Monday, 19th February 2018  

Vijayavani

ಮೈಸೂರಲ್ಲಿ ಮೋದಿ ಮೇನಿಯಾ - ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ -ಮಹಾಪುರುಷರ, ವಸ್ತುಗಳ ಸ್ಮರಿಸಿದ ನಮೋ.        ಬಡವರ ಅವಶ್ಯಕತೆ ಪೂರೈಕೆಗೆ ರೈಲ್ವೆ ಅವಶ್ಯಕ - ಜೋಡಿ ಮಾರ್ಗ ಉದ್ಘಾಟಿಸಿ ನಮೋ ಮಾತು - ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ.        ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ - ಸಿಎಂ ವಿರುದ್ಧ ಪ್ರತಾಪಸಿಂಹ ವಾಕ್ಪ್ರಹಾರ - ಮೋದಿಗೆ ಸ್ಮರಣಿಕೆ ನೀಡಿದ ಮುಖಂಡರು.        ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆ ಕೇಸ್​ - ಆರೋಪಿಗಳಿಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್​​ - ಶಿವಾಜಿನಗರದ ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್.        ಸರ್ವಸಂಘ ಪರಿತ್ಯಾಗಿಗೆ ಮಹಾಮಜ್ಜನ - ಶ್ರವಣಬೆಳಗೊಳದಲ್ಲಿ ಭಕ್ತ ಸಾಗರ - ಆಸ್ಪತ್ರೆ, ಬೆಟ್ಟದ ಮೆಟ್ಟಿಲು ಲೋಕಾರ್ಪಣೆ.       
Breaking News

ಮೂಲಂಗಿ ವಡೆ

Tuesday, 21.02.2017, 12:06 PM       No Comments

ಮೂಲಂಗಿ ಸಾರು ಗೊತ್ತು, ಅಂಬೊಡೆ ಗೊತ್ತಾ? ಅದನ್ನು ನಾವು ಪರಿಚಯಿಸ್ತೀವಿ. ಅದರ ಜೊತೆಗೆ ಇನ್ನೂ ಕೆಲವು ಬಗೆಯ ವಿಶಿಷ್ಟ ಅಡುಗೆಗಳ ಪರಿಚಯವನ್ನು ಇಲ್ಲಿ ನೀಡ್ತಿದ್ದೀವಿ. ನೀವೂ ಟ್ರೖೆ ಮಾಡಿ ನೋಡಿ.

  • ಟಿ.ರಾಧಾ, ಚಿತ್ರದುರ್ಗ

ಸಾಮಗ್ರಿ: ಮೈದಾಹಿಟ್ಟು – 50 ಗ್ರಾಂ, ಸಕ್ಕರೆ -100 ಗ್ರಾಂ, ಏಲಕ್ಕಿ – 2, ಒಣಕೊಬ್ಬರಿ ತುರಿ- 5ಚಮಚ, ಗಸಗಸೆ -2ಚಮಚ. ಕರಿಯಲು ಎಣ್ಣೆ.

