Wednesday, 17th January 2018  

Vijayavani

ಸೈಟ್‌ಗಾಗಿ ಸಾಹಿತ್ಯ ಬರೀತಾರೆ - ತಲೆಬುಡ ಇಲ್ಲದ ಸಂದೇಶಗಳನ್ನ ಕೊಡ್ತಾರೆ - ಬುದ್ಧಿಜೀವಿಗಳ ಮೇಲೆ ಮುಗಿಬಿದ್ದ ಕಾಂಟ್ರವರ್ಸಿ ಸಚಿವ        ಪೂಜೆ ಮಾಡಲು ಬಂದವನು ಮಗಳನ್ನೇ ಕೇಳ್ದ - ಜನರ ಕೈಗೆ ಸಿಕ್ಕಿ ಹಣ್ಣುಗಾಯಾದ ಪಿಳ್ಳಂಗೋವಿ ಬಾಬಾ - ಚಿತ್ರದುರ್ಗದ ಕಂಚಿಪುರ ಗ್ರಾಮದಲ್ಲಿ ಡೋಂಗಿಗೆ ಥಳಿತ        14 ತಿಂಗಳಿಂದ ಸಂಬಳ ನೀಡದ ಸಕ್ಕರೆ ಕಾರ್ಖಾನೆ - ಚಿಕಿತ್ಸೆಗೆ ಹಣವಿಲ್ಲದೇ ಮಗು ಕಳೆದುಕೊಂಡ ಕಾರ್ಮಿಕ - ರಾಜಕಾರಣಿಗಳ ಕಿತ್ತಾಟಕ್ಕೆ ಹಸುಗೂಸು ಬಲಿ        ಐಪಿಎಸ್‌ ಅಧಿಕಾರಿಗಳಿಗೆ ಸಿಎಂ, ಗೃಹ ಸಚಿವರ ತರಾಟೆ - ಮತೀಯವಾದಿಗಳ ಮೇಲೆ ಕ್ರಮಕ್ಕೆ ಸೂಚನೆ - ವಾರ್ಷಿಕ ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಕ್ಲಾಸ್        ಗುಜರಾತ್​​​​​ನಲ್ಲಿ ಇಸ್ರೇಲ್​ ಪ್ರಧಾನಿ - ಮೋದಿ ಜತೆಗೆ ಕಾರ್‌ನಲ್ಲಿ ಜಂಟಿ ರೋಡ್‌ ಶೋ - ಸಾಬರಮತಿ ಆಶ್ರಮದಲ್ಲಿ ಚರಕ ಸುತ್ತಿದ ನೆತನ್ಯಾಹು       
Breaking News :

ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರು

Saturday, 13.01.2018, 3:02 AM       No Comments

ಸುತ್ತಮುತ್ತಲ ಹಳ್ಳಿಗಳಿಂದ ವ್ಯಾಪಾರಕ್ಕೆ ಆಗಮಿಸಿದ ರೈತರು ಸಿಟಿ ಮಾರ್ಕೆಟ್​ನಲ್ಲಿ ಜನಜಂಗುಳಿ

 

ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ಗರಿಗೆದರಿದ್ದು, ಸುತ್ತಮುತ್ತಲಿನ ಹಳ್ಳಿಗಳಿಂದ ರೈತರು ತಮ್ಮ ಬೆಳೆಗಳೊಂದಿಗೆ ವ್ಯಾಪಾರಕ್ಕೆ ಆಗಮಿಸಿದ್ದಾರೆ.

ಸಂಕ್ರಾಂತಿಯಲ್ಲಿ ಹಣ್ಣು, ತರಕಾರಿ ಮಾತ್ರವಲ್ಲದೇ ಕಬ್ಬಿನ ಜಲ್ಲೆ, ಸಿಹಿ ಪದಾರ್ಥ ಗಳು ಹಾಗೂ ಹೂವಿನ ಮಾರಾಟವೂ ಜೋರಾಗಿರುತ್ತದೆ. ಜ.15ರಂದು ಬಹುತೇಕರು ಸಂಕ್ರಾಂತಿ ಆಚರಿಸುತ್ತಿದ್ದರೂ, ಶುಕ್ರವಾರದಿಂದಲೇ ಮಾರುಕಟ್ಟೆಯಲ್ಲಿ ಖರೀದಿಯ ಭರಾಟೆ ಜೋರಾಗಿದೆ.

