Monday, 11th December 2017  

Vijayavani

1. ಸಿಗರೇಟ್​ ಕೊಟ್ರೆ ಮಾತ್ರ ಕಾರ್​ ಹತ್ತಿನಿ – ಇಲ್ಲಾಅಂದ್ರೆ ಡೋರ್ ಹಾಕೋದಕ್ಕೂ ಬಿಡಲ್ಲ – ಪೊಲೀಸರ ಎದ್ರು ಬೆಳಗೆರೆ ಹೈ ಡ್ರಾಮ್​ 2. ನಿನ್ನೆ ಮೌಖಿಕ, ಇಂದು ಲಿಖಿತ ಹೇಳಿಕೆ – ಸಿಸಿಬಿಯಿಂದ ರವಿ 2ನೇ ಪತ್ನಿ ಯಶೋಮತಿ ವಿಚಾರಣೆ – ಅತ್ತ ಸುನೀಲ್​ರಿಂದ ರಕ್ಷಣೆಗೆ ಮನವಿ 3. ಕನ್ನಡ ಜನರ ಓಟು ಪಡೆದು ಶಾಸಕರ ಮರಾಠಿ ಪ್ರೇಮ – ಸಂಜಯ್ ಪಾಟೀಲ್​ರಿಂದ ಕನ್ನಡ ವಿರೋಧಿ ಹೇಳಿಕೆ – ಶಾಸಕರ ನಡೆಗೆ ಜನರು ಕಿಡಿ 4. ಲಿಂಗಾಯತ ಸಮಾವೇಶದಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನ – ತಗ್ಲಾಕೊಂಡವನಿಗೆ ಬಿತ್ತು ಹಿಗ್ಗಾಮುಗ್ಗಾ ಗೂಸಾ – ಒದ್ದು ಪೊಲೀಸರಿಗೆ ಒಪ್ಪಿಸಿದ ಜನ 5. ಗೋಲ್ಡ್​ ಆಗ್ತಿದಾರೆ ಅಕ್ಷಯ್ ಕುಮಾರ್ – ಧೋತಿಯಲ್ಲಿ ಕಿಲಾಡಿ ಚೇರ್​ ಸ್ಟಂಟ್ – ಸೋಶೀಯಲ್ ಮೀಡಿಯಾದಲ್ಲಿ ದೃಶ್ಯ ವೈರಲ್
Breaking News :

ಮಾದಕತೆಗಾಗಿ ಉಪವಾಸ ವ್ರತ!

Friday, 19.05.2017, 3:05 AM       No Comments

‘ಜೂಲಿ’ ಎಂಬ ಶೀರ್ಷಿಕೆಯಲ್ಲೇ ಒಂದು ಬಗೆಯ ಮಾದಕತೆ ಅಡಗಿರುವಂತಿದೆ. 1975ರಲ್ಲಿ ಲಕ್ಷ್ಮೀ ಅಭಿನಯದ ‘ಜೂಲಿ’ ಚಿತ್ರದಿಂದಲೇ ಅಂಥದ್ದೊಂದು ಹಣೆಪಟ್ಟಿ ಬಂದುಬಿಟ್ಟಿದೆ. 2004ರಲ್ಲಿ ನೇಹಾ ಧೂಪಿಯಾ ನಟಿಸಿರುವ ‘ಜೂಲಿ’ಯಲ್ಲೂ ಹಸಿಬಿಸಿ ದೃಶ್ಯಗಳ ಸರಣಿ ಮುಂದುವರಿತ್ತು. ಮಲಯಾಳಂನ ‘ಚಟ್ಟಕಾರಿ’ ಚಿತ್ರ ಕನ್ನಡಕ್ಕೆ ‘ಜೂಲಿ’ ಎಂದೇ ರಿಮೇಕ್ ಆದಾಗ ನಟಿ ರಮ್ಯಾ ಕೂಡ ಬೋಲ್ಡ್ ಆಗಿ ಕ್ಯಾಮರಾ ಎದುರಿಸಿದ್ದರು. ಈಗಿನದ್ದು ನಟಿ ಲಕ್ಷ್ಮೀ ರೈ ಸರದಿ. ನೇಹಾ ನಟಿಸಿದ್ದ ‘ಜೂಲಿ’ಯ ಮುಂದುವರಿದ ಭಾಗವಾಗಿ ‘ಜೂಲಿ 2’ ಸಿದ್ಧವಾಗುತ್ತಿದ್ದು, ಅದರಲ್ಲಿ ಲಕ್ಷ್ಮೀ ರೈ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಬೇರೆಲ್ಲ ನಟಿಯರಿಗಿಂತಲೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಅವರು ಎರಡು ತಿಂಗಳು ಉಪವಾಸ ಮಾಡಿದ್ದಾರಂತೆ!!

