Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಯೋಗಕ್ಕೆ ಸೈ ಎಂದ ಸೌದಿ

Wednesday, 15.11.2017, 3:00 AM       No Comments

ನವದೆಹಲಿ: ವಿಶ್ವದ ಹಲವು ರಾಷ್ಟ್ರಗಳು ಯೋಗದತ್ತ ಆಕರ್ಷಿತವಾಗುತ್ತಿರುವ ಬೆನ್ನಲ್ಲೇ ಮುಸ್ಲಿಮ್ ಬಾಹುಳ್ಯ ಹೊಂದಿರುವ ಸೌದಿ ಅರೇಬಿಯಾ ಯೋಗಕ್ಕೆ ಕ್ರೀಡಾ ಚಟುವಟಿಕೆ ಮಾನ್ಯತೆ ನೀಡಿದೆ. ಅಲ್ಲಿನ ವ್ಯಾಪಾರ ಮತ್ತು ಉದ್ದಿಮೆ ಸಚಿವಾಲಯ ಯೋಗವನ್ನು ಕ್ರೀಡಾ ಚಟುವಟಿಕೆಗಳ ಪಟ್ಟಿಗೆ ಸೇರ್ಪಡೆ ಮಾಡಿದೆ. ಇದರಿಂದಾಗಿ ಸೌದಿಯಲ್ಲಿ ಯೋಗ ತರಬೇತಿ ಕೇಂದ್ರಗಳು ಅಧಿಕೃತವಾಗಿ ತಲೆ ಎತ್ತಲು ಅವಕಾಶ ದೊರೆತಿದೆ. ಯೋಗಕ್ಕೆ ಈ ಮಾನ್ಯತೆ ದೊರಕಲು

2005ರಲ್ಲಿ ಮೊದಲ ಬಾರಿಗೆ ಸೌದಿಯಲ್ಲಿ ಯೋಗಾಭ್ಯಾಸದ ಪರ ಅಭಿಯಾನ ಆರಂಭಿಸಿದ 37 ವರ್ಷದ ನೌಫ್ ಮರ್ವಾಯಿ ಶ್ರಮ ಕಾರಣ ಎನ್ನಲಾಗುತ್ತಿದೆ. ಸೌದಿಯ ಯುವರಾಣಿ ರೀಮಾ ಬಿಂತ್ ಬಂದರ್ ಅಲ್​ಸೌದ್ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷೆಯಾದ ಬಳಿಕ ಎಲ್ಲ ವಿಧದ ಕ್ರೀಡೆಗಳ ತರಬೇತುದಾರರಿಗೆ ಮುಕ್ತವಾಗಿ ಸಲಹೆಗೆ ಅವಕಾಶ ಕಲ್ಪಿಸಿದ್ದರು. ಇದರ ಸದುಪಯೋಗ ಪಡೆದು ಮರ್ವಾಯಿ ಯುವರಾಣಿಯನ್ನು ಸಂರ್ಪಸಿ ಯೋಗದಿಂದ ಆರೋಗ್ಯಕ್ಕಾಗುವ ಲಾಭಗಳನ್ನು ವಿವರಿಸಿದ್ದರು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

Back To Top