ನಗರದ ಪ್ರಮುಖ ಮಾರುಕಟ್ಟೆಗಳಾದ ಕೃಷ್ಣರಾಜೇಂದ್ರ ಮಾರುಕಟ್ಟೆ, ಗಾಂಧಿಬಜಾರ್, ಜಯನಗರ ನಾಲ್ಕನೇ ಹಂತ, ಕೆಆರ್​ಪುರ, ಮಲ್ಲೇಶ್ವರ ಮಾತ್ರವಲ್ಲದೇ ನಂದಿನಿ ಬಡಾವಣೆ, ವಿಜಯನಗರ, ಬನಶಂಕರಿಯ ಕನಕಪುರ ಮುಖ್ಯರಸ್ತೆ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡು ಬರುತ್ತಿದೆ.

ತರಹೇವಾರಿ ಹೂವು-ಹಣ್ಣು: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ತರಹೇವಾರಿ ಹೂವು, ಹಣ್ಣುಗಳನ್ನು ಲಭ್ಯವಿವೆ. ಸುಗ್ಗಿ ಪೂಜೆಗೆ ಹೆಚ್ಚು ಪ್ರಾಶಸ್ಱವಿರುವುದರಿಂದ ಅದಕ್ಕೆ ಬೇಕಾದ ಪದಾರ್ಥಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಮನೆಗಳಲ್ಲಿ ಎಳ್ಳು, ಬೆಲ್ಲ ಹಾಗೂ ಕಬ್ಬಿನ ಜಲ್ಲೆಯನ್ನು ಇರಿಸಿ ಪೂಜಿಸಲಾಗುತ್ತದೆ. ಹೂವುಗಳು ಕಡಿಮೆ ಬಳಕೆಯಾದರೂ ಮಾರುಕಟ್ಟೆಯಲ್ಲಿ ಸಾಮಾನ್ಯ ದಿನಗಳಲ್ಲಿ ನಡೆಯುವ ವ್ಯಾಪಾರಕ್ಕಿಂತ ಹೆಚ್ಚಿನ ವಹಿವಾಟು ನಡೆಯುವುದರಿಂದ ತರೇಹವಾರಿ ಹೂವುಗಳು ಬಂದಿವೆ.

ಕಬ್ಬಿನ ಜಲ್ಲೆ ಮಾರಾಟ ಜೋರಾಗಿದ್ದು, ಪ್ರತಿ ಕಬ್ಬಿನ ಜಲ್ಲೆಗೆ ಹಾಪ್​ಕಾಮ್ಸ್​ನಲ್ಲಿ 35ರೂ. (ಕಪು್ಪ) ಹಾಗೂ 25ರೂ. (ಬಿಳಿ) ಬೆಲೆ ನಿಗದಿಪಡಿಸಲಾಗಿದೆ. ಪ್ರತಿ ಜೋಡಿಗೆ 50 ರಿಂದ 60 ರೂ.ಗೆ ಮಾರಾಟವಾಗುತ್ತಿದ್ದರೆ, ಮಾರುಕಟ್ಟೆಯಲ್ಲಿ 80 ರೂ.ಗೆ ಮಾರಾಟವಾಗುತ್ತಿದೆ.

ಎಳ್ಳು, ಬೆಲ್ಲ ಮಾರಾಟ ಜೋರು

ಪರಸ್ಪರ ಸಿಹಿ ಹಂಚಿ ಆಚರಿಸುವ ಸಂಕ್ರಾಂತಿ ಹಿನ್ನೆಲೆಯಲ್ಲಿ ಎಳ್ಳು- ಬೆಲ್ಲ ಮಿಶ್ರಣದ ಪ್ಯಾಕೆಟ್​ಗಳು ಕೂಡ ಲಭ್ಯವಿದೆ. ಇದಲ್ಲದೇ ಕುಸರೆಳ್ಳಿನ ಮಾರಾಟವೂ ಸಹ ಜೋರಾಗಿದ್ದು, ಗ್ರಾಹಕರಿಗೆ ಉಪಯುಕ್ತವಾಗುವ ರೀತಿ ಮಳಿಗೆಗಳಲ್ಲಿ ಚಿಕ್ಕ ಪ್ಯಾಕೆಟ್​ಗಳನ್ನು ಸಿದ್ಧಪಡಿಸಲಾಗಿದೆ. 5 ರೂ.ಗಳಿಂದ ಹಿಡಿದು ವಿವಿಧ ರೀತಿಯ ಪ್ಯಾಕೆಟ್​ಗಳು ಹಾಗೂ ಬಿಡಿಯಾಗಿಯೂ ಮಾರಾಟ ಮಾಡಲಾಗುತ್ತಿದೆ.

Leave a Reply

Your email address will not be published. Required fields are marked *

Back To Top