ವಿಧಾನ- ಮೊದಲು ಒಂದು ಪಾತ್ರೆಯಲ್ಲಿ ಸಕ್ಕರೆ ಮುಳುಗವಷ್ಟು ನೀರನ್ನು ಹಾಕಿ ಕುದಿಯಲು ಬಿಡಿ. ಒಂದು ಎಳೆ ಪಾಕ ಬರುವಷ್ಟು ಕುದಿಸಿ. ಪಾಕ ಆರಿದ ನಂತರ ಏಲಕ್ಕಿ ಪುಡಿ ಹಾಕಿ. ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿ. ಮೈದಾಹಿಟ್ಟನ್ನು ದೋಸೆಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಸಣ್ಣ ಕಣ್ಣಿನ ಜಾಲರಿಯ್ನು ತೆಗೆದುಕೊಂಡು ಬಾಣಲೆಯ ಮೇಲೆ ಹಿಡಿದುಕೊಂಡು ಮೈದಾಹಿಟ್ಟನ್ನು ಹಾಕಿಕೊಳ್ಳುತ್ತ ಕೈ ಆಡಿಸುತ್ತಿರಿ. ಗುಳಿಗೆ ಆಕಾರ ಬರುತ್ತದಲ್ಲ ಹಾಗೆ. ಸ್ವಲ್ಪ ಕೆಂಪಗೆ ಕರಿದು ಬೇಸನ್​ಗೆ ಹಾಕಿ. ಇದಕ್ಕೆ ಸಕ್ಕರೆ ಪಾಕ, ಒಣಕೊಬ್ಬರಿ ತುರಿ, ಗಸಗಸೆ ಹಾಕಿಕೊಂಡು ಚೆನ್ನಾಗಿ ಕಲಸಿ ತಿನ್ನಿ. ರುಚಿಕಟ್ಟಾಗಿರುತ್ತದೆ.

ಮೂಲಂಗಿ ಅಂಬೊಡೆ

ಸಾಮಗ್ರಿ: ಕಡಲೇಬೇಳೆ – 200 ಗ್ರಾಂ, ಉಪ್ಪು ಉರಚಿಗೆ. ಸೋಡ -ಚಿಟಿಕೆ, ಕೊತ್ತಂಬರಿ ಸೊಪ್ಪು ಸ್ವಲ್ಪ, ಕರಿಬೇವು-ಸ್ವಲ್ಪ, ಸಬ್ಬಸಿಗೆ ಸೊಪ್ಪು -ಸ್ವಲ್ಪ, ಮೂಲಂಗಿ ತುರಿ – ಅರ್ಧ ಬಟ್ಟಲು, ಅಕ್ಕಿಹಿಟ್ಟು – ಸ್ವಲ್ಪ, ಕರಿಯಲು ಎಣ್ಣೆ, ಜೀರಿಗೆ -ಸ್ವಲ್ಪ, ಅಜವಾನ – ಕಾಲು ಚಮಚ, ಹಸಿಮೆಣಸಿನಕಾಯಿ – 4 ಹೆಚ್ಚಿದ್ದು, ಈರುಳ್ಳಿ -2.

ವಿಧಾನ: ಮೇಲಿನ ಎಲ್ಲಪದಾರ್ಥಗಳನ್ನು ಒಂದು ಬಟ್ಟಲಿನಲ್ಲಿ ಕಲಸಿಕೊಂಡು (ನೀರನ್ನು ಸೇರಿಸಬಾರದು). ಮೂಲಂಗಿ ತುರಿಯಲ್ಲಿ ನೀರು ಇರುತ್ತದೆ. ಅದಕ್ಕೆ. ಹಾಗೇ ಕಲಿಸಿಕೊಳ್ಳಿ. ಎಣ್ಣೆಯ್ನು ಕಾಯಲು ಇಟುಟ, ಈಮಿಶ್ರಣವನ್ನು ಅಂಬೋಡೆ ಆಕಾರದಲ್ಲಿ ತಟ್ಟಿ ಎಣ್ಮೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ. ಚಟ್ನಿ ಜೊತೆ ಸವಿಯಿರಿ.

ಚಟ್ನಿ: ಹಸಿಮೆಣಸಿನಕಾಯಿ – 4, ಹುರಿದ ಜೀರಿಗೆ -1 ಚಮಚ, ರುಚಿಗೆ ಉಪ್ಪು, ಸಕ್ಕರೆ – 1ಚಮಚ, ಕೊತ್ತಂಬರಿಸೊಪ್ಪು ಸ್ವಲ್ಪ, ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈ ಚಟ್ನಿಯನ್ನು ಮೂಲಂಗಿ ಅಂಬೊಡೆ ಜೊತೆ ಸವಿದರೆ ರುಚಿ ಹೆಚ್ಚು.

