Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಮಾತೃಧರ್ಮ ಅರಸಿ ಹೊರಟಿದೆ ಜಗತ್ತು!

Tuesday, 21.03.2017, 9:13 AM       No Comments

ಮಾತೃಧರ್ಮದೆಡೆಗೆ ಮರಳುವ ಪ್ರಕ್ರಿಯೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕಂಡುಬರುತ್ತಿದೆ. ಪ್ರಪಂಚದ ವಿವಿಧೆಡೆ ನೆಲೆಸಿರುವ ಯಹೂದಿಗಳು ಇಸ್ರೇಲ್ ಸೇರಿ ತಮ್ಮ ಧರ್ಮದೊಂದಿಗೆ ಒಂದಾಗುತ್ತಿದ್ದಾರೆ. ಭಾರತದಲ್ಲೂ ಮತಾಂತರಕ್ಕೆ ಒಳಗಾದ ಜನ ಮಾತೃಧರ್ಮದತ್ತ ಒಲವು ತೋರುತ್ತಿದ್ದಾರೆ.

 ಅವರು ಮುಸಲ್ಮಾನರು, ಅದರಲ್ಲೂ ಭಾರತೀಯ ಮುಸಲ್ಮಾನರು. ಆದರೆ, ಅವರು ತಮ್ಮನ್ನು ತಾವು ಇಸ್ರೇಲಿನವರೆಂದು ಹೇಳಿಕೊಳ್ಳುತ್ತಾರೆ. ಇಸ್ರೇಲಿನೊಂದಿಗೆ ಅನನ್ಯವಾದ ಭಾವನಾತ್ಮಕ ಸಂಬಂಧ ಹೊಂದಿರುವ ಅವರ ಹೃದಯವೂ ಆ ದೇಶಕ್ಕಾಗಿ ಮಿಡಿಯುತ್ತದೆ. ಅವರ ಪರಂಪರೆಯ ಬೇರುಗಳು ಸಹ ಇಸ್ರೇಲಿನೊಂದಿಗೆ ಮಿಳಿತಗೊಂಡಿವೆ. ಈ ಎಲ್ಲ ಭಾವನೆ, ನಂಬಿಕೆಯಲ್ಲಿ ಇವರದ್ದು ಯಾವುದೇ ತಪ್ಪಿಲ್ಲ. ಏಕೆಂದರೆ, ಇವರ ಪೂರ್ವಜರು ಇಸ್ರೇಲಿನಲ್ಲಿದ್ದರು ಹಾಗೂ ಸಾವಿರಾರು ವರ್ಷಗಳ ಮುನ್ನ ಅವರೆಲ್ಲ ಯಹೂದಿಗಳಾಗಿದ್ದರು. ಇವರನ್ನು ಮತಾಂತರ ಮಾಡಿ ಮುಸಲ್ಮಾನರನ್ನಾಗಿಸಿದಾಗ ಧರ್ಮಪ್ರಚಾರಕ್ಕಾಗಿ ಭಾರತಕ್ಕೆ ಬಂದರು. ಇಂದಿಗೂ ಈ ಮುಸಲ್ಮಾನರನ್ನು ಇಸ್ರೇಲಿ ಮುಸಲ್ಮಾನರೆಂದೇ ಗುರುತಿಸಲಾಗುತ್ತದೆ.

ಭಾರತದ ಅಲಿಗಢದಲ್ಲಿ ಇಸ್ರೇಲಿ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಇಲ್ಲಿನ ಕೆಲ ಬಡವಾಣೆಗಳು ಅವರಿಂದಲೇ ಭರ್ತಿಯಾಗಿವೆ. ಸ್ವಾರಸ್ಯದ ಹಾಗೂ ಕುತೂಹಲದ ಸಂಗತಿ ಎಂದರೆ ಇಸ್ರೇಲಿನಿಂದ ಕಳೆದ ವರ್ಷ ಅಲಿಗಢಕ್ಕೆ ಆಗಮಿಸಿದ್ದ ಸಮಾಜ ವಿಜ್ಞಾನಿಗಳ ಹಾಗೂ ಇತಿಹಾಸಕಾರರ ತಂಡ ಭಾರತೀಯ ಮುಸಲ್ಮಾನರ ರಕ್ತ ಪರೀಕ್ಷೆ ನಡೆಸಿದೆ! ಇದನ್ನು ವಿವರವಾಗಿ ವರದಿ ಮಾಡಿದೆ ಅಮೆರಿಕದ ವಾಲ್​ಸ್ಟ್ರೀಟ್ ಜರ್ನಲ್ ಪತ್ರಿಕೆ. ಆಶ್ಚರ್ಯದ ಸಂಗತಿ ಎಂದರೆ ಈ ಸುದ್ದಿ ಭಾರತದ ಯಾವ ಮಾಧ್ಯಮಗಳಲ್ಲೂ ಪ್ರಕಟವಾಗಿಲ್ಲ.

