Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :

ಮುಂದೆ ತಿರುವು ಇದೆ, ಎಚ್ಚರಿಕೆ!

Friday, 05.05.2017, 3:00 AM       No Comments

ಪುರಾತನ ಕಾಲದಲ್ಲಿ ಹೇಳಿದ ಋತುಚರ್ಯುಯನ್ನು ಇಂದಿನ ಕಾಲದಲ್ಲಿ ಅಳವಡಿಸಿಕೊಳ್ಳುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಮನದಲ್ಲಿ ಮೂಡುವುದು ಸಹಜ. ಹಳೆಯ ವಿಧಾನಗಳಿಗೆ ಗೊಡ್ಡು ಸಂಪ್ರದಾಯ ಎಂಬ ಹಣೆಪಟ್ಟಿ ನೀಡಿ ಹೀಗಳೆಯುವುದೂ ಇದೆ. ಜೀವನಪೂರ್ತಿ ಹೀಗೆ ಕಟ್ಟುನಿಟ್ಟಿನಿಂದ ಬಾಳುವುದೆಂದರೆ ಬದುಕು ಸಾರವೇ ಇಲ್ಲದೆ ಕಳಾಹೀನವಾಗುತ್ತದೆ ಎಂಬ ಅಳುಕೂ ಇರುತ್ತದೆ. ಆದರೆ ಜೀವನಶೈಲಿಯಲ್ಲಿ ಮಾಡಿಕೊಳ್ಳುವ ಅಲ್ಪ ಬದಲಾವಣೆಯಿಂದ ಆರೋಗ್ಯಪೂರ್ಣ ಬದುಕು ಸಾಧ್ಯವೆಂದಾದರೆ ಇವುಗಳ ಅನುಷ್ಠಾನಕ್ಕೆ ತಿಲಾಂಜಲಿ ನೀಡುವುದು ಬುದ್ಧಿವಂತಿಕೆಯ ಲಕ್ಷಣವಲ್ಲ.

