Wednesday, 21st March 2018  

Vijayavani

ಸದ್ಯಕ್ಕಿಲ್ಲ ರೋಹಿಣಿ ಸಿಂಧೂರಿ ವರ್ಗಾವಣೆ - ಸರ್ಕಾರದ ಆದೇಶಕ್ಕೆ ತಡೆ - ಹೊಸ ಆದೇಶಕ್ಕೆ ಸಿಎಟಿ ಸೂಚನೆ        ಇರಾಕ್‌ನಲ್ಲಿ ಭಾರತೀಯರ ಹತ್ಯೆಗೆ ವಿಪಕ್ಷ ಖಂಡನೆ - ಕಲಾಪದ ಆರಂಭದಲ್ಲೇ ಗದ್ದಲ ಕೋಲಾಹಲ - ರಾಜ್ಯಸಭಾ ಕಲಾಪ ನಾಳೆಗೆ ಮುಂದೂಡಿಕೆ        ಕೈ ಕೊಟ್ಟು ತೆನೆ ಇಳಿಸಿ ಕಮಲ ಮುಡಿದ ನಡಹಳ್ಳಿ - ಬಿಜೆಪಿ ಸೇರಿದ ಎ.ಎಸ್‌ ಪಾಟೀಲ್ - ಬಿಎಸ್‌ವೈ ಸಮ್ಮುಖದಲ್ಲಿ ಸೇರ್ಪಡೆ        ಬೆಂಗಳೂರಲ್ಲಿ ಮಿತಿ ಮೀರಿದ ಸರಗಳ್ಳರ ಹಾವಳಿ - ವಿದ್ಯಾರಣ್ಯಪುರದಲ್ಲಿ ಚೈನ್ ಸ್ನ್ಯಾಚಿಂಗ್ - ವೃದ್ಧೆಯ 16 ಗ್ರಾಂ ಸರ ಕಸಿದ ಖದೀಮರು        ಕಾಫಿನಾಡಲ್ಲಿ ರಾಹುಲ್‌ ಯಾತ್ರೆ - ಶೃಂಗೇರಿಗೆ ಎಐಸಿಸಿ ಅಧ್ಯಕ್ಷರ ಭೇಟಿ - ಸಂಜೆ ಹಾಸನದಲ್ಲಿ ಕಾಂಗ್ರೆಸ್ ರಣಕಹಳೆ       
Breaking News

ರಹಾನೆ ಸೇರ್ಪಡೆಗಾಗಿ ಅಶ್ವಿನ್ ಸ್ಥಾನಕ್ಕೆ ಕಂಟಕ?

Friday, 12.01.2018, 3:01 AM       No Comments

ವಿದೇಶಿ ನೆಲದಲ್ಲಿ 55 ರನ್ ಸರಾಸರಿ ಹೊಂದಿರುವ ಕಾರಣದಿಂದಾಗಿ ರಹಾನೆಯನ್ನು ಮತ್ತೊಮ್ಮೆ ಕಡೆಗಣಿಸುವುದು ಕಠಿಣವೆನಿಸಿದೆ. ಹೀಗಾಗಿ ಆರ್. ಅಶ್ವಿನ್ ಅವರನ್ನೇ ಕೈಬಿಟ್ಟು, ತಜ್ಞ ಸ್ಪಿನ್ನರ್ ಇಲ್ಲದೆ ನಾಲ್ವರು ವೇಗಿಗಳು ಮತ್ತು ಓರ್ವ ಹೆಚ್ಚುವರಿ ಬ್ಯಾಟ್ಸ್​ಮನ್​ನೊಂದಿಗೆ ಆಡುವ ಚಿಂತನೆಯೂ ನಡೆದಿದೆ. ಕೇಪ್​ಟೌನ್ ಟೆಸ್ಟ್​ನ ಮೊದಲ ಇನಿಂಗ್ಸ್ ನಲ್ಲಿ 7.1 ಓವರ್ ಎಸೆದು 2 ವಿಕೆಟ್ ಕಬಳಿಸಿದ್ದ ಅಶ್ವಿನ್, 2ನೇ ಇನಿಂಗ್ಸ್​ನಲ್ಲಿ ಕೇವಲ 1 ಓವರ್ ಎಸೆದಿದ್ದರು. ಹೀಗಾಗಿ ಸೆಂಚುರಿಯನ್​ನ ಸ್ಪೀಡ್ ಪಿಚ್​ನಲ್ಲಿ ಸ್ಪಿನ್ನರ್ ಇಲ್ಲದೆಯೇ ಕಣಕ್ಕಿಳಿದು, ರಹಾನೆಗೆ ಅವಕಾಶ

ಕಲ್ಪಿಸುವ ದಿಟ್ಟ ಹೆಜ್ಜೆ ಇಟ್ಟರೂ ಅಚ್ಚರಿ ಇಲ್ಲ. ಇನ್ನೊಂದೆಡೆ ಆರಂಭಿಕ ಜೋಡಿಯ ಎಡ-ಬಲಗೈ ಕಾಂಬಿನೇಷನ್ ಉಳಿಸಿಕೊಳ್ಳಲು ವಿಕೆಟ್ ಕೀಪರ್ ಹಾಗೂ ಎಡಗೈ ಬ್ಯಾಟ್ಸ್​ಮನ್ ಪಾರ್ಥಿವ್ ಪಟೇಲ್​ರನ್ನು, ವಿಜಯ್ ಜತೆ ಆರಂಭಿಕರನ್ನಾಗಿ ಇಳಿಸಿ, ಮಧ್ಯಮ ಕ್ರಮಾಂಕದಲ್ಲಿ ವೃದ್ಧಿಮಾನ್ ಸಾಹ ಬದಲು ರಹಾನೆಯನ್ನು ಆಡಿಸುವ ಚಿಂತನೆ ಇದೆ. ಪಾರ್ಥಿವ್ 2016ರ ಇಂಗ್ಲೆಂಡ್ ಪ್ರವಾಸದಲ್ಲಿ ಆರಂಭಿಕರಾಗಿ ಆಡಿ ಯಶ ಕಂಡ ದಾಖಲೆ ಹೊಂದಿದ್ದಾರೆ. ಆದರೆ ಕಳೆದ ಟೆಸ್ಟ್​ನಲ್ಲಿ 10 ಕ್ಯಾಚ್ ಹಿಡಿದು ಮಿಂಚಿದ ಕೀಪರ್ ಸಾಹರನ್ನು ಕೈಬಿಡುವುದು ಸರಿ ಎನಿಸುವುದಿಲ್ಲ.

Leave a Reply

Your email address will not be published. Required fields are marked *

Back To Top