ಇದನ್ನೆಲ್ಲ ಏಕೆ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ವಾಲ್​ಸ್ಟ್ರೀಟ್ ಜರ್ನಲ್ ಪತ್ರಿಕೆ ಹೀಗೆ ಉತ್ತರಿಸಿದೆ: ‘‘ಯಹೂದಿ ಮೂಲದ ಮುಸಲ್ಮಾನರನ್ನು ಗುರುತಿಸಲು ಇಸ್ರೇಲ್ ಭಾರೀ ಆಸಕ್ತಿ ತೋರುತ್ತಿದೆ. ಇದರಂಗವಾಗಿ ಭಾರತದಲ್ಲಿ ನೆಲೆಸಿರುವ ಯಹೂದಿ ಮೂಲದವರನ್ನು ಗುರುತಿಸಲು ಅದು ಭಾರತೀಯ ಮುಸಲ್ಮಾನರ ರಕ್ತ ಪರೀಕ್ಷೆ ನಡೆಸುತ್ತಿದೆ’’.

ಉತ್ತರ ಪ್ರದೇಶದ ಮಲಿಹಾಬಾದ್ ಬಳಿ ನೆಲೆಸಿರುವ ಪಠಾಣರ ಪೂರ್ವಜರು ಸಹ ಇಸ್ರೇಲಿಗಳಾಗಿದ್ದರು ಎಂಬ ಮಾಹಿತಿ ಕೆಲ ತಿಂಗಳುಗಳ ಹಿಂದಷ್ಟೇ ಬೆಳಕಿಗೆ ಬಂದಿತ್ತು. ಇಸ್ರೇಲಿನ ಸಮಾಜಶಾಸ್ತ್ರಜ್ಞರು ಮಲಿಹಾಬಾದ್​ಗೆ ಭೇಟಿ ನೀಡಿ ಪಠಾಣರ ನಂಟು ಇಸ್ರೇಲಿನೊಂದಿಗೆ ಇರುವುದನ್ನು ದೃಢಪಡಿಸಿದ್ದರು. ಇದಕ್ಕಾಗಿ ಪಠಾಣರ ಡಿಎನ್​ಎ ಪರೀಕ್ಷೆ ನಡೆಸಲಾಗಿತ್ತು. ಇದೇ ರೀತಿ ಅಲಿಗಢದ ಮುಸಲ್ಮಾನರು ಮೂಲತಃ ಇಸ್ರೇಲಿನವರು ಎಂಬುದು ರುಜುವಾತಾಗಿದೆ.

