Friday, 22nd September 2017  

Vijayavani

1. ಸಮಾವೇಶಕ್ಕೆ ಲಕ್ಷ ಮಂದಿ ಸೇರಿಸೋ ಟಾರ್ಗೆಟ್​- ಬರದಿದ್ರೆ ಅಕ್ಕಿ ಕಟ್​​, ಬ್ಯಾಂಕ್​ ಸಬ್ಸಿಡಿಗೆ ಬ್ರೇಕ್​- ಫಲಾನುಭವಿಗಳಿಗೆ ಕೈ ಕಾರ್ಯಕರ್ತರ ಬೆದರಿಕೆ 2. ಕೊಟ್ಟ ಮಾತು ಮರೆತ ಸಿಎಂ ಸಿದ್ದರಾಮಯ್ಯ- 8 ತಿಂಗಳಾದ್ರೂ ಕುಟುಂಬಸ್ಥರಿಗೆ ಸಿಗದ ಪರಿಹಾರ- ಇದೇನಾ ನುಡಿದಂತೆ ನಡೆಯುವ ಸರ್ಕಾರ..? 3. ಎಸ್​​.ಎಂ.ಕೃಷ್ಣ ಅಳಿಯನ ಮನೆ ಕಚೇರಿ ತಲಾಷ್​​- ಎರಡನೇ ದಿನವೂ ಮುಂದುವರಿದ ಪರಿಶೀಲನೆ- ಹುಡುಕಿದಷ್ಟು ಪತ್ತೆಯಾಗ್ತಿದೆ ದಾಖಲೆ ಪತ್ರ 4. ಗದಗದಲ್ಲಿ ಹನಿ ನೀರಿಗಾಗಿ ಹೋರಾಟ- 6 ಸಾವಿರ ಜನಕ್ಕೆ ಟ್ಯಾಂಕರ್​ ನೀರೇ ಆಧಾರ- ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ ಸರ್ಕಾರ 5. ಮೈಸೂರು ದಸರಾಗೆ ಜನವೋ ಜನ- ಅತ್ತೆ, ಸೊಸೆ ಜೊತೆ ಜೊತೆ ಮಾಡಿದ್ರು ನಳಪಾಕ- ಕೆಲವೇ ಕ್ಷಣಗಳಲ್ಲಿ ಯುವ ದಸರಾಗೆ ಚಾಲನೆ
Breaking News :

ಯೂಟ್ಯೂಬ್ ಟ್ರೆಂಡಿಂಗ್​ನಲ್ಲಿ ನಾಗರಾಜ್ ನಂ.1

Wednesday, 13.09.2017, 3:03 AM       No Comments

 

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳ ಟೀಸರ್- ಟ್ರೇಲರ್​ಗಳು ಯೂಟ್ಯೂಬ್​ನಲ್ಲಿ ಸಖತ್ ಹಿಟ್ಸ್ ಪಡೆದುಕೊಳ್ಳುತ್ತಿವೆ, ಟ್ರೆಂಡಿಂಗ್​ನಲ್ಲಿ ಹವಾ ಸೃಷ್ಟಿಸುತ್ತಿವೆ. ಇದೀಗ ಸಾದ್ ಖಾನ್ ನಿರ್ದೇಶನದ ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಚಿತ್ರ ಟ್ರೆಂಡಿಂಗ್​ನಲ್ಲಿ ನಂ. 1 ಸ್ಥಾನ ಪಡೆದುಕೊಂಡಿದೆ. ಟ್ರೇಲರ್ ಬಿಡುಗಡೆಯಾಗಿ ಬರೀ 24 ಗಂಟೆಗಳಲ್ಲಿ 2 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೊಳಪಟ್ಟಿದೆ. ಈ ಹಿಂದೆ ಮೇ 1ರಂದು ‘..ನಾಗರಾಜ್’ ಟೀಮ್ ಟೀಸರ್​ವೊಂದನ್ನು ಬಿಡುಗಡೆ ಮಾಡಿತ್ತು. ಆ ಟೀಸರ್ ಬರೋಬ್ಬರಿ 6 ಲಕ್ಷಕ್ಕೂ ಅಧಿಕ ಬಾರಿ ನೋಡಲ್ಪಟ್ಟಿತ್ತು. ಇದೀಗ ಚಿತ್ರ ಬಿಡುಗಡೆ ಹತ್ತಿರವಾಗಿರುವುದರಿಂದ ಟ್ರೇಲರ್ ರಿಲೀಸ್ ಮಾಡಿರುವ ‘..ನಾಗರಾಜ್’ ತಂಡಕ್ಕೆ ಡಬಲ್ ಖುಷಿಯಾಗಿದೆ. ಟೀಸರ್​ಗಿಂತ ಟ್ರೇಲರ್ ಹೆಚ್ಚು ಹವಾ ಸೃಷ್ಟಿ ಮಾಡುತ್ತಿದೆ. ರಾಜಕೀಯ ವ್ಯಕ್ತಿಯೊಬ್ಬನ ಬದುಕನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನ ಟ್ರೇಲರ್​ನಲ್ಲಿ ಎದ್ದುಕಾಣುತ್ತಿದೆ. ಸಮಾಜದಲ್ಲಿನ ಅಂಕುಡೊಂಕನ್ನು ಅಣುಕುಮಾಡುವ ರಾಜಕಾರಣಿಯಾಗಿ ದಾನಿಶ್ ಸೇಠ್ ಮೊದಲಬಾರಿಗೆ ಬಣ್ಣ ಹಚ್ಚಿದ್ದಾರೆ. ಇಂಗ್ಲಿಷ್ ಮಿಶ್ರಿತ ತಮಾಷೆ ಎನಿಸುವ ಡೈಲಾಗ್​ಗಳು ಹೊಸತೆನಿಸುತ್ತವೆ. ಇನ್ನುಳಿದಂತೆ ಶ್ರುತಿ ಹರಿಹರನ್, ರೋಜರ್ ನಾರಾಯಣ್ ಸೇರಿ ಹಲವು ಕಲಾವಿದರು ಸಿನಿಮಾದಲ್ಲಿದ್ದಾರೆ. ಸಾದ್ ಖಾನ್ ನಿರ್ದೇಶನದ ‘ಹಂಬಲ್ ಪೊಲಿಟಿಶಿಯನ್ ನಾಗರಾಜ್’ ಸಿನಿಮಾಕ್ಕೆ ನಟ ರಕ್ಷಿತ್​ಶೆಟ್ಟಿ, ನಿರ್ವಪಕ ಪುಷ್ಕರ್, ನಿರ್ದೇಶಕ ಹೇಮಂತ್ ರಾವ್ ಬಂಡವಾಳ ಹೂಡಿದ್ದಾರೆ.

 

Leave a Reply

Your email address will not be published. Required fields are marked *

Back To Top