Friday, 22nd September 2017  

Vijayavani

1. ಸಮಾವೇಶಕ್ಕೆ ಲಕ್ಷ ಮಂದಿ ಸೇರಿಸೋ ಟಾರ್ಗೆಟ್​- ಬರದಿದ್ರೆ ಅಕ್ಕಿ ಕಟ್​​, ಬ್ಯಾಂಕ್​ ಸಬ್ಸಿಡಿಗೆ ಬ್ರೇಕ್​- ಫಲಾನುಭವಿಗಳಿಗೆ ಕೈ ಕಾರ್ಯಕರ್ತರ ಬೆದರಿಕೆ 2. ಕೊಟ್ಟ ಮಾತು ಮರೆತ ಸಿಎಂ ಸಿದ್ದರಾಮಯ್ಯ- 8 ತಿಂಗಳಾದ್ರೂ ಕುಟುಂಬಸ್ಥರಿಗೆ ಸಿಗದ ಪರಿಹಾರ- ಇದೇನಾ ನುಡಿದಂತೆ ನಡೆಯುವ ಸರ್ಕಾರ..? 3. ಎಸ್​​.ಎಂ.ಕೃಷ್ಣ ಅಳಿಯನ ಮನೆ ಕಚೇರಿ ತಲಾಷ್​​- ಎರಡನೇ ದಿನವೂ ಮುಂದುವರಿದ ಪರಿಶೀಲನೆ- ಹುಡುಕಿದಷ್ಟು ಪತ್ತೆಯಾಗ್ತಿದೆ ದಾಖಲೆ ಪತ್ರ 4. ಗದಗದಲ್ಲಿ ಹನಿ ನೀರಿಗಾಗಿ ಹೋರಾಟ- 6 ಸಾವಿರ ಜನಕ್ಕೆ ಟ್ಯಾಂಕರ್​ ನೀರೇ ಆಧಾರ- ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ ಸರ್ಕಾರ 5. ಮೈಸೂರು ದಸರಾಗೆ ಜನವೋ ಜನ- ಅತ್ತೆ, ಸೊಸೆ ಜೊತೆ ಜೊತೆ ಮಾಡಿದ್ರು ನಳಪಾಕ- ಕೆಲವೇ ಕ್ಷಣಗಳಲ್ಲಿ ಯುವ ದಸರಾಗೆ ಚಾಲನೆ
Breaking News :

ಮುಖ್ಯಮಂತ್ರಿ ವಿರುದ್ಧ ಶೋಭಾ ಕರಂದ್ಲಾಜೆ ಹೊಸ ಬಾಂಬ್

Tuesday, 12.09.2017, 3:04 AM       No Comments

| ವಿಜಯ್ ಜೊನ್ನಹಳ್ಳಿ

ಬೆಂಗಳೂರು: ಪ್ರತಿಪಕ್ಷ ಶಾಸಕರು ಹಾಗೂ ಮುಖಂಡರನ್ನು ಕಾಂಗ್ರೆಸ್​ಗೆ ಸೇರಿಸಿಕೊಳ್ಳಲು ಖುದ್ದು ಸಿದ್ದರಾಮಯ್ಯ ಕರೆ ಮಾಡಿ 25 ಕೋಟಿ ರೂ. ಆಮಿಷ ಒಡ್ಡಿದ್ದಾರೆ. ಶೀಘ್ರದಲ್ಲೇ ಶಾಸಕರು ಈ ಸ್ಪೋಟಕ ಮಾಹಿತಿ ಬಿಚ್ಚಿಡಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಹೊಸ ಬಾಂಬ್ ಹಾಕಿದ್ದಾರೆ. ದಿಗ್ವಿಜಯ್ ನ್ಯೂಸ್​ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ಮಾಹಿತಿ ಹೊರ ಹಾಕಿದ್ದಾರೆ.

ಮಂಗಳೂರು ಚಲೋ ವಿಫಲವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ?

ಮಂಗಳೂರು ಚಲೋ ಯಶಸ್ವಿಯಾಗಿದೆ. ಪೊಲೀಸರ ನಿರೀಕ್ಷೆಗೂ ಮೀರಿ ಜನ ಬಂದಿದ್ದರು. ಎಷ್ಟು ಜನ ಬಂದಿದ್ದರು ಅಂತಾ ಕಾಂಗ್ರೆಸ್​ನವರಿಗೂ ಗೊತ್ತಿದೆ.

ಅಮಿತ್ ಷಾ ಬರುವವರೆಗೂ ರಾಜ್ಯ ಬಿಜೆಪಿಯವರು ಸುಮ್ಮನೆ ಕುಳಿತಿದ್ರಿ…

ಅಮಿತ್ ಷಾ ಬರುವ ಮುಂಚೆಯೂ ಸಹ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದೆವು. ಆದರೆ ಅಮಿತ್ ಷಾ ಬಂದ ನಂತರ ರಾಜ್ಯ ಬಿಜೆಪಿಯಲ್ಲಿ ಮತ್ತಷ್ಟು ಹುರುಪು ಹಾಗೂ ಒಗ್ಗಟ್ಟು ಜಾಸ್ತಿಯಾಯಿತು.

