Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ಮಾಜಿ ಸಚಿವ ಹಾಲಪ್ಪಗೆ ಬಿಗ್ ರಿಲೀಫ್

Friday, 18.08.2017, 3:02 AM       No Comments

ಶಿವಮೊಗ್ಗ: ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾಗಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ ಅವರನ್ನು ಅಧೀನ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ.

ಶಿವಮೊಗ್ಗ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಗುರುವಾರ ಪ್ರಕಟಿಸಿದ ತೀರ್ಪು ಹಾಲಪ್ಪಗೆ ವಿಧಾನಸಭಾ ಚುನಾವಣಾ ವರ್ಷದಲ್ಲಿ ಬಿಗ್ ರಿಲೀಫ್ ನೀಡಿದಂತಾಗಿದೆ. ಆರೋಪ ಸಾಬೀತುಪಡಿಸಲು ಸಾಕ್ಷಿಗಳು ವಿಫಲವಾಗಿರುವ ಕಾರಣ ಅವರನ್ನು ಖುಲಾಸೆಗೊಳಿಸಿ ತೀರ್ಪು ನೀಡಲಾಗಿದೆ ಎಂದು ನ್ಯಾಯಾಧೀಶರಾದ ಬಿ.ಜಿ.ರಮಾ ಆದೇಶ ಪ್ರತಿ ಓದಿದರು.

2009ರ ನವೆಂಬರ್ 26ರಂದು ಪ್ರಕರಣ ನಡೆದಿದೆ ಎನ್ನಲಾಗಿದ್ದು, ಈ ಸಂಬಂಧ ಶಿವಮೊಗ್ಗದ ಚಂದ್ರಾವತಿ ಎಂಬುವರು 2010ರ ಮೇ 3ರಂದು ವಿನೋಬ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಾಲಪ್ಪ ವಿರುದ್ಧ ಐಪಿಸಿ ಸೆಕ್ಷನ್ 376, 342, 506, 341 ಹಾಗೂ 34ರಡಿ ಪ್ರಕರಣ ದಾಖಲಾಗಿತ್ತು. ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸುದೀರ್ಘ ಏಳು ವರ್ಷಗಳ ಕಾಲ ವಿಚಾರಣೆ ನಡೆಸಿ ತೀರ್ಪು ನೀಡಿತು.

ಏನಿದು ಪ್ರಕರಣ?: 2009ರಲ್ಲಿ ಅಂದಿನ ಬಿಜೆಪಿ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾಗಿದ್ದ ಹರತಾಳು ಹಾಲಪ್ಪ, ತನ್ನ ಸ್ನೇಹಿತ ಶಿವಮೊಗ್ಗದ ವೆಂಕಟೇಶಮೂರ್ತಿ ಎಂಬುವರ ಪತ್ನಿ ಚಂದ್ರಾವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. 2010ರಲ್ಲಿ ಈ ಪ್ರಕರಣ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ವರದಿ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಸಲ್ಲಿಸಿದ ಮರು ದಿನ ಚಂದ್ರಾವತಿ ದೂರು ದಾಖಲಿಸಿದ್ದರು.

ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸಬೇಕೆಂದು ಪ್ರತಿಪಕ್ಷ ಹಾಗೂ ವಿವಿಧ ಮಹಿಳಾ ಪರ ಸಂಘಟನೆಗಳಿಂದ ಆಗ್ರಹ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಸುದೀರ್ಘ ತನಿಖೆ ನಡೆಸಿದ ಸಿಐಡಿ ತಂಡ ಆರೋಪ ಪಟ್ಟಿ ಸಲ್ಲಿಸಿತ್ತು.

***

ಸಿಗಂದೂರಿನಲ್ಲಿ ಪ್ರಮಾಣ ಮಾಡಿದ್ದ ಹಾಲಪ್ಪ

ಅತ್ಯಾಚಾರ ಆರೋಪ ಕೇಳಿ ಬಂದಾಗ ಹರತಾಳು ಹಾಲಪ್ಪ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ತೆರಳಿ ಪ್ರಮಾಣ ಮಾಡಿ, ‘ನಾನು ಯಾವುದೇ ತಪ್ಪು ಮಾಡಿಲ್ಲ. ತಪ್ಪು ನಡೆದಿದೆ ಎನ್ನುವುದಾದರೆ ನನಗೆ ಶಿಕ್ಷೆಯಾಗಲಿ’ ಎಂದಿದ್ದರು. ತೀರ್ಪು ಪ್ರಕಟವಾದ ಬಳಿಕ ಹಾಲಪ್ಪ ನೇರ ಸಿಗಂದೂರಿಗೆ ತೆರಳಿ ಚೌಡೇಶ್ವರಿಗೆ ಪೂಜೆ ಸಲ್ಲಿಸಿದರು.

