Monday, 19th February 2018  

Vijayavani

ನನ್ನ ಮಗನನ್ನ ನಾನೇ ಸರೆಂಡರ್​ ಮಾಡಿಸುತ್ತೇನೆ - ಪೊಲೀಸರಿಗೆ ಶೀಘ್ರವೇ ಒಪ್ಪಿಸುತ್ತೇನೆ - ಗೂಂಡಾ ನಲಪಾಡ್​​ ಕುರಿತು ಹ್ಯಾರಿಸ್​ ಪ್ರತಿಕ್ರಿಯೆ        ನಿನ್ನೆ ಚಿಕ್ಕವನು.. ಇಂದು ಬೆಳೆದ ಮಗ - ಬೈದ ನಂತರ ಮೊಬೈಲ್​ ಸ್ವಿಚ್​​ ಆಫ್​​ ಮಾಡ್ಕೊಂಡಿದ್ದ - ಕೇಸ್​ ಭೀತಿಯಲ್ಲಿ ಉಲ್ಟಾ ಹೊಡೆದ ಹ್ಯಾರಿಸ್​​        ರಾಜ್ಯದಲ್ಲಿ ಇಡೀ ದಿನ ಮೋದಿ ಮೇನಿಯಾ - ಮಧ್ಯಾಹ್ನ ಬಾಹುಬಲಿ ಸನ್ನಿಧಿಗೆ ಪ್ರಧಾನಿ - ಮತ್ತಷ್ಟು ಮೇಳೈಸಲಿದೆ ಮಹಾಮಜ್ಜನ        ಪರಿವರ್ತನಾ ರ‍್ಯಾಲಿಯಲ್ಲಿಂದು ಮೋದಿ ಅಬ್ಬರ - ಬಿಜೆಪಿಯಿಂದ ಗಣಪತಿ ಉಡುಗೊರೆ - ಮೈಸೂರು ಪೇಟ ತೊಡಿಸಿ ಸ್ವಾಗತ        ರೈತ ನಾಯಕ, ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ವಿಧಿವಶ - ವಿದೇಶದಿಂದ ಮಕ್ಕಳ ಬಂದ ಬಳಿಕ ಅಂತ್ಯಕ್ರಿಯೆ - ಕಂಬನಿ ಮಿಡಿದ ಗಣ್ಯರು       
Breaking News

ರಥವೇರಿ ಭಕ್ತರ ಬಳಿಗೆ ಬಂದ ಗುರುರಾಯರು

Friday, 11.08.2017, 3:00 AM       No Comments

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ಗುರು ರಾಯರ 346ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ದಿನ ಗುರುವಾರದಂದು ಭಕ್ತರ ಭಕ್ತಿ ಪರಾಕಾಷ್ಠೆ, ಮಂಗಳ ವಾದ್ಯಗಳ ನಿನಾದ, ಭಕ್ತರ ಜಯಘೊಷಗಳ ನಡುವೆ ಮಹಾ ರಥೋತ್ಸವ ಅದ್ದೂರಿಯಿಂದ ಜರುಗಿತು.

ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ರಥ ಹಾಗೂ ಉತ್ಸವ ಮೂರ್ತಿ ಪ್ರಹ್ಲಾದ ರಾಜರಿಗೆ ಪೂಜೆ ಸಲ್ಲಿಸಿ, ಆಶೀರ್ವಚನ ನೀಡಿದ ನಂತರ ರಾಜಬೀದಿಯಲ್ಲಿ ಸಂಚರಿಸಿದ ರಥ ಪುನಃ ಶ್ರೀಮಠಕ್ಕೆ ಬಂದು ತಲುಪಿತು. ಶ್ರೀಮಠದ ಮುಂಭಾಗದ ಸೇರಿ ರಾಜಬೀದಿಯ ಇಕ್ಕೆಲಗಳಲ್ಲಿ ಸೇರಿದ್ದ ಸಾವಿರಾರು ಸಂಖ್ಯೆ ಭಕ್ತ ಸಮೂಹ ರಥೋತ್ಸವವನ್ನು ಕಣ್ತುಂಬಿಕೊಂಡರು.

