Monday, 11th December 2017  

Vijayavani

1. ಸಿಗರೇಟ್​ ಕೊಟ್ರೆ ಮಾತ್ರ ಕಾರ್​ ಹತ್ತಿನಿ – ಇಲ್ಲಾಅಂದ್ರೆ ಡೋರ್ ಹಾಕೋದಕ್ಕೂ ಬಿಡಲ್ಲ – ಪೊಲೀಸರ ಎದ್ರು ಬೆಳಗೆರೆ ಹೈ ಡ್ರಾಮ್​ 2. ನಿನ್ನೆ ಮೌಖಿಕ, ಇಂದು ಲಿಖಿತ ಹೇಳಿಕೆ – ಸಿಸಿಬಿಯಿಂದ ರವಿ 2ನೇ ಪತ್ನಿ ಯಶೋಮತಿ ವಿಚಾರಣೆ – ಅತ್ತ ಸುನೀಲ್​ರಿಂದ ರಕ್ಷಣೆಗೆ ಮನವಿ 3. ಕನ್ನಡ ಜನರ ಓಟು ಪಡೆದು ಶಾಸಕರ ಮರಾಠಿ ಪ್ರೇಮ – ಸಂಜಯ್ ಪಾಟೀಲ್​ರಿಂದ ಕನ್ನಡ ವಿರೋಧಿ ಹೇಳಿಕೆ – ಶಾಸಕರ ನಡೆಗೆ ಜನರು ಕಿಡಿ 4. ಲಿಂಗಾಯತ ಸಮಾವೇಶದಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನ – ತಗ್ಲಾಕೊಂಡವನಿಗೆ ಬಿತ್ತು ಹಿಗ್ಗಾಮುಗ್ಗಾ ಗೂಸಾ – ಒದ್ದು ಪೊಲೀಸರಿಗೆ ಒಪ್ಪಿಸಿದ ಜನ 5. ಗೋಲ್ಡ್​ ಆಗ್ತಿದಾರೆ ಅಕ್ಷಯ್ ಕುಮಾರ್ – ಧೋತಿಯಲ್ಲಿ ಕಿಲಾಡಿ ಚೇರ್​ ಸ್ಟಂಟ್ – ಸೋಶೀಯಲ್ ಮೀಡಿಯಾದಲ್ಲಿ ದೃಶ್ಯ ವೈರಲ್
Breaking News :

ರಾಕೆಟ್ ಹಿಂದಿನ ಕಣ್ಣೀರ ಕಥೆ!

Thursday, 12.10.2017, 3:01 AM       No Comments

ಬೆಂಗಳೂರು: ಚಿತ್ರರಂಗದಲ್ಲಿನ ಸೋಲು ಒಬ್ಬ ನಟ, ನಿರ್ದೇಶಕ ಮತ್ತು ನಿರ್ವಪಕನ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಯಾಕೆಂದರೆ ಹುಡುಕುತ್ತ ಹೋದಂತೆ ಹಲವಾರು ನಿದರ್ಶನಗಳು ಕಣ್ಣಮುಂದೆ ಬಂದು ನಿಲ್ಲುತ್ತವೆ. ಈಗ್ಯಾಕೆ ಈ ಮಾತು ಅಂತೀರಾ? ಅದಕ್ಕೆ ಉತ್ತರ ನಟ ‘ನೀನಾಸಂ’ ಸತೀಶ್ ನೀಡಿದ್ದಾರೆ!

