Tuesday, 22nd August 2017  

Vijayavani

1. MLC ವೀಣಾ ಅಚ್ಚಯ್ಯ ಜತೆ ಅನುಚಿತ ವರ್ತನೆ- ಕಾಂಗ್ರೆಸ್ ಸದಸ್ಯತ್ವಕ್ಕೆ ಟಿ.ಪಿ.ರಮೇಶ್ ರಾಜೀನಾಮೆ- ಕ್ರಮಕ್ಕೂ ಮೊದಲೇ ಎಚ್ಚೆತ್ತ ಕೈ ಮುಖಂಡ 2. ಬಾಲಕೃಷ್ಣಗೆ ಟಿಕೆಟ್​ ನೀಡಿದ್ರೆ, ನಾವ್​ ವೋಟ್ ಹಾಕಲ್ಲ- ಅವರಿಗೆ ಸೀಟ್ ಸಿಕ್ರೆ ಖಂಡಿತಾ ಗೆಲ್ಲಲ್ಲ- ನೆಲಮಂಗಲದ ಕಾಂಗ್ರೆಸ್ ಸಭೆಯಲ್ಲಿ ಗದ್ದಲ 3. ಪಿಎಸ್ಐನಿಂದಲೇ ಪತ್ನಿ ಮೇಲೆ ಹಲ್ಲೆ- ಬ್ಲೇಡ್​ನಿಂದ ಕೈ ಕುಯ್ದ ಸಿರುಗುಪ್ಪ ಪಿಎಸ್​ಐ- ಕೇಸ್​ ವಾಪಾಸ್​ ಪಡೆಯುವಂತೆ ಕಿರುಕುಳ 4. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ- ನಾಳೆ ಬೆಂಗಳೂರಿನಲ್ಲಿ ಮಹತ್ವದ ಸಭೆ- 500 ಕ್ಕೂ ಹೆಚ್ಚು ಮಠಾಧೀಶರು ಭಾಗಿ ಸಾಧ್ಯತೆ 5. ತಲಾಖ್​​​ ನಿಷೇಧ ತೀರ್ಪಿಗೆ ಪ್ರಧಾನಿ ಸ್ವಾಗತ- ಮಹಿಳಾ ಸಬಲೀಕರಣಕ್ಕೆ ಇದು ಪೂರಕ- ಟ್ವಿಟರ್​​​​​ನಲ್ಲಿ ಮೋದಿ ಪ್ರತಿಕ್ರಿಯೆ
Breaking News :

ಮೆಲ್ಬೋರ್ನ್‌ನಲ್ಲಿ 3 ದಿನ ಮುಂಚೆ ರಾಷ್ಟ್ರಧ್ವಜ ಹಾರಿಸಿದ ಐಶ್ವರ್ಯ

Saturday, 12.08.2017, 2:22 PM       No Comments

ಮೆಲ್ಬೋರ್ನ್‌: ಇಲ್ಲಿನ ಕಡಲನಗರಿಯಲ್ಲಿ ನಡೆಯುತ್ತಿರುವ ಭಾರತೀಯ ರಾಷ್ಟ್ರೀಯ ಸಿನಿಮೋತ್ಸವದಲ್ಲಿ ಬಾಲಿವುಡ್‌ ನಟಿ, ಕನ್ನಡತಿ ಐಶ್ವರ್ಯ ರೈ ಬಚ್ಚನ್‌ ಅವರು ರಾಷ್ಟ್ರ ಧ್ವಜವನ್ನು ಹಾರಿಸಿದ ಮೊದಲ ಮಹಿಳಾ ನಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಭಾರತ ಮತ್ತು ಉಪಖಂಡದ ವಾರ್ಷಿಕ ಸಿನಿಮೋತ್ಸವದಲ್ಲಿ ಪಾಲ್ಗೊಂಡಿದ್ದ ಐಶ್ವರ್ಯಾ ಮೆಲ್ಬೋರ್ನ್‌ನ ಫೆಡ್‌ ಸ್ಕ್ವೇರ್‌ನಲ್ಲಿ ಭಾರತೀಯ ರಾಷ್ಟ್ರ ಧ್ವಜಾರೋಹಣ ಮಾಡಿದ್ದಾರೆ.
ಐಐಎಫ್‌ಎಂ Indian Film Festival of Melbourne (IFFM) ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಈ ಕುರಿತ ಫೋಟೊಗಳನ್ನು ಹಾಕಿ ಐಶ್ವರ್ಯಾ ರೈ ಬಚ್ಚನ್‌, 70ನೇ ವರ್ಷದ ಭಾರತ ಸ್ವಾತಂತ್ರ್ಯ ದಿನದ ಅಂಗವಾಗಿ ರಾಷ್ಟ್ರ ಧ್ವಜವನ್ನು ಹಾರಿಸಿದ್ದಾರೆ ಎನ್ನಲಾಗಿದೆ.
ತನ್ನ ಮುದ್ದಿನ ಮಗಳು ಆರಾಧ್ಯಾಳ ಜತೆಯಲ್ಲಿ ಪಾಲ್ಗೊಂಡಿರುವ ಐಶ್ವರ್ಯಾ ಬಿಳಿ ಮತ್ತು ತಿಳಿ ನೀಲಿ ಬಣ್ಣದ ಉದ್ದದ ಅನಾರ್ಕಲಿ ಡ್ರೆಸ್‌ ಧರಿಸಿ ಮಿಂಚುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಐಶ್ವರ್ಯಾ, ಇಂಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಹೆಮ್ಮೆ ಎನಿಸುತ್ತಿದೆ. ಇದಕ್ಕಾಗಿ ಅವಕಾಶ ಮಾಡಿಕೊಟ್ಟದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಧನ್ಯವಾದಗಳು ಮೆಲ್ಬೋರ್ನ್‌! ನಮ್ಮ 70ನೇ ವರ್ಷದ ಸ್ವಾತಂತ್ರ್ಯೋತ್ಸವದ ಆಚರಣೆ ಸಂದರ್ಭದಲ್ಲಿ ನೀಡಿದ ಇಂತಹ ಅವಕಾಶ ನನಗೆ ಮತ್ತು ಆರಾಧ್ಯಳಿಗೆ ಮರೆಯಲು ಸಾಧ್ಯವೇ ಇಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *

Back To Top