ಕರಾವಳಿ ಭಾಗದಲ್ಲಿ ಕೇವಲ ಹಿಂದುಗಳ ಹತ್ಯೆಯಾಗಿಲ್ಲ, ಮುಸ್ಲಿಮರ ಹತ್ಯೆಯೂ ಆಗಿದೆ. ಇದಕ್ಕೆ ಆರ್​ಎಸ್​ಎಸ್ ಕಾರಣ ಎಂದು ಕಾಂಗ್ರೆಸ್ ಹೇಳುತ್ತಿದೆ?

ಆರ್​ಎಸ್​ಎಸ್ ವಿರುದ್ಧ ಮಾತನಾಡಿದವರು ಸರ್ವನಾಶವಾಗಿದ್ದಾರೆ. ಅದು ಇಡೀ ದೇಶಕ್ಕೆ ಗೊತ್ತಿದೆ. ಸಿಎಂ ಸಿದ್ದರಾಮಯ್ಯ ಚುನಾವಣೆಗೋಸ್ಕರ ರಾಜಕಾರಣ ಮಾಡುತ್ತಿದ್ದು ಶಾಸಕರ ಖರೀದಿಯಲ್ಲಿ ತೊಡಗಿದ್ದಾರೆ.

ಶಾಸಕರ ಖರೀದಿ ಅಂದ್ರೆ ಏನು..?

ನನಗೆ ಸಂಪೂರ್ಣ ಮಾಹಿತಿಯಿದೆ. ಬಿಜೆಪಿ, ಜೆಡಿಎಸ್, ಪಕ್ಷೇತರ ಶಾಸಕರು ಹಾಗೂ ಕೆಲ ಮುಖಂಡರಿಗೆ 25 ಕೋಟಿ ರೂ. ಆಮಿಷ ವೊಡ್ಡಲಾಗಿದೆ. ಕೆಲ ಮುಖಂಡರಿಗೆ ಚುನಾವಣೆಗೆ ನಿಲ್ಲದಂತೆ ಮಾಡುವುದು, ಕೆಲ ಶಾಸಕರಿಗೆ ಕಾಂಗ್ರೆಸ್​ನಿಂದ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ. ಜತೆಗೆ ಧಮ್ಕಿ ಹಾಕುತ್ತಿದ್ದಾರೆ.

ಯಾರು ಆಮಿಷವೊಡ್ಡುತ್ತಿದ್ದಾರೆ. ನಿಮ್ಮ ಗಂಭೀರ ಆರೋಪಕ್ಕೆ ಯಾವ ಆಧಾರವಿದೆ?

ಸಿಎಂ ಖುದ್ದಾಗಿ ಶಾಸಕರಿಗೆ ಪೋನ್ ಮಾಡಿ 25 ಕೋಟಿ ರೂ. ಆಮಿಷವೊಡ್ಡಿರುವ ಆಧಾರವಿದೆ. ಅವರು ದೂರವಾಣಿ ಕರೆ ಮಾಡಿ ಆಮಿಷವೊಡ್ಡಿರುವ ಜತೆ ಹೈಕಮಾಂಡ್ ಭೇಟಿ ಮಾಡಿಸಿ ಟಿಕೆಟ್ ನೀಡಿಸುವ ಭರವಸೆ ನೀಡುತ್ತಿದ್ದಾರೆ. ಅದರ ಬಗ್ಗೆ ಶಾಸಕರೇ ಎಲ್ಲರ ಮುಂದೆ ಮಾಹಿತಿ ನೀಡಲಿದ್ದಾರೆ.

ಆಪರೇಷನ್ ಕಮಲ ಶುರು ಮಾಡಿದ್ದೇ ಬಿಜೆಪಿಯವರು. ಈಗ ಕಾಂಗ್ರೆಸ್ ಬಗ್ಗೆ ಆರೋಪ ಮಾಡುವುದಕ್ಕೆ ಯಾವ ನೈತಿಕತೆ ನಿಮಗಿದೆ?

ಆಗ ನಮಗೆ ಸಂಪೂರ್ಣ ಬಹುಮತದ ಸರ್ಕಾರವಿರಲಿಲ್ಲ. ಒತ್ತಡ ಹಾಕಿರಲಿಲ್ಲ.

ನಿಮ್ಮ ಬೇನಾಮಿ ಆಸ್ತಿ ಬಗ್ಗೆ ರಮಾನಾಥ ರೈ ಮಾತನಾಡಿದ್ದಾರೆ. ಏನು ಬೇನಾಮಿ ಆಸ್ತಿ ಮಾಡಿದ್ದೀರಾ?

