Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

ಮಹದಾಯಿ ಹೋರಾಟ ತೀವ್ರ ಧರಣಿಯಲ್ಲಿ ವಿದ್ಯಾರ್ಥಿಗಳು ಭಾಗಿ | ಇಂದು ಗದಗ ಬಂದ್

Friday, 21.07.2017, 3:00 AM       No Comments

ನರಗುಂದ: ಮಹದಾಯಿ, ಕಳಸಾ- ಬಂಡೂರಿ ನದಿ ನೀರಿಗಾಗಿ ಹೋರಾಟದ ಕಾವು ದಿನೇ ದಿನೆ ಹೆಚ್ಚುತ್ತಿದ್ದು, ತೀವ್ರ ಸ್ವರೂಪ ಪಡೆವ ಎಲ್ಲ ಲಕ್ಷಣ ಗೋಚರಿಸುತ್ತಿದೆ. ರೈತ ಸೇನಾ ನಾಯಕ ವೀರೇಶಸ್ವಾಮಿ ಸೊಬರದಮಠ ನಿರಶನ ಐದನೇ ದಿನಕ್ಕೆ ಕಾಲಿಟ್ಟಿದ್ದು, ನಾಳೆ ನರಗುಂದ, ನವಲಗುಂದದಲ್ಲಿ ರೈತ ಹುತಾತ್ಮ ದಿನ, ಗದಗ ಬಂದ್, ಧಾರವಾಡದಲ್ಲಿ ರೈತ ಸಮಾವೇಶ ನಡೆಯಲಿವೆ. ಶುಕ್ರವಾರ ರೈತ ಹುತಾತ್ಮ ದಿನಾಚರಣೆ ನಿಮಿತ್ತ ನರಗುಂದ, ನವಲಗುಂದ ಮತ್ತು ಗದಗಿನಲ್ಲಿ ಪೂರ್ವ ಭಾವಿಯಾಗಿ ನವಲಗುಂದಕ್ಕೆ ಗುರುವಾರ ಭೇಟಿ ನೀಡಿದ ಐಜಿಪಿ ಭಾಸ್ಕರ ರಾವ್ ಪರಿಸ್ಥಿತಿ ಅವಲೋಕಿಸಿದರು.

ಗದಗ ಬಂದ್ ನಿಮಿತ್ತ ಶಾಲಾ ಕಾಲೇಜುಗಳಿಗೆ ರಜೆ, ಸೀಮಿತ ವಾಹನ ಸಂಚಾರ, ನರಗುಂದದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. 4 ಡಿಎಸ್​ಪಿ, 6 ಸಿಪಿಐ, 15 ಪಿಎಸ್​ಐ, 24 ಎಎಸ್​ಐ, 400 ಪೇದೆ, 4 ಕೆಎಸ್​ಆರ್​ಪಿ ಹಾಗೂ 6 ಜಿಲ್ಲಾ ಮೀಸಲು ಸಶಸ್ತ್ರಪಡೆ ನಿಯೋಜಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ನರಗುಂದದಲ್ಲಿ ನಿತ್ಯ ಸರದಿಯಂತೆ ಐದಾರು ರೈತರು ಉಪವಾಸ ಸತ್ಯಾಗ್ರಹ ಕೂರಲು ನಿರ್ಧರಿಸಿದ್ದಾರೆ. ನರಗುಂದ ಪ್ರೌಢ ಶಾಲೆ ವಿದ್ಯಾರ್ಥಿನಿಯರು ಮತ್ತು ಸಿದ್ಧೇಶ್ವರ ಕಾಲೇಜಿನ ವಿದ್ಯಾರ್ಥಿಗಳು ಧರಣಿಯಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

Back To Top