ಅರೆರೆ, ಗ್ಲಾಮರ್​ಗೂ ಉಪವಾಸಕ್ಕೂ ಏನು ಸಂಬಂಧ ಎಂದುಕೊಳ್ಳಬೇಡಿ. ಈ ಚಿತ್ರದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಮಾದಕ ಅವತಾರ ಎತ್ತಿರುವ ಅವರ ಪಾತ್ರಕ್ಕೆ ಮೂರು ಭಿನ್ನ ಶೇಡ್ ಇರಲಿದೆಯಂತೆ. ಒಂದು ಶೇಡ್​ಗಾಗಿ 11 ಕೆ.ಜಿ. ತೂಕ ಕಡಿಮೆ ಮಾಡಿಕೊಂಡು, ಇನ್ನೊಂದಕ್ಕಾಗಿ 17 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದಾರೆ. ಅಲ್ಲದೆ, ಮತ್ತೊಂದು ಫೋಟೋಶೂಟ್​ಗಾಗಿ ದೇಹದ ತೂಕ 8 ಕೆ.ಜಿ. ತಗ್ಗಿಸಿಕೊಂಡಿದ್ದಾರೆ. ಅದಕ್ಕಾಗಿ ಅವರು ಒಟ್ಟು 2 ತಿಂಗಳುಗಳ ಕಾಲ ಕಠಿಣ ಡಯೆಟ್ ಆಚರಿಸಿದ್ದಾರಂತೆ. ‘ಅದನ್ನು ಡಯೆಟ್ ಎನ್ನುವುದಕ್ಕಿಂತ ಉಪವಾಸ ಎನ್ನುವುದೇ ಉತ್ತಮ. ಆಹಾರಪ್ರಿಯಳಾದ ನನಗೆ ಅದು ನಿಜಕ್ಕೂ ಕಷ್ಟಕರವಾಗಿತ್ತು’ ಎಂದು ಲಕ್ಷ್ಮಿ ಹೇಳಿಕೊಂಡಿದ್ದಾರೆ. ಇದರಿಂದ ಅವರು ಮಾನಸಿಕ ಖಿನ್ನತೆಗೂ ಒಳಗಾಗಿದ್ದರು ಎಂಬುದೇ ಅಚ್ಚರಿ. ಇಷ್ಟೆಲ್ಲ ಕಷ್ಟಪಟ್ಟ ಬಳಿಕ ಅವರಿಗೆ ಮಾನಸಿಕ ಖಿನ್ನತೆ ಕಾಡತೊಡಗಿತ್ತಂತೆ. ಒಬ್ಬರೇ ಕುಳಿತು ನೋವು ಅನುಭವಿಸಿದ್ದಾರೆ. ಇದು ಶೂಟಿಂಗ್ ಮೇಲೂ ಪರಿಣಾಮ ಬೀರಿದ್ದು, ಚಿತ್ರ ತಡವಾಗಲು ಅವರ ಖಿನ್ನತೆಯೇ ಕಾರಣವಂತೆ.

ಇದೆಲ್ಲದರ ನಡುವೆ ಕಾಸ್ಟಿಂಗ್ ಕೌಚ್ ಬಗ್ಗೆಯೂ ಲಕ್ಷ್ಮೀ ಮಾತನಾಡಿದ್ದಾರೆ. ‘ಚಿತ್ರರಂಗದಲ್ಲಿ ಕೆಲವು ನಿರ್ವಪಕರು ತಮ್ಮ ವೈಯಕ್ತಿಕ ಬಯಕೆ ತೀರಿಸಿಕೊಳ್ಳಲು ಹೆಚ್ಚು ಗಮನ ಹರಿಸುತ್ತಾರೆ. ನಟಿಯರನ್ನು ಅಡ್ಡದಾರಿಗೆ ಎಳೆಯುತ್ತಾರೆ. ಆದರೆ ನನಗೆ ಈವರೆಗೂ ಇಂಥ ಅನುಭವ ಆಗಿಲ್ಲ’ ಎಂದು ಅವರು ನೀಡಿರುವ ಹೇಳಿಕೆ ಚರ್ಚೆಗೆ ಒಳಗಾಗುತ್ತಿದೆ.

‘ಜೂಲಿ 2’ ಚಿತ್ರಕ್ಕಾಗಿ ತುಂಬ ಕಷ್ಟಪಟ್ಟು, ಖಿನ್ನತೆಗೂ ಒಳಗಾಗಿದ್ದೆ. ಯಾರನ್ನೇ ಕಂಡರೂ ಸಿಟ್ಟು ಬರುತ್ತಿತ್ತು. ನನ್ನ ಕುಟುಂಬದವರು ಮತ್ತು ಸ್ನೇಹಿತರ ಸಮಾಧಾನದ ನುಡಿಗಳಿಂದಾಗಿ ಮತ್ತೆ ಮೊದಲಿನಂತಾಗಿದ್ದೇನೆ. ಈ ಶ್ರಮಕ್ಕೆ ಸೂಕ್ತ ಪ್ರತಿಫಲ ಸಿಗುತ್ತದೆ ಎಂಬ ನಂಬಿಕೆಯಲ್ಲಿದ್ದೇನೆ.

| ಲಕ್ಷ್ಮೀ ರೈ ನಟಿ

 

 

 

Leave a Reply

Your email address will not be published. Required fields are marked *

Back To Top