Saturday, 18th August 2018  

Vijayavani

ಭಾರೀ ಮಳೆಗೆ ತತ್ತರಿಸಿದ ಕೇರಳದಲ್ಲಿ ಮೋದಿ ವೈಮಾನಿಕ ಸಮೀಕ್ಷೆ: ಐನೂರು ಕೋಟಿ ನೆರವು ಘೋಷಣೆ        ಕೊಡಗಿಗೆ ಮಳೆ ಸಂಕಷ್ಟ: ಹಾನಿ ಬಗ್ಗೆ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿಗೆ ಮುಖ್ಯಕಾರ್ಯದರ್ಶಿ ವರದಿ        ಕೊಡಗಿನ ಗೋಣಿಕೊಪ್ಪದಲ್ಲಿ ಮಳೆಯ ಅಬ್ಬರಕ್ಕೆ ಕುಸಿದ ಮನೆ: ನಾಲ್ಕು ಮಂದಿ ದುರ್ಮರಣ        ಚಾರ್ಮಾಡಿ ಘಾಟ್​​ನ ತಿರುವಿನಲ್ಲಿ ಕೆಟ್ಟು ನಿಂತ ವಾಹನ: ಧರ್ಮಸ್ಥಳ ಮಾರ್ಗದಲ್ಲಿ ವಿಪರೀತ ಟ್ರಾಫಿಕ್​ ಜಾಮ್        ಅರಕಲಗೂಡನಲ್ಲಿ 200 ಮನೆಗಳು ಜಲಾವೃತ: ದ್ವೀಪದಂತಾದ ರಾಮನಾಥಪುರ, ಮುಳುಗಿದ ನಿಮಿಷಾಂಭ ದೇಗುಲ       
Breaking News

ಮಹಿಳಾ ಕ್ರಿಕೆಟ್​ನಲ್ಲೂ ಅಹರ್ನಿಶಿ ಟೆಸ್ಟ್

Wednesday, 08.03.2017, 6:43 AM       No Comments

ಸಿಡ್ನಿ: ಪುರುಷರ ಕ್ರಿಕೆಟ್​ನಲ್ಲಿ ಯಶಸ್ವಿ ಪ್ರಯೋಗ ಎನಿಸಿಕೊಂಡಿರುವ ಅಹರ್ನಿಶಿ ಟೆಸ್ಟ್ ಅನ್ನು ಮಹಿಳಾ ಕ್ರಿಕೆಟ್​ನಲ್ಲೂ ನಡೆಸಲು ತೀರ್ವನಿಸಲಾಗಿದೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಮೊದಲ ಅಹರ್ನಿಶಿ ಟೆಸ್ಟ್ ಪಂದ್ಯ ನಡೆಯಲಿದೆ.

ನವೆಂಬರ್ 9 ರಿಂದ 12ರವರೆಗೆ ನಾರ್ತ್ ಸಿಡ್ನಿಯಲ್ಲಿ ಮಹಿಳೆಯರ ಮೊದಲ ಆಹರ್ನಿಶಿ ಪಂದ್ಯ ನಡೆಯಲಿದೆ. 7 ಪಂದ್ಯಗಳ ಸರಣಿಯಲ್ಲಿ ಇದು ಏಕೈಕ ಚತುರ್ದಿನ ಟೆಸ್ಟ್ ಪಂದ್ಯವಾಗಿದೆ. ಸರಣಿಯಲ್ಲಿ ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳು ನಡೆಯಲಿವೆ. ‘ಪಿಂಕ್ ಚೆಂಡಿನಲ್ಲಿ ಮೊದಲ ಬಾರಿಗೆ ಮಹಿಳೆಯರ ಟೆಸ್ಟ್ ಪಂದ್ಯ ನಡೆಯಲಿದೆ’ ಎಂದು ಆಸೀಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ತಿಳಿಸಿದ್ದಾರೆ.

ಪುರುಷರ ಮೊದಲ ಆಹರ್ನಿಶಿ ಟೆಸ್ಟ್ ಪಂದ್ಯ ಆಯೋಜಿಸಿದ್ದ ಆಸ್ಟ್ರೇಲಿಯಾ, ಇದೀಗ ಮಹಿಳೆಯರ ಆಹರ್ನಿಶಿ ಟೆಸ್ಟ್ ಆಯೋಜಿಸಿದ ಖ್ಯಾತಿಗೆ ಒಳಗಾಗಿದೆ. 2015ರಲ್ಲಿ ಅಡಿಲೇಡ್ ಓವೆಲ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ತಂಡವನ್ನು ಮಣಿಸಿತ್ತು. ಬಳಿಕ ತವರಿನಲ್ಲೇ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ವಿರುದ್ಧ ಆಹರ್ನಿಶಿ ಪಂದ್ಯವಾಡಿತ್ತು.

– ಏಜೆನ್ಸೀಸ್

Leave a Reply

Your email address will not be published. Required fields are marked *

Back To Top