Wednesday, 17th October 2018  

Vijayavani

ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ -  ಸಂಜೆ 6.15ರಿಂದ 6.45ರೊಳಗೆ ಉಕ್ಕಿಹರಿಯಲಿದೆ ಜೀವನದಿ ಕಾವೇರಿ        ಪವಿತ್ರ ತೀರ್ಥಕ್ಕಾಗಿ ಹರಿದು ಬಂದಿದೆ ಭಕ್ತರ ದಂಡು - ತಲಕಾವೇರಿಯಲ್ಲಿ ಬಿಗಿ ಬಂದೋಬಸ್ತ್​ - ಸಿಎಂ ಕುಮಾರಸ್ವಾಮಿ ಉಪಸ್ಥಿತಿ        ನಿಗದಿಯಂತೆ ಬಾಗಿಲು ತೆರೆದ ಅಯ್ಯಪ್ಪ ದೇಗುಲ - ಮಹಿಳಾ ಭಕ್ತರಿಗೆ ಸಿಗಲೇ ಇಲ್ಲ ಮಣಿಕಂಠನ ದರ್ಶನ        ಶಬರಿಮಲೆಯಲ್ಲಿ ಭಾರೀ ಹಿಂಸಾಚಾರ ಹಿನ್ನೆಲೆ - ಪಂಪಾ, ನೀಲಕ್ಕಲ್ ಸೇರಿ 4 ಕಡೆ ನಿಷೇಧಾಜ್ಞೆ ಜಾರಿ - 144 ಸೆಕ್ಷನ್ ಆದೇಶ        ಮೀಟೂ ಅಭಿಯಾನಕ್ಕೆ ಮೊದಲ ವಿಕೆಟ್‌ ಪತನ - ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್‌ ರಾಜೀನಾಮೆ       
Breaking News

ಯುರೋಪಿನತ್ತ ಮಹಾವಲಸೆ

Tuesday, 11.07.2017, 3:00 AM       No Comments

ಸ್ಪಷ್ಟ ವಲಸೆ ನೀತಿ ಇಲ್ಲದ ಯುರೋಪ್ ಖಂಡಕ್ಕೆ ಇದೀಗ ಭಾರಿ ಪ್ರಮಾಣದ ವಲಸಿಗರಿಂದ ಬಹುದೊಡ್ಡ ಕಂಟಕ ಎದುರಾಗಿದೆ. ಇದಕ್ಕೆ ಒಮ್ಮತದ ಪರಿಹಾರೋಪಾಯ ಕಂಡುಕೊಳ್ಳುವಲ್ಲಿ ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ವಿಫಲರಾಗಿದ್ದಾರೆ. ತಜ್ಞರು, ವಾಣಿಜ್ಯೋದ್ಯಮಿಗಳು ಕೂಡ ಅಪಾಯದ ಸುಳಿವರಿತು ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿರುವುದು ಪರಿಸ್ಥಿತಿಯ ಗಾಂಭೀರ್ಯವನ್ನು ಅನಾವರಣಗೊಳಿಸಿದೆ.

 ‘ಸಮೃದ್ಧ ಲಿಬಿಯಾ ಇಲ್ಲದೇ ಇದ್ದಲ್ಲಿ ಆಫ್ರಿಕನ್ನರ ಯುರೋಪ್ ವಲಸೆಯನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ

– ಇದು ಕರ್ನಲ್ ಗಡಾಫಿ ಹೇಳಿದ ಮಾತು. ನಾಗರಿಕ ಕ್ರಾಂತಿ ಮೂಲಕ ತನ್ನನ್ನು ಪದಚ್ಯುತಗೊಳಿಸಲು ಪ್ರಯತ್ನಿಸುತ್ತಿರುವವರಿಗೆ ಬ್ರಿಟನ್ ನೆರವು ನೀಡುವುದು ಖಾತ್ರಿಯಾದ ಸಂದರ್ಭದಲ್ಲಿ ಗಡ್ಡಾಫಿ ಹೇಳಿಕೆ ಇದಾಗಿತ್ತು. ಗಡಾಫಿಯ ಅಂದಿನ ಆ ಹೇಳಿಕೆ ಈಗ ನಿಜವಾದಂತೆ ಭಾಸವಾಗುತ್ತಿದೆ.

