Tuesday, 17th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ರಹಸ್ಯ ಕಾಪಾಡಲು ಬ್ಲೂ ಫಿಲಂ ನಟಿಗೆ – 83 ಲಕ್ಷ ರೂ ಕೊಟ್ಟಿದ್ದ ಟ್ರಂಪ್

Sunday, 14.01.2018, 3:02 AM       No Comments

ವಾಷಿಂಗ್ಟನ್: ಗೌಪ್ಯವಾಗಿ ನಡೆಸಿದ ಕಾಮದಾಟವನ್ನು ಬಹಿರಂಗ ಪಡಿಸದಂತೆ ನೀಲಿ ಚಿತ್ರ ನಟಿಯೊಬ್ಬಳಿಗೆ ಅಮೆರಿಕ ಅಧ್ಯಕ್ಷ ಟ್ರಂಪ್ -ರೂ; 83 ಲಕ್ಷ (1.30 ಲಕ್ಷ ಡಾಲರ್) ನೀಡಿದ್ದರು ಎಂಬ ವರದಿಯೊಂದು ಸ್ಫೋಟ ಗೊಂಡಿದೆ. 2006ರಲ್ಲಿ ನಡೆದಿದ್ದ ರಂಗಿನಾಟ ತಮ್ಮ ಅಧ್ಯಕ್ಷೀಯ ಚುನಾವಣೆ ಮೇಲೆ ನಕಾರಾತ್ಮಕ ಪರಿಣಾಮ ಬೀರಬಾರದು ಎಂದು ಟ್ರಂಪ್ ತಮ್ಮ ಖಾಸಗಿ ವಕೀಲನ ಮೂಲಕ ನಟಿಗೆ ಹಣ ತಲುಪಿಸಿದ್ದರು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಅಧ್ಯಕ್ಷೀಯ ಚುನಾವಣೆಗೆ ಒಂದು ತಿಂಗಳ ಮುನ್ನ ಎಬಿಸಿ ನ್ಯೂಸ್ ಜತೆಗೆ ನಟಿ ಸ್ಟಾರ್ವಿು ತಮ್ಮ ಮತ್ತು ಟ್ರಂಪ್ ನಡುವಿನ ಸಂಬಂಧದ ವಿವರವನ್ನು ಹಂಚಿಕೊಳ್ಳಲು ಮುಂದಾಗಿದ್ದರು.

ಇದನ್ನು ತಿಳಿದು ಟ್ರಂಪ್ ತಮ್ಮ ವಕೀಲ ಮೈಕೆಲ್ ಕೊಹೆನ್​ರ ಮೂಲಕ ಸ್ಟಾರ್ವಿು ವಕೀಲ ಕೀತ್ ಡೇವಿಡ್​ಸನ್​ಗೆ ಹಣ ಕೊಡಿಸಿದ್ದರು. ಯಾವುದೇ ವಿಚಾರ ಬಾಯಿಬಿಡದಂತೆ ಎಚ್ಚರಿಸಿದ್ದರು ಎಂದು ವರದಿ ಹೇಳಿದೆ.

ವರ್ಷಗಳ ಹಿಂದಿನ ವದಂತಿ: ಕಾಮ ಮುಚ್ಚಲು ಹಣ ಕೊಟ್ಟಿರುವ ವರದಿ ಒಂದು ವರ್ಷದ ಹಿಂದಿನ ಹಳೆಯ ವದಂತಿ ಎಂದು ಶ್ವೇತಭವನ ವರದಿಯನ್ನು ತಿರಸ್ಕರಿಸಿದೆ. ಸ್ಟಾರ್ವಿು ಪರ ವಕೀಲ ಕೊಹೆನ್ ಕೂಡ ಹಳೆಯ ವರದಿಗೆ ಮತ್ತೆ ಜೀವ ನೀಡಲಾಗುತ್ತಿದೆ ಎಂದು ಜರ್ನಲ್ ವಿರುದ್ಧ ಕಿಡಿ ಕಾರಿದ್ದಾರೆ.

Leave a Reply

Your email address will not be published. Required fields are marked *

Back To Top