Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಮೇಯರ್ ಪಟ್ಟಕ್ಕೆ ಜೆಡಿಎಸ್ ಪಟ್ಟು ?

Thursday, 17.11.2016, 5:57 AM       No Comments
  • ಜೆಡಿಎಸ್ ಬೆಂಬಲಿಸೀತೇ ಕಾಂಗ್ರೆಸ್
  • ಮೀಸಲು ಬಲದ ಮೇಲೆ ಬಿಜೆಪಿಗೆ ಉಪಮೇಯರ್ ಪಟ್ಟ

 

ಶಿವಮೊಗ್ಗ: ಶಿವಮೊಗ್ಗ ಮಹಾನಗರಪಾಲಿಕೆ ಮೇಯರ್ ಚುನಾವಣೆಯಲ್ಲಿ ಎರಡು ಬಾರಿ ಕಾಂಗ್ರೆಸ್ಗೆ ಬೆಂಬಲ ನೀಡಿದ್ದ ಜೆಡಿಎಸ್ಗೆ ಮೂರನೇ ಅವಧಿಗೆ ಅಧಿಕಾರ ಹಿಡಿಯುವ ಅವಕಾಶ ಒದಗಿಬಂದಿದೆ. ಮೀಸಲು ಬಲದ ಮೇಲೆ ಬಿಜೆಪಿಗೆ ಅನಾಯಾಸವಾಗಿ ಉಪಮೇಯರ್ ಪಟ್ಟ ಲಭಿಸಲುವ ಸಾಧ್ಯತೆ ಇದೆ. ಮೇಯರ್ ಮೀಸಲು ಅಭ್ಯರ್ಥಿ ಪಕ್ಷದಲ್ಲಿ ಇಲ್ಲದ ಕಾರಣ ಬಿಜೆಪಿಗೆ ಆಟ ಆಡುವ ಅವಕಾಶವಿಲ್ಲ.

ಮೂರನೇ ಅವಧಿಯ ಮೇಯರ್ ಮತ್ತು ಉಪಮೇಯರ್ ಮೀಸಲು ಪ್ರಕಟ ಮಾಡಲಾಗಿದ್ದು, ಶಿವಮೊಗ್ಗ ಮಹಾನಗರಪಾಲಿಕೆ ಮೇಯರ್ ಹುದ್ದೆ ಪರಿಶಿಷ್ಟ ಜಾತಿಗೆ, ಉಪಮೇಯರ್ ಹುದ್ದೆ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದೆ.

ಮೊದಲ ಒಂದು ವರ್ಷದ ಅವಧಿಯಲ್ಲಿ ಕಾಂಗ್ರೆಸ್ಗೆ ಜೆಡಿಎಸ್ ಬೆಂಬಲ ನೀಡಿ ಉಪಮೇಯರ್ ಹುದ್ದೆಗೆ ತೃಪ್ತಿಪಟ್ಟುಕೊಂಡಿತ್ತು. ಎರಡನೇ ಅವಧಿಯಲ್ಲೂ ಕಾಂಗ್ರೆಸ್ ಪಕ್ಷವೇ ಮೇಯರ್ ಪಟ್ಟ ಉಳಿಸಿಕೊಂಡಿತ್ತು. ಉಪಮೇಯರ್ ಹುದ್ದೆಯ ಮೀಸಲು ಅಭ್ಯರ್ಥಿ ಜೆಡಿಎಸ್ನಲ್ಲಿ ಇಲ್ಲದ ಕಾರಣ ಈ ಹುದ್ದೆ ಕೂಡಾ ಕಾಂಗ್ರೆಸ್ ಪಾಲಾಗಿತ್ತು.

ಮೂರನೇ ವರ್ಷದ ಅವಧಿಯ ಮೀಸಲು ಪ್ರಕಟವಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ನಲ್ಲಿ ಅರ್ಹರಿದ್ದಾರೆ. ಆದರೆ ಉಪಮೇಯರ್ ಮೀಸಲು ಇರುವ ಅಭ್ಯರ್ಥಿ ಈ ಎರಡೂ ಪಕ್ಷಗಳಲ್ಲಿಲ್ಲ. ಹೀಗಾಗಿ ಈ ಬಿಜೆಪಿಗೆ ಅನಾಯಾಸವಾಗಿ ಉಪಮೇಯರ್ ಪಟ್ಟ ಲಭಿಸಲಿದೆ.

ಮೊದಲ ಹಾಗು ಎರಡನೇ ಅವಧಿಯಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡಿದ್ದ ಜೆಡಿಎಸ್ ಈ ಬಾರಿ ಮೇಯರ್ ಪಟ್ಟಕ್ಕೆ ಪಟ್ಟು ಹಿಡಿದು ಕಾಂಗ್ರೆಸ್ ಬೆಂಬಲ ಕೋರುವ ನಿರೀಕ್ಷೆ ಇದೆ.