ಕಳೆದ ಕೆಲ ವರ್ಷಗಳಿಂದ ಇಸ್ರೇಲ್, ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ನೆಲೆಸಿರುವ ತನ್ನ ದೇಶದ ಮೂಲ ನಿವಾಸಿಗಳನ್ನು ಪತ್ತೆ ಹಚ್ಚಲು ಸಾಕಷ್ಟು ಶ್ರಮ ವಹಿಸುತ್ತಿದೆ. ಖುದ್ದು ಸರ್ಕಾರ ತೋರಿರುವ ಈ ಆಸ್ಥೆಗೆ ಅಲ್ಲಿನ ಜನರ ಬೆಂಬಲವೂ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಸಮಾಜಶಾಸ್ತ್ರಜ್ಞರು, ಇತಿಹಾಸಕಾರರು, ಚಿಂತಕರು ಬೇರೆ ಬೇರೆ ರಾಷ್ಟ್ರಗಳಿಗೆ ಹೋಗಿ ಇಸ್ರೇಲ್ ಮೂಲದವರನ್ನು ಗುರುತಿಸುವ ಹಾಗೂ ಅವರನ್ನು ಮರಳಿ ತಮ್ಮ ರಾಷ್ಟ್ರಕ್ಕೆ ಕರೆತರುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಈ ವಿದ್ಯಮಾನದ ಭಾಗವಾಗಿಯೇ ಪಾಕಿಸ್ತಾನದ ಉತ್ತರ-ಪಶ್ಚಿಮ ಗಡಿಭಾಗದ ಪಠಾಣರ ಪೈಕಿ ಇಸ್ರೇಲ್ ಮೂಲದವರನ್ನು ಶೋಧಿಸಿ ಅವರನ್ನು ವಾಪಸ್ ಇಸ್ರೇಲ್​ಗೆ ಕರೆದೊಯ್ಯಲಾಗಿತ್ತು. ಈ ಪಠಾಣರ ಸಮೂಹ ತಲ್​ಅಬಿಬ್ ತಲುಪಿ ಪುನಃ ಯಹೂದಿಗಳಲ್ಲಿ ಸೇರಿಕೊಂಡಿದೆ.

ಕೇರಳದಲ್ಲೂ ಇದ್ದಾರೆ ಯಹೂದಿಗಳು

ಫ್ಲೋರಿಡಾ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದ ಅಧ್ಯಯನವೊಂದರ ಪ್ರಕಾರ, 1,400 ವರ್ಷಗಳ ಹಿಂದೆ ಮುಸಲ್ಮಾನ ಹಾಗೂ ಯಹೂದಿಗಳ ಮಧ್ಯೆ ಸಂಘರ್ಷ ಏರ್ಪಟ್ಟಾಗ ಸಾಕಷ್ಟು ಸಂಖ್ಯೆಯಲ್ಲಿ ಜನರು ಭಾರತಕ್ಕೆ ಬಂದಿದ್ದರು. ಅವರ ಪೈಕಿ ಕೆಲವರು ಯಹೂದಿಗಳಾದರೆ, ಇನ್ನೂ ಕೆಲವರು ಮುಸಲ್ಮಾನರಾದರು. ಆದರೆ, ಅವರಲ್ಲಿ ಹರಿಯುತ್ತಿದ್ದದ್ದು ಮಾತ್ರ ಇಸ್ರೇಲಿ ರಕ್ತವೇ. ಇಂದಿಗೂ ಮುಂಬೈಯಲ್ಲಿ ನೆಲೆಸಿರುವ ಯಹೂದಿಗಳನ್ನು ಇಸ್ರೇಲಿ ಮೂಲದವರೆಂದೇ ಗುರುತಿಸಲಾಗುತ್ತದೆ. ಕೇರಳದಲ್ಲೂ ಇದೇ ತರಹದ ಯಹೂದಿಗಳು ನೆಲೆಸಿದ್ದಾರೆ.

ಇಸ್ರೇಲ್ ಭೌಗೋಳಿಕವಾಗಿ ಐದಾರು ದಶಕಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದಿದ್ದರೂ, ಸೌದಿ ಅರೇಬಿಯಾ, ಯೆಮನ್, ಪ್ಯಾಲೆಸ್ತಿನ್​ನ್ನು ಒಳಗೊಂಡಿದ್ದ ಆಗಿನ ಅರಬ್​ನಲ್ಲಿ ಯಹೂದಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಭಾರತಕ್ಕೆ ಬಂದ ಯಹೂದಿಗಳು ಮುಸಲ್ಮಾನರಾಗಿ ಮತಾಂತರಗೊಂಡು ಮೂಲಧರ್ಮದಿಂದ ದೂರವಾಗಿದ್ದರು ಸಹ ಅವರ ಸೆಳೆತ ಮಾತ್ರ ಇಸ್ರೇಲ್​ನೆಡೆಗೆ ಇದೆ.