2011ರಲ್ಲಿ ಗಡಾಫಿ ಹತ್ಯೆಯಾದ ಬಳಿಕ, ಲಿಬಿಯಾದ ತೈಲ ಸಮೃದ್ಧ ಆರ್ಥಿಕತೆ ಕುಸಿಯಿತು. ಆದರೆ ಈ ಶೂನ್ಯವನ್ನು ತುಂಬಿದ ದುರಾಸೆ ಪೀಡಿತ ಕಳ್ಳ ಸಾಗಣೆ ವ್ಯವಹಾರವನ್ನು ನೆಚ್ಚಿಕೊಂಡಿದ್ದ ಜನ, ಮೆಡಿಟರೇನಿಯನ್ ಸಮುದ್ರ ಮಾರ್ಗವಾಗಿ ದೋಣಿಗಳಲ್ಲಿ ಪಯಣದ ಸವಲತ್ತಿಗಾಗಿ ದುಬಾರಿ ಶುಲ್ಕ ತೆತ್ತ ಅಕ್ರಮವಾಗಿ ವಲಸಿಗರನ್ನು ತಂಡೋಪತಂಡವಾಗಿ ಕಳುಹಿಸಿದರು. ಲಿಬಿಯಾದ ಬಂದರುಗಳಿಂದ ಇಟಲಿಗೆ ಕಳೆದ ವಾರ ಬಂದ 12,000 ಮಂದಿ ಸೇರಿ ಈ ವರ್ಷ ಇಟಲಿ ಪ್ರವೇಶಿಸಿದ ಒಟ್ಟು ವಲಸಿಗರ ಸಂಖ್ಯೆ 85,000ಕ್ಕೂ ಹೆಚ್ಚು. ಸಿಸಿಲಿಗೆ ಹೋಗುವ ಮಾರ್ಗವಾಗಿ ಆಫ್ರಿಕದ ಕರಾವಳಿಯಿಂದ ಕೇವಲ 70 ಕಿ.ಮೀ. ದೂರದಲ್ಲಿರುವ ಲಂಪೆಡೂಸ ದ್ವೀಪಕ್ಕೆ ಭಾರಿ ಸಂಖ್ಯೆಯಲ್ಲಿ ಆಫ್ರಿಕದ ವಲಸೆಗಾರರು ಬರುತ್ತಾರೆ. ಅಲ್ಲಿಂದ ಅವರನ್ನು ಇಟಲಿಯ ವಿವಿಧ ಶಿಬಿರಗಳಿಗೆ ಒಯ್ಯಲಾಗುತ್ತದೆ. ಆದರೆ ಮಧ್ಯದಲ್ಲೇ ಹಲವರು ಕಣ್ಮರೆಯಾಗಿ ಪಶ್ಚಿಮ ಯುರೋಪಿನತ್ತ ಮುಂದುವರಿಯುತ್ತಾರೆ.

ಎರಡನೇ ಜಾಗತಿಕ ಸಮರದ ಬಳಿಕ ಉದ್ಭವಿಸಿದ ಬೃಹತ್ ವಲಸೆ ಬಿಕ್ಕಟ್ಟಿನಲ್ಲಿ ಲಿಬಿಯಾದ ಕಥೆ ಸಣ್ಣ ಕೂದಲಿನ ಎಳೆ ಅಷ್ಟೆ. ಆದರೆ ಇದು ಯುರೋಪಿನ ಸಾಮಾಜಿಕ ಬಂಧವನ್ನೇ ಹಾಳುಮಾಡುವ ಬೆದರಿಕೆಯನ್ನು ತಂದೊಡ್ಡಿದೆ.

2015ರ ಆದಿಯಲ್ಲಿ ಜರ್ಮನಿಯ ಏಂಜೆಲಾ ಮರ್ಕೆಲ್ ಅವರು ತಮ್ಮ ರಾಷ್ಟ್ರದ ದ್ವಾರಗಳನ್ನು ಸಿರಿಯಾ ಮತ್ತು ಇತರ ವಲಸೆಗಾರರಿಗಾಗಿ ತೆರೆದಿಟ್ಟ ಬಳಿಕ ಉತ್ತರ ಆಫ್ರಿಕ ಮತ್ತು ಟರ್ಕಿಯಿಂದ ಸಮುದ್ರ ಮಾರ್ಗವಾಗಿ ಯುರೋಪ್ ತಲುಪಿದ ವಲಸೆಗಾರರ ಸಂಖ್ಯೆ ಸುಮಾರು 15 ಲಕ್ಷ. ವಲಸೆಯ ಈ ಪರಿಯನ್ನು ಕಂಡು ಐರೋಪ್ಯ ಒಕ್ಕೂಟ ಈಗ ಬೆಚ್ಚಿ ಬಿದ್ದಿದೆ. ಇದನ್ನು ನಿಲ್ಲಿಸುವುದು ಹೇಗೆ ಎಂದು ಅರ್ಥವಾಗದೆ ವಲಸೆ ತಡೆಯುವ ಮಾರ್ಗ ಹುಡುಕಲು ಒಗ್ಗೂಡಿ ಎಂದು 28 ಸದಸ್ಯ ರಾಷ್ಟ್ರಗಳಿಗೆ ಐರೋಪ್ಯ ಒಕ್ಕೂಟ ಗೋಗರೆಯುತ್ತಿದೆ. ಆದರೆ ಇದಕ್ಕೆ ಲಭಿಸಿರುವ ಸ್ಪಂದನೆ ಇನ್ನೂ ದಯನೀಯ.