ಋತುಚರ್ಯುಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡರೆ ಗೋಚರವಾಗುವ ವಿಚಾರವೇ ಬೇರೆ. ಋತುಚರ್ಯು ಹೇಳಿದ್ದು ಜೀವನವನ್ನು ಕಷ್ಟದಿಂದ ಕಳೆಯಲೆಂದಲ್ಲ! ರೋಗರಹಿತ ಮಾಡುವ ಗುರಿ ಒಂದೆಡೆಯಾದರೆ, ವರ್ಷಪೂರ್ತಿ ಅತಿ ಜಾಗರೂಕರಾಗಿರುವ ಬದಲು ಕೇವಲ ಎರಡರಿಂದ ನಾಲ್ಕುತಿಂಗಳು ಮಾತ್ರ ಮುತುವರ್ಜಿವಹಿಸಿ ಅಳವಡಿಸಿಕೊಂಡರೆ ಇಡೀವರ್ಷ ಚೆನ್ನಾಗಿರುತ್ತದೆ ಎಂಬುದು ಋತುಚರ್ಯುಯ ಮರ್ಮ! ವಾಹನ ಚಲಾಯಿಸುವಾಗ ರಸ್ತೆಯಲ್ಲಿ ಪ್ರತಿಕ್ಷಣವೂ ಜಾಗೃತರಾಗಿ ಇರಲೇಬೇಕು. ಅಪಘಾತವಲಯ, ತೀವ್ರತಿರುವು ಇರುವಲ್ಲಿ ಇನ್ನೂಹೆಚ್ಚಿನ ಎಚ್ಚರಿಕೆ ವಹಿಸಿಕೊಂಡರೆ ಪ್ರಯಾಣ ಸುಗಮವಾಗಿರುತ್ತದೆ. ಹೀಗೆ ಎಚ್ಚರಿಕೆಯ ಫಲಕಗಳೂ ಕಾಣಿಸುತ್ತವೆ. ಇದರರ್ಥ ಉಳಿದೆಡೆ ಬೇಕಾಬಿಟ್ಟಿ ವಾಹನ ಚಲಾಯಿಸಬಹುದೆಂದಲ್ಲ. ಅಂತೆಯೇ ಋತುಚರ್ಯು! ಋತುಚರ್ಯುಗೂ ದೇಹಪ್ರಕೃತಿಗೂ ನೇರಸಂಬಂಧವಿದೆ. ವಾತವು ಎಲ್ಲೆಡೆ ಸಂಚಯವಾಗುವುದು ಗ್ರೀಷ್ಮಋತುವಿನಲ್ಲಿ. ಮಿತಿದಾಟಿ ರೋಗಗಳಹಾದಿ ಹಿಡಿಯುವುದು ನಂತರದ ವರ್ಷಾಋತುವಿನಲ್ಲಿ. ಇದೇರೀತಿ ಪಿತ್ತವು ಶೇಖರಗೊಳ್ಳುವುದು ವರ್ಷಾಋತು ಅರ್ಥಾತ್ ಮಳೆಗಾಲದಲ್ಲಿ! ಉಲ್ಬಣವಾಗುವುದು ಶರತ್​Mುತುವಿನಲ್ಲಿ. ಕಫವು ಹೇಮಂತ, ಶಿಶಿರಋತುಗಳಲ್ಲಿ ಸಂಗ್ರಹಿತವಾಗಿ ವಸಂತಕಾಲದಲ್ಲಿ ಪ್ರಕೋಪಗೊಳ್ಳುವುದು. ತ್ರಿದೋಷಗಳ ಸಂಚಯವಾಗುವುದನ್ನೇ ತಡೆದರೆ ಮುಂದಿನ ಋತುವಿನಲ್ಲಿ ಉಲ್ಬಣಗೊಳ್ಳುವ ಪರಿಸ್ಥಿತಿಯೇ ಇರುವುದಿಲ್ಲ. ಇದರಿಂದ ರೋಗಸಾಧ್ಯತೆ ಬಹಳಷ್ಟು ಕಡಿಮೆಯಾಗುತ್ತದೆ. ಉದಾಹರಣೆಗೆ ವಾತಪ್ರಕೃತಿಯವರು ಬೇಸಿಗೆಯ ಎರಡುತಿಂಗಳು ಹೆಚ್ಚಿನ ಜಾಗರೂಕತೆಯೊಂದಿಗೆ ಋತುಚರ್ಯು ಅನುಷ್ಠಾನಿಸಿದರೆ ವರ್ಷಪೂರ್ಣ ಚೆನ್ನಾಗಿರಬಹುದು! ಜೀವನ ನಿಯಮಗಳನ್ನು ಸರಳಗೊಳಿಸಿ ಸಡಿಲಗೊಳಿಸಿದ್ದು ಈ ಋತುಕಾಲ ಮಾಹಿತಿ. ಅದಕ್ಕೇ ಹೇಳಿದ್ದು, ಋತುಚರ್ಯು ಮೂಢನಂಬಿಕೆಯಲ್ಲ, ಭಾರತೀಯ ವಿಜ್ಞಾನದ ಗಾಢನಂಬಿಕೆ.

ಪಂಚಸೂತ್ರಗಳು

  • ಎಕ್ಕೆಗಿಡ: ಹೃದಯ ಬಡಿತ ವೇಗವಾಗಿಸುವುದು.
  • ಪಪ್ಪಾಯ: ಆನೆಕಾಲು ರೋಗವಿದ್ದಾಗ ಹಿತಕರ.
  • ಅಲಸಂಡೆ: ಮಲದ ಪ್ರಮಾಣ ಹೆಚ್ಚಿಸುವುದು.
  • ಉದ್ದು: ಮಾಂಸಖಂಡ ಬೆಳವಣಿಗೆಗೆ ಸಹಾಯಕ.
  • ಈರುಳ್ಳಿ: ಅಧಿಕವಾದ ರಕ್ತದೊತ್ತಡ ತಗ್ಗಿಸುವುದು.

 

Leave a Reply

Your email address will not be published. Required fields are marked *

Back To Top