ಬದಲಾವಣೆ ಪರ್ವ

ಹಿಂದೆ, ‘ಕ್ರೂಸೆಡ್ ವಾರ್’ನ ಪರಿಣಾಮ, ಕ್ರೖೆಸ್ತರು ಯುರೋಪಿನತ್ತ ತೆರಳಿದರೆ, ಯಹೂದಿಗಳು ಪ್ಯಾಲೆಸ್ತಿನ್ ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ನೆಲೆಸಿದರು. ಮುಸ್ಲಿಮರೊಡನೆ ಯಹೂದಿಗಳ ಸಂಘರ್ಷ ನಡೆದ ಬಳಿಕ ಅವರು ಆಶ್ರಯಕ್ಕಾಗಿ ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ಚದುರಿಕೊಂಡರು. ಅದೇ ಹೊತ್ತಲ್ಲಿ ಭಾರತದ ಹಲವು ಭಾಗಗಳಲ್ಲಿ ಬಂದು ನೆಲೆಸಿದರು. ಈ ಪೈಕಿ ಕೇರಳ ಹಾಗೂ ಉತ್ತರಪೂರ್ವ ಭಾರತವನ್ನು ಹೆಚ್ಚಿನ ಯಹೂದಿಗಳು ಆಯ್ದುಕೊಂಡರು. ಬಂದವರ ಪೈಕಿ ಕೆಲವರು ಮತಾಂತರವಾದರೆ, ಕೆಲವರು ಯಹೂದಿಗಳಾಗಿಯೇ ಮುಂದುವರಿದರು. ಆದರೆ, ಇವರೆಲ್ಲರನ್ನೂ ಇಸ್ರೇಲಿನ ನಾಗರಿಕರು ತಮ್ಮವರೆಂದು ಕರೆಯುತ್ತಾರೆ. ಏಕೆಂದರೆ ಅವರ ಆಚರಣೆ, ಹಬ್ಬಹರಿದಿನಗಳು ನಮಂತೆಯೇ ಇವೆ ಎನ್ನುತ್ತಾರೆ ಇಸ್ರೇಲ್​ನ ಯಹೂದಿಗಳು. ಭಾರತದಲ್ಲಿ ನೆಲೆಸಿದ್ದ ಯಹೂದಿಗಳ ಪೈಕಿ ಕೆಲವರು ಇಸ್ರೇಲ್​ನ ಪ್ರೇರಣೆಯಿಂದ ಜೆರುಸಲೇಮ್ ಹಾಗೂ ತಲ್​ಅಬಿಬ್​ಗೆ ಮರಳಿ ತಮ್ಮ ಮೊದಲಿನ ಯಹೂದಿ ಧರ್ಮವನ್ನು ಸೇರಿಕೊಂಡಿದ್ದಾರೆ.

ಮಧ್ಯ ಏಷ್ಯಾದಲ್ಲಿ ಯಹೂದಿ ಧರ್ಮವನ್ನು ಅತ್ಯಂತ ಪ್ರಾಚೀನ ಧರ್ಮವೆಂದು ನಂಬಲಾಗಿದೆ. ಆ ಬಳಿಕ ಅಲ್ಲಿ ಕ್ರೖೆಸ್ತ ಮತ ಹಾಗೂ ಬಳಿಕ ಇಸ್ಲಾಂ ಬಂತು. ಬದಲಾದ ಕಾಲ ಹಾಗೂ ಪರಿಸ್ಥಿತಿಗಳನುಸಾರ ನಂತರ ಬಂದ ಧರ್ಮ, ಮತಗಳು ಮೊದಲಿಗೆ ಬಂದ ಧರ್ಮಗಳ ಜನರನ್ನು ಮತಾಂತರ ಮಾಡಿದವು. ಹಾಗೆ ನೋಡಿದಲ್ಲಿ ಪ್ರಪಂಚದಲ್ಲಿ ಯಹೂದಿಗಿಂತ ಪ್ರಾಚೀನವಾದ ಧರ್ಮ ಪಾರ್ಸಿಗಳ ಜರತುಶ್ತ್ ಹಾಗೂ ಚೀನಿಯರ ಕನಫ್ಯೂಶಿಯಸ್​ಗಳಾಗಿವೆ. ಅಲ್ಲದೆ ಭಾರತದಲ್ಲಿ ಸನಾತನ ಧರ್ಮ ಅತ್ಯಂತ ಪ್ರಾಚೀನವಾಗಿದೆ. ಇದಾದ ಬಳಿಕ ಭಾರತದಲ್ಲಿ ಜೈನ, ಬೌದ್ಧ ಧರ್ಮಗಳು ಕಾಣಿಸಿಕೊಂಡವು.

