Monday, 19th March 2018  

Vijayavani

ಬಿಜೆಪಿ, RSSನವರು ಕೌರವರು - ರೈತರು ಸಾಯ್ತಿದ್ರೆ ಮೋದಿ ಯೋಗ ಮಾಡ್ತಾರೆ - ಅಧಿವೇಶನದ ಕಡೇ ದಿನ ರಾಹುಲ್ ವಾಗ್ದಾಳಿ        ಬ್ಯಾಲೆಟ್‌ ಪದ್ದತಿಗೆ ರಾಜಕೀಯ ಒಮ್ಮತ - ಮತಪತ್ರ ಬಳಕೆ ಚರ್ಚಿಸಲು ಓಕೆ ಎಂದ ಬಿಜೆಪಿ - ಮತ್ತೆ ಬರುತ್ತಾ ಬ್ಯಾಲೆಟ್ ಪೇಪರ್‌ ಬಗೆದಷ್ಟು ಬಯಲಾಗ್ತಿದೆ ವಿಕ್ರಂ ಚಿಟ್‌ಫಂಡ್ ವಂಚನೆ - ಇನ್ವೆಸ್ಟ್ ಮಾಡಿದ್ದ ದ್ರಾವಿಡ್ ಪತ್ನಿಗೂ ಮೋಸ - ಸದಾಶಿವನಗರ ಠಾಣೆಯಲ್ಲಿ ಕೇಸ್        ಲಿಂಗಾಯತ ಧರ್ಮ ಸಂಕಟದಲ್ಲಿ ಸಿಎಂ - ಕೇಂದ್ರಕ್ಕೆ ವರದಿ ಶಿಫಾರಸು ಕುರಿತು ನಾಳೆ ಡಿಸ್ಕಷನ್ - ಕುತೂಹಲ ಮೂಡಿಸಿದ ಸಿದ್ದರಾಮಯ್ಯ ನಡೆ        ಎನ್‌ಜಿಒ ಕ್ರೆಡಿಟ್ ಕಾರ್ಡ್‌ ಬಳಸಿ ಶಾಪಿಂಗ್ - ಮಾರಿಷಸ್‌ ಅಧ್ಯಕ್ಷೆ ಅಮೀನಾ ರಿಸೈನ್ - ಬಿಂದಾಸ್‌ ಲೈಫ್‌ಗೆ ಹೋಯ್ತು ಪ್ರೆಸಿಡೆಂಟ್ ಸೀಟ್        ನಾಡಿನಾದ್ಯಂತ ವಿಳಂಬಿ ನಾಮ ಸಂವತ್ಸರ - ಬೇವು ಬೆಲ್ಲ ಸವಿದು ನಮಿಸಿದ ಭಕ್ತಸಾಗರ - ದಾವಣಗೆರೆಯ ಕುಂದುವಾಡದಲ್ಲಿಲ್ಲ ಹಬ್ಬದ ಸಡಗರ       
Breaking News

ರಾಗಿ ಕಣದಲ್ಲಿದ್ದ ಯುವಕ ಪುಂಡಾನೆ ದಾಳಿಗೆ ಬಲಿ

Saturday, 24.12.2016, 4:00 AM       No Comments

ದಾಬಸ್​ಪೇಟೆ(ಬೆಂಗಳೂರು): ಪುಂಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆಯೇ ಯುವಕನೊಬ್ಬ ಆನೆ ದಾಳಿಗೆ ಸಿಲುಕಿ ಮೃತಪಟ್ಟ ವಿದ್ಯಮಾನ ಶಿವಗಂಗೆ ಸಮೀಪದ ಗಂಗೇನಪುರದಲ್ಲಿ ಗುರುವಾರ ರಾತ್ರಿ ನಡೆದಿದೆ. ಗಂಗೇನಪುರದ ಗುರುರಾಜ್(22)ಮೃತರು. ರಾಗಿ ಕಣಕ್ಕೆಂದು ತೆರಳಿದ್ದ ಗುರುರಾಜ್ ಮೃತಪಟ್ಟಿರುವುದು ಶುಕ್ರವಾರ ಬೆಳಗ್ಗೆ ತಿಳಿದು ಬಂದಿದೆ. ಆನೆ, ಚಿರತೆ ಹಾಗೂ ಕರಡಿ ದಾಳಿಯಿಂದ ಮುಕ್ತಿಗೆ ಶಿವಗಂಗೆ ಗ್ರಾಮಸ್ಥರು ಒತ್ತಾಯಿಸಿದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಕುಮಾರ್ ಇಲಾಖೆ ವತಿಯಿಂದ ಮೃತನ ಕುಟುಂಬಕ್ಕೆ 2 ಲಕ್ಷ ರೂ. ಚೆಕ್ ನೀಡಿದರು. ಶಿವಗಂಗೆ ಬೆಟ್ಟದ ತಪ್ಪಲಲ್ಲಿ ಆರು ಪುಂಡಾನೆಗಳ ಹಿಂಡು ರೈತರ ಬೆಳೆ ಹಾನಿ ಮಾಡುತ್ತಿದ್ದರಿಂದ ಗ್ರಾಮಸ್ಥರ ಒತ್ತಡಕ್ಕೆ ಮಣಿದು ಅರಣ್ಯ ಸಿಬ್ಬಂದಿ, 7 ಆನೆಗಳ ಹಿಂಡಿನ ಗಂಡು ಆನೆಗಳನ್ನು ಬನ್ನೇರುಘಟ್ಟ ಉದ್ಯಾನಕ್ಕೆ ರವಾನಿಸಲು ಕಾರ್ಯಾಚರಣೆ ಆರಂಭಿಸಿದ್ದರು. ಅದರಲ್ಲಿ ಒಂದು ಗಂಡು ಆನೆ ಬೇರ್ಪಟ್ಟಿತ್ತು. ಆರು ಆನೆಗಳ ಪೈಕಿ ಒಂದನ್ನು ಎರಡು ದಿನಗಳ ಹಿಂದೆ ಸೆರೆ ಹಿಡಿಯಲಾಗಿತ್ತು. ಆದರೆ ಕಾರ್ಯಾಚರಣೆ ನಡುವೆಯೇ ಆನೆ ಒಬ್ಬನ ಕೊಂದಿದೆ.

 

Leave a Reply

Your email address will not be published. Required fields are marked *

Back To Top