ಕಾಂಗ್ರೆಸ್ನ ಕೆ.ಲಕ್ಷ್ಮಣ್ ಹಾಗೂ ಜೆಡಿಎಸ್ನ ಏಳುಮಲೈ (ಕೇಬಲ್ ಬಾಬು) ಮೇಯರ್ ಹುದ್ದೆಗೆ ಸ್ಪರ್ಧೆ ಮಾಡುವ ಅರ್ಹತೆ ಹೊಂದಿದ್ದಾರೆ.

ಕಳೆದ ಎರಡು ಬಾರಿ ಪಾಲಿಕೆಯಲ್ಲಿ ಅಧಿಪತ್ಯ ಸ್ಥಾಪಿಸಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸಿತ್ತು. ಅದರಲ್ಲೂ ಹಿಂದಿನ ಚುನಾವಣೆಯಲ್ಲಿ ಕಡೇ ಕ್ಷಣದವರೆಗೂ ಬಿಜೆಪಿ ಮುಖಂಡರು ಹರಸಾಹಸ ಪಟ್ಟಿದ್ದರು. ಈ ಬಾರಿ ಮೀಸಲು ಅಭ್ಯರ್ಥಿ ಇಲ್ಲದ ಕಾರಣ ಮೇಯರ್ ಹುದ್ದೆಗೆ ಆಟ ಆಡುವ ಅವಕಾಶವಿಲ್ಲ.

16-smg-palike

ಬಿಜೆಪಿಗೆ ಒಲಿದ ಅದೃಷ್ಟ:

ಬಿಜೆಪಿಗೆ ಈ ಬಾರಿಯ ಮೀಸಲಾತಿ ಬಯಸದೇ ಬಂದ ಭಾಗ್ಯ .ಉಪಮೇಯರ್ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿದ್ದು 35 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿಯ ರೂಪಾ ಲಕ್ಷ್ಮಣ್ ಒಬ್ಬರೇ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆ.

ಹೀಗಾಗಿ ಉಪಮೇಯರ್ ಸ್ಥಾನ ಅನಾಯಾಸವಾಗಿ ಬಿಜೆಪಿ ಪಾಲಾಗಲಿದೆ. ಹಾಲಿ ಉಪಮೇಯರ್ ಮಂಗಳಾ ಅಣ್ಣಪ್ಪಗೆ ಈ ಹಿಂದೆ ಎರಡು ಬಾರಿ ಮೀಸಲಾತಿ ಅದೃಷ್ಟ ಖುಲಾಯಿಸಿದಂತೆ 13ನೇ ವಾರ್ಡ್ ಪ್ರತಿನಿಧಿಸುತ್ತಿರುವ ರೂಪಾ ಲಕ್ಷ್ಮಣ್ ಸುಲಭವಾಗಿ ಉಪಮೇಯರ್ ಖುರ್ಚಿ ಏರಲಿದ್ದಾರೆ.

ಕಾಂಗ್ರೆಸ್ ಹಾಗೂ ಬಿಜೆಪಿಯೊಂದಿಗೆ ಇದುವರೆಗೂ ನೇರವಾಗಿ ಗುರುತಿಸಿಕೊಳ್ಳದ ನಾಲ್ವರು ಸದಸ್ಯರು ಈ ಬಾರಿ ನಿರ್ಣಾಯಕರಾಗುವುದಿಲ್ಲ. ಕೆಜೆಪಿಯಿಂದ ಆ್ಕಯೆಾಗಿರುವ ಐಡಿಯಲ್ ಗೋಪಿ, ಮಂಜುನಾಥ್, ಗೌರಿ ಶ್ರೀನಾಥ್ ಶಾಹಿಸ್ತಾ ಬಾನು, ಪಕ್ಷೇತರ ಅಭ್ಯರ್ಥಿ ಅಬ್ದುಲ್ ರೆಹಮಾನ್ ಖಾನ್ ಹಾಗೂ ಎಸ್ಡಿಪಿಐನಿಂದ ಗೆದ್ದಿರುವ ತರನ್ನುಂ ಬಾನು ಈ ಬಾರಿಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ‘ಎಸ್’ ಎನ್ನುವುದು ಬಹುತೇಕ ಖಚಿತ.

ಕೇಬಲ್ ಬಾಬುಗೆ ಲಕ್?

ಮೂಲಗಳ ಪ್ರಕಾರ ಕಳೆದ ಮೂರು ಅವಧಿಯಲ್ಲಿ ಮೈತ್ರಿ ಪಕ್ಷವಾದ ಕಾಂಗ್ರೆಸ್ಗೆ ಮೇಯರ್ ಸ್ಥಾನ ಅಲಂಕರಿಸಲು ಸಹಕರಿಸಿದ ಜೆಡಿಎಸ್ ಈ ಬಾರಿ ಮೇಯರ್ ಸ್ಥಾನಕ್ಕೆ ಪಟ್ಟು ಹಿಡಿದಿದೆ. 27ನೇ ವಾರ್ಡ್ನ ಸದಸ್ಯ ಏಳುಮಲೈ(ಕೇಬಲ್ಬಾಬು) ಮೇಯರ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

