Thursday, 29th June 2017  

Vijayavani

1. ಗಣಿಗಾರಿಕೆ ವಿರುದ್ಧದ ಕ್ರಮಕ್ಕೆ ವರ್ಗಾವಣೆ ಭಾಗ್ಯ- ಒಂದೇ ತಿಂಗಳಿಗೆ ಕುಣಿಗಲ್​​​​​​ ತಹಶೀಲ್ದಾರ್​​​ ಟ್ರಾನ್ಸ್​​ಫರ್​​- ಅಕ್ರಮ ಗಣಿಗಾರಿಕೆ ಸುದ್ದಿ ಭಿತ್ತರಿಸಿದ್ದ ದಿಗ್ವಿಜಯ ನ್ಯೂಸ್​ 2. ಮುಂದಿನ ಸಿಎಂ ಅಭ್ಯರ್ಥಿ ಕುರಿತು ಚರ್ಚೆಯಾಗಿಲ್ಲ- ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಖಚಿತ- ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ ಎಸ್​.ಆರ್​.ಪಾಟೀಲ್​​ ವಿಶ್ವಾಸ 3. ಪತ್ರಕರ್ತ ರವಿ ಬೆಳೆಗೆರೆ ಜೈಲು ಶಿಕ್ಷೆ ವಿಚಾರ- ಸಿಎಂ ಮನವಿ ಮೇರೆಗೆ ಬಂಧಿಸದಂತೆ ಸೂಚನೆ- ಪೊಲೀಸರಿಗೆ ಸೂಚನೆ ನೀಡಿದ ಸ್ಪೀಕರ್​​​​​​​ ಕೋಳಿವಾಡ 4. ಕಲಬುರಗಿಯಲ್ಲಿ ಸರಣಿ ಕಳ್ಳತನ- ಹಲವು ಅಂಗಡಿಗಳಲ್ಲಿ ಲಕ್ಷಾಂತರ ರೂಪಾಯಿ ಕಳುವು- ಸಿಸಿಟಿವಿಯಲ್ಲಿ ಕಳ್ಳರ ದೃಶ್ಯ ಸೆರೆ 5. ಪ್ರಧಾನಿಗೆ ಮುಜುಗರ ತಂದ ಕೇಂದ್ರ ಕೃಷಿ ಸಚಿವ- ಸಾರ್ವಜನಿಕ ಸ್ಥಳದಲ್ಲಿ ಸಚಿವರ ಮೂತ್ರ ವಿಸರ್ಜನೆ- ರಾಧಾ ಮೋಹನ್​ ಸಿಂಗ್​ ನಡೆಗೆ ವ್ಯಾಪಕ ಖಂಡನೆ
Breaking News :

ಮೇ 28ಕ್ಕೆ ಭಾರತ-ಕಿವೀಸ್ ಅಭ್ಯಾಸ ಪಂದ್ಯ

Friday, 21.04.2017, 3:00 AM       No Comments

ದುಬೈ: ಇಂಗ್ಲೆಂಡ್-ವೇಲ್ಸ್ ಆತಿಥ್ಯದಲ್ಲಿ ಜೂನ್ 1ರಿಂದ ನಡೆಯಲಿರುವ ‘ಮಿನಿ ವಿಶ್ವಕಪ್’ ಎಂದೇ ಗುರುತಿಸಲ್ಪಡುವ ಐಸಿಸಿ ಏಕದಿನ ಕ್ರಿಕೆಟ್ ಟೂರ್ನಿ ಚಾಂಪಿಯನ್ಸ್ ಟ್ರೋಫಿಗೆ ಪೂರ್ವ ಸಿದ್ಧತೆಯ ಅಂಗವಾಗಿ ಟೀಮ್ ಇಂಡಿಯಾ 2 ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಭಾರತ ತಂಡ ಮೇ 28ಕ್ಕೆ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಮೇ 30ರಂದು 2ನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.

