Friday, 20th April 2018  

Vijayavani

ಬಿಜೆಪಿ ಅಭ್ಯರ್ಥಿಗಳ 3 ನೇ ಪಟ್ಟಿ ರಿಲೀಸ್​- 59 ಅಭ್ಯರ್ಥಿಗಳ ಹೆಸರು ಪ್ರಕಟ- ವರುಣಾ, ಬಾದಾಮಿ ಇನ್ನೂ ನಿಗೂಢ        ಜೆಡಿಎಸ್​ನಿಂದ ಸೆಕೆಂಡ್​ ಲಿಸ್ಟ್​ ರಿಲೀಸ್​- ಕೈ, ಕಮಲ ರೇಬಲ್​ಗಳಿಗೆ ಮಣೆ- 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ        ಎಚ್​ಡಿಕೆ ಆಸ್ತಿ ವಿವರ ಘೋಷಣೆ- ಕುಮಾರಸ್ವಾಮಿ 12 ಕೋಟಿ ಒಡೆಯ- ಗುತ್ತೇದಾರ್​ಗಿಂತ ಪತ್ನಿ ಶ್ರೀಮಂತೆ        ನಟಿ ಉಮಾಶ್ರೀ ಆಸ್ತಿ ವಿವರ ಘೋಷಣೆ- ಸಾಕವ್ವ 1 ಕೆ.ಜಿ ಚಿನ್ನಾಭರಣದ ಒಡತಿ- ಅವಲಂಬಿತರು ಯಾರು ಇಲ್ಲವೆಂದು ಪ್ರಮಾಣಪತ್ರ        ಚಾಮುಂಡೇಶ್ವರಿಯಲ್ಲಿ ಸಿಎಂ, ವರುಣಾದಲ್ಲಿ ಯತೀಂದ್ರ- ಅಪ್ಪ-ಮಗ ನಾಮಪತ್ರ ಸಲ್ಲಿಕೆ- ಭಾರಿ ಬೆಂಬಲಿಗರ ಜತೆ ತೆರಳಿ ನಾಮಿನೇಷನ್​​​​​​        ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ- ಮನೆಗೆ ಹೋಗಲು ವರುಣನ ಅಡ್ಡಿ- ಸಂಜೆಯ ಮಳೆಗೆ ವಾಹನ ಸವಾರರು ಕಂಗಾಲು       
Breaking News

ಮ್ಯೂಚುವಲ್ ಫಂಡ್​ನ ಅನುಕೂಲತೆಗಳು

Monday, 19.06.2017, 3:01 AM       No Comments

| ಡಾ. ಭರತ್​ ಚಂದ್ರ

ಹೂಡಿಕೆದಾರರು ಹಣವನ್ನು ಪೋಸ್ಟ್ ಆಫೀಸ್, ಎನ್​ಎಸ್​ಸಿ, ಬ್ಯಾಂಕುಗಳು, ಸರ್ಕಾರದ ಬಾಂಡ್​ಗಳು, ಜೀವವಿಮೆ ಅಥವಾ ಆಸ್ತಿಪಾಸ್ತಿಯಲ್ಲಿ ಹೂಡಿದರೆ ಅವರಿಗೆ ಬೇಕಾದಾಗ ಹಣವನ್ನು ವಾಪಸು ಪಡೆಯಲು ಸಾಧ್ಯವಿಲ್ಲ. ಪ್ರತಿಯೊಂದು ಹೂಡಿಕೆಗೂ ಅದರದೇ ಆದ ನಿಗದಿತ ಅವಧಿಯಿರುತ್ತದೆ. ಉದಾಹರಣೆಗೆ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್(ಎನ್​ಎಸ್​ಸಿ)ಗೆ ಆರು ವರ್ಷ, ಬ್ಯಾಂಕಿನ ಠೇವಣಿಗಳಿಗೆ ಐದು ವರ್ಷ ಇತ್ಯಾದಿ. ಆದರೆ, ಮ್ಯೂಚುವಲ್ ಫಂಡ್​ನಲ್ಲಿಟ್ಟ ಹಣವನ್ನು (ಯೂನಿಟ್​ಗಳನ್ನು ಮಾರುವ ಮೂಲಕ) ಯಾವಾಗ ಬೇಕಾದರೂ ವಾಪಸು ಪಡೆಯಬಹುದು. ನೀವು ಮಾರಿದ ಯೂನಿಟ್​ಗಳನ್ನು ಮ್ಯೂಚುವಲ್ ಫಂಡ್ ಕಂಪನಿಗಳೇ ಮರುಖರೀದಿ ಮಾಡುತ್ತವೆ. ಅಷ್ಟೇ ಅಲ್ಲದೆ, ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಮೂರು ದಿನದ ಒಳಗಾಗಿ ಕಂಪನಿಯವರೇ ಜಮಾ ಮಾಡುತ್ತಾರೆ. ಮೂರು ದಿನದ ಒಳಗೆ ಜಮಾ ಮಾಡದೇ ಇದ್ದರೆ ಅದರೊಂದಿಗೆ ಬಡ್ಡಿಯ ಹಣವನ್ನೂ ನಿಮ್ಮ ಖಾತೆಗೆ ಜಮಾ ಮಾಡುತ್ತಾರೆ. ಅಂದರೆ ಲಾಭ ಅಥವಾ ನಷ್ಟ ಯಾವುದಿದ್ದರೂ ಮ್ಯೂಚುವಲ್ ಫಂಡ್​ನಲ್ಲಿಟ್ಟ ಹಣವನ್ನು ನೀವು ಯಾವಾಗ ಬೇಕಾದರೂ ವಾಪಸ್ ಪಡೆಯಬಹುದು. ಇದು ಒಂದು ದೊಡ್ಡ ಅನುಕೂಲ.

