Tuesday, 16th January 2018  

Vijayavani

ಮತ್ತೊಂದು ಟ್ವೀಟ್‌ ಮಾಡಿ ಕೆಣಕಿದ ಪಾಲ್ಯೇಕರ್ - ಕಣಕುಂಬಿ ಕಾಮಗಾರಿ ಪರಿಶೀಲನೆಗೆ ನಾಲ್ವರ ತಂಡ ರಚನೆ - ಗೋವಾ ಸಚಿವನ ವಿರುದ್ಧ ಸಿಎಂ ಆಕ್ರೋಶ        ಪರಮೇಶ್ವರ್‌ಗೂ ಕಂಟಕವಾಯ್ತು ಸದಾಶಿವ ಆಯೋಗ - ವರದಿ ವಿರೋಧಿಸಿದ್ದಕ್ಕೆ ಸ್ವಕ್ಷೇತ್ರದಲ್ಲೇ ಆಕ್ರೋಶ - ಮತ ಹಾಕದಿರಲು ಮಾದಿಗ ಮುಖಂಡರ ನಿರ್ಧಾರ        ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಮತ್ತೆ ಕೀಚಕ ಕೃತ್ಯ - ಇಂದಿರಾನಗರ ಪೊಲೀಸರಿಂದ ಇಬ್ಬರು ಆರೋಪಿಗಳ ಸೆರೆ - ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆಗೆ ಆಕ್ರೋಶ        ಕೊನೆಗೂ ಮೌನ ಮುರಿದ ಸುಪ್ರೀಂಕೋರ್ಟ್‌ ಸಿಜೆ - ಬಂಡಾಯ ನ್ಯಾಯಮೂರ್ತಿಗಳ ಜತೆ ದೀಪಕ್‌ ಮಿಶ್ರ ಚರ್ಚೆ - 15 ನಿಮಿಷಗಳ ಕಾಲ ಸಂಧಾನ ಮಾತುಕತೆ        ಚೆಂಡು ನೆಲಕ್ಕೆ ಎಸೆದ ವಿರಾಟ್‌ಗೆ ಐಸಿಸಿ ತರಾಟೆ - ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಿಟ್ಟಾದ ಕೊಹ್ಲಿಗೆ ದಂಡ - ಪಂದ್ಯದ 25 ಪರ್ಸೆಂಟ್‌ ಸಂಭಾವನೆ ಕಡಿತ       
Breaking News :

ಯಾವುದೇ ಸಂಘಟನೆ ನಿಷೇಧಿಸುವ ಮಾತಾಡಿಲ್ಲ

Sunday, 07.01.2018, 4:39 AM       No Comments

ಸಾಗರ: ಪಿಎಫ್‌ಐ ಅಥವಾ ಬಜರಂಗದಳ ಸೇರಿ ಯಾವುದೇ ಸಂಘಟನೆಯನ್ನು ನಿಷೇಧ ಮಾಡುತ್ತೇನೆ ಎಂದು ಹೇಳಿಲ್ಲ. ಆದರೆ ಸಮಾಜದಲ್ಲಿ ಕೋಮು ಘರ್ಷಣೆಗೆ ಪ್ರಚೋದಿಸುವ ಸಂಘಟನೆಗಳು ಯಾವುದೇ ಜಾತಿಗೆ ಸೇರಿರಲಿ ಇರುವ ಕಾನೂನು ಬಳಕೆ ಮಾಡಿಕೊಂಡು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸಾಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಹೆಣದ ಮೇಲೆ ರಾಜಕೀಯ ಮಾಡಲು ಹೊರಟಿದೆ. ಅವರ ಆಟ ಬಹಳ ದಿನ ನಡೆಯದು. ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆನ್ನುವ ಉದ್ದೇಶದಿಂದಲೇ ಕರಾವಳಿ ಜಿಲ್ಲೆಗಳಲ್ಲಿ ಕೋಮು ಗಲಭೆಗಳಿಗೆ ಪ್ರಚೋದನೆ ನೀಡುತ್ತಿದೆ. ಅವರು ಎಷ್ಟೇ ಪ್ರಯತ್ನ ಮಾಡಿದರೂ ಕರಾವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಧಿಕ ಸ್ಥಾನಗಳನ್ನು ಗಳಿಸಲಿದೆ ಎಂದರು.

ಅಕ್ರಮ ಗಣಿಗಾರಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಪ್ರಕರಣಗಳನ್ನು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡಕ್ಕೆ ವಹಿಸಿದೆ ಎಂದರು.

