Tuesday, 16th January 2018  

Vijayavani

ಮತ್ತೊಂದು ಟ್ವೀಟ್‌ ಮಾಡಿ ಕೆಣಕಿದ ಪಾಲ್ಯೇಕರ್ - ಕಣಕುಂಬಿ ಕಾಮಗಾರಿ ಪರಿಶೀಲನೆಗೆ ನಾಲ್ವರ ತಂಡ ರಚನೆ - ಗೋವಾ ಸಚಿವನ ವಿರುದ್ಧ ಸಿಎಂ ಆಕ್ರೋಶ        ಪರಮೇಶ್ವರ್‌ಗೂ ಕಂಟಕವಾಯ್ತು ಸದಾಶಿವ ಆಯೋಗ - ವರದಿ ವಿರೋಧಿಸಿದ್ದಕ್ಕೆ ಸ್ವಕ್ಷೇತ್ರದಲ್ಲೇ ಆಕ್ರೋಶ - ಮತ ಹಾಕದಿರಲು ಮಾದಿಗ ಮುಖಂಡರ ನಿರ್ಧಾರ        ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಮತ್ತೆ ಕೀಚಕ ಕೃತ್ಯ - ಇಂದಿರಾನಗರ ಪೊಲೀಸರಿಂದ ಇಬ್ಬರು ಆರೋಪಿಗಳ ಸೆರೆ - ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆಗೆ ಆಕ್ರೋಶ        ಕೊನೆಗೂ ಮೌನ ಮುರಿದ ಸುಪ್ರೀಂಕೋರ್ಟ್‌ ಸಿಜೆ - ಬಂಡಾಯ ನ್ಯಾಯಮೂರ್ತಿಗಳ ಜತೆ ದೀಪಕ್‌ ಮಿಶ್ರ ಚರ್ಚೆ - 15 ನಿಮಿಷಗಳ ಕಾಲ ಸಂಧಾನ ಮಾತುಕತೆ        ಚೆಂಡು ನೆಲಕ್ಕೆ ಎಸೆದ ವಿರಾಟ್‌ಗೆ ಐಸಿಸಿ ತರಾಟೆ - ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಿಟ್ಟಾದ ಕೊಹ್ಲಿಗೆ ದಂಡ - ಪಂದ್ಯದ 25 ಪರ್ಸೆಂಟ್‌ ಸಂಭಾವನೆ ಕಡಿತ       
Breaking News :

ಮಹಾಭಾರತದ ಲಕ್ಷ ಶ್ಲೋಕ ತ್ಯಜಿಸಲು ಪಾಶ್ಚಾತ್ಯರೇ ಕಾರಣ

Saturday, 06.01.2018, 3:03 AM       No Comments

ಬೆಂಗಳೂರು: ದೇಶಕ್ಕೆ ಆಗಮಿಸಿದ ಬ್ರಿಟಿಷರು ನಮ್ಮದನ್ನು ಹಳಿದು, ಇಂಗ್ಲಿಷ್​ನಲ್ಲಿರುವುದೆಲ್ಲ ಸರಿ ಎಂದು ಸಾರಿದರು. ಪರಿಣಾಮ, ವ್ಯಾಸ ರಚಿಸಿದ ಮಹಾಭಾರತದ 8,800 ಶ್ಲೋಕಗಳನ್ನು ಉಳಿಸಿಕೊಂಡು, ಉಳಿದ 1 ಲಕ್ಷದ 48 ಸಾವಿರ ಶ್ಲೋಕಗಳನ್ನು ಕೈಬಿಟ್ಟೆವು ಎಂದು ಸಾಹಿತಿ ಡಾ. ಚಂದ್ರಶೇಖರ ಕಂಬಾರ ಬೇಸರ ವ್ಯಕ್ತಪಡಿಸಿದ್ದಾರೆ.

ಚಿತ್ರಕಲಾ ಪರಿಷತ್ತಿನಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಕಲಾವಿದ ಪ್ರೊ. ಕನೈ ಕುನ್ಹಿರಾಮನ್ ಅವರಿಗೆ 1 ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಫಲಕ ಹೊಂದಿರುವ ಪ್ರೊ.ಎಂ.ಎಸ್. ನಂಜುಂಡರಾವ್ ಪ್ರಶಸ್ತಿ ಹಾಗೂ ಕಲಾವಿದರಾದ ಸುಧಾ ಮನೋಹರ್ ಮತ್ತು ಸೋಮಣ್ಣ ಚಿತ್ರಗಾರ್ ಅವರಿಗೆ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ವಿತರಿಸಿ ಮಾತನಾಡಿದರು.