ಇನ್ನೊಂದು ಅನುಕೂಲ ಎಂದರೆ ಮ್ಯೂಚುವಲ್ ಫಂಡ್​ನ ಸರಳತೆ. ಉದಾಹರಣೆಗೆ ಒಮ್ಮೆ ಹೂಡಿದ ಹಣವನ್ನು ಅದೇ ಕಂಪನಿಯ ಇತರ ಸ್ಕೀಮ್ಳಿಗೆ ಸುಲಭವಾಗಿ ವರ್ಗಾಯಿಸಬಹುದು. ಯಾವುದೇ ಖರ್ಚಿಲ್ಲದೆ, ಬ್ಯಾಂಕಿನ ವಹಿವಾಟು ಇಲ್ಲದೆ ಕೇವಲ ಒಂದು ಇ-ಮೇಲ್ ಅಥವಾ ಫೋನು ಅಥವಾ ಪತ್ರಮುಖೇನ ಈ ಕೆಲಸವನ್ನು ನಡೆಸಬಹುದು. ನಿಮ್ಮ ಹೂಡಿಕೆಯ ಹಣ ನಿರಾಯಾಸವಾಗಿ ಆ ಕಂಪನಿಯ ಇನ್ನೊಂದು ಸ್ಕೀಮ್ಲ್ಲಿ ಜಮಾ ಆಗುತ್ತದೆ. ಬೇಕಾದರೆ ನಿಮ್ಮ ಹೂಡಿಕೆಯ ಹಣದ ಒಂದು ಭಾಗವನ್ನಷ್ಟೇ ವಾಪಸ್ ಪಡೆಯಲೂ ಸಾಧ್ಯವಿದೆ.

ಮ್ಯೂಚುವಲ್ ಫಂಡ್​ನ ವೆಬ್​ಸೈಟಿನ ಮುಖಾಂತರ, ಆಯ್ದುಕೊಂಡ ಸ್ಕೀಮಿನ ಬಗೆಗಿನ ಹೆಚ್ಚುವರಿ ಮಾಹಿತಿಯನ್ನು ನೀವು ಸಂಗ್ರಹಿಸಬಹುದು. ಇಂದಿನ ನಿವ್ವಳ ಆಸ್ತಿ ಮೌಲ್ಯ (ಎನ್​ಎವಿ)ವನ್ನು ದಿನ ದಿನವೂ ನೋಡುತ್ತ ಇರಬಹುದು. ನೀವು ಹೂಡಿದ ಹಣ ಅಭಿವೃದ್ಧಿಯ ಪಥದಲ್ಲಿದೆಯೋ ಅಥವಾ ಕ್ಷೀಣವಾಗುತ್ತ ಇದೆಯೋ ಎಂಬುದನ್ನು ತಿಳಿದುಕೊಂಡು ಇನ್ನೂ ಹಣವನ್ನು ಗಳಿಸುವ ಅಥವಾ ಹಣವನ್ನು ಹಿಂಪಡೆಯುವ ನಿರ್ಧಾರಗಳನ್ನು ಅತಿಶೀಘ್ರವಾಗಿ ಕೈಗೊಳ್ಳಬಹುದು.

ಮತ್ತೊಂದು ದೊಡ್ಡ ಅನುಕೂಲತೆ ಎಂದರೆ, ಮ್ಯೂಚುವಲ್ ಫಂಡ್​ನಲ್ಲಿ ಹೂಡಿದ ಹಣಕ್ಕೆ ರಿಸ್ಕ್ ಸ್ವಲ್ಪ ಕಮ್ಮಿ. ನಿಮ್ಮ ಹಣ ಮತ್ತು ಇತರರ ಹಣ ಒಟ್ಟಿಗೇ ಹೂಡಲ್ಪಡುವುದರಿಂದ ನಷ್ಟವಾದಾಗ, ಅದು ಎಲ್ಲರಿಗೂ ಹಂಚಲ್ಪಡುತ್ತದೆ. ಅದೇ ನೀವು ಮುಖ್ಯ ಹೂಡಿಕೆದಾರರಾಗಿದ್ದು, ನಿಮ್ಮ ಎಲ್ಲ ಹಣವನ್ನು ಒಂದೇ ಕಂಪನಿಯ ಷೇರುಗಳನ್ನು ಖರೀದಿಸಲು ವಿನಿಯೋಗಿಸಿದಾಗ, ಆ ಕಂಪನಿಯ ಷೇರುಗಳು ಕುಸಿತ ಕಂಡಾಗ ನಿಮಗಾಗುವ ನಷ್ಟ ಅಗಾಧ. ಉದಾಹರಣೆಗೆ ಮ್ಯೂಚುವಲ್ ಫಂಡ್ ಕಂಪನಿಗಳು ನಿಮ್ಮ ಹಣದಲ್ಲಿ ನೂರಾರು ಕಂಪನಿಯ ಷೇರುಗಳನ್ನು ಕೊಂಡಾಗ ಒಂದು ಕಂಪನಿಯ ಷೇರುಗಳು ಕುಸಿತ ಕಂಡರೆ ನಿಮಗಾಗುವ ನಷ್ಟ ಅತಿಕಡಿಮೆ.

Leave a Reply

Your email address will not be published. Required fields are marked *

Back To Top