Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಯೋಗ ಕಲಿಸಿದ್ರೆ ಸಾಯಿಸ್ತೀವಿ, ಹುಷಾರ್ !

Wednesday, 08.11.2017, 3:54 PM       No Comments

>> ಬಾಬಾ ರಾಮ್ ದೇವ್ ಜತೆಗೆ ಯೋಗ ಮಾಡಿದ್ದ ರಾಫಿಯಾಗೆ ಪೊಲೀಸ್ ಭದ್ರತೆ

ರಾಂಚಿ : ಜಾರ್ಖಂಡ್ ನಲ್ಲಿ ಯೋಗಾಭ್ಯಾಸವನ್ನು ಉಸಿರಾಗಿಸಿಕೊಂಡು, ಅದರ ಆರೋಗ್ಯ ಲಾಭಗಳನ್ನು ಜನರಿಗೆ ತಿಳಿಸುತ್ತಿರುವ ಮುಸ್ಲಿಂ ಬಾಲಕಿಯೊಬ್ಬಳಿಗೆ ಫತ್ವಾ ಹೊರಡಿಸುವ ಬೆದರಿಕೆಯನ್ನು ಸ್ಥಳೀಯ ಮೌಲ್ವಿ ನೀಡಿದ್ದಾರೆ.

ಅಷ್ಟಕ್ಕೆ ಸುಮ್ಮನಾಗದ ಸಮುದಾಯದ ಕೆಲವರು ಅನಾಮಧೇಯ ಕರೆಗಳ ಮೂಲಕ ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂದು ತಿಳಿದುಬಂದಿದೆ. ರಾಫಿಯಾ ನಾಝ್ ಎಂಬ 16 ವರ್ಷದ ಬಾಲಕಿ ಸ್ವಯಂ ಆಸಕ್ತಿಯಿಂದ ಯೋಗ ಕಲಿತು, ಹಲವು ಕಾರ್ಯಕ್ರಮಗಳಲ್ಲಿ ವಿವಿಧ ಆಸನಗಳನ್ನು ಪ್ರದರ್ಶಿಸಿ ಖ್ಯಾತಿ ಪಡೆದಿದ್ದಾಳೆ. ಯೋಗಗುರು ಬಾಬಾ ರಾಮ್ ದೇವ್ ಜತೆಗೆ ವೇದಿಕೆ ಮೇಲೆ ಯೋಗ ಮಾಡಿ, ಶಹಬ್ಬಾಸ್ ಗಿರಿ ಕೂಡ ಗಿಟ್ಟಿಸಿದ್ದಾಳೆ. ಈ ಖ್ಯಾತಿ ಬಾಲಕಿಯ ಸಮುದಾಯದ ಕಣ್ಣು ಕುಕ್ಕಿದೆ..

” ಕೆಲ ಹಿಂದುಗಳು ಕೂಡ ನನಗೆ ಬೆದರಿಕೆ ಹಾಕಿದ್ದಾರೆ. ಹೆಸರು ಬದಲಾಯಿಸಿಕೊಂಡು ಯೋಗ ಕಲಿಸು ಎಂದು ಎಚ್ಚರಿಸಿದ್ದಾರೆ. ಆದರೆ ಯೋಗಕ್ಕೆ ಧರ್ಮದ ಹಂಗಿಲ್ಲ. ನಾನು ಸಾಯುವವರೆಗೂ ಯೋಗ ಕಲಿಸುತ್ತೇನೆ ” ಎಂದು ರಾಫಿಯಾ ಹೇಳಿದ್ದಾಳೆ. ಬಾಲಕಿಯ ಪೋಷಕರು ನೀಡಿರುವ ದೂರು ಆಧರಿಸಿ ಪೊಲೀಸರು ಆಕೆಗೆ ಭದ್ರತೆ ಒದಗಿಸಿದ್ದಾರೆ.

 

Leave a Reply

Your email address will not be published. Required fields are marked *

Back To Top