Saturday, 21st October 2017  

Vijayavani

1. ತೀವ್ರಗೊಂಡ ಟಿಪ್ಪು ಜಯಂತಿ ಆಚರಣೆ ವಿವಾದ – ಅನಂತ ಹೆಗಡೆ ನಿಲುವಿಗೆ ಪ್ರತಾಪ್ ಸಿಂಹ ಸಹಮತ – ಇದೇ ಕೊನೆ ಆಚರಣೆ ಅಂತಾ ಕಿಡಿ 2. ಗೌರಿ ಲಂಕೇಶ್​ ಹಂತಕರ ರೇಖಾಚಿತ್ರ ವಿವಾದ – ಹಿಂದೂಗಳ ಮೇಲೆ ಎಸ್‌ಐಟಿಯಿಂದ ಷಡ್ಯಂತ್ರ – ಬಾಗಲಕೋಟೆಯಲ್ಲಿ ಪ್ರಮೋದ್ ಮುತಾಲಿಕ್ ಆರೋಪ 3. ಬೆಂಗಳೂರಿನಲ್ಲಿ ಧನದಾಹಿ ಆಸ್ಪತ್ರೆ ಅಟ್ಟಹಾಸ – ಬಿಲ್‌ ಪಾವತಿಸದ ತಾಯಿಗೆ ಮಕ್ಕಳನ್ನ ತೋರಿಸದ ಸಿಬ್ಬಂದಿ – ಚಿಕಿತ್ಸೆಗಾಗಿ ನೊಂದ ಪೋಷಕರ ಪರದಾಟ 4. ಮೆರ್ಸಲ್ ಚಿತ್ರದ ಬೆಂಬಲಕ್ಕೆ ನಿಂತ ಕಮಲ್ – ಮೋದಿಗೆ ಪರೋಕ್ಷ ಟಾಂಗ್ ನೀಡಿದ ರಾಹುಲ್ – ವಿವಾದದ ಸುಳಿಯಲ್ಲಿ ಒದ್ದಾಡ್ತಿದೆ ತಮಿಳು ಚಿತ್ರ ಮೆರ್ಸಲ್ 5. ಹೆಣ್ಣು ಉಡಕ್ಕಾಗಿ ಗಂಡು ಉಡಗಳ ಕಾದಾಟ – ಕೆಸರಿನಲ್ಲಿ ನಡೀತು ಭಾರಿ ಕಾಳಗ – ಮಂಗಳೂರಿನಲ್ಲಿ ರೋಚಕ ಫೈಟ್​
Breaking News :

ಮುರುಘಾ ಶರಣರಿಗೆ ಬೆದರಿಕೆ ಕರೆ

Tuesday, 21.03.2017, 9:42 AM       No Comments

ಚಿತ್ರದುರ್ಗ: ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರಿಗೆ ಸೋಮವಾರ ಅನಾಮಿಕ ವ್ಯಕ್ತಿಯೊಬ್ಬ ಫೋನ್ ಕರೆ ಮಾಡಿ ಜೀವಬೆದರಿಕೆ ಹಾಕಿದ್ದಾನೆ. ಶರಣರು ಮಠದಲ್ಲಿದ್ದಾಗ ಬೆಳಗ್ಗೆ 9ಗಂಟೆ ವೇಳೆಗೆ ಅವರ ಮೊಬೈಲ್​ಗೆ ಕರೆ ಮಾಡಿದ ವ್ಯಕ್ತಿ, ನೀವು ಪರಿವರ್ತನಾ ಪರ ವಾದಿಗಳು ಎಂದು ಹೇಳಿಕೊಂಡು ಕೆಳ ಮತ್ತು ಮೇಲ್ವರ್ಗಗಳ ನಡುವೆ ಸಾಮಾಜಿಕ ಸಂಘರ್ಷ ತರುತ್ತಿದ್ದೀರಿ ಎಂದು ದೂಷಿಸಿದ್ದಾನೆ. ಅಷ್ಟೇ ಅಲ್ಲದೆ ಬೆದರಿಕೆ ಕೂಡ ಹಾಕಿದ್ದಾನೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ನೀಡಲಾಗಿದೆ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಮಠಕ್ಕೆ ತೆರಳಿ ಶರಣರ ಜತೆ ಮಾತನಾಡಿ ವಿವರ ಪಡೆದರು. ಬಳಿಕ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಬೆದರಿಕೆ ಕರೆ ಮಾಡಿದ ವ್ಯಕ್ತಿಯ ಪತ್ತೆಗೆ ಕ್ರಮ ಕೈಗೊಳ್ಳಲು ಸೂಚಿಸಿದರು.

 ಒಬ್ಬ ಮಠಾಧೀಶರಾಗಿ ಸಮಾಜವನ್ನು ಪರಿವರ್ತನೆಯತ್ತ, ಸರಿ ದಾರಿಯತ್ತ ತೆಗೆದುಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದು ಭಾವಿಸಿದ್ದೇನೆ. ಯಾರೋ ಬೆದರಿಕೆ ಹಾಕಿದ್ದಾರೆಂಬ ಮಾತ್ರಕ್ಕೆ ಸಮಾಜ ಪರಿವರ್ತನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಈ ಕಾರ್ಯ ನಿರಂತರವಾಗಿ ನಡೆಯುತ್ತದೆ

|ಶ್ರೀ ಶಿವಮೂರ್ತಿ ಮುರುಘಾ ಶರಣರು

 

Leave a Reply

Your email address will not be published. Required fields are marked *

Back To Top