***

ಹಾಲಪ್ಪ ಪರವಾದ ಅಂಶಗಳಿವು

ಪ್ರಕರಣ ನಡೆದ ದಿನ ಹರತಾಳು ಹಾಲಪ್ಪ ಫಾರೆಸ್ಟ್ ಗೆಸ್ಟ್ ಹೌಸ್​ನಲ್ಲಿ ದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. ಸಂತ್ರಸ್ತೆಯ ಪತಿ ಪೊಲೀಸರ ಮುಂದೆ 9 ಬಾರಿ ಹೇಳಿಕೆ ಬದಲಿಸಿದ್ದರು.

ದೂರಿನಲ್ಲಿ ತಿಳಿಸಿರುವ ಅಂಶಕ್ಕೂ ನ್ಯಾಯಾಲಯದ ವಿಚಾರಣೆ ವೇಳೆ ದೂರುದಾರರು ನೀಡಿರುವ ಮಾಹಿತಿಗೂ ತಾಳೆಯಾಗಿಲ್ಲ.

ಘಟನೆ ನಡೆದ ಸಂದರ್ಭದಲ್ಲಿ ದೂರುದಾರರ ಮಕ್ಕಳು ಲಾಡ್ಜ್​ನಲ್ಲಿದ್ದರು. ಮಕ್ಕಳಿಗೆ ತಂದೆಯೇ ಕೊಠಡಿ ಬುಕ್ ಮಾಡಿದ್ದರು.

ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿ ದೃಶ್ಯಾವಳಿಗಳನ್ನು ಸಿಡಿ ರೂಪದಲ್ಲಿ ನೀಡಲಾಗಿತ್ತು. ಆದರೆ, ಮೂಲ ರೂಪವಾಗಿದ್ದ ಹಾರ್ಡ್ ಡಿಸ್ಕ್ ಒದಗಿಸುವಲ್ಲಿ ದೂರುದಾರರು ವಿಫಲರಾಗಿದ್ದರು.

***

ಸತ್ಯಮೇವ ಜಯತೆ. ಅಂತಿಮವಾಗಿ ಸತ್ಯಕ್ಕೆ ಜಯ ಲಭಿಸಿದೆ. ನ್ಯಾಯಾಂಗದಲ್ಲಿ ನಂಬಿಕೆಯಿತ್ತು. ಹೀಗಾಗಿ ಏಳೂವರೆ ವರ್ಷದಿಂದ ತಾಳ್ಮೆಯಿಂದಿದ್ದೆ. ನಾನು ಟಿಕೆಟ್ ಕೇಳುತ್ತೇನೆ. ನನ್ನ ಮೇಲಿನ ಆರೋಪ ಸುಳ್ಳು ಎಂಬುದನ್ನು ಜನರಿಗೆ ತಿಳಿಸಲು ಚುನಾವಣೆಯನ್ನೇ ವೇದಿಕೆಯಾಗಿ ಬಳಸಿಕೊಳ್ಳುವೆೆ.

| ಹರತಾಳು ಹಾಲಪ್ಪ, ಮಾಜಿ ಸಚಿವ

***

ರಾಜಕೀಯ ಪುನರ್ಜನ್ಮ

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಹೊರಬಂದಿರುವ ಕೋರ್ಟ್ ತೀರ್ಪು ಹರತಾಳು ಹಾಲಪ್ಪ ಅವರಿಗೆ ರಾಜಕೀಯ ಮರು ಜನ್ಮ ನೀಡಿದೆ. ಇದು ಶಿವಮೊಗ್ಗ ರಾಜಕೀಯದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ.