ಸತೀಶ್ ಪಡೆದ ಹಲವಾರು ಚಿತ್ರಗಳ ಗೆಲುವಿನ ಖುಷಿಯನ್ನು ಒಂದೇ ಒಂದು ಚಿತ್ರ ಕಸಿದುಕೊಂಡಿತ್ತು. ಖಿನ್ನಗೊಳಿಸಿ ಜರ್ಜರಿತರನ್ನಾಗಿ ಮಾಡಿ ಮೂಲೆಗೆಸೆದಿತ್ತು. ಆ ಸೋಲು ಅದೆಷ್ಟರ ಮಟ್ಟಿಗೆ ನೋವುಂಟು ಮಾಡಿತ್ತು ಎಂದರೆ, ಒಂದು ತಿಂಗಳ ಕಾಲ ಸತೀಶ್ ಮನೆಗೇ ಹೋಗಿರಲಿಲ್ಲವಂತೆ. ಹೌದು, 2015ರಲ್ಲಿ ತಾವೇ ಬಂಡವಾಳ ಹೂಡಿ ನಾಯಕರಾಗಿ ನಟಿಸಿದ್ದ ‘ರಾಕೆಟ್‘ ಸಿನಿಮಾದ ಇನ್​ಸೈಡ್ ಸ್ಟೋರಿ ಇದು! ‘ಈ ವರೆಗೂ ನನ್ನ ಜೀವನದಲ್ಲಿ ಇಂಥದ್ದೊಂದು ಘಟನೆ ನಡೆದಿತ್ತು’ ಎಂಬುದನ್ನು ಎಲ್ಲಿಯೂ ಬಾಯಿಬಿಟ್ಟಿರಲಿಲ್ಲ ಸತೀಶ್. ‘ಆ ಸಿನಿಮಾ ಸೋತಾಗ ನಾನು ನಿತ್ಯ ಕಣ್ಣೀರಲ್ಲೇ ಕೈತೊಳೆದಿದ್ದೆ. ಆದರೆ ಯಾರಿಗೂ ನನ್ನ ಅಳುವನ್ನು ತೋರಿಸಿರಲಿಲ್ಲ. ಅದು ನನ್ನ ಆಫೀಸಿಗಷ್ಟೇ ಸೀಮಿತವಾಗಿತ್ತು. ಅತ್ತು ಅತ್ತು ಕಣ್ಣುಗಳು ಸಣ್ಣಗಾಗಿದ್ದವು. ಒಂದು ತಿಂಗಳು ಮನೆಯ ಮುಖವನ್ನು ನಾನು ನೋಡಿರಲಿಲ್ಲ. ಸತತ ಒಂದೂವರೆ ವರ್ಷ ನನ್ನ ಕಿವಿಯಲ್ಲಿ ‘ರಾಕೆಟ್..ರಾಕೆಟ್..’ ಎಂಬುದೇ ಗುನುಗುಡಿಸಿತ್ತು. ನಾನೆಷ್ಟು ಸಿನಿಮಾ ಪ್ರೇಮಿ ಎಂಬುದನ್ನು ನಾನು ಅಂದೇ ಕಂಡುಕೊಂಡೆ. ಬೇರೆ ಭಾಷೆಯ ಸಿನಿಮಾಗಳನ್ನು ನೋಡಿದೆ, ನಾನು ಯಾವ ಹಂತದಲ್ಲಿದ್ದೇನೆ ಎಂಬುದನ್ನು ಅರಿತುಕೊಂಡೆ. ಆಗ ನನಗೆ ಸಿಕ್ಕಿದ್ದು ‘ಬ್ಯೂಟಿಫುಲ್ ಮನಸುಗಳು’. ಇದೀಗ ಐದಾರು ಸಿನಿಮಾಗಳು ಕೈಯಲ್ಲಿವೆ. ತಮಿಳಿಗೂ ಹೋಗುತ್ತಿದ್ದೇನೆ’ ಎನ್ನುತ್ತಾರೆ ಸತೀಶ್.

‘ಇಷ್ಟೆಲ್ಲ ಸಿನಿಮಾಗಳಿದ್ದರೂ ‘ರಾಕೆಟ್’ ಚಿತ್ರದ ಸೋಲು ನನ್ನ ಕಣ್ಣಲ್ಲಿತ್ತು. ಅದು ನನ್ನೊಳಗೆ ಸಾಯುತ್ತಿತ್ತು, ಸಾಯಬೇಕಿತ್ತು. ಅದಕ್ಕಾಗಿಯೇ ‘ಟೈಗರ್​ಗಲ್ಲಿ’ ಸಿನಿಮಾಕ್ಕೆ ಏನು ಬೇಕಾದರೂ ಮಾಡಲು ನಾನು ಸಿದ್ಧನಾಗಿದ್ದೆ. ಜ್ವರ ಬಂದರೂ ಜಗ್ಗದೆ, ಎಳನೀರು-ಗ್ಲೂಕೋಸ್ ಕುಡಿದು ಆಕ್ಷನ್ ಸೀನ್​ಗಳಲ್ಲಿ ನಟಿಸಿದ್ದೇನೆ’ ಎನ್ನುತ್ತ ಸಿನಿಮಾ ವಿಷಯದಲ್ಲಿ ತಾನೆಷ್ಟು ವ್ಯಾಮೋಹಿ ಎಂಬುದನ್ನು ಸತೀಶ್ ಬಿಚ್ಚಿಡುತ್ತಾರೆ.

Leave a Reply

Your email address will not be published. Required fields are marked *

Back To Top