 ಐರೋಪ್ಯ ಒಕ್ಕೂಟದ ವಿಫಲ ಸಮಾವೇಶ

ಮಾಲ್ಟಾದ ಪ್ರಧಾನಿ ಬಿಕ್ಕಟ್ಟಿನ ಗಂಭೀರತೆಯನ್ನು ರ್ಚಚಿಸುವ ಸಲುವಾಗಿ ಮಂಗಳವಾರ ಐರೋಪ್ಯ ಸಂಸತ್ತನ್ನು ಸಮಾವೇಶ ಕರೆದಿದ್ದರು. ಇಲ್ಲಿನ ಚರ್ಚೆಯ ಪರಿಯನ್ನು ಏನೆಂದು ಬಣ್ಣಿಸುವುದು? ಮಹತ್ವದ ಈ ವಿಷಯದ ಬಗ್ಗೆ ಮಾಲ್ಟಾ ಪ್ರಧಾನಿ ಮಾತನಾಡುತ್ತಿದ್ದರೆ ಅವರ ಮಾತು ಆಲಿಸಲು ಅಲ್ಲಿ ಪಾಲ್ಗೊಂಡಿದ್ದ ಸಂಸದರ ಸಂಖ್ಯೆ ಕೇವಲ 30. ಯುರೋಪಿಯನ್ ಕಮೀಷನ್ ಅಧ್ಯಕ್ಷ ಜೀನ್-ಕ್ಲೌಡೆ ಜಂಕ್ ಅವರು ಹೆಚ್ಚು ಕಡಿಮೆ ಖಾಲಿ ಖಾಲಿಯಾಗಿದ್ದ ಸದನಕ್ಕೆ ಸಮಸ್ಯೆಯ ಗಂಭೀರತೆಯನ್ನು ವಿವರಿಸಿದರು! ಸದನದ ಸ್ಥಿತಿ ಹಾಸ್ಯಾಸ್ಪದ ಎಂದು ಅವರು ಹೇಳಿದ್ದು ವಿಪರ್ಯಾಸದ ಪರಮಾವಧಿ.

 