ಸೊರಬ ಕ್ಷೇತ್ರದಲ್ಲಿ ಅವರ ಸಾಹೇಬರಿಗೆ (ಎಸ್. ಬಂಗಾರಪ್ಪ) ಸೆಡ್ಡು ಹೊಡೆದು ಅವರದೇ ಕ್ಷೇತ್ರದಲ್ಲಿ 2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸೊರಬದಲ್ಲಿ ಬಿಜೆಪಿ ಖಾತೆ ತೆರೆದಿದ್ದ ಹಾಲಪ್ಪ, ಬಂಗಾರಪ್ಪ ಅವರ ಇಬ್ಬರು ಪುತ್ರರಿಗೂ ಸೋಲುಣಿಸಿದ್ದರು. ಸರ್ಕಾರದ ಅವಧಿ ಇನ್ನೂ 3 ವರ್ಷಗಳಿದ್ದಾಗಲೇ ಸಚಿವ ಸ್ಥಾನ ತ್ಯಜಿಸು ವಂತಾಗಿದ್ದು ಹಲವು ರೀತಿಯಲ್ಲಿ ರಾಜಕೀಯ ಹಿನ್ನಡೆಗೆ ಕಾರಣವಾಯಿತು. ಇನ್ನೂ 3 ವರ್ಷ ಸಚಿವರಾಗಿದ್ದರೆ ಸೊರಬದಲ್ಲಿ ಇನ್ನಷ್ಟು ಪ್ರಭಾವ ಬೆಳೆಸಿಕೊಳ್ಳುವ ಅವಕಾಶವಿತ್ತು. ಹೀಗಾಗಿ 2013ರ ವಿಧಾನಸಭಾ ಚುನಾವಣೆ ಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸೋಲುಂಡರು. ರಾಜಕೀಯ ಎದುರಾಳಿಗಳು ಪದೆಪದೇ ಅತ್ಯಾಚಾರ ಆರೋಪ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದರು.

ಹೊಸ ಲೆಕ್ಕಾಚಾರಗಳು: ಸೊರಬದಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಬಿಜೆಪಿಗೆ ಸೇರಿರುವುದರಿಂದ ಹಾಲಪ್ಪ ಮುಂದಿನ ಹಾದಿ, ಅವಕಾಶಗಳೇನು ಎಂಬ ಪ್ರಶ್ನೆ ಚಾಲ್ತಿಗೆ ಬಂದಿದೆ. ಸೊರಬದಲ್ಲಿ ಕುಮಾರ್​ಗೆ ಅವಕಾಶ ಕೊಟ್ಟರೆ ಸಹೋದರರ ನಡುವೆ ನೇರ ಸ್ಪರ್ಧೆ ಏರ್ಪಡುವುದರಿಂದ ಮತ ವಿಭಜನೆ ತಪ್ಪಿದಂತಾಗುತ್ತದೆ. ಹೀಗಾಗಿ ಸಾಗರ ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕರೆ ಜನರ ಜತೆ ಸುಲಭವಾಗಿ ಬೆರೆಯುವ ಹಾಲಪ್ಪಗೆ ಗೆಲುವು ಸಲೀಸು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿದೆ ಎಂದು ಹೇಳಲಾಗುತ್ತಿದೆ.

***

ಹರತಾಳು ಹಾಲಪ್ಪ ನಿರಪರಾಧಿ ಅಂತ ಮೊದಲೇ ಗೊತ್ತಿತ್ತು. ಅನಿವಾರ್ಯವಾಗಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಕರಣದಿಂದ ಸುಧಾರಿಸಿಕೊಳ್ಳಲು ಅವರಿಗೆ ಸಾಕಷ್ಟು ದಿನಗಳು ಬೇಕಾಯಿತು. ನ್ಯಾಯಾಲಯ ಉತ್ತಮ ತೀರ್ಪು ನೀಡಿದೆ.

| ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

***

ಪ್ರಕರಣದ ಮುಖ್ಯಾಂಶ

  • ಪ್ರಕರಣ ನಡೆದಿದೆ ಎನ್ನಲಾದ ದಿನ 2009, ನ. 26
  • ಮಾಧ್ಯಮಗಳಲ್ಲಿ ವರದಿ ಪ್ರಕಟ 2010, ಮೇ 2
  • ಸಚಿವ ಸ್ಥಾನಕ್ಕೆ ರಾಜೀನಾಮೆ 2010, ಮೇ 2
  • ನ್ಯಾಯಾಂಗ ಬಂಧನ 2010, ಮೇ 10
  • ಹೈಕೋರ್ಟ್​ನಲ್ಲಿ ಜಾಮೀನು 2011, ಮಾರ್ಚ್ 31

Leave a Reply

Your email address will not be published. Required fields are marked *

Back To Top