18ನೇ ವಾರ್ಡ್ನಿಂದ ಕಾಂಗ್ರೆಸ್ ಚಿಹ್ನೆಯಡಿ ಆಯ್ಕೆಯಾಗಿರುವ ಕೆ.ಲಕ್ಷ್ಮಣ್ ಕೂಡ ಮೀಸಲಾತಿ ಪ್ರಕಾರ ಮೇಯರ್ ಆಗುವ ಅರ್ಹತೆ ಹೊಂದಿದ್ದರೂ ಕಳೆದ ಮೇಯರ್ ಚುನಾವಣೆ ಸಂದರ್ಭದಲ್ಲಿಯೇ ಒಪ್ಪಂದವೊಂದು ಆಗಿದೆ ಎನ್ನಲಾಗುತ್ತಿದೆ. ಅದರ ಪ್ರಕಾರ ಮೀಸಲಾತಿ ಅನುಕೂಲವಾದರೆ ಮುಂದೆ ಮೇಯರ್ ಸ್ಥಾನ ನೀಡಲು ಕಾಂಗ್ರೆಸ್ ಮುಖಂಡರು ಜೆಡಿಎಸ್ ಜಿಲ್ಲಾಧ್ಯಕ್ಷರಿಗೆ ಮಾತು ಕೊಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.

ಪಾಲಿಕೆಯ ಮೀಸಲಾತಿ-ಚುನಾವಣಾ ಇತಿಹಾಸ:

ಚುನಾವಣೆ ಫಲಿತಾಂಶ ಹೊರಬಿದ್ದಾಗ 35 ಸದಸ್ಯರ ಅಂದಿನ ನಗರಸಭೆಯಲ್ಲಿ ಕಾಂಗ್ರೆಸ್ನಿಂದ 12, ಬಿಜೆಪಿ 8, ಕೆಜೆಪಿ 7, ಜೆಡಿಎಸ್ 5, ಎಸ್ಡಿಪಿಐ 1 ಹಾಗೂ ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದರು. 2013ರ ಸೆಪ್ಟೆಂಬರ್ 12ರಂದು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದಾಗ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ರಚನೆಯಾಯಿತು.

ಆ ವೇಳೆ ಮೈತ್ರಿಕೂಟಕ್ಕೆ ಕೆಜೆಪಿಯ ಇಬ್ಬರು, ಎಸ್ಡಿಪಿಐನ ಓರ್ವ ಸದಸ್ಯೆ ಹಾಗೂ ಇಬ್ಬರು ಪಕ್ಷೇತರರ ಬೆಂಬಲ ದೊರೆಯಿತು. ಪರಿಣಾಮವಾಗಿ ಮೈತ್ರಿಕೂಟಕ್ಕೆ 23 ಹಾಗೂ ಬಿಜೆಪಿಗೆ 19(ಎಂಎಲ್ಸಿಗಳೂ ಸೇರಿ) ಸದಸ್ಯರ ಬೆಂಬಲ ಸಿಕ್ಕಂತಾಯ್ತು. ಕಾಂಗ್ರೆಸ್ನ ಖುರ್ಷಿದಾಬಾನು ಮೇಯರ್ ಆಗಿಯೂ, ಜೆಡಿಎಸ್ನ ರೇಖಾ ಚಂದ್ರಶೇಖರ್ ಉಪಾಧ್ಯಕ್ಷರಾಗಿಯೂ ಆಯ್ಕೆಯಾದರು. ಮುಂದೆ ಇವರೇ ಮೇಯರ್, ಉಪಮೇಯರ್ ಸ್ಥಾನವನ್ನು ಅಲಂಕರಿಸಿದರು.

ಉಪಮೇಯರ್ ಸ್ಥಾನಕ್ಕೆ ಎರಡನೇ ಅವಧಿಗೆ 2015ರ ಜನವರಿ 29ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಕೆಜೆಪಿಯ ನಾಲ್ವರು, ಎಸ್ಡಿಪಿಐನ ಓರ್ವ ಸದಸ್ಯೆ ಹಾಗೂ ಓರ್ವ ಪಕ್ಷೇತರ ಸದಸ್ಯರ ಬೆಂಬಲ ಸಿಕ್ಕಿತು. ಹೀಗಾಗಿ ಮೈತ್ರಿಕೂಟಕ್ಕೆ 24 ಹಾಗೂ ಬಿಜೆಪಿಗೆ 12 ಮತಗಳು ಲಭಿಸಿದ್ದವು.

2016ರ ಫೆಬ್ರವರಿ 5ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಮರಿಯಪ್ಪ ಮೇಯರ್ ಆಗಿಯೂ ಮಂಗಳಾ ಅಣ್ಣಪ್ಪ ಉಪಮೇಯರ್ ಆಗಿ ಆಯ್ಕೆಯಾಗಿದ್ದರು.

Leave a Reply

Your email address will not be published. Required fields are marked *

Back To Top