Saturday, 26th May 2018  

Vijayavani

ರಾಮನಗರದಲ್ಲಿ ನಾಡಿಗೆ ಬಂತು ಚಿರತೆ - ರೇಷ್ಮೆ ಸಾಕಾಣಿಕಾ ಕೊಠಡಿಯಲ್ಲಿ ಸೆರೆ - ಅರಣ್ಯಇಲಾಖೆ ಅಧಿಕಾರಿಗಳಿಂದ ಆಪರೇಷನ್​​ ಚಿರತೆ        ಬಿಬಿಎಂಪಿ ರಸ್ತೆ ಕಾಮಗಾರಿ ವೇಳೆ ದುರಂತ - ಬಾಲಕನ ಮೇಲೆ ಹರಿದ ರೋಡ್​​ರೋಲರ್​​ - ಸೈಕಲ್​ ತುಳಿಯುತ್ತಿದ್ದ ಬಾಲಕ ದರ್ಮರಣ        ಕೈ​​​ ಹೈ ಕಮಾಂಡ್​ ಭೇಟಿಗೆ ನಿಗದಿಯಾಗದ ಟೈಂ - ರಾಜ್ಯ ಕಾಂಗ್ರೆಸ್​​​​ ನಾಯಕರ ದೆಹಲಿ ಪ್ರವಾಸ ಕ್ಯಾನ್ಸಲ್​​​ - ಇತ್ತ ಪ್ರಧಾನಿ ಭೇಟಿಗೆ ಸಮಯಾವಕಾಶ ಕೇಳಿದ ಸಿಎಂ        11 ದಿನವಾದ್ರೂ ಸ್ವಕ್ಷೇತ್ರದತ್ತ ಬಾರದ ಶಾಸಕರು - ನಾಯಕರ ಮನೆಗಳಿಗೆ ಬಂದ್ರು ಬೆಂಬಲಿಗರು - ಗೋಳು ಕೇಳೋರಿಲ್ಲದೆ ಜನರ ಕಂಗಾಲು        ಮೋದಿ ಸರ್ಕಾರಕ್ಕೆ ತುಂಬಿತು ನಾಲ್ಕು ವರ್ಷ - 15 ದಿನಗಳ ಕಾಲ ಬಿಜೆಪಿ ಸಂಭ್ರಮಾಚರಣೆ - ಅತ್ತ ಕಾಂಗ್ರೆಸ್​​​ನಿಂದ ವಿಶ್ವಾಸ ದಿನಾಚರಣೆ        ಗಡಿ ನುಸುಳಲು ಬಂದವರಿಗೆ ಬ್ರೇಕ್​ - ಜಮ್ಮುವಿನಲ್ಲಿ ಸೇನಾ ದಾಳಿಗೆ ಐವರು ಉಗ್ರರು ಮಟಾಷ್​​ - ಶಸ್ತ್ರಾಸ್ತ್ರಗಳು ವಶ, ಮುಂದುವರಿದ ಶೋಧ       
Breaking News

ರಶ್ಮಿಕಾಗೆ ಡಬಲ್ ಧಮಾಕಾ?

Friday, 09.02.2018, 3:03 AM       No Comments

ಬೆಂಗಳೂರು: ಕನ್ನಡದ ರಶ್ಮಿಕಾ ಮಂದಣ್ಣಗೆ ಟಾಲಿವುಡ್​ನಲ್ಲಿ ಹೆಚ್ಚಿನ ಬೇಡಿಕೆ ಬಂದಂತೆ ಕಾಣುತ್ತಿದೆ. ಸಾಲು ಸಾಲು ಸಿನಿಮಾ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಆ ಸಿನಿಮಾ ಪಟ್ಟಿಯ ಪೈಕಿ ಇದೀಗ ಹೊಸದೊಂದು ಸಿನಿಮಾ ಸೇರಿಕೊಂಡಿದೆ. ಯಾವುದಾ ಸಿನಿಮಾ ಎಂಬುದಕ್ಕಿಂತ ನಾಯಕ ಯಾರು ಎಂಬುದೇ ಇದೀಗ ಹೆಚ್ಚು ಕುತೂಹಲ ಮೂಡಿಸಿದೆ.

