Tuesday, 21st November 2017  

Vijayavani

1. ಇಂಧನ ಇಲಾಖೆಯಲ್ಲಿ ಅವ್ಯವಹಾರ ಆರೋಪ – ವಿಧಾನಸಭೆಯಲ್ಲಿ ಸದನ ಸಮಿತಿ ವರದಿ ಮಂಡನೆ – ಸಂಸದೆ ಶೋಭಾ ವಿರುದ್ಧ ಡಿಕೆಶಿ ಅಸ್ತ್ರ 2. ಮದ್ಯಪಾನ ನಿಷೇಧಕ್ಕೆ ಸದನದಲ್ಲಿ ಗುದ್ದಾಟ – ಮದ್ಯ ವಿರೋಧಿ ಹೋರಾಟಕ್ಕೆ ಶೆಟ್ಟರ್​ ಸಾಥ್​​​​​ – ಸಿಎಂ ವಿರುದ್ಧ ಸಂಜಯ್​​ ಪಾಟೀಲ್​​ ಕಟು ಟೀಕೆ 3. 63ರಲ್ಲಿ ಬಿಡುಗಡೆಯಾಗಿತ್ತು ಪದ್ಮಾವತಿ ಚಿತ್ರ – ಆಗಿಲ್ಲದ ವಿವಾದ ಈಗ ಸೃಷ್ಟಿ – ವಿರೋಧಿ ಪಡೆಗೆ ಪ್ರಶ್ನೆ ಮುಂದಿಟ್ಟ ಚಿತ್ರತಂಡ 4. ತ್ರಿವಳಿ ತಲಾಖ್​ಗೆ ಸದ್ಯದಲ್ಲೇ ಬ್ರೇಕ್​ – ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ – ಕೇಂದ್ರ ಸರ್ಕಾರದ ಮಹತ್ವದ ನಡೆ 5. ಐಶ್ವರ್ಯ ಫೋಟೋ ತೆಗೆಯಲು ನೂಕುನುಗ್ಗಲು – ಮಾಧ್ಯಮದವರ ನಡೆಗೆ ಬಚ್ಚನ್​​​​​​​ ಸೊಸೆ ಕಣ್ಣೀರು – ಕೈಮುಗಿದು ಕಣ್ಣೀರಿಟ್ಟ ಐಶ್ವರ್ಯ
Breaking News :

ರಸ್ತೆ ಬದಿ ಇಡ್ಲಿ-ವಡೆ ಸವಿದ ದೀಪಿಕಾ! 

Thursday, 14.09.2017, 3:01 AM       No Comments

ಬೆಂಗಳೂರು: ದೀಪಿಕಾ ಪಡುಕೋಣೆ ಬೆಂಗಳೂರಿನ ಹೋಟೆಲ್​ವೊಂದರಲ್ಲಿ ಇಡ್ಲಿ-ವಡೆ ತಿಂದು ಹೋಗಿದ್ದು, ಆ ಫೋಟೋ ವೈರಲ್ ಆಗಿದೆ. ಅಂದಹಾಗೆ, ದೀಪಿಕೆ ಇಡ್ಲಿ-ವಡೆ ಸವಿದ ಜಾಗ ಮಲ್ಲೇಶ್ವರದ ಮಾಗೋಸಾ ರಸ್ತೆಯಲ್ಲಿರುವ ‘ವೀಣಾ ಸ್ಟೋರ್ಸ್’.

ಹಲವು ವರ್ಷಗಳ ಹಿಂದೆ ಅಂಗಡಿಯಾಗಿದ್ದ ‘ವೀಣಾ ಸ್ಟೋರ್ಸ್’ ಕ್ರಮೇಣ ಅದೇ ಸ್ಥಳದಲ್ಲಿ ಹೋಟೆಲ್ ಆಗಿ ಪರಿವರ್ತನೆ ಆಗಿದೆ. ಅಲ್ಲಿ ಇಡ್ಲಿ-ವಡೆ, ಚೌಚೌ ಬಾತ್ ಸೇರಿ ಕೆಲವೇ ತಿಂಡಿತಿನಿಸುಗಳು ಇರುತ್ತವೆ. ಸೆಲ್ಪ್ ಸರ್ವಿಸ್, ರಸ್ತೆ ಬದಿಯಲ್ಲೇ ನಿಂತು ತಿನ್ನಬೇಕು.. ಹೀಗಿದ್ದರೂ ಅಲ್ಲಿ ಪ್ರತಿನಿತ್ಯ ಬಹಳಷ್ಟು ಜನ ಬಂದು ತಿಂಡಿ ಸೇವಿಸುತ್ತಾರೆ. ಅಲ್ಲಿಗೆ ಸೆ.12ರಂದು ದೀಪಿಕಾ ಬಂದಿದ್ದರು.‘ಮಂಗಳವಾರ ಬೆಳಗ್ಗೆ 6.30ಕ್ಕೆ ದೀಪಿಕಾ ಬಂದು ಇಡ್ಲಿ-ವಡೆ ಸೇವಿಸಿದ್ದಾರೆ. ಇದೇನೂ ಮೊದಲಲ್ಲ. ಅವರ ಮನೆ ಕೂಡ ಇದೇ ಪ್ರದೇಶದಲ್ಲಿ ಇರುವುದು. ತಂದೆ ಪ್ರಕಾಶ್ ಪಡುಕೋಣೆ ಜತೆ ಬಹಳ ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದಾರೆ. ಸದ್ಯ ಮುಂಬೈನಲ್ಲಿರುವ ಅವರು ಬೆಂಗಳೂರಿಗೆ ಬಂದಾಗ ಒಮ್ಮೊಮ್ಮೆ ಬೆಳಗಿನ ಜಾವ ಇಲ್ಲಿಗೆ ಬಂದು ತಿಂಡಿ ತಿನ್ನುತ್ತಾರೆ. ಏಳೆಂಟು ತಿಂಗಳ ಹಿಂದೆ ಕೂಡ ಬಂದು ಹೋಗಿದ್ದರು’ ಎನ್ನುತ್ತಾರೆ ಹೋಟೆಲ್ ಮಾಲೀಕ ಪ್ರದೀಪ್. ‘ನನ್ನ ಪುತ್ರಿಯ ಆಸೆಯಂತೆ ಒಂದು ಸೆಲ್ಪಿ ತೆಗೆಸಿಕೊಂಡಿದ್ದೆ. ಅದನ್ನು ಆಕೆ ವಾಟ್ಸ್ಯಾಪ್ ಡಿಪಿ ಮಾಡಿಕೊಂಡಿದ್ದಳು. ಆ ಚಿತ್ರ ವೈರಲ್ ಆಗಿದೆ’ ಎಂದು ಫೋಟೋ ವೈರಲ್ ಆದ ಹಿನ್ನೆಲೆ ವಿವರಿಸಿದರು ಪ್ರದೀಪ್.

Leave a Reply

Your email address will not be published. Required fields are marked *

Back To Top