Monday, 19th February 2018  

Vijayavani

ವಿದ್ಯಾರ್ಥಿ ಮೇಲೆ ದರ್ಪ ಮೆರೆದಿದ್ದ ಗೂಂಡಾ ಅರೆಸ್ಟ್ - ಕಬ್ಬನ್‌ ಪಾರ್ಕ್‌ ಪೊಲೀಸರಿಂದ ಬಂಧನ - ಠಾಣೆ ಎದುರು ಕಾರ್ಯಕರ್ತರ ಹೈಡ್ರಾಮಾ        ಶ್ರವಣಬೆಳಗೊಳದತ್ತ ಪ್ರಧಾನಿ ಮೋದಿ ಪಯಣ - ಬಾಹುಬಲಿಗೆ ಹೆಲಿಕಾಪ್ಟರ್‌ ಮೂಲಕ ಪುಷ್ಪನಮನ - ನಾಲ್ಕು ಗಂಟೆ ವೇಳೆಗೆ ಮೈಸೂರಲ್ಲಿ ಬಿಜೆಪಿ ಪರಿವರ್ತನಾ        ಭಾರತವೇ ಎಲ್ಲ ಆವಿಷ್ಕಾರಕ್ಕೆ ಹಾಟ್‌ ಸ್ಪಾಟ್ - ಜನರಿಂದಲೇ ಡಿಜಿಟಲ್ ಇಂಡಿಯಾ ಸಕ್ಸಸ್ - ಹೈದ್ರಾಬಾದ್ ಸಮಾವೇಶಕ್ಕೆ ಮೈಸೂರಿಂದ ಮೋದಿ ಸ್ಪೀಚ್        ಮುಂದುವರಿದ ಪಿಎನ್‌ಬಿ ಬ್ಯಾಂಕ್‌ ಹಗರಣ ಬೇಟೆ - ಬೆಂಗಳೂರಿನ ಹಲವೆಡೆ ಇಡಿ ದಾಳಿ - ನೀರವ್ ಡೈಮಂಡ್ಸ್ ಮಳಿಗೆಗಳಲ್ಲಿ ಶೋಧ        ಕೆ.ಆರ್‌ ಆಸ್ಪತ್ರೆಗೆ ಕೆ.ಎಸ್‌ ಪುಟ್ಟಣ್ಣಯ್ಯ ಪಾರ್ಥಿವ ಶರೀರ ರವಾನೆ - ವಿದೇಶದಿಂದ ಪುತ್ರಿ ಬಂದ ಬಳಿಕ ಬುಧವಾರ ಅಂತ್ಯಕ್ರಿಯೆ - ಗಣ್ಯರಿಂದ ಸಂತಾಪ       
Breaking News

ರಾಕಿಂಗ್ ಪೊಲೀಸ್!

Thursday, 12.10.2017, 3:03 AM       No Comments

ಬೆಂಗಳೂರು: ನಾಲ್ಕು ಭಾಷೆಗಳಲ್ಲಿ ನಿರ್ವಣವಾಗುತ್ತಿರುವ ‘ಕೆಜಿಎಫ್’ ಚಿತ್ರದ ಮೂಲಕ ಅಭಿಮಾನಿಗಳನ್ನು ಕುತೂಹಲಕ್ಕೀಡು ಮಾಡಿರುವ ‘ರಾಕಿಂಗ್ ಸ್ಟಾರ್’ ಯಶ್, ಈಗ ಆ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಅದೇನೆಂದರೆ, ಅವರು ಇದೇ ಮೊದಲ ಬಾರಿಗೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಯಶ್ ಸೂಪರ್ ಕಾಪ್ ಆಗಿ ಕಾಣಿಸಿಕೊಳ್ಳಲಿರುವುದು ಎ. ಹರ್ಷ ನಿರ್ದೇಶನದ ‘ರಾಣಾ’ ಚಿತ್ರದಲ್ಲಿ. ಆದರೆ, ತಮ್ಮ ನೆಚ್ಚಿನ ನಟನನ್ನು ಪೊಲೀಸ್ ಪಾತ್ರದಲ್ಲಿ ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಒಂದಷ್ಟು ಕಾಯಲೇಬೇಕು. ಏಕೆಂದರೆ, ‘ಕೆಜಿಎಫ್’ ಬಿಡುಗಡೆ ನಂತರವೇ ‘ರಾಣಾ’ ಸೆಟ್ಟೇರಲಿದೆ.

ಚಿತ್ರದ ಕಥೆ ಏನು, ಇವರ ಪಾತ್ರ ಯಾವ ರೀತಿ ಇರಲಿದೆ ಹಾಗೂ ನಾಯಕಿ ಯಾರು ಎಂಬಿತ್ಯಾದಿ ಅಂಶಗಳ ಬಗ್ಗೆ ಸದ್ಯ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಪ್ರಸ್ತುತ ಯಶ್ ಚತುರ್ಭಾಷಾ ಚಿತ್ರ ‘ಕೆಜಿಎಫ್’ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಬಹುಭಾಷೆಯಲ್ಲಿ ಈ ಚಿತ್ರ ಅದ್ದೂರಿಯಾಗಿ ನಿರ್ವಣವಾಗುತ್ತಿರುವುದರಿಂದ ಅಂದುಕೊಂಡಿದ್ದಕ್ಕಿಂತ ಅಧಿಕ ಸಮಯ ಪಡೆಯುತ್ತಿದೆಯಂತೆ. ಅಲ್ಲದೆ, ‘ಕೆಜಿಎಫ್’ಗೆ ಇಂತಿಷ್ಟೇ ಸಮಯ ಎಂದು ಯಶ್ ಮಿತಿ ಹೇರಿಕೊಂಡಿರದ ಕಾರಣ, ಒಂದಷ್ಟು ಹೆಚ್ಚೇ ಕಾಲಾವಕಾಶ ತೆಗೆದುಕೊಳ್ಳುವ ಸಾಧ್ಯತೆ ಇದೆ. ಅದಾದ ಬಳಿಕವಷ್ಟೇ ಯಶ್, ‘ರಾಣಾ’ ಆಗಲಿದ್ದಾರೆ.

Leave a Reply

Your email address will not be published. Required fields are marked *

Back To Top