ಮೆಂತ್ಯಬಾತ್

ಸಾಮಗ್ರಿ- ಅಕ್ಕಿ – ಅರ್ಧ ಕೆಜಿ, ಮೆಂತ್ಯಸೊಪ್ಪು – 2ಕಟ್ಟು, ಕಡಲೇಬೇಳೆ – 2ಚಮಚ, ಉದ್ದಿನಬೇಳೆ – 2ಚಮಚ, ಎಣ್ಣೆ – 6 ಚಮಚ, ಉಪ್ಪು ರುಚಿಗೆ. ಹಸಿಕೊಬ್ಬರಿ ತುರಿ – 3ಚಮಚ. ಹಸಿಮೆಣಸಿನಕಾಯಿ -8, ಟೊಮ್ಯಾಟೋ -4, ಈರುಳ್ಳಿ – 3, ಒಗ್ಗರಣೆಗೆ ಸಾಸಿವೆ, ಕಡಲೇಬೇಳೆ, ಉದ್ದಿನಬೇಳೆ ಸೇರಿ 2ಚಮಚ. ಕರಿಬೇವು.

ವಿಧಾನ- ಮೊದಲು ಅಕ್ಕಿಯನ್ನು ಅರ್ಧಗಂಟೆ ನೆನೆಸಿ. ಮಿಕ್ಸಿಯಲ್ಲಿ ಕೊಬ್ಬರಿ ತುರಿ, ಹಸಿಮೆಣಸಿನಕಾಯಿ, ಉದ್ದಿನಬೇಳೆ, ಕಡಲೇಬೇಳೆ ಇವೆಲ್ಲವನ್ನೂ ಹಾಕಿ ನುಣ್ಣಗೆ ರುಬ್ಬಿ. ಕುಕ್ಕರ್​ನಲ್ಲಿ ಎಣ್ಣೆ ಕಾಯಲು ಇಟ್ಟು ಒಗ್ಗರಣೆಗೆ ಎಲ್ಲ ಸಾಮಗ್ರಿಯನ್ನೂ ಹಾಕಿ. ನಂತರ ಹೆಚ್ಚಿದ 5 ಹಸಿಮೆಣಸಿನಕಾಯಿ, ಹೆಚ್ಚಿದ ಈರುಳ್ಳಿ, ಟೊಮ್ಯಾಟೋ, ಮೆಂತ್ಯಸೊಪ್ಪನ್ನು ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಮೂರೂವರೆ ಪಟ್ಟು ನೀರು ಹಾಕಿ ಉಪ್ಪು ಹಾಕಿ ಕುಕ್ಕರ್​ನ ಮುಚ್ಚಳ ಹಾಕಿ 2 ವಿಜಲ್ ಕೂಗಿಸಿ ತೆಗೆಯಿರಿ. ಇದು ಮೊಸರು ಜೊತೆ ಚೆನ್ನಾಗಿರುತ್ತದೆ.

ವಿ.ಸೂ.: ಮನೆರುಚಿ ಅಂಕಣಕ್ಕೆ ಹೊಸ ಬಗೆಯ ವೈವಿಧ್ಯಮಯ ಅಡುಗೆ ವಿಧಾನಗಳನ್ನು ನಮಗೆ ಬರೆದು ಕಳುಹಿಸಿ. ಅಡುಗೆಯ ವಿವರದ ಜತೆಗೆ ಅಡುಗೆ ಮಾಡುತ್ತಿರುವ ನಿಮ್ಮ ಭಾವಚಿತ್ರವಿದ್ದರೆ ಚೆನ್ನ. ನಿಮ್ಮ ದೂರವಾಣಿ ಸಂಖ್ಯೆಯೊಂದಿಗೆ ನಮಗೆ ಬರೆದು ಕಳುಹಿಸಿ. ನಾವು ಪ್ರಕಟಿಸುತ್ತೇವೆ.

 

Leave a Reply

Your email address will not be published. Required fields are marked *

Back To Top