Monday, 23rd April 2018  

Vijayavani

ಬಾದಾಮಿ ಕಾಂಗ್ರಸ್​​​​​ನಲ್ಲಿ ಭಿನ್ನಮತ- ಚಿಮ್ಮನಕಟ್ಟಿ, ದೇವರಾಜ್​​ ಪಾಟೀಲ್​​ ಕೋಲ್ಡ್​ವಾರ್​- ಪ್ರತ್ಯೇಕ ಸಭೆಗೆ ದೇವರಾಜ್​​ ಪಾಟೀಲ್ ನಿರ್ಧಾರ        ಇನ್ನೂ ಐದು ವರ್ಷ ಕ್ಷೇತ್ರಕ್ಕೆ ಬರಲ್ಲ- ನಾನು ಬರದಿದ್ರೆ ನಿಂಗೇನು ತೊಂದರೆ- ಕಾರ್ಯಕರ್ತರ ಕೋರಿಕೆಗೆ ಸಂತೋಷ್​​ ಲಾಡ್​​ ದರ್ಪ        ಇಂದು ಬೆಂಗಳೂರಲ್ಲಿ ಅಂಬಿ ಸುದ್ದಿಗೋಷ್ಠಿ- ಚುನಾವಣಾ ಕಣದಿಂದ ಹಿಂದೆ ಸರಿದ ಅಂಬರೀಷ್​​​​- ಹೈಕಮಾಂಡ್​ಗೆ ಅಂಬಿ ಮಾಹಿತಿ        ಅಖಾಡದಲ್ಲಿ ಮತ್ತೆ ಒಂದಾದ ರೆಡ್ಡಿ ಬ್ರದರ್ಸ್​- ಕರುಣಾಕರರೆಡ್ಡಿಗೆ ಜನಾರ್ದನ ರೆಡ್ಡಿ ಸಾಥ್​- ಶಮನವಾಯ್ತು ಮುನಿಷು        ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರ- ಇಂದು ಹೈಕೋರ್ಟ್​​​ನಲ್ಲಿ ವಿಚಾರಣೆ- ಸಿಎಟಿ ವಿರುದ್ಧ ಕೋರ್ಟ್​​ ಮೆಟ್ಟಿಲೇರಿರೋ ಜಿಲ್ಲಾಧಿಕಾರಿ        ಸಿಜೆಐ ವಿರುದ್ಧ ಮಹಾಭಿಯೋಗ ಪ್ರಸ್ತಾಪ- ಉಪರಾಷ್ಟ್ರಪತಿಯಿಂದ ವಿಪಕ್ಷಗಳ ನಿರ್ಣಯ ತಿರಸ್ಕಾರ- ಕಾಂಗ್ರೆಸ್​ಗೆ ಮತ್ತೆ ಮುಖಭಂಗ       
Breaking News

ಮಹೀಂದ್ರಾದಿಂದ ಟಿಯುವಿ 300 ಟಿ10 ಅನಾವರಣ

Friday, 06.10.2017, 3:00 AM       No Comments

ಬೆಂಗಳೂರು: ಮಹೀಂದ್ರಾ ತನ್ನ ಟಿಯುವಿ 300ನ ಹೊಸ ಆವೃತ್ತಿಯ ಟಿ10 ಅನ್ನು ಇತ್ತೀಚಿಗೆ ಮುಂಬೈನಲ್ಲಿ ಅನಾವರಣ ಮಾಡಿದೆ.

ಮಹೀಂದ್ರಾ ಆಂಡ್ ಮಹೀಂದ್ರಾ ಲಿಮಿಟೆಡ್ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ವೀಜಾಯ್ ರಾಮ್ ನಕ್ರ ಮಾತನಾಡಿ, ಗ್ರಾಹಕರ ಇಚ್ಛೆ ಅನುಸಾರ ಟಿ10 ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಪ್ರಯಾಣಿಸಿದರೆ ಹೈಟೆಕ್ ಅನುಭವ ದೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಟಿಯುವಿ 300 ಆವೃತ್ತಿಯ ಎಸ್​ಯುುವಿ ವಿಭಾಗದಲ್ಲಿ 60ಸಾವಿರಕ್ಕೂ ಅಧಿಕ ಗ್ರಾಹಕರು ತೃಪ್ತಿ ಹೊಂದಿದ್ದಾರೆ. ಟಿ10 ಈ ಹಿಂದಿನ ಆಯ್ಕೆಯ ಜತೆಗೆ ಹೊಸ ಅನುಭವಕ್ಕೆ ಬೇಕಾದ ಎಲ್ಲಾ ಅವಕಾಶವನ್ನು ನೀಡಲಿದೆ ಎಂದು ತಿಳಿಸಿದರು.

ಟಿಯುವಿ 300 ಟಿ10 ವಿಶೇಷತೆ

ಆರಾಮದಾಯಕ ಪ್ರಯಾಣಕ್ಕೆ ಬೇಕಾದ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳು 300 ಟಿ10ನಲ್ಲಿವೆ. 7 ಇಂಚಿನ ಟಚ್​ಸ್ಕ್ರೀನ್ ಇನ್ಪೊಟೇನ್ಮೆಂಟ್ ಸಿಸ್ಟಂ ಮತ್ತು ಲೆದರ್ ಸೀಟ್ ಪ್ರಯಾಣಿಕರಿಗೆ ಪ್ರಯಾಣದ ಆಯಾಸ ಮರೆಸಲಿದೆ. ಟೇಲ್​ಗೇಟ್ ಹೊಂದಿರುವ ಸ್ಪೇರ್​ವೀಲ್, ಹೆಡ್ ಲ್ಯಾಂಪ್, ಡಾರ್ಕ್ ಕ್ರೋಮ್ ಮೆಟಾಲಿಕ್ ಗ್ರೇ ರೂಫ್, ಜಿಪಿಎಸ್ ನ್ಯಾವಿಗೇಷನ್ ಸೌಲಭ್ಯವಿದೆ. ಅಷ್ಟೇ ಅಲ್ಲ, 1.5 ಲೀಟರ್ ಎಂಎಚ್​ಎಡಬ್ಲ್ಯೂ ಕೆ ಡೀಸೆಲ್ ಎಂಜಿನ್, ಎರಡು ಏರ್ ಬ್ಯಾಗ್ ಸಹಿತ ಹಲವು ವಿಶೇಷತೆ ಹೊಂದಿದೆ. ಶ್ವೇತ ವರ್ಣದ ಜತೆಗೆ ಕೆಂಪು ಮತ್ತು ಕಪು್ಪ, ಸಿಲ್ವರ್ ಮತ್ತು ಕಪು್ಪ ಡುಯಲ್ ಟೋನ್ ಕಲರ್ ಆಯ್ಕೆಯಿವೆ. ಟಿ10 ಮುಂಬೈ ಎಕ್ಸ್​ಶೋ ರೂಂ ಬೆಲೆ -ಠಿ;9.66 ಲಕ್ಷ. ಆಗಿದೆ.

Leave a Reply

Your email address will not be published. Required fields are marked *

Back To Top