ಯಹೂದಿಯತ್ವಕ್ಕೆ ಮೂಲ ಪ್ರೇರಣೆ ಹಜರತ್ ಇಬ್ರಾಹಿಮ್ ಅವರಾಗಿದ್ದರು. ಇವರ ಬಳಿಕ ಹಜರತ್ ಈಸಾ ಕ್ರೖೆಸ್ತ ಮತವನ್ನು ಹಾಗೂ ಪೈಗಂಬರ್ ಹಜರತ್ ಮೊಹ್ಮದ್ ಇಸ್ಲಾಂನ ಪ್ರಚಾರ-ಪ್ರಸಾರ ಮಾಡಿದರು. ಕ್ರೖೆಸ್ತ ಹಾಗೂ ಇಸ್ಲಾಮ್ ಯಹೂದಿ ಧರ್ಮದ ನಂತರ ಉದಯಿಸಿದ್ದರೂ ಕಾಲಕ್ರಮೇಣ ಯಹೂದಿಗಳೇ ಮತಾಂತರಕ್ಕೆ ಒಳಗಾದರು ಎಂಬುದು ಸಾಬೀತಾಗಿರುವ ಸತ್ಯ. ಭಾರತದ ಮೇಲೆ ವಿದೇಶಿ ಆಕ್ರಮಣದ ಜೊತೆಜೊತೆಗೆ ಭಾರತೀಯ ಉಪಖಂಡದಲ್ಲಿ ಕ್ರೖೆಸ್ತ, ಇಸ್ಲಾಂ ವಿಚಾರಧಾರೆಗಳು ಲಗ್ಗೆ ಇಟ್ಟವು.

ಇಷ್ಟೆಲ್ಲ ಬದಲಾವಣೆಯ ಕಾಲಚಕ್ರ ಉರುಳಿದ ಮೇಲೆ ಧರ್ಮದ ಜಿಜ್ಞಾಸೆಗಳು ಮತ್ತಷ್ಟು ಪ್ರಖರಗೊಂಡಿವೆ. ಇದೇ ಹಿನ್ನೆಲೆಯಲ್ಲಿ, ವಿಶ್ವಾದ್ಯಂತ ಯಹೂದಿ ಧರ್ಮದ ಪ್ರಚಾರ-ಪ್ರಸಾರ ಹೇಗೆ ನಡೆಯಿತು ಹಾಗೂ ವಿಶ್ವದ ಯಾವ-ಯಾವ ಭಾಗಗಳಲ್ಲಿ ಯಹೂದಿಗಳು ನೆಲೆಸಿದ್ದಾರೆ ಎಂಬ ಬಗ್ಗೆ ಇಸ್ರೇಲ್ ಭಾರಿ ಕುತೂಹಲದಿಂದ ಸಂಶೋಧನೆ ನಡೆಸುತ್ತಿದೆ. ಅದೇ ರೀತಿ ಭಾರತೀಯ ಜನತೆ ಇಸ್ಲಾಂ ಹಾಗೂ ಕ್ರೖೆಸ್ತ ಧರ್ಮದ ಆರಾಧಕರಾಗಿ ಹೇಗೆ ಪರಿವರ್ತಿತರಾದರು? ಎಂಬುದರ ಬಗ್ಗೆ ಸನಾತನ ಧರ್ಮ ಚಿಂತನೆ ನಡೆಸುತ್ತಿದೆ.

ಹಿಂದೆಲ್ಲ ಆಕ್ರಮಣಕೋರರು ತಾವು ಸೋಲಿಸಿದ ರಾಷ್ಟ್ರದ ಮೇಲೆ ತಮ್ಮ ಧರ್ಮವನ್ನೂ ಹೇರುತ್ತಿದ್ದರು. ಯಹೂದಿಗಳು ತಮ್ಮ ಶಕ್ತಿ ಇರುವವರೆಗೆ ಹೀಗೆ ಮಾಡಿದರು. ಬಳಿಕ ಬಂದ ಕ್ರೖೆಸ್ತ, ಇಸ್ಲಾಂಗಳು ಸಹ ಆಕ್ರಮಣಕ್ಕೊಳಗಾದ ದೇಶದ ಮೇಲೆ ಹೇರಲ್ಪಟ್ಟವು.

