಿದ್ದ ಸೀಟು ಫುಲ್​ ಅಲ್ಲಾಡ್ಸು- ಸೌಂಡ್ಗೆ ಬೆಚ್ಚಿ ಬಿದ್ದ ಜನ ಸೇಫು
Breaking News :

ರಾಜಧಾನಿಯಲ್ಲಿ ಝುೂ

Friday, 05.05.2017, 3:00 AM       No Comments

ಯು.ಬಿ. ಸಿಟಿ ಮುಂಭಾಗದ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ (ಮೇ 5) ನೂತನ ‘ಬೆಂಗಳೂರು ಪ್ರಾಣಿ ಸಂಗ್ರಹಾಲಯ’ ಪ್ರಾರಂಭವಾಗಲಿದೆ! ಆಫ್ರಿಕಾದ ಕಾಡಾನೆ ಹಿಂಡು, ಪಾಂಡಾ, ನೀರಾನೆ, ಬಿಳಿ ಹುಲಿ, ಜೀಬ್ರಾ, ಅಮೆರಿಕ ಮೊಸಳೆ, ಆಫ್ರಿಕಾ ಸಿಂಹ, ಅಮೆರಿಕದ ಕರಡಿ ಸೇರಿ ಹತ್ತು ಹಲವು ವನ್ಯಜೀವಿಗಳು ಇಲ್ಲಿವೆ.ಅಂದ ಹಾಗೇ ಇವುಗಳು ಸಜೀವ ಪ್ರಾಣಿಗಳಲ್ಲ. ಬದಲಾಗಿ ನೈಜ ಗಾತ್ರದ ರೋಬಾಟಿಕ್ ಪ್ರಾಣಿಗಳನ್ನು ಕಲಾಕಾರ ಗೌತಮ್ ಅಗರ್​ವಾಲ್ ತಂಡ ಇಲ್ಲಿ ನಿರ್ವಿುಸಿದ್ದು, ನೈಜ ಪ್ರಾಣಿಯಂತೆಯೇ ಭಾಸವಾಗುತ್ತವೆ. ಪ್ರಾಣಿ ಸಂಗ್ರಹಾಲಯದ ಜತೆ ಅಕ್ವೇರಿಯಂ ಹಾಗೂ ಪಕ್ಷಿಗಳ ಪ್ರದರ್ಶನವೂ ಇಲ್ಲಿದೆ. ರೋಬಾಟಿಕ್ ತಂತ್ರಜ್ಞಾನ ಬಳಸಿ ಕಾಡುಪ್ರಾಣಿಗಳ ನಿರ್ಮಾಣ ಮಾಡಿರುವುದರಿಂದ ನೈಜ ಪ್ರಾಣಿಗಳಂತೇ ಇವುಗಳಿಗೆ ಉಸಿರಾಡುವುದು, ಕಿವಿ, ಕಣ್ಣುಗಳ ಚಲನೆಯಿದೆ.

100 ಅಡಿ ಎತ್ತರದ ಐಫೆಲ್ ಟವರ್

ಪ್ಯಾರಿಸ್​ನ ಐಫೆಲ್ ಟವರ್ ಮಾದರಿಯನ್ನೂ ಇಲ್ಲಿ ತಯಾರಿಸಲಾಗಿದ್ದು, 100 ಅಡಿ ಎತ್ತರವಿದೆ. ವಾರಾಂತ್ಯದಲ್ಲಿ ಟವರ್ ಬೆಳಕಿನ ಚಿತ್ತಾರದಿಂದ ಕಂಗೊಳಿಸಲಿದೆ ಎಂದು ಗೌತಮ್ ಅಗರ್​ವಾಲ್ ತಿಳಿಸಿದರು.

22 ರವರೆಗೆ ವೀಕ್ಷಿಸಬಹುದು

ಮೇ 22ರವರೆಗೆ ಬೆಳಗ್ಗೆ 11ರಿಂದ ರಾತ್ರಿ 9 ಗಂಟೆಯವರೆಗೂ ಪ್ರದರ್ಶನ ವೀಕ್ಷಣೆಗೆ ಅವಕಾಶವಿದ್ದು, 49 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.

 

 

Leave a Reply

Your email address will not be published. Required fields are marked *

nine − 5 =

Back To Top