ದೇಶದಲ್ಲಿ ಲಾರ್ಡ್ ಮೆಕಾಲೆ ಜಾರಿಗೆ ತಂದ ಆಂಗ್ಲ ಶಿಕ್ಷಣ ಪದ್ಧತಿಯಿಂದ ನಮ್ಮತನ ಕಳೆದುಕೊಂಡೆವು. ದೇವರು, ಧರ್ಮ, ಪುರಾಣ, ಜಾನಪದ ಸೇರಿ ನಮ್ಮ ನಂಬಿಕೆ ಹಾಗೂ ಆಚರಣೆ ಮೇಲೆ ಬ್ರಿಟಿಷರು ಹಿಡಿತ ಸಾಧಿಸಿ, ನಮ್ಮ ದಿಕ್ಕು ತಪ್ಪಿಸಿದರು. ವ್ಯಾಸ ರಚಿಸಿದ ಮಹಾಭಾರತದಲ್ಲಿ 8,800 ಶ್ಲೋಕಗಳು ಮಾತ್ರ ಇವೆ. ಆದ್ದರಿಂದ ಉಳಿದ ಶ್ಲೋಕಗಳನ್ನು ತ್ಯಜಿಸಬೇಕೆಂಬ ಮೆಕಾಲೆ ಮಾತಿನ ಹಿಂದಿನ ಒಳಾರ್ಥ ಅರಿತುಕೊಳ್ಳದೆ ಸಮ್ಮತಿಸಿದೆವು. ಪರಿಣಾಮ ನಮ್ಮ ಶ್ರೀಮಂತ ಗ್ರಂಥ ಬಡವಾಯಿತು ಎಂದು ಹೇಳಿದರು. ಬೆಂಗಳೂರು ಕೇಂದ್ರ ವಿವಿ ಕುಲಪತಿ ಪ್ರೊ. ಎಸ್. ಜಾಫೆಟ್, ಪ್ರೊ.ಎಂ.ಜೆ. ಕಮಲಾಕ್ಷಿ, ಟಿ. ಪ್ರಭಾಕರ್ ಉಪಸ್ಥಿತರಿದ್ದರು.

ಅಪರೂಪದ ಕಲಾಕೃತಿಗಳು

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸಂಗ್ರಹದಲ್ಲಿರುವ ಆಧುನಿಕ ಕಲಾವಿದರ ಅಪರೂಪದ ಕಲಾಕೃತಿಗಳ ಪ್ರದರ್ಶನಕ್ಕೆ ಬೆಂ.ಕೇಂದ್ರ ವಿವಿ ಕುಲಪತಿ ಪ್ರೊ.ಎಸ್. ಜಾಫೆಟ್ ಚಾಲನೆ ನೀಡಿದರು. ದೇಶದ ಪ್ರಸಿದ್ಧ ಕಲಾವಿದರು ರಚಿಸಿದ ಕಲಾಕೃತಿಗಳು ಕಲಾಸಕ್ತರಲ್ಲಿ ಕುತೂಹಲ ಮೂಡಿಸುವ ಜತೆಗೆ ಹುಬ್ಬೇರಿ ಸುವಂತೆ ಮಾಡಿದವು. 1970ರಿಂದ ಚಿತ್ರಕಲಾ ಪರಿಷತ್ ನಿಯಮಿತವಾಗಿ ಕಲಾಶಿಬಿರ ನಡೆಸುತ್ತ ಬಂದಿದ್ದು, ಇದರಲ್ಲಿ ಆಯ್ದ 60 ಕಲಾಕೃತಿಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು. ಕೋಲ್ಕತದ ಪ್ರೊ. ಜೋಗಿನ್ ಚೌಧರಿ, ಬರೋಡಾದ ಜೈರಾಮ್ ಪಟೇಲ್, ಚೆನ್ನೈನ ಆದಿಮೂಲಂ, ಕರ್ನಾಟಕದ ಎಸ್.ಜಿ. ವಾಸುದೇವ, ಕೊಚ್ಚಿಯ ಕೃಷ್ಣಮಾಚಾರ ಬೋಸ್, ಮುಂಬೈನ ಟಿ.ಬಿ. ಸಂತೋಷ್ ಸೇರಿ 100ಕ್ಕೂ ಅಧಿಕ ಕಲಾವಿದರ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಬಹುದು. ಪ್ರೊ. ಜೋಗಿನ್ ಚೌಧರಿ ವಿರಚಿತ ‘ಬಕಾಸುರ’ ಕಲಾಕೃತಿ 60 ಲಕ್ಷ ರೂ. ಬೆಲೆ ಬಾಳಲಿದೆ. ಕೃಷ್ಣಮಾಚಾರ ಬೋಸ್ ರಚಿಸಿದ 35 ಲಕ್ಷ ರೂ. ಕಲಾಕೃತಿಯೂ ಇದೆ. ಚಿತ್ರಕಲಾ ಪರಿಷತ್ತಿನಲ್ಲಿ ಸೋಮವಾರದವರೆಗೂ (ಜ.7) ಪ್ರದರ್ಶನ ಇರಲಿದೆ.

ವಿದೇಶಿ ಕಲಾವಿದರು ಕಿನ್ನಾಳ ಕಲೆ ಕಂಡು ಬೆರಗಾಗಿದ್ದರು. ಇತ್ತೀಚಿನ ದಿನಗಳಲ್ಲಿ ಚಿತ್ರಕಲಾ ಪರಿಷತ್ತು ಈ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವುದು ಸಂತಸ ತಂದಿದೆ.

| ಸೋಮಣ್ಣ ಚಿತ್ರಗಾರ್, ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪುರಸ್ಕೃತ

Leave a Reply

Your email address will not be published. Required fields are marked *

Back To Top