ಹೊಸ ಚಿಂತನೆ

16 ಹಾಗೂ 20ನೇ ಶತಮಾನದ ಆದಿಯಲ್ಲಿ ವಿಶ್ವದ ಹಲವೆಡೆ ಪ್ರಜಾತಂತ್ರ ಉದಯಿಸಿದಾಗ ಒಂದು ಹೊಸ ಚಿಂತನೆ ಚರ್ಚೆಗೆ ಬಂತು. ಅದೆಂದರೆ, ವಿಭಿನ್ನ ಆಸ್ಥೆಗಳು ಅವರವರ ಹಳೆಯ ಧರ್ಮಕ್ಕೆ ಮರಳುವ ಸಮಯ ಬಂದಿದೆಯೇ? ಏಷ್ಯಾ, ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕಗಳ ಜನರನ್ನು ಗುಲಾಮರನ್ನಾಗಿ ಮಾಡಿಕೊಂಡಿದ್ದ ಉತ್ತರ ಅಮೆರಿಕದಲ್ಲಿ ಈ ಚಿಂತನೆ ಗರಿಗೆದರಿತು. ಧಾರ್ವಿುಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪೌರಾಣಿಕದ ಆಧಾರದಲ್ಲಿ ನಾವು ಮತ್ತೆ

ಮಾತೃಧರ್ಮವನ್ನು ಸೇರಿಕೊಳ್ಳುವ ಕಾಲ ಬಂದಿದೆಯೆ? ಎಂದು ಗುಲಾಮಗಿರಿಗೆ ಒಳಗಾದ ಜನ ಪ್ರಜಾತಂತ್ರದ ಛತ್ರಛಾಯೆಯಡಿ ಪ್ರಶ್ನಿಸಿಕೊಂಡರು. ಇದೇ ಹೊತ್ತಲ್ಲಿ ಅಮೆರಿಕದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಮೋಡಿ ಮಾಡಿದರು. ನಿಗ್ರೋ ಸಮುದಾಯದವರಲ್ಲಿ ಅವರ ದೇಶ, ಅವರ ಮೂಲದ ಬಗ್ಗೆ ಲೂಥರ್ ಅರಿವು ಮೂಡಿಸಿದಾಗ ಇಡೀ ಅಮೆರಿಕ ನಡುಗಿತು. ಬಳಿಕ ನಿಗ್ರೋಗಳಿಗೆ ಅಧಿಕಾರ ನೀಡಲಾರಂಭಿಸಿದಾಗಲೇ ತಾವು ಯಾರು? ಎಲ್ಲಿಂದ ಬಂದವರು ಎಂಬ ಪ್ರಶ್ನೆ ನಿಗ್ರೋಗಳನ್ನು ಕಾಡಲಾರಂಭಿಸಿತು. ಇದೇ ಹೊತ್ತಲ್ಲಿ ‘ದಿ ರೂಟ್’ ಎಂಬ ಪ್ರಸಿದ್ಧ ಉಪನ್ಯಾಸ ಅಮೆರಿಕದಲ್ಲಿ ಪ್ರಕಟವಾಯಿತು. ‘ದಿ ರೂಟ್’ನ ನಾಯಕ ಕೂಡ ತಾನು ಎಲ್ಲಿಂದ