ಗೌಡರು ಹೋಮ ಮಾಡಿಸೋದ್ಯಾಕೆ?: ಜೆಡಿಎಸ್‌ಗೆ ಅತಂತ್ರ ಸ್ಥಿತಿ ನಿರ್ಮಾಣವಾಗಬೇಕು ಎಂಬುದೇ ಆಶಯ. ಇದೇ ಕಾರಣಕ್ಕಾಗಿ ದೇವೇಗೌಡರು ಹೋಮ ಹವನ ಮಾಡಿಸುತ್ತಾರೆ. ಅತಂತ್ರ ಸ್ಥಿತಿ ಬಂದರೆ ಮಾತ್ರ ಆಟ ನಡೆಯೋದು, ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಬೇಕು ಎಂಬುದು ಅವರ ಉದ್ದೇಶವಲ್ಲ ಎಂದು ಸಿಎಂ ಗೇಲಿ ಮಾಡಿದರು.

ಸಿದ್ಧಗಂಗಾ ಶ್ರೀಗೆ ಭಾರತ ರತ್ನ: ತುಮಕೂರಿನ ಶ್ರೀ ಸಿದ್ಧಗಂಗಾ ಸ್ವಾಮೀಜಿಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ. ನಿರ್ಧಾರ ಕೈಗೊಳ್ಳಬೇಕಾಗಿದ್ದು ಕೇಂದ್ರ ಸರ್ಕಾರ. ಭಾರತ ರತ್ನ ನೀಡಬೇಕು ಎಂಬುದು ರಾಜ್ಯದ ಆಶಯ ಎಂದರು.

ತನಿಖೆ ಗಂಭೀರವಾಗಿದೆ

ಗೌರಿ ಲಂಕೇಶ್ ಹತ್ಯೆ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಡೆದಿರುವ ಕಾರಣ ಇದುವರೆಗೆ ಆರೋಪಿಗಳನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಇದು ಸಂಘಟಿತ ಆರೋಪಿಗಳ ಕೃತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಆರೋಪಿಗಳ ಸುಳಿವು ಸಿಕ್ಕಿದೆ ಎಂದು ಗೃಹ ಸಚಿವರು ಹೇಳಿಲ್ಲ. ಕೆಲವು ಮಾಹಿತಿ ಲಭ್ಯವಾಗಿವೆ ಎಂದು ಹೇಳಿದ್ದಾರೆ. ಸರ್ಕಾರ ಈ ಪ್ರಕರಣದ ತನಿಖೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಹಲವರು ತುದಿಗಾಲಿನಲ್ಲಿದ್ದಾರೆ. ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿರುವವರಿಗೆ ಸ್ವಾಗತ ಇದೆ. ಆದರೆ ಆರ್‌ಎಸ್‌ಎಸ್ ಮತ್ತು ಎಬಿವಿಪಿ ಹಿನ್ನೆಲೆಯವರನ್ನು ಯಾವುದೇ ಕಾರಣಕ್ಕೂ ಸೇರ್ಪಡೆ ಮಾಡಿಕೊಳ್ಳುವುದಿಲ್ಲ.

| ಸಿದ್ದರಾಮಯ್ಯ ಸಿಎಂ


ಸಂಘಟನೆ ನಿಷೇಧ ಕುರಿತು ಮುಖ್ಯಮಂತ್ರಿ ಜತೆ ಚರ್ಚೆ

ಶಿವಮೊಗ್ಗ: ಸಮಾಜದ ಶಾಂತಿಗೆ ಭಂಗ ಉಂಟುಮಾಡುವ ಸಂಘಟನೆಗಳನ್ನು ನಿಷೇಧಿಸುವ ಬಗ್ಗೆ ಸಿಎಂ ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವುದು ನನ್ನ ಗಮನಕ್ಕೂ ಬಂದಿದೆ. ಪ್ರಸ್ತುತ ಇಬ್ಬರೂ ಪ್ರವಾಸದಲ್ಲಿರುವುದರಿಂದ ಈ ಬಗ್ಗೆ ಚರ್ಚಿಸಲು ಸಾಧ್ಯವಾಗಿಲ್ಲ. ಶೀಘ್ರವೇ ಬೆಂಗಳೂರಿನಲ್ಲಿ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಪಿಎಫ್‌ಐ ನಿಷೇಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಅದೇ ರೀತಿ ಶ್ರೀರಾಮ ಸೇನೆ, ಬಜರಂಗದಳ ವಿರುದ್ಧವೂ ಅಶಾಂತಿ ವಾತಾವರಣ ಸೃಷ್ಟಿಸಿದ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ
ಎಲ್ಲವನ್ನೂ ಸಮಗ್ರವಾಗಿ ಚರ್ಚಿಸಲಾಗುವುದು ಎಂದು ಹೇಳಿದರು.

Leave a Reply

Your email address will not be published. Required fields are marked *

Back To Top