ಈಗಾಗಲೇ ‘ಅರ್ಜುನ್ ರೆಡ್ಡಿ’ ಖ್ಯಾತಿಯ ವಿಜಯ್ ದೇವರಕೊಂಡ ಜತೆಗೆ ರಶ್ಮಿಕಾ ಸಿನಿಮಾ ಮಾಡುತ್ತಿರುವುದು ಗೊತ್ತಿರುವ ವಿಚಾರವೇ. ಆ ಚಿತ್ರಕ್ಕೆ ಪರಶುರಾಮ್ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಈಗಾಗಲೇ ಶೂಟಿಂಗ್​ನಲ್ಲೂ ಅವರು ಭಾಗಿಯಾಗಿದ್ದಾರೆ. ಹೀಗಿರುವಾಗ ಮತ್ತದೇ ವಿಜಯ್ ಸಿನಿಮಾದಲ್ಲಿ ನಾಯಕಿಯಾಗುವ ಅವಕಾಶ ರಶ್ಮಿಕಾಗೆ ಒಲಿದಿದೆ! ಹೀಗೊಂದು ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಇನ್ನೂ ಹೆಸರಿಡದ ಪ್ರಾಜೆಕ್ಟ್ ನಲ್ಲಿ ವಿಜಯ್ ನಾಯಕರಾಗಿ ಕಾಣಿಸಿಕೊಂಡರೆ, ರಶ್ಮಿಕಾ ನಾಯಕಿ ಎನ್ನುತ್ತಿವೆ ಅಲ್ಲಿನ ಮೂಲಗಳು. ಪಕ್ಕಾ ಆಕ್ಷನ್ ಕಮ್ ರೊಮ್ಯಾಂಟಿಕ್ ಡ್ರಾಮಾ ರೀತಿಯ ಚಿತ್ರವನ್ನು ಭರತ್ ಕಮ್ಮಾ ನಿರ್ದೇಶಿಸಲಿದ್ದಾರಂತೆ.

ಚಿತ್ರದಲ್ಲಿ ಕಾಲೇಜ್ ವಿದ್ಯಾರ್ಥಿಯಾಗಿ ವಿಜಯ್ ಕಾಣಿಸಿಕೊಳ್ಳಲಿದ್ದಾರೆ. ಕಾಕಿನಾಡ ಭಾಗದಿಂದ ಬಂದಿರುವ ನಾಯಕ, ಇಡೀ ಸಿನಿಮಾದಲ್ಲಿ ಪೂರ್ವ ಗೋಧಾವರಿ ಭಾಗದ ಭಾಷೆಯನ್ನು ಮಾತನಾಡುತ್ತಾನಂತೆ. ಕಾಲೇಜ್​ನಲ್ಲಿ ನಾಯಕ ನಾಯಕಿ ಎದುರಾಗುವ ಮೂಲಕ ಸಿನಿಮಾ ಒಂದೊಂದೇ ಹಂತದಲ್ಲಿ ತೆರೆದುಕೊಳ್ಳುತ್ತ ಹೋಗುತ್ತದೆಯಂತೆ. ಎಲ್ಲ ಅಂದುಕೊಂಡಂತೆ ನಡೆದರೆ ಏಪ್ರಿಲ್ ಅಥವಾ ಮೇನಲ್ಲಿ ಸಿನಿಮಾ ಶೂಟಿಂಗ್ ಶುರುವಾಗಲಿದೆಯಂತೆ. ಜಸ್ಟಿನ್ ಪ್ರಭಾಕರನ್ ಸಂಗೀತ ನೀಡಲಿದ್ದು, ಮೈತ್ರಿ ಮೂವಿ ಮೇಕರ್ಸ್ ಸಿನಿಮಾ ನಿರ್ವಣದ ಜವಾಬ್ದಾರಿ ಹೊತ್ತಿದ್ದಾರೆ. ಅಧಿಕೃತವಾಗಿ ಶೀರ್ಷಿಕೆ ಸಮೇತ ಶೀಘ್ರದಲ್ಲಿ ತಂಡವನ್ನು ಪರಿಚಯಿಸಲಿದ್ದಾರಂತೆ ನಿರ್ದೇಶಕರು.

ಕಳೆದ ವಾರ ಬಿಡುಗಡೆಯಾದ ‘ಚಲೋ’ ಸಿನಿಮಾ ರಶ್ಮಿಕಾ ನಟಿಸಿದ ಮೊದಲ ತೆಲುಗು ಸಿನಿಮಾ. ನಟ ನಾಗಶೌರ್ಯಗೆ ನಾಯಕಿಯಾಗಿ ಅವರು ಟಾಲಿವುಡ್​ಗೆ ಪದಾರ್ಪಣೆ ಮಾಡಿದ್ದರು. ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲೇ ‘ಚಲೋ’ ಚಿತ್ರಕ್ಕೆ ರೆಸ್ಪಾನ್ಸ್ ಸಿಗುತ್ತಿದೆ. ಒಳ್ಳೊಳ್ಳೆಯ ಅವಕಾಶಗಳು ಅವರನ್ನು ಅರಸಿಕೊಂಡು ಬರುತ್ತಿವೆ. ಇತ್ತ ಕನ್ನಡದಲ್ಲೂ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರ ಮುಂದಿನ ಸಿನಿಮಾಕ್ಕೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಪಿ.ಕುಮಾರ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

Leave a Reply

Your email address will not be published. Required fields are marked *

Back To Top