Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಮುತ್ತಿನ ನಗರಿಯಲ್ಲಿ ಇಂದು ಟಿ20 ಸರಣಿಗೆ ಕ್ಲೈಮ್ಯಾಕ್ಸ್

Friday, 13.10.2017, 3:04 AM       No Comments

ಹೈದರಾಬಾದ್: ಸಮಬಲದ ಪೈಪೋಟಿ ಕಂಡಿರುವ ಭಾರತ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಕ್ಲೈಮ್ಯಾಕ್ಸ್ಗೆ ಇಂದು ಮುತ್ತಿನ ನಗರಿ ಹೈದರಾಬಾದ್ ವೇದಿಕೆಯಾಗಿದೆ. ಗುವಾಹಟಿಯಲ್ಲಿ ಅನುಭವಿಸಿದ ಹೀನಾಯ ಸೋಲಿನಿಂದ ಪಾಠ ಕಲಿತಿರುವ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಶುಕ್ರವಾರ ಉಪ್ಪಳ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯವನ್ನು ಗೆದ್ದು ಸರಣಿ ಜಯಿಸುವ ವಿಶ್ವಾಸದಲ್ಲಿದೆ.

3 ಪಂದ್ಯಗಳ ಸರಣಿ 1-1 ರಿಂದ ಸಮಬಲಗೊಂಡಿದ್ದು, ಅಂತಿಮ ಕದನ ಕುತೂಹಲ ಕೆರಳಿಸಿದೆ. ಬ್ಯಾಟ್ಸ್​ಮನ್​ಗಳಿಗೆ ನೆರವಾಗುವ ಉಪ್ಪಳ ಸ್ಟೇಡಿಯಂ ಮಳೆ ಭೀತಿ ನಡುವೆಯೂ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಆಯೋಜನೆಗೆ ಸನ್ನದ್ಧವಾಗಿದೆ.

ಕೊಹ್ಲಿ ಪಡೆಗೆ ಪುಟಿದೇಳುವ ವಿಶ್ವಾಸ: ಬರ್ಸಾಪರ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ದಾಳಿಗೆ ತತ್ತರಿಸಿದ ಭಾರತ ತಂಡ, ಹಿಂದಿನ ಪಂದ್ಯದಲ್ಲಿ ಅನುಭವಿಸಿದ ಸೋಲಿನ ಕಹಿಯನ್ನು ಮರೆತು ಪುಟಿದೇಳುವ ವಿಶ್ವಾಸದಲ್ಲಿದೆ. 2ನೇ ಪಂದ್ಯದಲ್ಲಿ ಟಾಸ್ ಸೋತ ಬಳಿಕ ಜಾಸನ್ ಬೆಹ್ರೆನ್​ಡ್ರೊಫ್ ದಾಳಿಗೆ ಸಂಪೂರ್ಣ ಮಂಕಾಗಿದ್ದ ಬ್ಯಾಟಿಂಗ್ ಪಡೆಯಲ್ಲಿ ಅಂತಿಮ ಟಿ20 ಪಂದ್ಯಕ್ಕೆ ಕೆಲ ಬದಲಾವಣೆ ಕಾಣುವ ನಿರೀಕ್ಷೆ ಇದೆ. ಏಕದಿನ ಹಾಗೂ ಟಿ20ಯ ಆರಂಭಿಕ ಎರಡೂ ಪಂದ್ಯಗಳಿಂದ ಹೊರಗುಳಿದಿರುವ ಕರ್ನಾಟಕದ ಕೆಎಲ್ ರಾಹುಲ್, ಸರಣಿಯ ಅಂತಿಮ ಪಂದ್ಯದಲ್ಲಾದರೂ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ ರಾಹುಲ್ ಸ್ಥಾನ ಪಡೆದರೆ, ಕರ್ನಾಟಕದವರೇ ಆದ ಮನೀಷ್ ಪಾಂಡೆ ಹೊರಗುಳಿಯುವ ಸಾಧ್ಯತೆಗಳಿವೆ. ಉಳಿದಂತೆ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಕಷ್ಟಸಾಧ್ಯವಾದರೂ, ಬೌಲಿಂಗ್​ನಲ್ಲಿ ಅದೇ ವಿಭಾಗ ಕಣಕ್ಕಿಳಿಯಲಿದೆ. ಏಕದಿನದಲ್ಲಿ ಪ್ರವಾಸಿ ತಂಡವನ್ನು ಕಾಡಿದ್ದ ಕುಲ್​ದೀಪ್ ಯಾದವ್-ಯಜುವೇಂದ್ರ ಜೋಡಿ 2ನೇ ಟಿ20 ಪಂದ್ಯದಲ್ಲಿ ವಿಫಲವಾಗಿದೆ. –ಏಜೆನ್ಸೀಸ್/ಪಿಟಿಐ

# ಕೊಹ್ಲಿ ಇನ್ನೊಂದು ಬೌಂಡರಿ ಬಾರಿಸಿದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ 200 ಬೌಂಡರಿ ಬಾರಿಸಿದ 3ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ತಿಲಕರತ್ನೆ ದಿಲ್ಶಾನ್ (223) ಹಾಗೂ ಪಾಕ್​ನ ಮೊಹಮದ್ ಶೆಹಜಾದ್ (200) ಮಾತ್ರ ಈ ಮೈಲಿಗಲ್ಲು ಮುಟ್ಟಿದ್ದಾರೆ.

