Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :

ರಶ್ಮಿಕಾಗೆ ಕ್ರೀಡಾಪಟು ಆಗುವಾಸೆ!

Thursday, 21.09.2017, 3:05 AM       No Comments

| ಮದನ್​ಕುಮಾರ್ ಸಾಗರ ಬೆಂಗಳೂರು

ನಟಿ ರಶ್ಮಿಕಾ ಮಂದಣ್ಣ ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ಪಕ್ಕದ್ಮನೆ ಹುಡುಗಿಯಂತೆ ಕಾಣಿಸಿಕೊಂಡು ಕನ್ನಡ ಸಿನಿಪ್ರಿಯರಿಗೆ ಪರಿಚಿತರಾದರು. ಅಚ್ಚರಿ ಎಂದರೆ ಅವರು ಪಕ್ಕದ ಟಾಲಿವುಡ್​ಗೆ ಎಂಟ್ರಿ ನೀಡುತ್ತಿರುವುದು ಕೂಡ ಅಂಥದ್ದೇ ಪಾತ್ರಗಳ ಮೂಲಕ. ಈಗಾಗಲೇ ಅವರು ವಿಜಯ್ ದೇವರಕೊಂಡ ಮತ್ತು ನಾಗ ಶೌರ್ಯ ಜತೆಗಿನ ಎರಡು ತೆಲುಗು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಅಲ್ಲಿಯೂ ಅವರಿಗೆ ಹೋಮ್ಲಿ ಲುಕ್ ಇರುವ ಪಾತ್ರಗಳೇ ಸಿಕ್ಕಿವೆ. ಈ ನಡುವೆ ಅವರಿಗೆ ಕೊಂಚ ರಗಡ್ ಆಗಿರುವ ಪಾತ್ರಕ್ಕೆ ಬಣ್ಣ ಹಚ್ಚಬೇಕು ಎಂಬ ಬಯಕೆ ಉಂಟಾಗಿದೆ. ಅದರಲ್ಲೂ ಕ್ರೀಡಾಪಟುವಿನ ರೀತಿಯಲ್ಲಿ ತೆರೆಮೇಲೆ ಕಾಣಿಸಿಕೊಳ್ಳಲು ಅವರು ಇಷ್ಟಪಟ್ಟಿದ್ದಾರೆ.

‘ಈವರೆಗೂ ನಾನು ಮಾಡಿರುವ ಮತ್ತು ಮಾಡುತ್ತಿರುವ ಚಿತ್ರಗಳಲ್ಲಿ ಹೋಮ್ಲಿ ಹುಡುಗಿಯ ಪಾತ್ರಗಳೇ ಸಿಕ್ಕಿವೆ. ನನ್ನನ್ನು ನೋಡಿದ ನಿರ್ದೇಶಕರಿಗೆ ಹಾಗೆ ಅನಿಸುವುದರಿಂದ ಅಂಥ ಚಿತ್ರಗಳನ್ನೇ ಆಫರ್ ಮಾಡುತ್ತಾರೆ. ಆದರೆ ನನಗೆ ಬೇರೆ ರೀತಿ ಕಾಣಿಸಿಕೊಳ್ಳಬೇಕೆಂಬ ಆಸೆ ಇದೆ. ಕ್ರೀಡಾಪಟುವಿನ ಪಾತ್ರದಲ್ಲಿ ನಟಿಸಬೇಕೆಂಬುದು ನನ್ನ ಕನಸು’ ಎನ್ನುತ್ತಾರವರು. ಪ್ರಸ್ತುತ ಕನ್ನಡದಲ್ಲಿ ದರ್ಶನ್ ಮತ್ತು ಸುದೀಪ್ ಕೂಡ ಕುಸ್ತಿಪಟುಗಳ ಅವತಾರದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಅದೇ ರೀತಿ ಕ್ರೀಡೆಗೆ ಸಂಬಂಧಿಸಿತ ಯಾವುದೇ ಚಿತ್ರದಲ್ಲಿ ನಟಿಸುವ ಆಫರ್ ಸಿಕ್ಕರೆ ಖಂಡಿತವಾಗಿಯೂ ರಶ್ಮಿಕಾ ಒಪ್ಪಿಕೊಳ್ಳುತ್ತಾರಂತೆ. ಜತೆಗೆ ಕೊಂಚ ರಫ್ ಆಂಡ್ ಟಫ್ ಪಾತ್ರಗಳಿಗೂ ಬಣ್ಣ ಹಚ್ಚಬೇಕು ಎಂದು ಅವರು ಅಂದುಕೊಂಡಿದ್ದಾರೆ.