2016ರಲ್ಲಿ ಸಮುದ್ರ ಮೂಲಕ ಗ್ರೀಕ್ ತಲುಪಿದ ನಿರಾಶ್ರಿತರ ಸಂಖ್ಯೆ 1,52,981

2015ರಲ್ಲಿ ಸಮುದ್ರ ಮೂಲಕ ಗ್ರೀಕ್ ತಲುಪಿದ ನಿರಾಶ್ರಿತರ ಸಂಖ್ಯೆ 8,56,723

 ಅಪಾಯದ ಸುಳಿವು

ಇದೀಗ ಇಟಲಿಯು ವಲಸಿಗರ ಕೆಲವು ದೋಣಿಗಳಿಗೆ ತನ್ನ ಬಂದರುಗಳನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದರೆ, ಹಂಗೆರಿಯು ವಲಸಿಗರು ಪ್ರವೇಶಿಸದಂತೆ ತಡೆಯಲು ಇಡೀ ದೇಶದ ಸುತ್ತ ಭಾರಿ ಬೇಲಿಯನ್ನೇ ನಿರ್ವಿುಸಿದೆ. ಆಸ್ಟ್ರಿಯ ಸಶಸ್ತ್ರ ವಾಹನಗಳಲ್ಲಿ ಇಟಲಿ ಜತೆಗಿನ ಗಡಿಗಳನ್ನು ಕಾಯಲು ರಕ್ಷಣಾ ಪಡೆಗಳನ್ನೇ ರವಾನಿಸಿದೆ. ಪೋಲಂಡ್ ಮತ್ತು ಕ್ರೖೆಸ್ತರು ಪ್ರಬಲರಾಗಿರುವ ಪೂರ್ವ ಯುರೋಪ್ ನೆರೆಹೊರೆ ದೇಶಗಳು ವಲಸಿಗರ ಆಗಮನವನ್ನು ಅಂಗೀಕರಿಸಲು ನಿರಾಕರಿಸುತ್ತಿವೆ. ಬಹುತೇಕ ಮುಸ್ಲಿಮರೇ ಆಗಿರುವ ಅಲ್ಲಿನ ಕೆಲವು ನಾಯಕರು ವಲಸೆ ಬಗ್ಗೆ ಅತೀವ ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಕೂಡಾ ಆಫ್ರಿಕನ್ನರಿಗೆ ಹಾಲಿ ಮಾರ್ಗಗಳ ಮೂಲಕ ಯುರೋಪ್ ಖಂಡವನ್ನು ತಲುಪುವುದು ಕಷ್ಟವಾಗುವಂತೆ ಮಾಡಬೇಕು ಎಂದು ಐರೋಪ್ಯ ಒಕ್ಕೂಟವನ್ನು ಆಗ್ರಹಿಸುವ ಮೂಲಕ ಗಂಭೀರ ಅಪಾಯದ ಬಗ್ಗೆ ಎಚ್ಚರಿಸಿದ್ದಾರೆ.

ಈ ವಾರ ಆಗಮಿಸಿದ 10 ಮಂದಿಯ ಪೈಕಿ 7 ಮಂದಿ ವಲಸಿಗರಲ್ಲ, ಆರ್ಥಿಕ ವಲಸೆಗಾರರು ಎಂದು ವಿಶ್ವಸಂಸ್ಥೆ ಸ್ಪಷ್ಟ ಪಡಿಸಿದರೂ, ಹೆಚ್ಚು ವಲಸೆಗಾರರನ್ನು ಸ್ವೀಕರಿಸುವ ಮೂಲಕ ಅಭೂತಪೂರ್ವ ಬಿಕ್ಕಟ್ಟನ್ನು ಎದುರಿಸುವಲ್ಲಿ ಸಹಕರಿಸಿ ಎಂದು ಐರೋಪ್ಯ ಒಕ್ಕೂಟ ಬ್ರಿಟನ್​ಗೆ ಆದೇಶ ನೀಡಿದೆ.

 ಬಂದ ದಾರಿಗೆ ಸುಂಕವಿಲ್ಲ

ಯುರೋಪ್ ರಾಷ್ಟ್ರಗಳಲ್ಲಿ ತುಂಬಿ ತುಳುಕುತ್ತಿರುವ ನಿರಾಶ್ರಿತರ ಪೈಕಿ ಯಾರಿಗೆ ಆಶ್ರಯ ಕೊಡುವುದಕ್ಕಾಗುವುದಿಲ್ಲವೋ ಅಂಥವರನ್ನು ಪುನಃ ಟರ್ಕಿಗೆ ಕಳುಹಿಸಲು ಯುರೋಪಿಯನ್ ರಾಷ್ಟ್ರಗಳು ನಿರ್ಧರಿಸಿವೆ. ಅಂದರೆ, ಈ ರೀತಿ ಆಶ್ರಯ ಪಡೆಯುವುದಕ್ಕೆ ಅರ್ಹರಲ್ಲದ 72,000 ವಲಸಿಗರು ಯುರೋಪಿಯನ್ ರಾಷ್ಟ್ರಗಳಲ್ಲಿದ್ದು, ಅವರನ್ನು ಟರ್ಕಿಗೆ ಕಳುಹಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಇದಕ್ಕೆ ಬದಲಾಗಿ ಟರ್ಕಿಯಿಂದ ಪ್ರತಿ ವಲಸಿಗನಿಗೆ ಪ್ರತಿಯಾಗಿ ಒಬ್ಬ ಸಿರಿಯನ್ ನಿರಾಶ್ರಿತನಿಗೆ ಯುರೋಪಿಯನ್ ರಾಷ್ಟ್ರದಲ್ಲಿ ಆಶ್ರಯ ಕಲ್ಪಿಸುವುದು. ಅಷ್ಟೇ ಅಲ್ಲ, ಟರ್ಕಿಗೆ 660 ಕೋಟಿ ಡಾಲರ್ ಅನುದಾನವನ್ನೂ ನೀಡುವ ಭರವಸೆಯನ್ನು ಯುರೋಪಿಯನ್ ರಾಷ್ಟ್ರಗಳು ನೀಡಿವೆ. ಅದೇ ರೀತಿ, ಟರ್ಕಿಯ ಪ್ರಜೆಗಳ ಮೇಲಿದ್ದ ವೀಸಾ ನಿರ್ಬಂಧ ಸಡಿಲಗೊಳಿಸುವುದು, ಯುರೋಪಿಯನ್ ರಾಷ್ಟ್ರಗಳ ಸದಸ್ಯತ್ವ ನೀಡುವ ವಿಚಾರವನ್ನು ತ್ವರಿತವಾಗಿ ನಿರ್ಧರಿಸಲು 28 ಯುರೋಪಿಯನ್ ರಾಷ್ಟ್ರಗಳು ಸಹಮತ ವ್ಯಕ್ತಪಡಿಸಿವೆ.

