Saturday, 18th November 2017  

Vijayavani

1. ಮುಷ್ಕರ ಬಿಕ್ಕಟ್ಟು ಇತ್ಯರ್ಥಕ್ಕೆ ಸಿಎಂ ಸಭೆ- ವೈದ್ಯಕೀಯ ಸಂಘದ ಜತೆ ಮೀಟಿಂಗ್- ಬಗೆಹರಿಯುತ್ತಾ ಖಾಸಗಿ ವಿಧೇಯಕ ಗೊಂದಲ 2. ಖಾಸಗಿ ವೈದ್ಯರ ಮುಷ್ಕರ ವಿಚಾರ- ಹೈಕೋರ್ಟ್‌ನಲ್ಲಿ ಪಿಐಎಲ್‌ ವಿಚಾರಣೆ- ಖಡಕ್‌ ಸೂಚನೆ ನೀಡುತ್ತಾ ಹೈಕೋರ್ಟ್..? 3. ಐದನೇ ದಿನ, ಬಲಿಯಾದವರು ಹನ್ನೊಂದು ಜನ- ವೈದ್ಯರ ಮುಷ್ಕರಕ್ಕೆ ಅಮಾಯಕರ ಸಾವು- ಪ್ರತಿಷ್ಠೆ ಬಿಡಿ, ಕರ್ತವ್ಯಕ್ಕೆ ಬನ್ನಿ 4. ಕಾವೇರಿ ಬಳಿಕ ತಮಿಳುನಾಡು ಮತ್ತೊಂದು ಕ್ಯಾತೆ- ಮೈಸೂರು ಪಾಕ ತಮ್ಮದೆಂದು ವಾದ- ಸೋಷಿಯಲ್ ಮೀಡಿಯಾದಲ್ಲಿ ಶುರು ಸಿಹಿ ಸಮರ 5. ಪತ್ರಕರ್ತೆ ಮೇಲೆ ಎರಗಿದ ಕಿಡಿಗೇಡಿ- ದೆಹಲಿ ಮೆಟ್ರೋ ಸ್ಟೇಷನ್‌ನಲ್ಲಿ ಲೈಂಗಿಕ ಕಿರುಕುಳ- ಸಿಸಿಟಿವಿ ಆಧರಿಸಿ ಆರೋಪಿ ಸೆರೆ
Breaking News :

ಮೈಸೂರಿನ ರವಿಕಿರಣ್​ಗೆ ಸಂಗೀತ ಕಲಾನಿಧಿ ಪ್ರಶಸ್ತಿ

Monday, 17.07.2017, 3:00 AM       No Comments

ಚೆನ್ನೈ: ಮೈಸೂರು ಮೂಲದ ಚಿತ್ರವೀಣಾ ವೈಣಿಕ ಎನ್. ರವಿಕಿರಣ್ ಅವರು ಈ ವರ್ಷದ ‘ಸಂಗೀತ ಕಲಾನಿಧಿ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸಂಗೀತ ಅಕಾಡೆಮಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದ್ದು, ಡಿಸೆಂಬರ್ 15 2017ರಿಂದ ಜನವರಿ 1, 2017ರವರೆಗೆ ನಡೆಯುವ ವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ನನ್ನನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಧನ್ಯವಾದ. ನಾನು ಯಾವಾಗಲೂ ವಿದ್ಯಾರ್ಥಿಯಾಗಿರಲು ಬಯಸು ತ್ತೇನೆ ಎಂದು ರವಿಕಿರಣ್ ಹೇಳಿದ್ದಾರೆ. ಹೆಸರಾಂತ ವೈಣಿಕರಾದ ಎನ್.ರವಿಕಿರಣ್ 1967ರ ಫೆ. 12ರಂದು ಮೈಸೂರಿನಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಸಂಗೀತಾಭ್ಯಾಸ ಆರಂಭಿಸಿದ ಅವರಿಗೆ ಕುಮಾರ ಗಂಧರ್ವ ಸಮ್ಮಾನ್ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ರವಿಕಿರಣ್ ಸಂಗೀತ ಸಂಯೋಜಕರು, ಸಂಗೀತ ಗುರುಗಳು, ಲೇಖಕರು ಮತ್ತು ಉತ್ತಮ ವಾಗ್ಮಿ ಆಗಿದ್ದಾರೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top