# ಉಪ್ಪಳದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂ ಭಾರತದಲ್ಲಿ ಅಂತಾರಾಷ್ಟ್ರೀಯ ಟಿ20 ಪಂದ್ಯಕ್ಕೆ ಆತಿಥ್ಯ ವಹಿಸಿಕೊಂಡ 19ನೇ ಕ್ರೀಡಾಂಗಣ ಎನಿಸಿಕೊಳ್ಳಲಿದೆ.

ಪಂದ್ಯಕ್ಕೆ ಮಳೆ ಭೀತಿ?

ಕಳೆದ ಹಲವು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಶುಕ್ರವಾರದ ಪಂದ್ಯಕ್ಕೂ ಮಳೆ ಅಡ್ಡಿಯುಂಟಾಗುವ ಸಾಧ್ಯತೆಗಳಿವೆ. ಈ ಕುರಿತು ಸ್ಥಳೀಯ ಹವಾಮಾನ ಇಲಾಖೆ ಕೂಡ ಸೂಚನೆ ನೀಡಿದೆ.

ವಿಶ್ವಾಸದಲ್ಲಿ ಆಸ್ಟ್ರೇಲಿಯಾ

ಏಕದಿನ ಸರಣಿಯನ್ನು 1-4 ರಿಂದ ಸೋತ ಬಳಿಕ, ಟಿ20 ಸರಣಿಯಲ್ಲಿ ಆರಂಭಿಕ ಹಂತದಲ್ಲೇ ಹಿನ್ನಡೆ ಅನುಭವಿಸಿದ್ದ ಆಸೀಸ್​ಗೆ ಕಳೆದ ಪಂದ್ಯದ ಗೆಲುವು ಅತ್ಮವಿಶ್ವಾಸ ಮೂಡಿಸಿದೆ. ಬೆಹ್ರೆನ್​ಡ್ರೊಫ್ ಎಂಬ ಅಸ್ತ್ರ ಹೊಂದಿರುವ ಆಸ್ಟ್ರೇಲಿಯಾ ಮತ್ತೊಮ್ಮೆ ಶಾಕ್ ನೀಡಲು ಸಜ್ಜಾಗಿದೆ. ಹೆನ್ರಿಕ್ಸ್ ಹಾಗೂ ಟ್ರಾವಿಸ್ ಹೆಡ್ ಜೋಡಿಯ ಸಿಡಿಲಬ್ಬರದ ಬ್ಯಾಟಿಂಗ್ ತಂಡದ ಪಾಳಯದಲ್ಲಿ ಉತ್ಸಾಹ ಮೂಡಿಸಿದೆ. ಏಕದಿನ ಸರಣಿಯಲ್ಲಿ ಅನುಭವಿಸಿದ ಸೋಲಿಗೆ ಟಿ20 ಸರಣಿಯ ಮೂಲಕ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಜತೆಗೆ ಗೆಲುವಿನೊಂದಿಗೆ ಪ್ರಸಕ್ತ ಭಾರತ ಪ್ರವಾಸಕ್ಕೆ ವಿದಾಯ ಹೇಳುವ ಲೆಕ್ಕಾಚಾರದಲ್ಲಿದೆ.

ಸಂಭಾವ್ಯ ತಂಡಗಳು

ಭಾರತ: ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ (ನಾಯಕ), ಮನೀಷ್ ಪಾಂಡೆ/ಕೆಎಲ್ ರಾಹುಲ್/ದಿನೇಶ್ ಕಾರ್ತಿಕ್, ಧೋನಿ (ವಿ.ಕೀ), ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್, ಬುಮ್ರಾ, ಕುಲ್​ದೀಪ್, ಚಾಹಲ್.

ಆಸ್ಟ್ರೇಲಿಯಾ: ಆರನ್ ಫಿಂಚ್, ವಾರ್ನರ್ (ನಾಯಕ), ಮೊಯಿಸ್ ಹೆನ್ರಿಕ್ಸ್, ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್​ವೆಲ್, ಮಾರ್ಕಸ್ ಸ್ಟೋಯನಿಸ್, ಟಿಮ್ ಪೈನ್, ನಾಥನ್ ಕೌಲ್ಟರ್ ನಿಲ್, ಆಂಡ್ರ್ಯೂ ಟೈ, ಆಡಂ ಜಂಪಾ, ಬೆಹ್ರೆನ್​ಡ್ರೊಫ್.

ಕೊಹ್ಲಿ ಇನ್ನೊಂದು ಬೌಂಡರಿ ಬಾರಿಸಿದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ 200 ಬೌಂಡರಿ ಬಾರಿಸಿದ 3ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ತಿಲಕರತ್ನೆ ದಿಲ್ಶಾನ್ (223) ಹಾಗೂ ಪಾಕ್​ನ ಮೊಹಮದ್ ಶೆಹಜಾದ್ (200) ಮಾತ್ರ ಈ ಮೈಲಿಗಲ್ಲು ಮುಟ್ಟಿದ್ದಾರೆ.

ಉಪ್ಪಳದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂ ಭಾರತದಲ್ಲಿ ಅಂತಾರಾಷ್ಟ್ರೀಯ ಟಿ20 ಪಂದ್ಯಕ್ಕೆ ಆತಿಥ್ಯ ವಹಿಸಿಕೊಂಡ 19ನೇ ಕ್ರೀಡಾಂಗಣ ಎನಿಸಿಕೊಳ್ಳಲಿದೆ.

ಪಂದ್ಯ ಆರಂಭ: ಸಂಜೆ 7

ನೇರಪ್ರಸಾರ:

ಸ್ಟಾರ್ ಸ್ಪೋರ್ಟ್ಸ್

Leave a Reply

Your email address will not be published. Required fields are marked *

Back To Top