Thursday, 19th July 2018  

Vijayavani

ಮೂಲ ಮಠದಲ್ಲಿ ಶ್ರೀಗಳ ಪಾರ್ಥೀವ ಶರೀರ - ಪೂಜಾ ಸಾಮಗ್ರಿ ಜತೆಗಿಟ್ಟು ಸಂಸ್ಕಾರ ಕಾರ್ಯ        ಶೀರೂರು ಶ್ರೀಗಳು ಇನ್ನು ನೆನಪು ಮಾತ್ರ - ಕನಕನ ಕಿಂಡಿ ಮೂಲಕ ಕೃಷ್ಣನ ಕೊನೆಯ ದರ್ಶನ - ಆರತಿ ಸೇವೆ ಸಲ್ಲಿಸಿದ ಸ್ವಾಮೀಜಿ        ಶೀರೂರು ಶ್ರೀ ಸಾವಿನ ಸುತ್ತ ಅನುಮಾನದ ಹುತ್ತ - ಸ್ವಾಮೀಜಿಗಳಿಗೆ ವಿಷಪ್ರಾಸನದ ಶಂಕೆ - ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲು        ಸಾಮಾಜಿಕ ಹೋರಾಟಕ್ಕೂ ಶೀರೂರು ಶ್ರೀಗಳು ಸೈ - ವಾದ್ಯಪರಿಕರಗಳನ್ನು ನುಡಿಸುವುರಲ್ಲೂ ಎತ್ತಿದ ಕೈ        ಶೀರೂರು ಶ್ರೀ ಮಠಾಧಿಶರೇ ಅಲ್ಲ - ಅದಕ್ಕೇ ಅವರಿಗೆ ಪಟ್ಟದೇವರು ಕೊಡಲಿಲ್ಲ - ಪೇಜಾವರ ಶ್ರೀಗಳಿಂದ ಸ್ಫೋಟಕ ಹೇಳಿಕೆ        ಮಹಾ ಮಳೆಗೆ ಮೈದುಂಬಿದ ಕೃಷ್ಣೆ - ಚಿಕ್ಕೋಡಿಯಲ್ಲಿ ಹಲವು ಸೇತುವ ಜಲಾವೃತ - ಇತ್ತ ಕೊಡಗಿನಲ್ಲಿ ಕಾವೇರಿಗೆ ಎಚ್​ಡಿಕೆ ಬಾಗಿನ       
Breaking News

ಮಸೆದು ಹೊಸೆಯಬೇಕು

Wednesday, 04.07.2018, 3:02 AM       No Comments

ಮರಗಳನ್ನು ಕತ್ತರಿಸುವಲ್ಲಿ ಆತ ನಿಪುಣನಾಗಿದ್ದ. ಎಲ್ಲರೂ ಮನೆಕೆಲಸಕ್ಕೆ ಅವನನ್ನೇ ಕರೆಯುತ್ತಿದ್ದರು. ಹೀಗಿರುವಾಗ ಆ ಬಡಗಿಗೊಮ್ಮೆ ಒಂದು ದೊಡ್ಡ ಆರ್ಡರ್ ಬಂತು. ಶ್ರೀಮಂತನೊಬ್ಬ ತನ್ನ ಜಮೀನಿನಲ್ಲಿ ಮಳೆಗಾಲದಲ್ಲಿ ಬಿದ್ದಿದ್ದ ಒಂದಿಷ್ಟು ದಿಮ್ಮಿಗಳನ್ನು ಕತ್ತರಿಸಿ ಅವುಗಳಿಂದ ಹಲಗೆ, ಬಾಗಿಲು ತಯಾರಿಸಲು ಹೇಳಿದ. ಸುಮಾರು ತಿಂಗಳು ಹಿಡಿಯುವ ಈ ಕೆಲಸ ಬೇಗ ಮುಗಿಸಬೇಕೆಂಬ ಒತ್ತಡವೂ ಇತ್ತು. ಹೀಗಾಗಿ ಒಂದೇ ದಿನದಲ್ಲಿ 20ಕ್ಕೂ ಹೆಚ್ಚು ಹಲಗೆಗಳನ್ನು ಸಿದ್ಧ ಮಾಡಿದ. ಎರಡನೆಯ ದಿನ 18 ವಸ್ತುಗಳನ್ನು ರೆಡಿ ಮಾಡಿದ. ಮೂರನೆಯ ದಿನ ಅದಕ್ಕೂ ಕಡಿಮೆ ಕೆಲಸವಾಯ್ತು. ದಿನದಿಂದ ದಿನಕ್ಕೆ ಇನ್ನಷ್ಟು ಕೆಲಸ ಮಾಡಬೇಕೆಂದುಕೊಳ್ಳುತ್ತಿದ್ದ. ಅಷ್ಟೇ ಶ್ರಮ ಹಾಕುತ್ತಿದ್ದ ಕೂಡ. ಆದರೂ ಮೊದಲಿನ ಪ್ರತಿಫಲ ಸಿಗಲಿಲ್ಲ. ಒಂದು ದಿನ ಶ್ರೀಮಂತ ‘ಕೆಲಸ ಮುಗಿಯಲು ಇನ್ನೆಷ್ಟು ದಿನಗಳು ಬೇಕಾಗಬಹುದು?’ ಎಂದ. ಆಗ ಬಡಗಿ ‘ನಾನೇನೋ ತುಂಬ ಕೆಲಸ ಮಾಡುತ್ತಿದ್ದೇನೆ. ಆದರೆ, ಕೆಲಸ ಸಾಗುತ್ತಲೇ ಇಲ್ಲ. ಯಾಕೆಂದೇ ಅರ್ಥವಾಗುತ್ತಿಲ್ಲ ಎಂದು ಬೇಸರಿಸಿದ.

‘ನೀನು ಗರಗಸವನ್ನು ದಿನವೂ ಮಸೆಯುತ್ತಿರುವೆಯಾ?’ಎಂದು ಕೇಳಿದ ಶ್ರೀಮಂತ. ಬಡಗಿ ‘ಅದಕ್ಕೆಲ್ಲಿ ಸಮಯವಿದೆ?’ಎಂದ. ಶ್ರೀಮಂತ ಸುಮ್ಮನಾದ. ಆದರೆ ಬಡಗಿಗೆ ಕೆಲಸ ನಿಧಾನ ಆಗುತ್ತಿರುವುದಕ್ಕೆ ಕಾರಣ ತಿಳಿಯಿತು. ಅವನು ಶುರುವಿನಿಂದ ಈವರೆಗೆ ಒಂದು ದಿನವೂ ಗರಗಸವನ್ನು ಮಸೆದಿರಲೇ ಇಲ್ಲ. ಆಗಾಗ ಮಸೆಯುತ್ತಿದ್ದರೆ ಇಷ್ಟು ನಿಧಾನವಾಗುತಿ-ರಲಿಲ್ಲ ಎನ್ನುವ ಸತ್ಯ ಅರಿವಾಯಿತು.

ಹಾಗೆಯೇ ನಾವೂ ದಿನದ ಕೆಲಸದಲ್ಲಿ ಮುಳುಗಿದ್ದರೂ ನಮಗಾಗಿ ಒಂದಷ್ಟು ಸಮಯ ಮೀಸಲಿಟ್ಟರೆ ಚೈತನ್ಯಕ್ಕೆ ಉತ್ತೇಜನ ಸಿಗುತ್ತದೆ. ಅಲ್ಲವೇ?

Leave a Reply

Your email address will not be published. Required fields are marked *

Back To Top