Wednesday, 18th October 2017  

Vijayavani

1. ರಾತ್ರಿ ಹಾಕಿದ ಟಾರು ಬೆಳಗ್ಗೆ ಕಿತ್ತುಬಂತು- ಸರ್ಕಾರದಿಂದ ಕಾಟಾಚಾರದ ಗುಂಡಿ ಮುಚ್ಚೋಕಾರ್ಯ- ಕೋಟ್ಯಾಂತರ ರೂಪಾಯಿ ನೀರಲ್ಲಿ ಹೋಮ 2. ಬರಿಗೈಯಲ್ಲಿ ಕಾರ್ಮಿಕನಿಂದ ಮಾನ್​ಹೋಲ್​ ಸ್ವಚ್ಛತೆ- ಸುರಕ್ಷಾ ಸಾಧನ ನೀಡಿದ ಮಹಾನಗರ ಪಾಲಿಕೆ- ಮಂಗಳೂರಿನಲ್ಲಿ ಅಮಾನವೀಯ ಘಟನೆ 3. ಪರಿಸರ ಉಳಿಸಿ, ಪಟಾಕಿ ತ್ಯಜಿಸಿ ಅಭಿಯಾನಕ್ಕೆ ಆಕ್ಷೇಪ- ವರ್ತಕರೊಂದಿಗೆ ಪರಿಸರ ಪ್ರೇಮಿಗಳ ವಾಗ್ವಾದ- ಮೈಸೂರಿನಲ್ಲಿ ಪಟಾಕಿ ಜಟಾಪಟಿ 4. ಅನೈತಿಕ ಸಂಬಂಧ ತಿಳಿದು ಗಂಡ ಬಿಟ್ಟ- ಪ್ರಿಯಕರನಿಗಾಗಿ ಮಗಳಿಗೆ ಕೊಟ್ಲು ಕಾಟ- ಗಂಗಾವತಿಯ ಹಿರೇಜಂತಕಲ್​ನಲ್ಲಿ ಕ್ರೂರಿ ತಾಯಿ 5. ನೋಟ್​ಬ್ಯಾನ್​ ವಿಚಾರದಲ್ಲಿ ಕಮಲ್​ ಉಲ್ಟಾ- ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಕ್ಷಮೆಯಾಚನೆ- ಇದು ಕಮಲ್​ ಹೊಸ ರಾಜಕೀಯ ಆಟ
Breaking News :

ಮಹಿಳಾ ಕ್ರಿಕೆಟ್ ತಂಡಕ್ಕೆ ಭರ್ಜರಿ ಗೆಲುವು

Saturday, 20.05.2017, 3:00 AM       No Comments

ಪೊಚೆಫ್​ಸ್ಟ್ರೋಮ್​ (ದಕ್ಷಿಣಆಫ್ರಿಕಾ): ದೀಪ್ತಿ ಶರ್ಮ (17ಕ್ಕೆ4) ಮತ್ತು ಪೂನಂ ಯಾದವ್ (11ಕ್ಕೆ 4) ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ಮಹಿಳಾ ತಂಡ ಚತುಷ್ಕೋನ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಆರನೇ ಗೆಲುವು ದಾಖಲಿಸುವ ಮೂಲಕ ಪ್ರಶಸ್ತಿ ಸೆಣಸಾಟಕ್ಕೆ ಸಜ್ಜಾಗಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ 10 ವಿಕೆಟ್​ಗಳಿಂದ ಜಿಂಬಾಬ್ವೆ ತಂಡವನ್ನು ಸೋಲಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಜಿಂಬಾಬ್ವೆ ತಂಡ ಭಾರತದ ಮಾರಕ ಆಘಾತಕ್ಕೆ ಕೇವಲ 98ರನ್​ಗೆ ಆಲೌಟಾಯಿತು. ಈ ಸವಾಲನ್ನು ಭಾರತ ಕನ್ನಡತಿ ವೇದಾಕೃಷ್ಣ ಮೂರ್ತಿ (50 ರನ್, 51 ಎಸೆತ, 9 ಬೌಂಡರಿ) ಅವರ ತಾಳ್ಮೆಯ ಅರ್ಧಶತಕದಾಟದ ನೆರವಿನಿಂದ 16 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 99 ರನ್ ಗಳಿಸಿ ಸಂಭ್ರಮಿಸಿತು. ಬಿರುಸಿನ ಆರಂಭ ನೀಡಿದ ವೇದಾ ಮತ್ತು ಹರ್ವನ್ ಪ್ರೀತ್ ಕೌರ್ (39*) ಜೋಡಿ ಮೊದಲ ವಿಕೆಟ್​ಗೆ ಅಜೇಯ ಜತೆಯಾಟವಾಡಿ ಸುಲಭ ಗೆಲುವಿಗೆ ನೆರವಾಯಿತು.

ಫೈನಲ್ ಪಂದ್ಯದಲ್ಲಿ ಭಾರತ ತಂಡ ಭಾನುವಾರ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದ್ದು, ಪ್ರಶಸ್ತಿ ಗೆಲ್ಲುವ ಮೂಲಕ ಲೀಗ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ಜಿಂಬಾಬ್ವೆ: 42.3 ಓವರ್​ಗಳಲ್ಲಿ 98 (ಚಿಪೊ ಮುಗೆರಿ 34, ಜೋಸೆಫಿನ್ ಕೊಮೊ 27*, ದೀಪ್ತಿ ಶರ್ಮ 17ಕ್ಕೆ 4, ಪೂನಂ ಯಾದವ್ 11ಕ್ಕೆ 4), ಭಾರತ: 16 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 99 ( ವೇದಾ 50, ಹರ್ವನ್ 39*)

– ಏಜೆನ್ಸೀಸ್

Leave a Reply

Your email address will not be published. Required fields are marked *

Back To Top