Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಮೊಬೈಲ್​ಗಾಗಿ ಮಗು ಮಾರಿದ

Thursday, 14.09.2017, 3:00 AM       No Comments

ರ್ಥಿಕ ಸಂಕಷ್ಟ ಎದುರಾದಾಗ ಕೆಲವರು ಕಿಡ್ನಿ ಅಥವಾ ಅಂಗಾಂಗಗಳನ್ನು ಮಾರಾಟ ಮಾಡುವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಮೊಬೈಲ್ ಕೊಳ್ಳುವ ಆಸೆಯಿಂದ 11 ತಿಂಗಳ ತನ್ನ ಮಗುವನ್ನೇ ಮಾರಿದ್ದಾನೆ. ಒಡಿಶಾದ ಭದ್ರಕ್ ಜಿಲ್ಲೆಯ ಬಲರಾಮ್ ಮುಖಿ ಎಂಬಾತ ತನ್ನ 11 ತಿಂಗಳ ಹಸುಗೂಸನ್ನು 23,000 ರೂ.ಗೆ ಮಾರಿದ್ದಾನೆ. ಬಂದ ಹಣದಲ್ಲಿ 2000 ರೂ. ಕೊಟ್ಟು ಮೊಬೈಲ್ ಖರೀದಿಸಿದ್ದಾನೆ. 1,500 ರೂ. ನೀಡಿ ತನ್ನ 7 ವರ್ಷದ ಮಗಳಿಗೆ ಕಾಲ್ಗೆಜ್ಜೆ ತಂದಿದ್ದಾನೆ. ಉಳಿದ ಹಣವನ್ನೆಲ್ಲಾ ಕುಡಿತಕ್ಕೆ ಸುರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಲರಾಮ್ ಮುಖಿ ಹಾಗೂ ಸುಕುತಿ ದಂಪತಿಗೆ 10 ವರ್ಷದ ಇನ್ನೊಬ್ಬ ಮಗನಿದ್ದಾನೆ ಎನ್ನಲಾಗಿದೆ. ನಿವೃತ್ತ ಸರ್ಕಾರಿ ಉದ್ಯೋಗಿ ಸೋಮನಾಥ್ ಸೇಠಿ ದಂಪತಿ 24 ವರ್ಷದ ಮಗನನ್ನು ಕಳೆದುಕೊಂಡಿದ್ದರು. ಈ ಆಘಾತದಿಂದ ಸೇಠಿ ಪತ್ನಿ ಖಿನ್ನತೆಗೆ ಒಳಗಾಗಿದ್ದರು. ಹಾಗಾಗಿ ಮಗು ಸಾಕುವುದಕ್ಕೆ ಆಸಕ್ತಿ ಹೊಂದಿದ್ದರು. ಇವರಿಗೆ ಮುಖಿ ಹಾಗೂ ಆತನ ಭಾವ ಬಲಿಯ ಮಗುವನ್ನು ಮಾರಾಟ ಮಾಡಿದ್ದಾರೆ. ಕಸಗುಡಿಸುವ ಕೆಲಸ ಮಾಡುವ ಬಲರಾಮ್ ಮುಖಿಗೆ ನಿಯಮಿತ ಆದಾಯವಿರಲಿಲ್ಲ.

Leave a Reply

Your email address will not be published. Required fields are marked *

Back To Top