Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News

ಮಲಗುವ ಕೊಠಡಿಯಲ್ಲಿ ಮಲ-ಮೂತ್ರದ ವಾಸನೆ

Thursday, 12.07.2018, 9:46 PM       No Comments

ಯಲ್ಲಾಪುರ: ತಾಲೂಕಿನ ಕಿರವತ್ತಿ ಸಮೀಪದ ಖಾರೆವಾಡದಲ್ಲಿರುವ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಅವ್ಯವಸ್ಥೆ ಉಂಟಾಗಿರುವ ಕುರಿತು ತಾ.ಪಂ. ಕೆಡಿಪಿ ಸಭೆಯಲ್ಲಿ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ತಾ.ಪಂ. ಅಧ್ಯಕ್ಷೆ ಭವ್ಯಾ ಶೆಟ್ಟಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.  ಮಳೆ ಬಂದರೆ ಕಟ್ಟಡ ಸೋರುತ್ತಿದ್ದು, ಬುದ್ದಿಮಾಂದ್ಯ ಮಕ್ಕಳು ನೀರಿನಲ್ಲೇ ಕುಳಿತುಕೊಳ್ಳುವಂತಾಗಿದೆ. ಸರ್ಕಾರದ ಅನುದಾನದಿಂದ ಬೆಳಗಾವಿ ಮೂಲದ ಖಾಸಗಿ ಸಂಸ್ಥೆಯೊಂದು ಈ ಶಾಲೆ ನಡೆಸುತ್ತಿದ್ದು, ಮಕ್ಕಳಿಗೆ ಅಗತ್ಯ ಸೌಕರ್ಯ ನೀಡಿಲ್ಲ. ಈ ಕುರಿತು ಜನತೆ ಅಥವಾ ಅಧಿಕಾರಿಗಳು ಪ್ರಶ್ನಿಸಿದರೆ ನ್ಯಾಯಾಲಯದ ಮೊರೆ ಹೋಗುವ ಬೆದರಿಕೆ ಹಾಕುತ್ತಾರೆ. ಮಕ್ಕಳು ರಾತ್ರಿ ಮಲಗುವ ಕೊಠಡಿ ಮಲ ಮೂತ್ರದ ವಾಸನೆಯಿಂದ ಗಬ್ಬು ನಾರುತ್ತಿದೆ. ಅಡುಗೆ ಮಾಡುವ ಸ್ಥಳ ಸ್ವಚ್ಛತೆಯಿಂದ ಕೂಡಿಲ್ಲ. ಕೊಳೆತ ತರಕಾರಿಯ ಸಾಂಬಾರು ಮಾಡಿ ಬಡಿಸುತ್ತಿದ್ದಾರೆ. ಸ್ಥಳೀಯರು ಈ ಶಾಲೆ ನಡೆಸುತ್ತಿರುವ ಮುಖ್ಯಸ್ಥರನ್ನು ದೂರವಾಣಿ ಮೂಲಕ ಸಂರ್ಪಸಿದರೆ ಎಲ್ಲವೂ ಸರಿಯಿದೆ ಎಂಬ ಅಸಮಂಜಸ ಉತ್ತರ ನೀಡುತ್ತಿದ್ದಾರೆ. ಮಕ್ಕಳ ದೇಹದ ತುಂಬೆಲ್ಲ ಹುಣ್ಣು ಮತ್ತು ಗಾಯಗಳಾಗಿದ್ದು, ಚಿಕಿತ್ಸೆ ಕೊಡುವ ಬಗೆಗೆ ಯಾರೂ ಚಿಂತಿಸಿಲ್ಲ. ಕೊಠಡಿಯ ನೆಲ ಸಿಮೆಂಟ್ ಹಾಕಿ ಹಾಗೇ ಬಿಟ್ಟಿದ್ದು, ಸಿಮೆಂಟ್ ನೆಲದ ಮೇಲೆ ಮಕ್ಕಳು ಓಡಾಡುತ್ತಾರೆ. ಪಾದದ ಮೇಲೆ ಸುಟ್ಟು ಬೊಬ್ಬೆಗಳು ಬಂದಿವೆ. ಶಾಲೆಯಲ್ಲಿ ವ್ಯವಸ್ಥೆ ಸರಿಯಾಗಿಲ್ಲ ಎಂದು ಮೇಲಾಧಿಕಾರಿಗಳಿಗೆ ವರದಿ ನೀಡಿದ ಸಿಡಿಪಿಒ ಇಲಾಖೆ ವಿರುದ್ಧ ಶಾಲೆಯ ಮುಖ್ಯಸ್ಥರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ ಎಂದು ಸ್ಥಳೀಯರು ವಿವರಿಸಿದರು. ಸಿಡಿಪಿಒ ಫಾತಿಮಾ ಚುಳಕಿ ತಾ.ಪಂ. ಸದಸ್ಯೆ ಮಾಲಾ ಚಂದಾವರ ಇದ್ದರು.

ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ವಸತಿ ಶಾಲೆಗೆ ಭೇಟಿ ನೀಡಿದ್ದೇನೆ. ಶಾಲೆ ಅವ್ಯವಸ್ಥೆಯ ಆಗರವಾಗಿದೆ. ಬುದ್ದಿಮಾಂದ್ಯ ಮಕ್ಕಳಿಗೆ ಏನೂ ತಿಳಿಯುವುದಿಲ್ಲ, ಅದೇ ಕಾರಣಕ್ಕೆ ಮುಗ್ಧ ಮಕ್ಕಳಿಗೆ ಸೌಲಭ್ಯ ನೀಡದೇ ವಂಚಿಸಲಾಗುತ್ತಿದೆ. ಈ ವಿಷಯವನ್ನು ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.

| ಭವ್ಯಾ ಶೆಟ್ಟಿ ತಾ.ಪಂ. ಅಧ್ಯಕ್ಷೆ

Leave a Reply

Your email address will not be published. Required fields are marked *

Back To Top