ಏಕಕಾಲಕ್ಕೆ ರಶ್ಮಿಕಾ 4 ಚಿತ್ರಗಳಲ್ಲಿ ತೊಡಗಿಕೊಂಡಿದ್ದು, ಪುನೀತ್ ರಾಜ್​ಕುಮಾರ್ ಜತೆಗಿನ ‘ಅಂಜನಿಪುತ್ರ’ ಹಾಗೂ ಗಣೇಶ್ ಜತೆಗಿನ ‘ಚಮಕ್’ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯುತ್ತಿದೆ. ತೆಲುಗಿನ ಇನ್ನೆರಡು ಚಿತ್ರಗಳ ಶೂಟಿಂಗ್ ಹೈದರಾಬಾದ್​ನಲ್ಲಿ ನಡೆಯುತ್ತಿದೆ. ಈ ನಾಲ್ಕೂ ಪ್ರಾಜೆಕ್ಟ್ ಸಲುವಾಗಿ ಹೈದರಾಬಾದ್ ಟು ಬೆಂಗಳೂರು ಪ್ರಯಾಣ ಬೆಳೆಸುತ್ತ ರಶ್ಮಿಕಾ ಬಿಜಿಯಾಗಿದ್ದಾರೆ.

ಅವರು ನಟಿಸುತ್ತಿರುವ ಎರಡು ತೆಲುಗು ಸಿನಿಮಾಗಳಿಗೂ ಶೀರ್ಷಿಕೆ ಅಂತಿಮವಾಗಿಲ್ಲ. ವಿಜಯ್ ದೇವರಕೊಂಡ ನಟಿಸಿರುವ ‘ಅರ್ಜುನ್ ರೆಡ್ಡಿ’ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಹವಾ ಸೃಷ್ಟಿಸುವುದರ ಜತೆಗೆ ಅವರ ಸ್ಟಾರ್​ಗಿರಿಯನ್ನೂ ದುಪ್ಪಟ್ಟುಗೊಳಿಸಿದೆ. ಅಂಥ ನಟನ ಜತೆ ತೆರೆ ಹಂಚಿಕೊಳ್ಳುತ್ತಿರುವುದು ಹೇಗನಿಸುತ್ತಿದೆ ಎಂದು ಕೇಳಿದರೆ, ‘ಭಾರಿ ಯಶಸ್ಸು ಸಿಕ್ಕಿದ್ದರೂ ಅವರ ವರ್ತನೆಯಲ್ಲಿ ಬದಲಾವಣೆ ಆಗಿಲ್ಲ. ಈಗಲೂ ಅವರದ್ದು ಡೌನ್ ಟು ಅರ್ಥ್ ವ್ಯಕ್ತಿತ್ವ’ ಎನ್ನುತ್ತಾರೆ ರಶ್ಮಿಕಾ.

 ಹೋಮ್ಲಿ ಹುಡುಗಿಯಾಗಿ ಮಾತ್ರವಲ್ಲದೆ, ಬೇರೆ ರೀತಿಯ ಪಾತ್ರಕ್ಕೆ ಬಣ್ಣ ಹಚ್ಚಬೇಕು ಎನಿಸುತ್ತಿದೆ. ಇಬ್ಬರು ಕ್ರೀಡಾಪಟುಗಳ ನಡುವಿನ ಲವ್​ಸ್ಟೋರಿ ಇರುವಂಥ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಸೂಪರ್ ಆಗಿರುತ್ತೆ. ನಾನು ಅಂಥ ಪಾತ್ರವನ್ನು ನಿಭಾಯಿಸಬಲ್ಲೆ ಎಂಬುದು ನಿರ್ದೇಶಕರಿಗೆ ಅನಿಸಬೇಕಷ್ಟೇ.

| ರಶ್ಮಿಕಾ ನಟಿ

Leave a Reply

Your email address will not be published. Required fields are marked *

Back To Top