ಬಂದವನು ಎಂಬ ಶೋಧದಲ್ಲಿ ತೊಡಗಿರುತ್ತಾನೆ. ತನ್ನ ವಂಶಸ್ಥರ ಹುಡುಕಾಟ ಅವನನ್ನು ನೈಜೀರಿಯಾಗೆ ತಲುಪಿಸುತ್ತದೆ. ಅಲ್ಲಿ ಅವನ ಪೂರ್ವಜರನ್ನು ಗುಲಾಮರನ್ನಾಗಿ ಮಾಡಿ ಅಮೆರಿಕಕ್ಕೆ ತಂದಿರಲಾಗುತ್ತದೆ. ಅಂದರೆ ಪ್ರಜಾಪ್ರಭುತ್ವದ ಹೊಸ ಅಲೆ ಅವರನ್ನು (ನಿಗ್ರೋ) ತಮ್ಮ ಮಾತೃಧರ್ಮದತ್ತ ಮರಳಲು ಪ್ರೇರೇಪಿಸುತ್ತದೆ. ನೆಲ್ಸನ್ ಮಂಡೇಲಾ ಸಹ ತಮ್ಮ ಸಾಂಸ್ಕೃತಿಕ ಇತಿಹಾಸವನ್ನು ಸ್ಮರಿಸುತ್ತಾ, ಬಿಳಿಯರಿಗೆ ‘ನೀವು ಇನ್ನೂ ಹೆಚ್ಚು ದಿನ ಇಲ್ಲಿರಲಾರಿರಿ’ ಎಂದು ಗುಡುಗಿದ್ದರು.

ಭಾರತೀಯತ್ವಕ್ಕೆ ಪೂರಕ

ಫಿಜಿ, ಮಾರಿಷಸ್​ಗಳಂಥ ಎಂಟು ರಾಷ್ಟ್ರಗಳಲ್ಲಿ 2 ಕೋಟಿ ಭಾರತೀಯರಿದ್ದಾರೆ. ಅವರಲ್ಲೂ ಈಗ ತಮ್ಮ ಮೂಲದ ಬಗ್ಗೆ ಅರಿವು ಜಾಗೃತವಾಗಿದೆ. ಇವರನ್ನು ಭಾರತದಿಂದ ಗುಲಾಮರನ್ನಾಗಿಸಿ ಕರೆದುಕೊಂಡು ಬರಲಾಗಿತ್ತು. ಆದರೆ, ಅವರೀಗ ಪ್ರಜಾಪ್ರಭುತ್ವದಡಿ ಸ್ವತಂತ್ರರು. ಹಾಗಾಗಿ ತಾವಿರುವ ರಾಷ್ಟ್ರಗಳಲ್ಲೇ ಭಾರತೀಯತೆಯನ್ನು ಬೆಳೆಸಿ, ಪೋಷಿಸಲು ನಿರ್ಧರಿಸಿದ್ದಾರೆ. ಭಾರತೀಯ ಉಪಖಂಡದಲ್ಲೂ ಇದೇ ಮಾನಸಿಕತೆ ಕಂಡಿಬಂದಿದೆ.

ಈ ಬದಲಾವಣೆಯ ಗಾಳಿ ಅವರವರ ಅಸ್ತಿತ್ವವನ್ನು ಅರಿಯುವ ಯತ್ನಕ್ಕೆ ಸಹಾಯವಾಗಲಿದೆ. ಇದರ ಸತ್ಯ ಗೊತ್ತಾದಾಗ ಈಗ ನಡೆಯುತ್ತಿರುವ ಜಾತಿ, ಕೋಮು ಸಂಘರ್ಷಗಳು ಕೂಡ ಕೊನೆಯಾಗಬಹುದು. ತಮ್ಮತನವನ್ನು ಅರಿಯುವುದು ವಿಶಿಷ್ಟವಾದ ಪ್ರಯತ್ನ. ಈ ನಿಟ್ಟಿನಲ್ಲಿ ವಿಶ್ವದ ಹಲವೆಡೆ ಸಾಮೂಹಿಕ ಪ್ರಯತ್ನಗಳು ನಡೆಯುತ್ತಿರುವುದು ಸ್ವಾಗತಾರ್ಹ ಬದಲಾವಣೆಯೆಂದೇ ಹೇಳಬಹುದು.

(ಲೇಖಕರು ರಾಷ್ಟ್ರೀಯ ಉರ್ದು ವಿಕಾಸ ಪರಿಷದ್​ನ ಉಪಾಧ್ಯಕ್ಷರು ಮಧ್ಯಪ್ರಾಚ್ಯ, ಪಾಕಿಸ್ತಾನ ವಿದ್ಯಮಾನಗಳ ನುರಿತ ವಿಶ್ಲೇಷಕರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಬರಹಗಾರರು)

Leave a Reply

Your email address will not be published. Required fields are marked *

Back To Top