ಭಾರತದ ಆಯ್ಕೆಗಾರರು ಟೂರ್ನಿಗೆ ಯಾವಾಗ ತಂಡ ಅಂತಿಮಗೊಳಿಸುವರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಐಸಿಸಿ-ಬಿಸಿಸಿಐ ತಿಕ್ಕಾಟದಿಂದಾಗಿ ಭಾರತ ಟೂರ್ನಿಯಿಂದ ಹಿಂದೆ ಸರಿಯಲಿದೆ ಎಂದೂ ಸುದ್ದಿಯಾಗಿತ್ತು. ಆದರೆ ಟೂರ್ನಿಯಿಂದ ಹಿಂದೆ ಸರಿಯುವುದು ಸದ್ಯ ನಮ್ಮ ಅಜೆಂಡಾ ಆಗಿಲ್ಲ ಎಂದು ಬಿಸಿಸಿಐ ಜಂಟಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಸ್ಪಷ್ಟಪಡಿಸಿದ್ದಾರೆ. ಇನ್ನುಳಿದಂತೆ ಆಸ್ಟ್ರೇಲಿಯಾ-ಶ್ರೀಲಂಕಾ (ಮೇ 6), ಬಾಂಗ್ಲಾದೇಶ-ಪಾಕಿಸ್ತಾನ(ಮೇ 27), ಆಸ್ಟ್ರೇಲಿಯಾ-ಪಾಕಿಸ್ತಾನ(ಮೇ 29) ಮತ್ತು ನ್ಯೂಜಿಲೆಂಡ್-ಶ್ರೀಲಂಕಾ(ಮೇ 30) ತಂಡಗಳ ನಡುವೆ ಅಭ್ಯಾಸ ಪಂದ್ಯ ನಡೆಯಲಿವೆ. ಭಾರತದ ಎರಡೂ ಅಭ್ಯಾಸ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್​ನಲ್ಲಿ ನೇರಪ್ರಸಾರವಾಗಲಿದೆ. ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಟೂರ್ನಿಯ ಅಭಿಯಾನ ಆರಂಭಿಸಲಿದೆ.

ಆಸೀಸ್, ಬಾಂಗ್ಲಾ ತಂಡ ಪ್ರಕಟ: ಐಸಿಸಿ ಏಕದಿನ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ತಂಡವನ್ನು ಗುರುವಾರ ಪ್ರಕಟಿಸಲಾಗಿದೆ. ಗಾಯದಿಂದ ಗುಣಮುಖರಾಗಿರುವ ವೇಗಿ ಮಿಚೆಲ್ ಸ್ಟಾರ್ಕ್, ಜೇಮ್್ಸ ಪ್ಯಾಟಿನ್ಸನ್ ಮತ್ತು ಸ್ಪೋಟಕ ಬ್ಯಾಟ್ಸ್​ಮನ್ ಕ್ರಿಸ್ ಲ್ಯಾನ್ 15 ಸದಸ್ಯರ ಆಸೀಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಆಸೀಸ್ ತಂಡ: ಸ್ಟೀವನ್ ಸ್ಮಿತ್(ನಾಯಕ), ವಾರ್ನರ್, ಕಮ್ಮಿನ್ಸ್, ಫಿಂಚ್, ಹೇಸ್ಟಿಂಗ್ಸ್, ಹ್ಯಾಸಲ್​ವುಡ್, ಟ್ರಾವಿಸ್ ಹೆಡ್, ಮೊಯ್ಸೆಸ್ ಹೆನ್ರಿಕ್ಸ್, ಕ್ರಿಸ್ ಲ್ಯಾನ್, ಮ್ಯಾಕ್ಸ್​ವೆಲ್, ಪ್ಯಾಟಿನ್ಸನ್, ಮಿಚೆಲ್ ಸ್ಟಾರ್ಕ್, ಸ್ಟೋಯಿನಿಸ್, ಮ್ಯಾಥ್ಯೂ ವೇಡ್, ಜಂಪಾ.

ಮೊರ್ಟಜ ಬಾಂಗ್ಲಾ ನಾಯಕ: 15 ಸದಸ್ಯರ ಬಾಂಗ್ಲಾದೇಶ ತಂಡವನ್ನು ಮುಶ್ರಫೆ ಮೊರ್ಟಜ ಮುನ್ನಡೆಸಲಿದ್ದಾರೆ. ತಂಡ: ಮೊರ್ಟಜ(ನಾಯಕ), ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಇಮ್ರುಲ್ ಕಯೇಸ್, ಮುಷ್ಪಿಕರ್ ರಹೀಮ್​ವಿ.ಕೀ.), ಶಕೀಬ್, ಶಬ್ಬೀರ್ ರೆಹಮಾನ್, ಮೊಹಮದುಲ್ಲಾ, ಮೊಸದಿಕ್, ಮುಸ್ತಾಫಿಜುರ್, ಟಸ್ಕಿನ್, ಸುಬಾಶಿಸ್ ರಾಯ್, ಸುನ್ಜಮುಲ್ ಇಸ್ಲಾಂ, ನೂರುಲ್, ಮೆಹೆದಿ, ನಾಸಿರ್ ಹುಸೇನ್, ಶಫಿಯುಲ್.

Leave a Reply

Your email address will not be published. Required fields are marked *

three × three =

Back To Top