Monday, 23rd October 2017  

Vijayavani

1. ಬಡವರ ಹೊಟ್ಟೆ ಮೇಲೆ ಹೊಡೀತಿದ್ಯಾ ಸರ್ಕಾರ – 100 ಸಿಸಿ ಹಿಂಬದಿ ಸವರಾರಿಗೆ ಬ್ರೇಕ್​ – ರಾಜ್ಯ ಸರ್ಕಾರದಿಂದ ಇದೆಂಥ ಆದೇಶ 2. ಮಾಂಸ ತಿಂದು ಬರಬೇಡ ಅಂತಾ ದೇವರು ಹೇಳಿಲ್ಲ – ಬೇಡರ ಕಣ್ಣಪ್ಪ ಶಿವನಿಗೆ ನೈವೇದ್ಯ ಮಾಡಿದ್ದೇನು – ಮಂಜುನಾಥನ ದರ್ಶನಕ್ಕೆ ಸಿಎಂ ಸಮರ್ಥನೆ 3. ಕಾಗೋಡು ಕಾಲಿನಿಂದ ಜಾರಿದ ಚಪ್ಪಲಿ – ಅದನ್ನ ಎತ್ತಿಕೊಟ್ಟು ಕಿಮ್ಮನೆ ಕಳಕಳಿ – ಹಿರಿಯರಿಗೆ ತೋರಿದ ಗೌರವ ಎಲ್ಲರಿಗೂ ಮಾದರಿ 4. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಬಿಜೆಪಿ ವಿರುದ್ಧ ಸಿಎಂ ಸಿದ್ರಾಮಯ್ಯ ವೀರಾವೇಶ – ಮೋದಿ, ಷಾ ವಿರುದ್ಧವೂ ಟೀಕಾಸ್ತ್ರ 5. ಗುಜರಾತ್​ನಲ್ಲಿ ಜನರ ಸರ್ಕಾರ ವಿಲ್ಲ – ಐದಾರು ಉದ್ಯಮಿಗಳು ಆಡಳಿತ ನಡೆಸ್ತಿದಾರೆ – ಮೋದಿ ವಿರುದ್ಧ ರಾಹುಲ್​ ವಾಗ್ದಾಳಿ
Breaking News :

ಮುಖ ಮುಚ್ಚಿಕೊಂಡರೆ ಜೈಲಿಗೆ

Wednesday, 11.10.2017, 3:00 AM       No Comments

ಆಸ್ಟ್ರೇಲಿಯಾದ ವಿಯೆನ್ನಾದಲ್ಲಿ ನೂತನವಾಗಿ ಆರಂಭವಾದ ಎಲೆಕ್ಟ್ರಾನಿಕ್ ಆಪಲ್ ರಿಸೆಲ್ಲರ್ ಅಂಗಡಿಯ ಮುಂದೆ ಶಾರ್ಕ್ ವೇಷ ತೊಟ್ಟು ಕಾರ್ಯ ನಿರ್ವಹಿಸುತ್ತಿದ್ದ ಮೆಕ್​ಶಾರ್ಕ್ ಎಂಬ ವ್ಯಕ್ತಿಯನ್ನು ಅಲ್ಲಿನ ಪೊಲೀಸರು ಬುರ್ಖಾ ನಿಷೇಧ ಕಾನೂನಿನಡಿ ಬಂಧಿಸಿದ್ದಾರೆ.

ಶಾರ್ಕ್ ವೇಷತೊಟ್ಟು ಗ್ರಾಹಕರನ್ನು ಆಕರ್ಷಿಸುತ್ತಿದ್ದ ಮೆಕ್​ಶಾರ್ಕ್​ನನ್ನು ನೋಡಿದ ಪೊಲೀಸರು ಆತನ ಬಳಿ ಬಂದು ಮುಖವಾಡ ತೆಗೆಯುವಂತೆ ಒತ್ತಾಯಿಸಿದ್ದಾರೆ. ಅದಕ್ಕೆ ಮೆಕ್​ಶಾರ್ಕ್, ತಾನು ತನ್ನ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾನೆ. ಕೂಡಲೆ ಆತನನ್ನು ಬಂಧಿಸಿದ ಪೊಲೀಸರು 130 ಯೂರೋ ದಂಡ ವಿಧಿಸಿದ್ದಾರೆ.

ಆಸ್ಟ್ರೇಲಿಯಾದ ಬುರ್ಖಾ ನಿಷೇಧ ಕಾನೂನು ಪ್ರಕಾರ ಯಾವುದೇ ವ್ಯಕ್ತಿ ಮುಖ ಮುಚ್ಚಿಕೊಂಡು ಸಾರ್ವಜನಿಕ ಪ್ರದೇಶದಲ್ಲಿ ಓಡಾಡುವಂತಿಲ್ಲ. ಇಸ್ಲಾಂ ಧರ್ಮದವರೂ ಸಂಪೂರ್ಣವಾಗಿ ಮುಖ ಮುಚ್ಚಿಕೊಳ್ಳುವಂತಿಲ್ಲ ಎಂದು ಆಸ್ಟ್ರೇಲಿಯಾ ಸರ್ಕಾರ ಹೊಸ ಕಾನೂನು ಜಾರಿ ಮಾಡಿದೆ. ಕೆಲ ಸಂದರ್ಭ ಹೊರತು ಪಡಿಸಿ ಹಾಸ್ಯಗಾರನ ವೇಷ, ವೈದ್ಯಕೀಯ ಮಾಸ್ಕ್, ಮುಖ ಮುಚ್ಚಿಕೊಳ್ಳುವ ಶಿರೋವಸ್ತ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಧರಿಸುವಂತಿಲ್ಲ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top