ರಥೋತ್ಸವದಲ್ಲಿ ತಾಳ ಮದ್ದಲೆ, ಭಜನಾ ಮಂಡಳಿ, ಕೋಲಾಟ, ಜಾಂಝ್ ಮೇಳ ಹಾಗೂ ವಿವಿಧ ನೃತ್ಯ ಮತ್ತು ಕಲಾ ತಂಡಗಳು ಭಾಗವಹಿಸುವ ಮೂಲಕ ಕಳೆ ತಂದವು. ರಾಯರ ನಾಮಸ್ಮರಣೆ, ಜಯ ಘೊಷಗಳು ಮುಗಿಲು ಮುಟ್ಟಿದ್ದರೆ, ರಥಕ್ಕೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ನಡೆಸಲಾಯಿತು. ರಥೋತ್ಸವಕ್ಕೂ ಮುಂಚೆ ಪ್ರಹ್ಲಾದ ರಾಜರ ಉತ್ಸವ ಮೂರ್ತಿಗೆ ಉಯ್ಯಾಲೆ, ಛತ್ರಿ, ಚಾಮರ ಸೇವೆ ಸಲ್ಲಿಸಿದ ಶ್ರೀ ಸುಬುಧೇಂದ್ರ ತೀರ್ಥರು ನಂತರ ಸಿಬ್ಬಂದಿಗೆ ಗುಲಾಲ್ ಎರಚುವ ಮೂಲಕ ವಸಂತೋತ್ಸವ ಆಚರಿಸಿದರು.

ಬರದ ಛಾಯೆ ತೊಲಗಲಿ

ಬರದ ಛಾಯೆ ತೊಲಗಲಿ ಜಗದಲ್ಲಿ ಸಮೃದ್ಧಿ ನೆಲೆಸಲಿ. ಅತಿವೃಷ್ಟಿ ಅನಾವೃಷ್ಟಿಯಾಗದೆ ಸಕಾಲದಲ್ಲಿ ಉತ್ತಮ ಮಳೆಯಾಗಿ ರೈತರು-ಜನರು ಸಂತಸದಿಂದ ಇರುವಂತೆ ರಾಯರು ಅನುಗ್ರಹಿಸಲಿ ಎಂದು ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಪ್ರಾರ್ಥಿಸಿದ್ದಾರೆ. ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀ ಗುರುರಾಯರ 346ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ದಿನವಾದ ಗುರುವಾರದಂದು ಜರುಗಿದ ಮಹಾರಥೋತ್ಸವ ಸಂದರ್ಭ ಆಶೀರ್ವಚನ ನೀಡಿ, ರಾಯರು ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಲಿ ಎಂದರು. ಭಕ್ತರು ತಮ್ಮಲ್ಲಿಗೆ ಬರುವುದಕ್ಕಿಂತ ಭಕ್ತರಿದ್ದಲ್ಲಿ ತಾವೇ ಬರಬೇಕು ಎಂದು ಉತ್ತರಾರಾಧನೆ ದಿನ ರಾಯರು, ರಥಾರೂಢರಾಗಿ ಬೀದಿಗಳಿಗೆ ಬರುತ್ತಾರೆ ಎಂದು ಶ್ರೀಸುಬುಧೇಂದ್ರ ತೀರ್ಥರು ಹೇಳಿದರು.

350ನೇ ಆರಾಧನೆಗೆ ಕಾರ್ಯ ಯೋಜನೆ: ಶ್ರೀ ಗುರುರಾಯರ 346ನೇ ಆರಾಧನೆ ಮಹೋತ್ಸವ ಪೂರ್ಣಗೊಂಡಿದ್ದು, 350ನೇ ಆರಾಧನೆ ಮಹೋತ್ಸವ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ 4 ವರ್ಷಗಳ ಆರಾಧನಾ ಮಹೋತ್ಸವವನ್ನು ಅದ್ದೂರಿಯಿಂದ ಆಚರಿಸಲು ಕಾರ್ಯ ಯೋಜನೆ ರೂಪಿಸಲಾಗಿದೆ ಎಂದು ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ. ರಾಯರ ದರ್ಶನಕ್ಕೆ ಬರುವ ಭಕ್ತರಿಗೆ ಇನ್ನಷ್ಟು ಸೌಕರ್ಯಗಳನ್ನು ಕಲ್ಪಿಸುವ ಜತೆಗೆ 350ನೇ ಆರಾಧನೆ ಮಹೋತ್ಸವವನ್ನು ವಿಶೇಷವಾಗಿ ಆಚರಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ವಿದೇಶಗಳಲ್ಲಿ ರಾಯರ ಪ್ರಾರ್ಥನಾ ಮಂದಿರ ನಿರ್ವಿು ಸುವ ನಿಟ್ಟಿನಲ್ಲಿ ಗ್ಲೋಬಲ್ ರೀಚ್ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

Leave a Reply

Your email address will not be published. Required fields are marked *

Back To Top