Monday, 25th September 2017  

Vijayavani

1. ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಅಬ್ಬರಿಸಿದ ವರುಣ- ಕೆರೆಯಂತಾಗಿದ್ದವು ಅಂಡರ್​ಪಾಸ್​- ಮೈಸೂರು ಬ್ಯಾಂಕ್​ ಸರ್ಕಲ್​ನಲ್ಲಿ ಪಲ್ಟಿಯಾಯ್ತು ವಾಹನ 2. ಇಂದು ದೀನ್​ ದಯಾಳ್​​ ಜನುಮ ದಿನ- ಲೋಕಾರ್ಪಣೆಗೊಳ್ಳಲಿದೆ ವಿದ್ಯುತ್​ ಭವನ- ಕುಸಿದ ಅರ್ಥವ್ಯವಸ್ಥೆಗೆ ಮೋದಿ ನೀಡ್ತಾರಾ ಟಾನಿಕ್​ 3. ಬಾರ್ಡರ್​ ವಿಸಿಟ್​ಗೆ ಹೊರಟ ಹೋಮ್​ ಮಿನಿಸ್ಟರ್​- ಸೆ.28 ರಿಂದ 4 ದಿನಗಳ ಪ್ಲಾನ್​- ಡೋಕ್ಲಾಂ ಪ್ರದೇಶಕ್ಕೆ ಮೊದಲ ಭೇಟಿ 4. ಜರ್ಮನಿ ಸಂಸತ್ತಿನ ಚುನಾವಣೋತ್ತರ ಸಮೀಕ್ಷೆ- ಮಾರ್ಕೆಲ್​ ಮತ್ತೆ ಚಾನ್ಸಲರ್​ ಆಗೋ ಸಾಧ್ಯತೆ- ಅಲ್ಟರ್​ನೇಟಿವ್​ ಜರ್ಮನಿಗಿಲ್ಲ ಮನ್ನಣೆ 5. 3ನೇ ಪಂದ್ಯದಲ್ಲೂ ಕಾಂಗರೂ ಪಡೆ ಉಡೀಸ್‌- ರೋಹಿತ್, ಪಾಂಡ್ಯ ಆಟಕ್ಕೆ ಆಸೀಸ್‌ ಪೀಸ್‌ ಪೀಸ್‌- ಟೀಂ ಇಂಡಿಯಾ ಪಾಲಾಯ್ತು ಸಿರೀಸ್‌
Breaking News :

ಮಾತೃದೇವೋ ಭವ

Thursday, 14.09.2017, 3:00 AM       No Comments

ಒಬ್ಬ ಶಿಷ್ಯ ಗುರುದೇವರ ಬಳಿ ಬಂದಾಗ ಯಾವುದಾದರೂ ಮಂತ್ರೋಪದೇಶವನ್ನು ಪಡೆಯಬೇಕೆಂಬ ಬಯಕೆ ಇಟ್ಟುಕೊಂಡಿದ್ದನು. ಅದರಂತೆ ಗುರುಗಳ ದರ್ಶನಕ್ಕೆ ಬಂದಾಗ ಗುರುಗಳ ಬಳಿ ‘ಯಾವುದಾದರೂ ಮಂತ್ರವನ್ನು ಉಪದೇಶಿಸಿದರೆ ಕೃತಾರ್ಥನಾಗುತ್ತೇನೆ’ ಎಂದು ಬಿನ್ನವಿಸಿಕೊಂಡನು. ತ್ರಿಕಾಲಜ್ಞಾನಿಗಳಾಗಿದ್ದ ಗುರುಗಳಿಗೆ ಆ ವ್ಯಕ್ತಿಯ ಪೂರ್ವಾಪರ ತಿಳಿದುಹೋಗಿತ್ತು.

ಗುರುಗಳು: ಮಾತೃದೇವೋಭವ ಎನ್ನುವ ವೇದವಾಕ್ಯ ಕೇಳಿದ್ದೀರೋ?

ಶಿಷ್ಯ: ಕೇಳಿದ್ದೇನೆ.

ಗುರುಗಳು: ಪಿತೃದೇವೋಭವ ಎನ್ನುವುದನ್ನು ಕೇಳಿದ್ದೀರೋ?

ಶಿಷ್ಯ: ಕೇಳಿದ್ದೇನೆ

ಗುರುಗಳು: ಮೊದಲು ಅವೆರಡನ್ನು ಪಾಲಿಸಿ. ನೀವು ನಿಮ್ಮ ತಂದೆ-ತಾಯಿಗಳನ್ನು ಈ ಇಳಿವಯಸ್ಸಿನಲ್ಲಿ ದೂರಮಾಡಿ ನಮ್ಮ ಬಳಿ ಮಂತ್ರೋಪದೇಶ ಪಡೆಯಲು ಬಂದಿದ್ದೀರಿ. ಮೊದಲು ಅವರನ್ನು ಮನೆಗೆ ಕರೆಸಿ ಚೆನ್ನಾಗಿ ನೋಡಿಕೊಳ್ಳಿ. ಮೊದಲು ಮಾತೃದೇವೋಭವ, ಪಿತೃದೇವೋಭವ, ನಂತರ ಆಚಾರ್ಯದೇವೋಭವ. ಮೊದಲೆರಡನ್ನು ಪಾಲಿಸಿ ನಂತರ ನಮ್ಮ ಬಳಿ ಬನ್ನಿ, ಆಗ ಮಂತ್ರೋಪದೇಶ ಮಾಡುತ್ತೇವೆ.

ಶಿಷ್ಯ: ಸ್ವಾಮಿಗಳೇ, ಈಗ ನನ್ನ ತಪ್ಪಿನ ಅರಿವಾಗಿದೆ. ಇನ್ನು ಮುಂದೆ ನನ್ನ ತಂದೆ, ತಾಯಿಯ ಜೊತೆಯಲ್ಲೇ ಇದ್ದು, ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಮಾತೃದೇವೋಭವ, ಪಿತೃದೇವೋಭವ ಎಂಬ ಮೊದಲೆರಡನ್ನು ಪಾಲಿಸಿ ನಂತರ ನಿಮ್ಮ ಬಳಿ ಮಂತ್ರೋಪದೇಶಕ್ಕೆ ಬರುತ್ತೇನೆ. ಹೀಗೆ ಗುರುಗಳು ತಮ್ಮ ಹಿತನುಡಿಯಿಂದಲೇ ಎಲ್ಲರನ್ನೂ ತಿದ್ದುತ್ತಿದ್ದರು.

Leave a Reply

Your email address will not be published. Required fields are marked *

Back To Top