ನಾನು ಕಲ್ಲಡ್ಕ ಪ್ರಭಾಕರ್ ಭಟ್ಟರ ಶಾಲೆಗೆ ರಮಾನಾಥ ರೈ ಅಪ್ಪನ ಆಸ್ತಿಯಿಂದ ಹಣ ಕೇಳಿಲ್ಲ. ಮುಜರಾಯಿ ದೇವಸ್ಥಾನದಿಂದ ಬರುತ್ತಿದ್ದ ಅನುದಾನವನ್ನು ನಿಲ್ಲಿಸಿದ್ದಾರೆ. ನನ್ನ ಬೇನಾಮಿ ಆಸ್ತಿಯಿದ್ದರೆ ಮುಟ್ಟುಗೋಲು ಹಾಕಿಕೊಳ್ಳಲಿ.

ಗೌರಿ ಲಂಕೇಶ್ ಹತ್ಯೆ ಬಗ್ಗೆ ಬಿಜೆಪಿ ಹಾಗೂ ಆರ್​ಎಸ್​ಎಸ್ ಬಗ್ಗೆ ರಾಹುಲ್ ಗಾಂಧಿ ಪ್ರಸ್ತಾಪ ಮಾಡಿದ್ದಾರೆ?

ರಾಹುಲ್ ಗಾಂಧಿ ಯಾವಾಗ ತನಿಖಾಧಿಕಾರಿ ಆಗಿದ್ದಾರೆ ಗೊತ್ತಿಲ್ಲ. ಇನ್ನು ತನಿಖೆ ನಡೆಯುತ್ತಿದೆ ಆಗಲೇ ಕಾಂಗ್ರೆಸ್ ಯುವರಾಜ ತೀರ್ಪು ನೀಡಲು ಮುಂದಾಗಿದ್ದಾರೆ. ಮೊದಲು ನಿಷ್ಪಕ್ಷಪಾತ ವಾಗಿ ತನಿಖೆ ಮಾಡಿ ಎಂದು ಸೂಚಿಸಲಿ.

ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರತಿ ರೋಧ ಸಮಾವೇಶ ಹಮ್ಮಿಕೊಂಡಿದ್ದಾರೆ? ವಿಚಾರವಾದಿಗಳು ಯಾರ ವಿರುದ್ದ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ? ಸಿಎಂ ಸಿದ್ದರಾಮಯ್ಯ ಸುತ್ತಮುತ್ತ ಓಡಾಡಿ ಕೊಂಡು ಸಲಹೆ ಕೊಡುವ ಅನೇಕ ವಿಚಾರವಾದಿಗಳಿದ್ದಾರೆ. ಮೊದಲು ಕಲಬುರ್ಗಿ ಹಂತಕರನ್ನು ಹುಡುಕಿ ಎಂದು ಸಿಎಂಗೆ ಬುದ್ಧಿವಾದ ಹೇಳಬೇಕು. ಸಿಎಂಗೆ ರಕ್ಷಣೆ ನೀಡಲು ಹೊರಟಿದ್ದಾರೆ.

ಸಿಬಿಐ ತನಿಖೆಯಾಗಿ ವರದಿ ಬಂದ ನಂತರ ಜಾರ್ಜ್ ರಾಜೀನಾಮೆ ಕೊಡುತ್ತೇನೆ ಅಂತಾ ಹೇಳುತ್ತಿದ್ದಾರೆ?

ಗಣಪತಿ ಸಾಯುವ ಮುನ್ನ ಯಾರಿಗೆ ಕರೆ ಮಾಡಿದ್ದರು ಅಂತಹವರಿಗೆ ಸಿಐಡಿ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ಸಿಐಡಿ ಅಧಿಕಾರಿಗಳು ಸಾಕ್ಷಿಗಳಿಗೆ ಬೆದರಿಕೆ ಹಾಕಿ ಜಾರ್ಜ್ ರಕ್ಷಣೆಗೆ ಮುಂದಾಗಿದ್ದಾರೆ. ನನಗೆ ಸ್ಪಷ್ಟವಾಗಿ ಗೊತ್ತಿದೆ ಹಾಗೂ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.

ಮುಂದಿನ ವಿಧಾನಸಭೆ ಚುನಾವಣೆಗೆ ಶೋಭಾ ಕರಂದ್ಲಾಜೆ ಸ್ಪರ್ಧಿಸುತ್ತಾರೆಯೇ?

ಮೊದಲ ಬಾರಿಗೆ ಸಂಸದೆಯಾಗಿದ್ದೇನೆ. ನಾನು ರಾಜ್ಯ ರಾಜಕಾರಣಕ್ಕೆ ಬರಬೇಕೋ ಬೇಡವೋ ಅಂತಾ ಹೈಕಮಾಂಡ್ ನಿರ್ಧರಿಸುತ್ತೆ. ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುವುದಕ್ಕೆ ನಾನು ಸಿದ್ಧಳಿಲ್ಲ. ಆದರೆ ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತೆ ಅದಕ್ಕೆ ನಾನು ಬದ್ಧ.

Leave a Reply

Your email address will not be published. Required fields are marked *

Back To Top