Monday, 20th August 2018  

Vijayavani

ಕೊಡಗಿನ ಸಂತ್ರಸ್ತರಿಗೆ ಗಾಯದ ಮೇಲೆ ಬರೆ - ಫೈನಾನ್ಸ್​ ಕಂಪನಿಗಳಿಂದ ಕಿರುಕುಳ - ಕೊಟ್ಟ ಸಾಲ ವಾಪಸ್​ ಕೊಡುವಂತೆ ಪಟ್ಟು        ಮಣಿಪಾಲ್ ಆಸ್ಪತ್ರೆ ವೈದ್ಯನ ಹುಚ್ಚಾಟ - ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಕಾರು ಚಾಲನೆ - ಪಾದಾಚಾರಿ ಬಲಿ ಪಡೆದ ಡಾಕ್ಟರ್        ಹೋಪ್ ಫಾರಂ ಬಳಿ ಕುಸಿದ ಲೈಟ್ ಕಂಬ - ಸ್ಥಳದಲ್ಲೇ ವಿದ್ಯಾರ್ಥಿನಿ ದುರ್ಮರಣ - ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ        ವೈಮಾನಿಕ ಸಮೀಕ್ಷೆಯಲ್ಲಿ ಸಿಎಂ ಪೇಪರ್ ರೀಡಿಂಗ್ - ಸಂತ್ರಸ್ತರಿಗೆ ಬಿಎಸ್ಕೆಟ್ ಎಸೆದ ರೇವಣ್ಣ - ಸಾರ್ವಜನಿಕರಿಂದ ಆಕ್ರೋಶ        ಮಹಾರಾಷ್ಟ್ರದಲ್ಲಿ ಮಹಾ ಮಳೆಯ ಅಬ್ಬರ - ಚಿಕ್ಕೋಡಿಯಲ್ಲಿ 6 ಸೇತುವೆಗಳು ಮತ್ತೆ ಮುಳುಗಡೆ - ಜನರಿಗೆ ಸಂಕಷ್ಟ        ಮರಿಗೆ ತೊಂದರೆ ನೀಡ್ತಿದ್ದಾರೆಂದು ರೊಚ್ಚಿಗೆದ್ದ ಆನೆ - ಫೋಟೋ ತೆಗೆದ ಪ್ರವಾಸಿರ ಮೇಲೆ ಅಟ್ಯಾಕ್       
Breaking News

ಮೆಟಲ್ ಬಳೆಗಳ ಹೊಸ ಲುಕ್​

Tuesday, 13.02.2018, 3:02 AM       No Comments

| ಪಿ. ಲಾವಣ್ಯ ಚನ್ನಗಿರಿ

ಇಂದಿನ ಫ್ಯಾಷನ್ ಲೋಕದಲ್ಲಿ ಹುಡಗಿಯರು ಬಳೆ ತೊಡುವುದಿಲ್ಲ ಎಂದು ಹೇಳುತ್ತಾರೆ. ಆದರೆ, ಅವರ ಊಹೆ ತಪ್ಪು. ಇತ್ತೀಚಿನ ದಿನಗಳಲ್ಲಿ ಮೆಟಲ್ ಬಳೆಗಳನ್ನು ಹೆಚ್ಚಾಗಿ ಬಳಸುತ್ತಿರುವುದನ್ನು ನೋಡಬಹುದು. ಯಾವುದೇ ಡ್ರೆಸ್​ಕೋಡ್​ಗೆ ಹೊಂದಿಕೊಳ್ಳುವಂತೆ ಬಣ್ಣ-ಬಣ್ಣದ ಮೆಟಲ್ ಬಳೆಗಳನ್ನು ಮಾರುಕಟ್ಟೆಯಲ್ಲಿ ಕಾಣಬಹುದು. ಫ್ಯಾಷನ್​ನಲ್ಲಿ ಮೇಕಪ್ ಎಷ್ಟು ಮುಖ್ಯವೋ ಅದೇ ರೀತಿ ಬಳೆಗಳ ಆಯ್ಕೆಯೂ ಪ್ರಾಮುಖ್ಯ ಪಡೆದುಕೊಳ್ಳುತ್ತಿದೆ. ಮದುವೆ, ಸಭೆ- ಸಮಾರಂಭ ಮುಂತಾದ ಅನೇಕ ಕಾರ್ಯಕ್ರಮಗಳಿಗೆ ಮ್ಯಾಚಿಂಗ್ ಬಳೆಗಳನ್ನೇ ಮಹಿಳೆಯರು ಆಯ್ಕೆ ಮಾಡಿಕೊಳ್ಳುತ್ತಾರೆ. ಟೆರಾಕೋಟ ಬಳೆಗಳಿಗೆ ಡಿಮ್ಯಾಂಡ್ ಹೆಚ್ಚುತ್ತಿದ್ದು, ಸಿಂಗಲ್ ಆಗಿ ಧರಿಸಿದರೂ ಚೆನ್ನಾಗಿ ಕಾಣುತ್ತದೆ ಅಥವಾ ಬೇರೆ ಬಳೆಗಳೊಂದಿಗೆ ಧರಿಸಿದರೂ ಚೆನ್ನಾಗಿ ಕಾಣುತ್ತದೆ. ಮಣಿಗಳ ಬಳೆ, ಪ್ಲಾಸ್ಟಿಕ್ ಬಳೆ, ಗಾಜಿನ ಬಳೆ, ಸ್ಟೋನ್ ಬಳೆ ಮುಂತಾದವುಗಳ ಜತೆಗೆ ಇನ್ನೂ ಅನೇಕ ವಿಭಿನ್ನ ವಿನ್ಯಾಸದ ಬಳೆಗಳಿಗೆ ಬೇಡಿಕೆ ಹೆಚ್ಚಾಗುತಿರುವುದನ್ನು ಗಮನಿಸಬಹುದಾಗಿದೆ. ಬಣ್ಣಬಣ್ಣದ ಟೆರಾಕೋಟ ಬಳೆಗಳಷ್ಟೆ ಮಣ್ಣಿನ ಬಣ್ಣದ ಪ್ಲೇನ್ ಬಳೆ ಧರಿಸಿದರೂ ಕ್ಲಾಸಿಕ್ ಆಗಿರುತ್ತದೆ.

Leave a Reply

Your email address will not be published. Required fields are marked *

Back To Top