 ಅಲ್ಮೇರಿಯಾಕ್ಕೆ ಜನರ ದಂಡು

ಈ ವರ್ಷ 6500 ಜನರು ಅಲ್ಮೇರಿಯಾಕ್ಕೆ ವಲಸೆ ಬಂದಿದ್ದಾರೆ. ವಲಸೆ ಬರುವಾಗ 60 ಜನ ಮೃತಪಟ್ಟಿದ್ದಾರೆ. ಹೆಚ್ಚಿನ ವಲಸೆಗಾರರು ಗುಲ್ನಿಯಾ, ಅಲ್ಜೀರಿಯಾ ಮತ್ತು ಸಿರಿಯಾಕ್ಕೆ ಸೇರಿದವರು.

 ವಲಸೆಯ ಸಂಕಷ್ಟ…

ಅನೇಕ ನಿರಾಶ್ರಿತರು ಅಕ್ರಮವಾಗಿ ವಲಸೆ ಹೋಗುತ್ತಿರುವ ಕಾರಣ ಹವಾಮಾನ ವೈಪರೀತ್ಯದ ಪರಿಣಾಮ ಹಲವರು ಪ್ರಾಣ ಕಳೆದುಕೊಂಡರೆ, ಇನ್ನೂ ಅನೇಕರು ಸಮುದ್ರಯಾನದ ವೇಳೆ ಪ್ರಾಣ ಕಳೆದುಕೊಳ್ಳುತ್ತಾರೆ. ಮತ್ತೆ ಅನೇಕರು ಗಡಿಭಾಗದಲ್ಲಿ ಪ್ರಾಣಬಿಡುತ್ತಾರೆ. ಹಲವರು ಪರಸ್ಪರ ಹೊಡೆದಾಡಿ ಸಾಯುತ್ತಾರೆ. ಒಂದು ಲೆಕ್ಕಾಚಾರ ಪ್ರಕಾರ ಕಳೆದ ಕೆಲವು ವರ್ಷಗಳಲ್ಲಿ ನೂರಾರು ನಿರಾಶ್ರಿತರು ಗ್ರೀಕ್ ಅಥವಾ ಇಟಾಲಿಯನ್ ದ್ವೀಪ ತಲುಪುವುದಕ್ಕೆ ಪ್ರಯತ್ನಿಸಿ ವಿಫಲರಾಗಿ ಮೆಡಿಟ ರೇನಿಯನ್ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಮೆಸೆಡೋನಿಯಾದಲ್ಲಿ ಗಡಿ ಮುಚ್ಚಿದ್ದ ರಿಂದಾಗಿ ಗ್ರೀಸ್​ನಲ್ಲೇ ಸುಮಾರು 46,000 ಅಕ್ರಮ ನಿರಾಶ್ರಿತರು ಅತಂತ್ರರಾಗಿದ್ದಾರೆ. ಕನಿಷ್ಠ 14,000 ಅತಂತ್ರ ನಿರಾಶ್ರಿತರನ್ನು ಮೆಸೆಡೋನಿಯಾ ಹಾಗೂ ಗ್ರೀಸ್ ನಡುವಿನ ಗಡಿಭಾಗದ ಇಡೋಮೆನಿ ಎಂಬಲ್ಲಿ ತಾತ್ಕಾಲಿಕ ಶಿಬಿರದಲ್ಲಿ ಇರಿಸಲಾಗಿದೆ. ಇವೆಲ್ಲರೂ ಗಡಿ ತೆರೆಯುವುದನ್ನೇ ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *

Back To Top