Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ಮುಂಗಾರುಮಳೆ ದಿನಾಂಕದಂದೇ ಚಮಕ್

Tuesday, 14.11.2017, 3:04 AM       No Comments

ಬೆಂಗಳೂರು: ನಟ ‘ಗೋಲ್ಡನ್ ಸ್ಟಾರ್’ ಗಣೇಶ್ ಪಾಲಿಗೆ ಡಿ. 29 ಎಂದರೆ ನಿಜಕ್ಕೂ ಸ್ಪೆಷಲ್ ದಿನಾಂಕ. ಯಾಕೆಂದರೆ, ಅವರ ಬಣ್ಣದ ಬದುಕಿನಲ್ಲಿ ಹಿತವಾದ ‘ಮುಂಗಾರುಮಳೆ’ ಸುರಿದ ದಿನ ಅದು. ಅರ್ಥಾತ್, ಸರಿಯಾಗಿ 11 ವರ್ಷಗಳ ಹಿಂದೆ, ಡಿ. 29ರಂದು ‘ಮುಂಗಾರುಮಳೆ’ ಚಿತ್ರ ತೆರೆಕಂಡಿತ್ತು. ಆ ಚಿತ್ರದಿಂದ ಸಿಕ್ಕ ಗೆಲುವಿನಿಂದಾಗಿ ಗಣೇಶ್ ಸಿನಿಪಯಣಕ್ಕೆ ಹೊಸ ವೇಗ ದೊರಕಿತು. ಅಷ್ಟಕ್ಕೂ ಆ ಬಗ್ಗೆ ಈಗ ಮಾತನಾಡಲು ಕಾರಣ ‘ಚಮಕ್’ ಚಿತ್ರ. ಹೌದು, ಸರಿಯಾಗಿ ಡಿ. 29ರಂದೇ ‘ಚಮಕ್’ ತೆರೆಕಾಣಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ ಚಿತ್ರತಂಡ.

‘ಈ ವರ್ಷವೇ ನಮ್ಮ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂಬುದು ನಿರ್ವಪಕರ ಗುರಿ. ಅದರಲ್ಲೂ ಡಿ. 29ರಂದು ತೆರೆಕಂಡರೆ ಅದು ಅಭಿಮಾನಿಗಳಿಗೆ ಖುಷಿ ನೀಡಲಿದೆ. 11 ವರ್ಷಗಳ ಬಳಿಕ ಸರಿಯಾಗಿ ಶುಕ್ರವಾರದಂದೇ 29ನೇ ತಾರೀಕು ಬಂದಿರುವುದು ಕೂಡ ಸ್ಪೆಷಲ್’ ಎನ್ನುತ್ತಾರೆ ನಿರ್ದೇಶಕ ಸುನಿ. ಚಿತ್ರದಲ್ಲಿ ಗಣೇಶ್​ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಎರಡು ಡಿಫರೆಂಟ್ ಶೇಡ್​ನಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದಾರಂತೆ. ಇನ್ನು ಡಿಸೆಂಬರ್ ತಿಂಗಳಲ್ಲಿ ಸಾಲು ಸಾಲು ಸ್ಟಾರ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿರುವುದು ಸಿನಿಪ್ರಿಯರ ಪಾಲಿಗೆ ಸುಗ್ಗಿಯೇ ಸರಿ. ಮೊದಲ ವಾರದಲ್ಲಿ ‘ದುನಿಯಾ’ ವಿಜಯ್ ನಟನೆಯ ‘ಕನಕ’ ಮತ್ತು ಶ್ರೀಮುರಳಿ-ಶಿವರಾಜ್​ಕುಮಾರ್ ಕಾಂಬಿನೇಷನ್​ನ ‘ಮಫ್ತಿ’ ಥಿಯೇಟರ್​ಗೆ ಬರಲಿವೆ. ಆ ಬಳಿಕ ಡಿ.22ಕ್ಕೆ ಪುನೀತ್ ರಾಜ್​ಕುಮಾರ್ ಅವರ ‘ಅಂಜನಿಪುತ್ರ’ ರಿಲೀಸ್ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *

Back To Top