Thursday, 19th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಮಾಹಿತಿಯನ್ನು ಕದಿಯುವ ಫೇಸ್​ಬುಕ್

Thursday, 14.06.2018, 3:03 AM       No Comments

ವಾಷಿಂಗ್ಟನ್: ವ್ಯಕ್ತಿಯ ಖಾಸಗಿತನ ಹಾಗೂ ಆಧಾರ್ ಕುರಿತು ಭಾರತದ ಸುಪ್ರೀಂ ಕೋರ್ಟ್​ನಲ್ಲಿ ಸಾಂವಿಧಾನಿಕ ಪೀಠದ ಮುಂದೆ ವಿಚಾರಣೆ ನಡೆಯುತ್ತಿದೆ. ಆದರೆ ಸಾಮಾಜಿಕ ಜಾಲತಾಣದ ದೈತ್ಯ ಫೇಸ್​ಬುಕ್ ಮಾಹಿತಿ ಕದಿಯುತ್ತಿರುವ ಪಟ್ಟಿಗಳನ್ನು ನೋಡಿದರೆ ಜನಸಾಮಾನ್ಯರು ಹೌಹಾರುವಂತಿದೆ. ಅಮೆರಿಕದ ಕಾಂಗ್ರೆಸ್​ಗೆ ಫೇಸ್​ಬುಕ್ ಸಂಸ್ಥಾಪಕ ಮಾರ್ಕ್ ಝುುಕರ್​ಬರ್ಗ್ ಸಲ್ಲಿಸಿರುವ 222 ಪುಟಗಳ ಮಾಹಿತಿಯು ಸಾಮಾಜಿಕ ಜಾಲತಾಣದ ನೈಜ ಮುಖವನ್ನು ಹೊರಹಾಕಿದೆ.

ಫೇಸ್​ಬುಕ್ ಪಡೆಯುವ ಮಾಹಿತಿಗಳ ಪಟ್ಟಿ:

 • ಫೇಸ್​ಬುಕ್​ನಲ್ಲಿ ಎಷ್ಟು ಸಮಯ ವಿನಿಯೋಗ
 • ಫೇಸ್​ಬುಕ್ ಮೂಲಕ ಖರೀದಿಸಿದ ವಸ್ತುಗಳು
 • ಖಾತೆದಾರರ ಬ್ರೌಸರ್​ಗಳ ಇತಿಹಾಸ
 • ಮೊಬೈಲ್ ಹಾಗೂ ಕಂಪ್ಯೂಟರ್​ಗಳಲ್ಲಿ ಯಾವ್ಯಾವ ಆಪ್​ಗಳ ಬಳಕೆ
 • ವಾಣಿಜ್ಯ ಆಪ್​ಗಳಲ್ಲಿನ ಖರೀದಿ ಇತಿಹಾಸ
 • ಮೊಬೈಲ್​ನಲ್ಲಿ ಬಳಸುವ ಇತರ ಸಾಮಾಜಿಕ ಜಾಲತಾಣದ ಮಾಹಿತಿ
 • ಮೊಬೈಲ್​ನ ಬ್ಯಾಟರಿ ಹಾಗೂ ಸ್ಟೊರೇಜ್ ಪ್ರಮಾಣ
 • ಮೊಬೈಲ್​ಗೆಬಳಸಿದ ಅಂತರ್ಜಾಲ ಸಂಪರ್ಕ, ಬ್ಲ್ಯೂಟೂತ್ ಡಿವೈಸ್, ವೈ-ಫೈ ಡಿವೈಸ್ ಮಾಹಿತಿ
 • ಮೊಬೈಲ್​ಗೆ ಯಾವುದೇ ಡಿವೈಸ್ ಸಂಪರ್ಕ ಮಾಡಿದರೆ ಅದರ ಮಾಹಿತಿ
 • ಮೊಬೈಲ್​ನಲ್ಲಿನ ಆಪರೇಟಿಂಗ್ ಸಿಸ್ಟಮ್ ಫೈಲ್ ಹೆಸರು, ಐಪಿ ವಿಳಾಸ, ಕುಕ್ಕಿ ಡೇಟಾ, ಟೈಮ್ ಝೋನ್, ಅಂತರ್ಜಾಲದ ವೇಗ, ಮೊಬೈಲ್ ಟವರ್ ಮಾಹಿತಿ
 • ಮೊಬೈಲ್ ಇರುವ ಸ್ಥಳ, ಕ್ಯಾಮರಾ, ಚಿತ್ರ ಹಾಗೂ ವಿಡಿಯೋಗಳ ಗ್ಯಾಲರಿ
 • ಮೊಬೈಲ್​ನಲ್ಲಿನ ಸಂಪರ್ಕ ಸಂಖ್ಯೆ, ಸಂದೇಶ, ಕಾಲ್​ಲಾಗ್

Leave a Reply

Your email address will not be published. Required fields are marked *

Back To Top